ಅಕಾಡೆಮಿ ಪ್ರಶಸ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೧ ನೇ ಸಾಲು:
== ಸಿನಿಮಾ ಕ್ಷೇತ್ರಕ್ಕೆ ಕೊಡುಗೆಯಾದ ಆಸ್ಕರ್ ಪುರಸ್ಕಾರ==
ಆಸ್ಕರ್ ಪ್ರಶಸ್ತಿಯ ಇತಿಹಾಸ ನೋಡಿದಾಗ 1927 ರಲ್ಲಿ ಸ್ಥಾಪನೆಯಾದ `ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆಟ್ಸ್ ಆÀ್ಯಡ್ ಸೈನ್ಸ್'(AMPAS) ಸಂಸ್ಥೆ ಮೆಟ್ರೋ -ಗೋಲ್ಡ್ವಿನ್-ಮೇಯರ್ ಸ್ಟುಡಿಯೋದ ಮಾಲೀಕ ಲೂಯಿ, ಬಿ. ಮೇಯರನ ಚಿಂತನೆಯ ಫಲವಾಗಿದೆ. ಈ ಸಂಸ್ಥೆಯಿಂದಲೇ ಆಸ್ಕರ್ ಪುರಸ್ಕಾರವನ್ನು ಕೋಡಲಾರಂಭಿಸಿತು. ಚಲನಚಿತ್ರರಂಗದ ಪ್ರತಿಭಾನ್ವಿತ ವ್ಯಕ್ತಿಗಳಿಗೆ ಗೌರವ ಸಮರ್ಪಿಸುವುದು ಈ ಪ್ರಶಸ್ತಿಯ ಪ್ರಮುಖ ಧ್ಯೇಯವಾಗಿದೆ. ಆಸ್ಕರ್ ಪುರಸ್ಕಾರದ ಮೂದಲ ಸಮಾರಂಭವು ಮೇ-16 1929 ರಂದು ಹಾಲಿವುಡ್ ರೂಸ್ವೆಲ್ಟ್ ಹೋಟಲಿನಲ್ಲಿ 270 ಪ್ರೇಕ್ಷಕರ ಎದುರು ಜರುಗಿತು. ಆಸ್ಕರ್ ಸಮಯ ಕಳೆದಂತೆ ತನ್ನ ಚಾಪನ್ನು ವಿಶ್ವದೆಲ್ಲಡೆ ಪಸರಿಸುತ್ತಾ, ಅದರೂಟ್ಟಿಗೆ ಪ್ರಶಸ್ತಿಯ ವರ್ಗಗಳನ್ನು ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಪೋಷಕ ನಟ ಮತ್ತು ನಟಿ, ಅತ್ಯತ್ತಮ ಚಿತ್ರಕಥೆ, ಅತ್ಯುತ್ತಮ ಆನಿಮೇಟಿಡ್ ವೈಶಿಷ್ಟ, ಅತ್ಯುತ್ತಮ ಕಿರುಚಿತ್ರ, ಹೀಗೆ ಪ್ರಸ್ತುತ 24 ವಿಭಾಗಗಳಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಇದು ಒಂಬತ್ತು ಅಕಾಡೆಮಿ ಪುರಸ್ಕಾರಗಳಲ್ಲಿ ಒಂದಾಗಿದೆ.ಆಸ್ಕರ್ ಕಿರುಪ್ರತಿಮೆ’ಯನ್ನು `ಅಕ್ಯಾಡೆಮಿ ಅವಾರ್ಡ್ ಆಫ ಮೆರಿಟ್’ ಎಂದು ಕರೆಯಲಾಗಿದೆ.ಪ್ರಪಂಚದಲ್ಲೇ ಅತ್ಯಂತ ಪ್ರತಿಷ್ಠಿತ ಪುರಸ್ಕಾರಗಳಲ್ಲೊಂದಾದ ಆಸ್ಕರ್ ಪುರಸ್ಕಾರ ಪ್ರಧಾನ ಸಮಾರಂಭವನ್ನು ಪ್ರತಿವರ್ಷ ಒಂದು ನೂರು ದೇಶಗಳಲ್ಲಿ [[ದೂರದರ್ಶನ]]ದ ಮೂಲಕ ನೇರಪ್ರಸಾರ ಮಾಡಲಾಗುತ್ತಿದ.ಇದರ ಸಂವಾದಿ ಪುರಸ್ಕಾರಗಳೆಂದರೆ (ಸಂಗೀತಕ್ಕೆ) [[ಗ್ರ್ಯಾಮಿ ಪುರಸ್ಕಾರ]], ‘ಟೆಲಿವಿಷನ್’ಗೆ [[ಎಮ್ಮಿ ಪುರಸ್ಕಾರ]] ಮತ್ತು (ರಂಗಕ್ಷೇತ್ರಕ್ಕೆ) [[ಟೋನಿ ಪುರಸ್ಕಾರ]].ಈ ಸಂಸ್ಥೆ ಸಿನಿಮಾ ಉದ್ಯಮದ ಬಗ್ಗೆ ಜನಾಭಿಪ್ರಾಯ ಸುಧಾರಿಸುವಂತೆ ಮಾಡುತ್ತದೆ.ಚಲನಚಿತ್ರ ಕ್ಷೇತ್ರದಲ್ಲಿ ಮಹತ್ತ್ವಪುರ್ಣ ಕೊಡುಗೆ ನೀಡಿದ ಗಣ್ಯರು ಇದರ ಸದಸ್ಯರಾಗಿರುತ್ತಾರೆ. ಇವರು AMPASನ ಆಡಳಿತ ಮಂಡಳಿಯ ಸದಸ್ಯರು.ಅನೇಕ ವರ್ಷಗಳ ಕಾಲ ಸೋಮವಾರ ರಾತ್ರಿ 9 ಗಂಟೆಗೆ (ಪೂರ್ವ ಪೆಸಿಫಿಕ್ ಕಾಲಮಾನ) ನಡೆಯುತ್ತಿದ್ದ ಸಮಾರಂಭವು ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸಲು, 1999ರಿಂದ ಈಚೆಗೆ ಭಾನುವಾರದಂದು ರಾತ್ರಿ 8.30 ಗಂಟೆಗೆ ನಡೆಯುತ್ತಿದೆ.
 
{{Infobox award
| name = ಅಕಾಡೆಮಿ ಪ್ರಶಸ್ತಿ
Line ೧೧ ⟶ ೧೪:
| website = {{URL|oscars.org}}
}}
 
<big>'''[[ಆಸ್ಕರ್ ಪ್ರಶಸ್ತಿ]]'''(ಅಕಾಡೆಮಿ ಪ್ರಶಸ್ತಿ) [[ಅಮೆರಿಕ]] ದೇಶದಲ್ಲಿ ಸಿನಿಮಾ ರಂಗದಲ್ಲಿ ನೀಡಲಾಗುವ ಪ್ರಶಸ್ತಿಯೊಂದರ ಹೆಸರು. ಈ ಪ್ರಶಸ್ತಿ ವಿಶ್ವ ಪ್ರಸಿದ್ಧ. ಸಾಮಾನ್ಯವಾಗಿ ಆಂಗ್ಲ ಭಾಷೆಯ ಚಿತ್ರಗಳಿಗೆ ನೀಡಲು ನಡೆಸಲಾಗುವ ಈ ಪ್ರಶಸ್ತಿ ಸಮಾರೋಹದಲ್ಲಿ 'ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ'ಕ್ಕೂ ಒಂದು ಪ್ರಶಸ್ತಿ ಇದೆ.
 
ಈ ಪುರಸ್ಕಾರವನ್ನು ಸಿನಿಮಾರಂಗದ ಅತ್ಯುತ್ತಮ [[ನಿರ್ದೇಶಕ]]ರು, ನಟನಟಿಯರು, [[ಲೇಖಕ]]ರಿಗೆ `[[ಅಮೆರಿಕ]]ನ್ ಅಕ್ಯಾಡೆಮಿ ಮೋಷನ್ ಪಿಕ್ಚರ್ಸ್ ಆಯಂಡ್ ಸೈನ್ಸಸ್’ (AMPAS) ಸಂಸ್ಥೆಯು ನೀಡುತ್ತದೆ. `ಆಸ್ಕರ್ ಕಿರುಪ್ರತಿಮೆ’ಯನ್ನು `ಅಕ್ಯಾಡೆಮಿ ಅವಾರ್ಡ್ ಆಫ ಮೆರಿಟ್’ ಎಂದು ಕರೆಯಲಾಗಿದೆ. ಇದು ಒಂಬತ್ತು ಅಕಾಡೆಮಿ ಪುರಸ್ಕಾರಗಳಲ್ಲಿ ಒಂದಾಗಿದೆ.
==೯೦ನೇ ಆವೃತ್ತಿಯ ಆಸ್ಕರ್ ಪುರಸ್ಕಾರ ಸಮಾರಂಭ==
ಪ್ರಪಂಚದಲ್ಲೇ ಅತ್ಯಂತ ಪ್ರತಿಷ್ಠಿತ ಪುರಸ್ಕಾರಗಳಲ್ಲೊಂದಾದ ಆಸ್ಕರ್ ಪುರಸ್ಕಾರ ಪ್ರದಾನ ಸಮಾರಂಭವನ್ನು ಪ್ರತಿವರ್ಷ ಒಂದು ನೂರು ದೇಶಗಳಲ್ಲಿ [[ದೂರದರ್ಶನ]]ದಲ್ಲಿ ನೇರಪ್ರಸಾರ ಮಾಡಲಾಗುವುದು. ಇದು ತುಂಬಾ ಪ್ರಾಚೀನವಾದುದು. ಇದರ ಸಂವಾದಿ ಪುರಸ್ಕಾರಗಳೆಂದರೆ (ಸಂಗೀತಕ್ಕೆ) [[ಗ್ರ್ಯಾಮಿ ಪುರಸ್ಕಾರ]], ‘ಟೆಲಿವಿಷನ್’ಗೆ [[ಎಮ್ಮಿ ಪುರಸ್ಕಾರ]] ಮತ್ತು (ರಂಗಕ್ಷೇತ್ರಕ್ಕೆ) [[ಟೋನಿ ಪುರಸ್ಕಾರ]].
ಈ ಬಾರಿಯ 90ನೇ ಆವೃತ್ತಿಯ ಆಸ್ಕರ್ ಪುರಸ್ಕಾರವನ್ನು `ದೀ ಶೇಪ್ ಆಫ್ ವಾಟರ್' ಅತ್ಯುತ್ತಮ <ref>ಚಲನಚಿತ್ರ</ref> ಹಾಗೂ ಒಟ್ಟು 4 ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಈ ಚಿತ್ರಕ್ಕಾಗಿ ದುಡಿದ `ಗಿಲ್ಲೆರ್ಮೊ ಡೆಲ್ ಟೊರೊ' ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರೆ, ಅಲೆಕ್ಸಾಂಡ್ರೆ ಡೆಸ್ವ್ಲಾಟ್ ಶ್ರೇಷ್ಠ ಹಿನ್ನೆಲೆ ಸಂಗೀತ [[ನಿರ್ದೇಶಕ|ನಿರ್ದೇಶಕನಾಗಿ]] ಮತ್ತು ಪಾಲ್ ಬೆರ್ರಿ ಆಸ್ಟೆರ್ ಶ್ರೇಷ್ಠ ನಿರ್ಮಾಣ ವಿನ್ಯಾಸಗಾರನಾಗಿ ಪುರಸ್ಕಾರವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಅತ್ಯುತ್ತಮ ನಟನಾಗಿ ಗಾರಿ ಓಲ್ಟ್‍ಮನ್, ಅತ್ಯುತ್ತಮ ನಟಿಯಾಗಿ ಫ್ರಾನ್ಸೆಸ್ ಮೆಕ್ ಡಾರ್ಮಾಂಡ್, ಅತ್ಯುತ್ತಮ ಪೋಷಕ ನಟಿಯಾಗಿ ಅಲಿಸನ್ ಜನ್ನೆ, ಅತ್ಯುತ್ತಮ ಪೋಷಕ ನಟನಾಗಿ ಸ್ಯಾಮ್ ರಾಕವೆಲ್, ಅತ್ಯುತ್ತಮ ವಿದೇಶಿ ಚಿತ್ರವಾಗಿ ಎ ಫೆಂಟಾಸ್ಟಿಕ್ ವುಮೆನ್, ಅತ್ಯುತ್ತಮ ಆನಿಮೆಟೆಡ್ ಚಿತ್ರವಾಗಿ ಕೊಕೊ, ಅತ್ಯುತ್ತಮ ಡಾಕಿಮೆಂಟ್ರಿಯಾಗಿ ಇಕಾರ್ಸ್, ಅತ್ಯುತ್ತಮ ಗೀತೆಯಾಗಿ ರಿಮೆಂಬರ್ ಮೀ, ಅತ್ಯುತ್ತಮ ಸಂಕಲನ ಮತ್ತು ಅತ್ಯುತ್ತಮ ಸೌಂಡ್ ಮಿಕ್ಸಿಂಗ್ ಡೆನ್‍ಕಿರ್ಕ್, ಹಾಗೂ ಅತ್ಯುತ್ತಮ ಛಾಯಾಗ್ರಹಣಕ್ಕೆ ರೋಜರ್ ಡೀಕೆನ್ಸ ಪ್ರಶಸ್ತಿಗಳನ್ನು ಮುಡಿಗೆರಿಸಿಕೊಂಡಿದ್ದಾರೆ. ಅದರ ಜೊತೆಗೆ ಆಸ್ಕರ್ ಪುರಸ್ಕಾರ ಸಮಾರಂಭದಲ್ಲಿ ಇತ್ತೀಚಿಗೆ ನಿಧನರಾದ ಬಾಲಿವುಡ್ ನಟ ಶಶಿಕಪೂರ್ ಮತ್ತು ನಟಿ ಶ್ರೀದೇವಿನ್ನು ಸ್ಮರಿಸಲಾಯಿತು.
AMPAS ಸಂಸ್ಥೆ ಮೆಟ್ರೋ -ಗೋಲ್ಡ್ವಿನ್-ಮೇಯರ್ ಸ್ಟುಡಿಯೋದ ಮಾಲೀಕ ಲೂಯಿ, ಬಿ. ಮೇಯರನ ಚಿಂತನೆಯ ಫಲ. ಈ ಸಂಸ್ಥೆ ಸಿನಿಮಾ ಉದ್ಯಮದ ಬಗ್ಗೆ ಜನಾಭಿಪ್ರಾಯ ಸುಧಾರಿಸುವಂತೆ ಮಾಡಿ, ಕಾರ್ಮಿಕ ಕಲಹಗಳನ್ನು ನಿವಾರಿಸಲು ನೆರವು ನೀಡುತ್ತದೆ.
==ಭಾರತದಲ್ಲಿ ಆಸ್ಕರ ಸಾಧಕರು==
ಮೊದಲನೆಯ `ಅಕ್ಯಾಡೆಮಿ ಪುರಸ್ಕಾರ’ ಸಮಾರಂಭವು 1929ರ ಮೇ 16ರಂದು ಹಾಲಿವುಡ್‍ನ `ಹೊಟೆಲ್ ರೂಸ್ವೆಲ್ಟ್’ನಲ್ಲಿ 270 ಜನ ಪ್ರೇಕ್ಷಕರ ಎದುರು ನಡೆಯಿತು. 84ನೇ ಆಸ್ಕರ್ ಪುರಸ್ಕಾರ ಸಮಾರಂಭವು (2011ರ ಚಲನಚಿತ್ರಗಳಿಗೆ ಸಂಬಂಧಿಸಿದ್ದು) 2012ರ ಫೆಬ್ರವರಿ 26ರಂದು ಹಾಲಿವುಡ್ ಆಯಂಡ್ ಹೈಲ್ಯಾಂಡ್ ಸೆಂಟರ್‍ನಲ್ಲಿ ನಡೆಯಿತು. ಚಲನಚಿತ್ರ ಕ್ಷೇತ್ರದಲ್ಲಿ ಮಹತ್ತ್ವಪುರ್ಣ ಕೊಡುಗೆ ನೀಡಿದ ಗಣ್ಯರು ಇದರ ಸದಸ್ಯರಾಗಿರುವರು. ಇವರು AMPASನ ಆಡಳಿತ ಮಂಡಳಿಯ ಸದಸ್ಯರು. ಅನೇಕ ವರ್ಷಗಳ ಕಾಲ ಸೋಮವಾರ ರಾತ್ರಿ 9 ಗಂಟೆಗೆ (ಪೂರ್ವ ಪೆಸಿಫಿಕ್ ಕಾಲಮಾನ) ನಡೆಯುತ್ತಿದ್ದ ಸಮಾರಂಭವು ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸಲು, 1999ರಿಂದ ಈಚೆಗೆ ಭಾನುವಾರಗಳಂದು ರಾತ್ರಿ 8.30 ಗಂಟೆಗೆ ನಡೆಯುತ್ತದೆ.
ಆಸ್ಕರ್ ಕುರಿತು ಭಾರತದತ್ತ ನೋಡಿದಾಗ ಇದುವರೆಗೂ 5 ಸಾಧಕರಿಗೆ ಮಾತ್ರ ಈ ಪ್ರಶಸ್ತಿ ಲಭಿಸಿದೆ. ಅದರಲ್ಲಿ 1982 ರಲ್ಲಿ ಅತ್ಯುತ್ತಮ ವಸ್ತ್ರವಿನ್ಯಾಸದಲ್ಲಿ ಭಾನು ಅಥೈಯಾ ಆಸ್ಕರ್ ಪುರಸ್ಕಾರವನ್ನು ಪಡೆದ ಭಾರತದ ಮೊದಲಿಗಳು. 1992ರಲ್ಲಿ ಜೀವಮಾನ ಸಾಧನೆಯ ಪ್ರಶಸ್ತಿಯನ್ನು ಸತ್ಯಜಿತ್ ರೇ ಪಡೆದುಕೊಂಡರು. ಎ.ಆರ್ ರೆಹಮಾನ್ ಮತ್ತು ಗುಲ್ಜಾರ್ ಅತ್ಯುತ್ತಮ ಮೂಲ ಗೀತೆಯಾದ ಜೈ ಹೋ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಹಾಗೆ ಅತ್ಯತ್ತಮ ಮೂಲ ಅಂಕ ಸಂಗೀತಕ್ಕೆ ಎ.ಆರ್ ರೆಹಮಾನ್ ಮತ್ತೂಮ್ಮೆ ಪ್ರಶಸ್ತಿಯನ್ನು ಮುಡಿಗೆರಿಸಿಕೊಂಡರು. ಅತ್ಯುತ್ತಮ ಧ್ವನಿ ಮಿಶ್ರಣಕ್ಕೆ ರಿಸುಲ್ ಪೂಕುಟ್ಟಿಯವರು ಆಸ್ಕರ್ ತಮ್ಮದಾಗಿಸಿಕೊಂಡಿದ್ದಾರೆ.
2012ರಲ್ಲಿ AMPAS ಸಂಸ್ಥೆಯಲ್ಲಿ 5783 ಜನ ಮತ ಚಲಾಯಿಸುವ ಹಕ್ಕುಗಳ ಸದಸ್ಯರಿದ್ದಾರೆ. [[ಇಂಗ್ಲಿಷ್]] ಭಾಷೆಯನ್ನು ಬಿಟ್ಟು ಬೇರೆ ಭಾಷೆಯ ಚಿತ್ರಗಳನ್ನು ಈ ಪುರಸ್ಕಾರಕ್ಕೆ ಪರಿಶೀಲಿಸಿರುವುದು ಕಡಿಮೆ. ಇದುವರೆಗೆ ಕೇವಲ ಇತರ ಎಂಟು ಭಾಷೆಯ ಚಿತ್ರಗಳಿಗೆ (ಫ್ರೆಂಚ್, ಸ್ವೀಡಿಷ್, ಇಟ್ಯಾಲಿಯನ್, ಸ್ಪ್ಯಾನಿಷ್, ಚೀನೀ, ಜಪಾನಿ ಮೊದಲಾದವು) ನೀಡಲಾಗಿದೆ. [[ರಿಚರ್ಡ್ ಅಟೆನ್‍ಬರೊ]] ನಿರ್ಮಾಪಕತ್ವದ `[[ಗಾಂಧಿ]]’ (1982) ಕ್ರಿಶ್ಚಿಯನ್ ಕಾಲ್ಸನ್ ನಿರ್ಮಾಪಕತ್ವದ `[[ಸ್ಲಮ್‍ ಡಾಗ್ ಮಿಲಿಯನೇರ್]]’ ಚಿತ್ರಗಳೂ ಆಸ್ಕರ್ ಪುರಸ್ಕೃತ ಚಿತ್ರಗಳಾಗಿವೆ.
==ಇತರೆ ಮಾಹಿತಿ==
ಜಗದ್ವಿಖ್ಯಾತಿ, ಘನತೆ ಪಡೆದಿರುವ ಈ ಪ್ರಶಸ್ತಿಯನ್ನು ಜಗತ್ತಿನಾದ್ಯಂತ ವಿಮರ್ಶಕರು ಅತಿ ಗೌರವದಿಂದ ನೋಡುತ್ತಾರೆ.
84ನೇ ಆವೃತ್ತಿಯ ಆಸ್ಕರ್ ಪುರಸ್ಕಾರ ಸಮಾರಂಭವು 2011ರಲ್ಲಿ ನಡೆಯಿತು. 2012ರ ಫೆಬ್ರವರಿ 26ರಂದು ಹಾಲಿವುಡ್ ಆಯಂಡ್ ಹೈಲ್ಯಾಂಡ್ ಸೆಂಟರ್‍ನಲ್ಲಿ ಆಸ್ಕರ್ ಪುರಸ್ಕಾರ ಸಮಾರಂಭವು ನಡೆಯಿತು.
2012ರಲ್ಲಿ AMPAS ಸಂಸ್ಥೆಯಲ್ಲಿ 5783 ಜನ ಮತ ಚಲಾಯಿಸುವ ಹಕ್ಕುಗಳ ಸದಸ್ಯರಿದ್ದರು. [[ರಿಚರ್ಡ್ ಅಟೆನ್‍ಬರೊ]] ನಿರ್ಮಾಪಕತ್ವದ `[[ಗಾಂಧಿ]]’ (1982) ಕ್ರಿಶ್ಚಿಯನ್ ಕಾಲ್ಸನ್ ನಿರ್ಮಾಪಕತ್ವದ `[[ಸ್ಲಮ್‍ ಡಾಗ್ ಮಿಲಿಯನೇರ್]]’ ಚಿತ್ರಗಳೂ ಆಸ್ಕರ್ ಪುರಸ್ಕೃತ ಚಿತ್ರಗಳಾಗಿವೆ.ಜಗದ್ವಿಖ್ಯಾತಿ ಘನತೆ ಪಡೆದಿರುವ ಈ ಪ್ರಶಸ್ತಿಯನ್ನು ಜಗತ್ತಿನಾದ್ಯಂತ ವಿಮರ್ಶಕರು ಅತಿ ಗೌರವದಿಂದ ನೋಡುತ್ತಾರೆ<ref>.ಪ್ರಜಾವಾಣಿ ಮತ್ತು ಕನ್ನಡಪ್ರಭಾ</ref>
<br clear="both"></big>
==<big>ಬಾಹ್ಯ ಸಂಪರ್ಕಗಳು</big>==
"https://kn.wikipedia.org/wiki/ಅಕಾಡೆಮಿ_ಪ್ರಶಸ್ತಿ" ಇಂದ ಪಡೆಯಲ್ಪಟ್ಟಿದೆ