ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨ ನೇ ಸಾಲು:
 
==ಕ್ಷೇತ್ರದ ಇತಿಹಾಸ==
 
ಹನ್ನೆರಡನೇ ಶತಮಾನದ ಶರಣ ಶ್ರೇಷ್ಠ ಬಸವಣ್ಣನವರ ಧರ್ಮ ಪತ್ನಿ ನೀಲಾಂಬಿಕೆ ಐಕ್ಯರಾದ ಸ್ಥಳ ತಂಗಡಗಿ. ವಿಜಯನಗರ ಸಾಮ್ರಾಜ್ಯ ಪತನಕ್ಕೆ ಕಾರಣೀಭೂತವಾದ ಯುದ್ಧ ನಡೆದಿದ್ದು ರಕ್ಕಸತಂಗಡಗಿಯಲ್ಲೇ. ಇಲ್ಲಿನ ಮಿಣಜಗಿಯ ಪರ್ಸಿ ಎಲ್ಲೆಡೆ ಪ್ರಸಿದ್ಧಿ.ಮಹಿಳಾ ರಾಜಕಾರಣಿಗೆ ಮನ್ನಣೆ ನೀಡಿದ ಜಿಲ್ಲೆಯ ಏಕೈಕ ವಿಧಾನಸಭಾ ಕ್ಷೇತ್ರ ಮುದ್ದೇಬಿಹಾಳ. ನಾಲ್ಕು ದಶಕಗಳಿಂದ ಎರಡು ಮನೆತನಕ್ಕಷ್ಟೇ ಮನ್ನಣೆ ನೀಡಿರುವುದು ಇಲ್ಲಿನ ವೈಶಿಷ್ಟ್ಯ.
 
ಆಂಗ್ಲರ ಅಧಿಪತ್ಯ ಅಳಿದು 70 ವರ್ಷಗಳಾದರೂ [[ಮುದ್ದೇಬಿಹಾಳ]] ವಿಧಾನಸಭೆ ಕ್ಷೇತ್ರದ ಮತದಾರ ಪ್ರಭು ಇನ್ನೂ ದೇಸಗತಿ ಮನೆತನಕ್ಕೆ ಮಣೆ ಹಾಕುತ್ತಿರುವುದು ಕ್ಷೇತ್ರದ ವಿಶೇಷ.
ಊಳುವವನೇ ಒಡೆಯ ಕಾಯ್ದೆಯನ್ವಯ ನೂರಾರು ಎಕರೆ ಜಮೀನು ಬಿಟ್ಟುಕೊಟ್ಟ ಶಾಸಕ ಸಿ.ಎಸ್. ನಾಡಗೌಡ ಹಾಗೂ ಜಗದೇವರಾವ ದೇಶಮುಖ ಮನೆತನಕ್ಕೆ ಇಲ್ಲಿನ ಮತದಾರರು ಅಧಿಕಾರದ ಫಲ ನೀಡುತ್ತಲೇ ಇದ್ದಾರೆ. 1978 ರಿಂದ 2018ರವರೆಗೆ ಸುಮಾರು 40 ವರ್ಷಗಳ ಕಾಲ ಚುನಾವಣೆವರೆಗಿನ ಕ್ಷೇತ್ರದ ಇತಿಹಾಸ ಗಮನಿಸಿದಾಗ ಹೆಚ್ಚಿನ ಅಧಿಕಾರ ಅನುಭವಿಸಿದ್ದು ಇದೇ ಎರಡು ಮನೆತಗಳು ಎಂಬುದು ಗಮನಾರ್ಹ.
 
1994ರಲ್ಲಿ ನಡೆದ ಚುನಾವಣೆಯಲ್ಲಿ ಸಚಿವರಾಗಿದ್ದ ಸಿ.ಎಸ್‌.ನಾಡಗೌಡರನ್ನು ಸೋಲಿಸಿ, ವಿಜಯ ಪತಾಕೆ ಹಾರಿಸಿದ ವಿಮಲಾಬಾಯಿ ದೇಶಮುಖ ಜಿಲ್ಲೆಯ ಏಕೈಕ ಮಹಿಳಾ ಶಾಸಕಿ. ಜನತಾದಳ ಸರ್ಕಾರದಲ್ಲಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು.
 
ದೇಶಮುಖ ಮನೆತನದ ನಾಯಕ ಜಗದೇವರಾವ ಸಂಗನಬಸಪ್ಪ ದೇಶಮುಖರು ಸತತ ಮೂರು ಬಾರಿ ಕ್ಷೇತ್ರದಲ್ಲಿ ವಿಜಯ ಪತಾಕೆ ಹಾರಿಸಿದ್ದರು. ಅವರ ಅಕಾಲಿಕ ನಿಧನ ಬಳಿಕ ಕ್ಷೇತ್ರ ಕೈ ತಪ್ಪಿತು. ಮಧ್ಯಂತರದಲ್ಲಿ ಅಧಿಕಾರ ಕಸಿದುಕೊಂಡಿದ್ದ ಸಿ.ಎಸ್. ನಾಡಗೌಡರಿಂದ ಮತ್ತೆ ಕ್ಷೇತ್ರ ಕೈವಶ ಮಾಡಿಕೊಳ್ಳುವಲ್ಲಿ ಜಗದೇವರಾವ ಅವರ ಪತ್ನಿ ವಿಮಲಾಬಾಯಿ ಸಫಲರಾದರು. 1994ರಲ್ಲಿ ಅನುಕಂಪದ ಆಧಾರದ ಮೇಲೆ ವಿಮಲಾದೇವಿ ಭರ್ಜರಿ ಜಯಸಾಧಿಸಿದರು.