ಆಷಾಢಮಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
No edit summary
 
೧ ನೇ ಸಾಲು:
[[ಚೈತ್ರ]]ದಿಂದ ಆರಂಭವಾಗುವ ಹನ್ನೆರಡು [[ಚಾಂದ್ರಮಾನ]] ತಿಂಗಳುಗಳ ಪೈಕಿ ಐದನೆಯದು. ಇದರಲ್ಲಿ ಸಂಭವಿಸುವ ಹುಣ್ಣಿಮೆಯೊಡನೆ [[ಪೂರ್ವಾಷಾಢಾ]] ಅಥವಾ [[ಉತ್ತರಾಷಾಢಾ]] ನಕ್ಷತ್ರ ಕೂಡುವುದರಿಂದ ಈ ಹೆಸರು ಬಂದಿದೆ. ಸೂರ್ಯ [[ಮಿಥುನರಾಶಿ]]ಯಲ್ಲಿರುವಾಗ ಆಷಾಢ ಪ್ರಾರಂಭವಾಗಿ [[ಕರ್ಕಾಟಕರಾಶಿ]]ಯಲ್ಲಿರುವಾಗ ಮುಗಿಯುತ್ತದೆ.
 
ಹಲವು ವರ್ಷಗಳಿಗೊಮ್ಮೆ ಸೂರ್ಯ ಮಿಥುನರಾಶಿಯಲ್ಲಿರುವಾಗಲೇ ಮಾಸಮಧ್ಯದಲ್ಲಿ [[ಸೂರ್ಯಸಂಕ್ರಮಣ]]ವಿಲ್ಲದ [[ಚಾಂದ್ರಮಾಸ]] ಬರುತ್ತದೆ. ಆ ತಿಂಗಳಿಗೆ [[ಅಧಿಕಾಷಾಢ]]ವೆಂದು ಹೆಸರು. ಇದು ಚೈತ್ರಾದಿ ಮಾಸಗಣನೆಯಲ್ಲಿ ಐದನೆಯದಾಗುತ್ತದೆ. ಮುಂದಿನ ತಿಂಗಳೇ ನಿಜವಾದ ಆಷಾಢ.
 
ಅಧಿಕಾಷಾಢದಲ್ಲಿ [[ನಿತ್ಯವಿಧಿ]]ಗಳನ್ನು ಬಿಟ್ಟು ಯಾವ ವಿಶೇಷ ಕಾರ್ಯಗಳನ್ನೂ ಮಾಡಕೂಡದು. ವಿಶೇಷವಾಗಿ ಈ ಮಾಸಕ್ಕೆಂದೇ ವಿಹಿತವಾದ ವ್ರತಾದಿಗಳನ್ನು ನಿಜಾಷಾಢ ಮಾಸದಲ್ಲೇ ಮಾಡಬೇಕು. ಆಷಾಢದಲ್ಲಿ ಕರ್ಕಾಟಕರಾಶಿಯಲ್ಲಿ ಸೂರ್ಯನಿರುವ ಕಾಲವನ್ನು [[ಶೂನ್ಯಮಾಸ]]ವೆಂದು ಪರಿಗಣಿಸುತ್ತಾರೆ. ಈ ತಿಂಗಳಿನ [[ಶುಕ್ಲಪಕ್ಷದ [[ಏಕಾದಶಿ]]ಯಂದು [[ದಕ್ಷಿಣಾಯನ]] ಪ್ರಾರಂಭದ ಕುರುಹಾಗಿ ದೇವಾಲಯಗಳಲ್ಲಿ ಭಗವಂತನಿಗೆ ಡೋಲೋತ್ಸವ ನಡೆಯುತ್ತದೆ. ಅಂದಿನಿಂದ [[ಚಾತುರ್ಮಾಸ್ಯವ್ರತ]] ಪ್ರಾರಂಭ. ನವ ವಿವಾಹಿತೆ ಆಷಾಢದಲ್ಲಿ ಪತಿಯ ಗೃಹದಲ್ಲಿರದೆ ತವರು ಮನೆಯಲ್ಲಿರುತ್ತಾರೆ. ಈ ತಿಂಗಳಿನಲ್ಲಿ ಅತ್ತೆ ಸೊಸೆಯರು ಒಂದೆಡೆ ಇರಕೂಡದೆಂಬುದೇ ಇದಕ್ಕೆ ಕಾರಣ. ಇದು ಕೆಲವರಲ್ಲಿ ಮಾತ್ರ ಆಚರಣೆಯಲ್ಲಿದೆ. ಆಷಾಢ ಮಾಸದ ಎಲ್ಲ ಶುಕ್ರವಾರಗಳಲ್ಲೂ ವಿಶೇಷ ಪೂಜೆಯುಂಟು.
 
==ಈ ಮಾಸದ ಪ್ರಮುಖ ಹಬ್ಬಗಳು==
* [[ಆಷಾಢ ಏಕಾದಶಿ|ಪ್ರಥಮಾ/ಶಯನೀ ಏಕಾದಶಿ; ಚಾತುರ್ಮಾಸಾರಂಭ (ಶುಕ್ಲ ಏಕಾದಶಿ)]]
* [[ಗುರು ಪೂರ್ಣಿಮಾ|ಗುರು ಪೂರ್ಣಿಮ]]/ವ್ಯಾಸ ಪೂರ್ಣಿಮ (ಹುಣ್ಣಿಮೆ)
* ಕಾಮಿಕಾ ಏಕಾದಶಿ (ಕೃಷ್ಣ ಏಕಾದಶಿ)
* ಕರ್ಕ ಸಂಕ್ರಮಣ, [[ದಕ್ಷಿಣಾಯಣ]] ಪರ್ವಕಾಲ
 
{{ಚಾಂದ್ರಮಾನ ಮಾಸಗಳು}}
 
[[ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
[[ವರ್ಗ:ಕಾಲ]]
"https://kn.wikipedia.org/wiki/ಆಷಾಢಮಾಸ" ಇಂದ ಪಡೆಯಲ್ಪಟ್ಟಿದೆ