ಶೃಂಗೇರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
ಚು fix template, replaced: Infobox settlement → Infobox ಊರು using AWB
೧ ನೇ ಸಾಲು:
{{Infobox settlementಊರು
| name = ಶೃಂಗೇರಿ
| native_name =
೩೮ ನೇ ಸಾಲು:
| registration_plate = KA-18
}}
[[File:Sharadamba Temple.jpg|200px|thumb|right|ಶಾರದಾಂಬ ದೇವಸ್ಥಾನ ]]
[[File:Raja Ravi Varma - Sankaracharya.jpg|thumb|200px|ಶಿಷ್ಯಂದಿರ ಜೊತೆ [[ಆದಿ ಶಂಕರ|ಶ್ರೀ ಆದಿ ಶಂಕರಾಚಾರ್ಯ]]ರು, [[ರಾಜಾ ರವಿ ವರ್ಮ|ರಾಜ ರವಿವರ್ಮ]]ರಿಂದ ೧೯೦೪]]
[[File:Srigeri fishes.jpg|thumb|right|200px|<center>[[ತುಂಗಾ|ತುಂಗಾ ನದಿ]]ಯಲ್ಲಿನ  ಮೀನುಗಳು </center>]]
೪೫ ನೇ ಸಾಲು:
 
==ಇತಿವೃತ್ತ==
*ಶೃಂಗೇರಿ ಎಂಬ ಹೆಸರು ಋಷ್ಯಶೃಂಗಗಿರಿ ಎಂಬ ಹೆಸರಿನಿಂದ ಬಂದಿದೆ - ಇದು ಸಮೀಪದಲ್ಲೇ ಇರುವ ಒಂದು ಬೆಟ್ಟದ ಹೆಸರು. ಪ್ರತೀತಿಗನುಸಾರವಾಗಿ ಈ ಬೆಟ್ಟದಲ್ಲೇ ಋಷಿ ವಿಭಾಂಡಕ ಮತ್ತು ಅವನ ಮಗ ಋಷ್ಯಶೃಂಗ ಇದ್ದದ್ದು. ಋಷ್ಯಶೃಂಗನ ಪ್ರಸ್ತಾಪ [[ರಾಮಾಯಣ]]ದ ಬಾಲಕಾಂಡದಲ್ಲಿ ಬರುತ್ತದೆ. [[ವಸಿಷ್ಠ ]] ತಿಳಿಸುವ ಉಪಕಥೆಗಳಲ್ಲಿ ಒಂದರಲ್ಲಿ ಋಷ್ಯಶೃಂಗ ರೋಮಪಾದ ರಾಜ್ಯದಲ್ಲಿ ಮಳೆ ತರಿಸಿದ ಕಥೆ ಇದೆ.
*ಶೃಂಗೇರಿಯ ಅನೇಕ ದೇವಸ್ಥಾನಗಳಲ್ಲಿ ಮುಖ್ಯವಾದದ್ದು ವಿದ್ಯಾಶಂಕರ ದೇವಸ್ಥಾನ. ಇದನ್ನು ೧೪ ನೇ ಶತಮಾನದಲ್ಲಿ [[ವಿಜಯನಗರ]] ಸಾಮ್ರಾಜ್ಯದ ಸಂಸ್ಥಾಪಕರಾದ ಹಕ್ಕ-ಬುಕ್ಕರ ಗುರು ಮಹರ್ಷಿ [[ವಿದ್ಯಾರಣ್ಯ]]ರು ಕಟ್ಟಿಸಿದರು. ಈ ದೇವಾಲಯದ ಶಾಸನಗಳಲ್ಲಿ ನಂತರದ ಅನೇಕ ವಿಜಯನಗರದ ಅರಸರು ಈ ದೇವಾಲಯಕ್ಕೆ ಕೊಟ್ಟ ಕಾಣಿಕೆಗಳ ದಾಖಲೆಗಳಿವೆ. [[ವಿಜಯನಗರ]] ಕಾಲದಲ್ಲಿ ಕಟ್ಟಿಸಿದ್ದಾದರೂ ಈ ದೇವಾಲಯ ಇನ್ನೂ ಹಿಂದಿನ [[ಹೊಯ್ಸಳ]] ದೇವಾಲಯದ ಸ್ಥಾನದಲ್ಲಿ ಕಟ್ಟಿದ್ದೆಂದು ನಂಬಲಾಗಿದೆ.
*ವಿಜಯನಗರದ ಕಾಲದ ಶಿಲ್ಪಕಲೆ ಮತ್ತು [[ಹೊಯ್ಸಳ]] ಶಿಲ್ಪಕಲೆ - ಎರಡರ ಸಮಾಗಮವನ್ನು ಈ ದೇವಸ್ಥಾನದಲ್ಲಿ ಕಾಣಬಹುದು. ವಿದ್ಯಾಶಂಕರ ದೇವಾಲಯದಲ್ಲಿ ಮೇಷಾದಿ ರಾಶಿ ಸೂಚಕ ಕಂಬಗಳಿವೆ.ಈ ರಾಶಿ ಕಂಬಗಳ ವೈಶಿಷ್ಟ್ಯವೆಂದರೆ ಸೂರ್ಯ ಯಾವ ರಾಶಿಯಲ್ಲಿರುತ್ತಾನೊ ಆ ರಾಶಿ ಸೂಚಕ ಕಂಬದ ಮೇಲೆ ಪ್ರಥಮ ಉಷಾ ಕಿರಣಗಳು ಬೀಳುತ್ತವೆ.
*ಶೃಂಗೇರಿಯ ಇತಿಹಾಸಕ್ಕೆ ನೇರವಾಗಿ ಸಂಬಂಧಿಸಿದ ಎರಡು ಪ್ರಮುಖ ದೇವಾಲಯಗಳಿವೆ. ಮೊದಲನೆಯದು, ಋಷ್ಯಶೃಂಗರ ತಂದೆಯವರಾದ ವಿಭಾಂಡಕ ಮಹರ್ಷಿಗಳು ತಾವು ಪೂಜಿಸುತ್ತಿದ್ದ ಶಿವಲಿಂಗದಲ್ಲಿ ಐಕ್ಯರಾದರೆಂಬ ಪ್ರತೀತಿ ಇದೆ. ಅದು ಶೃಂಗೇರಿಪಟ್ಟಣದ ಹತ್ತಿರದ ಒಂದು ಗುಡ್ಡದ ಮೇಲಿದೆ. ಇದಕ್ಕೆ ಮಲಹಾನಿಕರೇಶ್ವರ ಎಂಬ ಹೆಸರಿದ್ದು, ಈ ಸ್ಥಳದಲ್ಲಿ ಒಂದು ದೇವಾಲಯವನ್ನು ಕಟ್ಟಲಾಗಿದೆ. ಎರಡನೆಯದು, ಶೃಂಗೇರಿಯಿಂದ ೧೦ ಕಿ. ಮೀ. ದೂರದಲ್ಲಿ ಕಿಗ್ಗ ಅಥವಾ ಋಶ್ಯಶೃಂಗಪುರವೆಂಬ ಊರಿದೆ. ಇಲ್ಲಿ [[ಋಶ್ಯಶೃಂಗರ ಆತ್ಮಜ್ಯೋತಿ,]]ತಾವು ನಿತ್ಯವೂ ಆರಾಧಿಸುತ್ತಿದ್ದ ಶಿವಲಿಂಗದೊಳಗೆ ಐಕ್ಯವಾಯಿತೆಂಬ ಪ್ರತೀತಿ ಇದೆ. ಈ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ
*ಶೃಂಗೇರಿ ತಾಲೂಕು [[ಕೊಪ್ಪ]], ನರಸಿಂಹರಾಜಪುರನ್ನೊಳಗೊಂಡ ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದೆ.
*ಇದು ಜಿಲ್ಲಾ ಕೇಂದ್ರವಾದ [[ಚಿಕ್ಕಮಗಳೂರು |ಚಿಕ್ಕಮಗಳೂರಿನಂದ]] ೮೯ ಕಿ ಮೀ ಗಳ ದೂರದಲ್ಲಿದೆ. ಬೀರೂರು ಮತ್ತು ಶಿವಮೊಗ್ಗದ ರೈಲ್ವೆ ಸ್ಥಾನಕದಿಂದ ಶೃಂಗೇರಿ ಸುಮಾರು ೯೬ ಕಿ.ಮೀ.ದೂರದಲ್ಲಿದೆ. ರಸ್ತೆಯಲ್ಲಿ ಪ್ರಯಾಣ ಮಾಡಿದರೆ, ಮಂಗಳೂರು ಇಲ್ಲಿಗೆ ೧೦೭ ಕಿ.ಮೀ.ದೂರದಲ್ಲಿದೆ. ೩೨೦ ಕಿ. ಮೀ. ದೂರದ ಬೆಂಗಳೂರಿಗೆ ಹಗಲು-ರಾತ್ರಿಗಳ ಬಸ್ ಸೌಲಭ್ಯವಿದ್ದು,ಕಾಡು, ಕಣಿವೆ, ಗಿರಿಗಳಮಧ್ಯೆ, ನಿಸರ್ಗದ ರುದ್ರರಮಣೀಯತೆಯನ್ನು, ಪ್ರಯಾಣಿಸುವಾಗ ನೋಡಿ ಅನುಭವಿಸಬಹುದಾಗಿದೆ.
*ಇಲ್ಲಿನ ಬಹುಪಾಲು ಜನ ಜೀವನಕ್ಕೆ ಕೃಷಿಯನ್ನು ಅವಲಂಬಿಸಿದ್ದಾರೆ. [[ಅಡಿಕೆ]] ಹಾಗು [[ಭತ್ತ]] ಇಲ್ಲಿನ ಮುಖ್ಯ ಬೆಳೆಗಳಾಗಿವೆ. [[ಕಾಫಿ]] , [[ಬಾಳೆ]] ,[[ವೆನಿಲ್ಲಾ]], [[ವೀಳ್ಯದೆಲೆ]], [[ಕರಿಮೆಣಸು]] ಮತ್ತು [[ಏಲಕ್ಕಿ]]ಯನ್ನು [[ಅಡಿಕೆ|ಅಡಿಕೆಯೊಂದಿಗೆ]] ಮಿಶ್ರಬೆಳೆಗಳಾಗಿ ಬೆಳೆಯಲಾಗುತ್ತದೆ.
 
೮೦ ನೇ ಸಾಲು:
 
==ತಲುಪಲು ಮಾರ್ಗಗಳು==
*ಜಿಲ್ಲಾ ಕೇಂದ್ರವಾದ ಚಿಕ್ಕಮಗಳೂರಿನಂದ ರಸ್ತೆ ಮಾರ್ಗವಾಗಿ [[ಆಲ್ದೂರು]], [[ಬಾಳೆಹೊನ್ನೂರು]], [[ಜಯಪುರ]] ಮೂಲಕ ಶೃಂಗೇರಿಗೆ ( ಸುಮಾರು ೯೦ ಕಿ. ಮೀ.).ಚಿಕ್ಕಮಗಳೂರಿನಂದ ಖಾಸಗಿ ಹಾಗು ಸರಕಾರಿ ಬಸ್ ಗಳ ನೇರ ಸಂಪರ್ಕವಿದೆ. ಸಮೀಪದ ರೈಲ್ವೆ ನಿಲ್ದಾಣ [[ಕಡೂರು| ಕಡೂರಿನಿಂದ]] ಚಿಕ್ಕಮಗಳೂರು ಮೂಲಕ ಶೃಂಗೇರಿಗೆ ತಲುಪಬಹುದು.
# [[ಉಡುಪಿ|ಉಡುಪಿಯಿಂದ]] ಹಿರಿಯಡಕ , ಹೆಬ್ರಿ, [[ಆಗುಂಬೆ]] , ಬಿದರಗೋಡು ,
# [[ಶಿವಮೊಗ್ಗ| ಶಿವಮೊಗ್ಗದಿಂದ]] ,[[ನರಸಿಂಹರಾಜಪುರ]] ,[[ಕೊಪ್ಪ]] ಮಾರ್ಗವಾಗಿ ಶೃಂಗೇರಿಗೆ ತಲುಪಬಹುದು(ಅಂದಾಜು ೧೦೫ ಕಿ. ಮೀ.).
೧೦೪ ನೇ ಸಾಲು:
*[http://www.fallingrain.com/world/IN/19/Sringeri.html ಶೃಂಗೇರಿಯ ಭೌಗೋಳಿಕ ಮಾಹಿತಿ]
 
[[ವರ್ಗ: ಕರ್ನಾಟಕದ ಪ್ರಮುಖ ಸ್ಥಳಗಳು]]
[[Categoryವರ್ಗ:ಭಾರತದ ಪವಿತ್ರ ಕ್ಷೇತ್ರಗಳು]]
[[ವರ್ಗ:ಚಿಕ್ಕಮಗಳೂರು ಜಿಲ್ಲೆ]]
[[ವರ್ಗ:ಚಿಕ್ಕಮಗಳೂರು ಜಿಲ್ಲೆಯ ತಾಲೂಕುಗಳು]]
"https://kn.wikipedia.org/wiki/ಶೃಂಗೇರಿ" ಇಂದ ಪಡೆಯಲ್ಪಟ್ಟಿದೆ