ಕೆನಡಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಸ್ತರಣೆ
ಟ್ಯಾಗ್: 2017 source edit
೯೭ ನೇ ಸಾಲು:
ಎರಡನೆಯ ಮಹಾಯುದ್ಧ ಮುಕ್ತಾಯವಾಗುವುದರೊಳಗೆ ಕೆನಡ ಮಿತ್ರರಾಷ್ಟ್ರಗಳ ಪೈಕಿ ನೌಕಾಪಡೆಯಲ್ಲಿ ಮೂರನೆಯ ಹಾಗೂ ವೈಮಾನಿಕ ಪಡೆಯಲ್ಲಿ ನಾಲ್ಕನೆಯ ರಾಷ್ಟ್ರವಾಗಿ ಪರಿಣಮಿಸಿತು. ಈ ಯುದ್ಧದಲ್ಲಿ ಮಿತ್ರರಾಷ್ಟ್ರಗಳು ಕೆನಡದಿಂದ ಕೋಟ್ಯಂತರ ಡಾಲರುಗಳ ಸಹಾಯ ಪಡೆದುವು. ಇಂಗ್ಲೆಂಡಿಗೂ ಕೆನಡ ಸಾಲ ನೀಡಿತು. ಅಂತರರಾಷ್ಟ್ರೀಯ ಹಣಕಾಸಿನ ವ್ಯವಹಾರದಲ್ಲಿ, ಅಂತರ ರಾಷ್ಟ್ರೀಯ ಆಹಾರ ಮತ್ತು ವ್ಯವಸಾಯ ಸಂಸ್ಥೆಗೆ ಸಂಬಂಧಿಸಿದ ಅನೇಕ ಮಹತ್ತ್ವದ ಕಾರ್ಯಗಳಲ್ಲಿ ಕೆನಡದ ತಜ್ಞರು ಹೆಚ್ಚಿನ ಸೇವೆ ಸಲ್ಲಿಸಿದ್ದಾರೆ.
ಕಾಮನ್‍ವೆಲ್ತ್ ರಾಷ್ಟ್ರಸಮುದಾಯದಲ್ಲಿ ಕೆನಡದ ನೀತಿ ಎರಡನೆಯ ಮಹಾಯುದ್ಧದ ಕಾಲದಲ್ಲಾಗಲಿ ಅನಂತರವಾಗಲಿ ಯಾವ ಬದಲಾವಣೆಗೂ ಒಳಗಾಗಲಿಲ್ಲ. [[ಭಾರತ]], [[ಪಾಕಿಸ್ತಾನ]], [[ಶ್ರೀಲಂಕಾ]], ಘಾನ ಮತ್ತು ಮಲಯ ದೇಶಗಳು ಕಾಮನ್‍ವೆಲ್ತ್ ರಾಷ್ಟ್ರ ಸಮುದಾಯದಲ್ಲಿ ಪೂರ್ಣ ಸದಸ್ಯತ್ವ ಪಡೆದಾಗ ಕೆನಡ ಅದನ್ನು ಸ್ವಾಗತಿಸಿತು. ಭಾರತ ಗಣರಾಜ್ಯವಾದಾಗ ಅದು ಕಾಮನ್‍ವೆಲ್ತ್ ಸಮುದಾಯದಲ್ಲೇ ಉಳಿಯುವುದು ಸಾಧ್ಯವಾಗುವಂತೆ ಕಾಮನ್‍ವೆಲ್ತ್ ವ್ಯವಸ್ಥೆಯನ್ನು ಮಾರ್ಪಡಿಸಲು ಕೆನಡ ಸಹಾಯ ಮಾಡಿತು.
[[ವರ್ಗ:ಉತ್ತರ ಅಮೇರಿಕ ಖಂಡದ ದೇಶಗಳು]]
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೆನಡದ ಇತಿಹಾಸ}}
"https://kn.wikipedia.org/wiki/ಕೆನಡಾ" ಇಂದ ಪಡೆಯಲ್ಪಟ್ಟಿದೆ