ಸ್ಟೀಫನ್‌ ಹಾಕಿಂಗ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪಠ್ಯ ಸೇರಿಸುವಿಕೆ
೩೭ ನೇ ಸಾಲು:
ಸ್ಟೀಫನ್‌ ವಿಲಿಯಂ ಹಾಕಿಂಗ್ ರವರು, CH, CBE, FRS, FRSA ([[೮ ಜನವರಿ ೧೯೪೨]] - [[೧೪ ಮಾರ್ಚ್ ೨೦೧೮]]) ಬ್ರಿಟೀಷ್‌ ಸೈದ್ಧಾಂತಿಕ ಭೌತಶಾಸ್ತ್ರಜ್ಞರಾಗಿದ್ದು, 40 ವರ್ಷಗಳ ಸುದೀರ್ಘ ಕಾಲ ವೈಜ್ಞಾನಿಕ ಕ್ಷೇತ್ರದಲ್ಲಿ ವಿಶ್ವಪ್ರಸಿದ್ಧಿ ಹೊಂದಿದವರು. ಅವರ ಪುಸ್ತಕಗಳು ಹಾಗೂ ಸಾರ್ವಜನಿಕ ಸ್ವರೂಪಗಳು ಅಧ್ಯಯನ ಕ್ಷೇತ್ರದಲ್ಲಿ ಅವರನ್ನೊಬ್ಬ ಪ್ರಖ್ಯಾತ ತಾರೆಯನ್ನಾಗಿ ಹಾಗೂ ರಾಯಲ್ ಸೊಸೈಟಿ ಆಫ್ ಆರ್ಟ್ಸ್‌ನ ಗೌರವಾನ್ವಿತ ಫೆಲೋವನ್ನಾಗಿ ಮಾಡಿತು, ಅವರು ಪಾಂಟಿಫಿಕಲ್ ಅಕಾಡೆಮಿ ಆಫ್ ಸೈನ್ಸಸ್‌ನಲ್ಲಿ ಆಜೀವ ಸದಸ್ಯತ್ವ ಹೊಂದಿದ್ದಾರೆ,ಹಾಗೂ 2009ನೇ ಇಸವಿಯಲ್ಲಿ ಯುನೈಟೆಡ್ ಸ್ಟೇಟ್ಸ್‌ನ ಶ್ರೇಷ್ಠ ಪ್ರಶಸ್ತಿಯಾದಪ್ರೆಸಿಡೆಂಟಲ್ ಮೆಡಲ್ ಆಫ್ ಫ್ರೀಡಂ ನೀಡಿ ಅವರನ್ನು ಗೌರವಿಸಲಾಗಿದೆ. ಗಾನ್‌ವಿಲ್ಲೆ ಅಂಡ್ ಕಾಯಸ್ ವಿದ್ಯಾಲಯದಲ್ಲಿ ಫೆಲೋ ಆಗಿ, ಕೇಂಬ್ರಿಡ್ಜ್‌ ಹಾಗೂಒಂಟಾರಿಯೊದ ವಾಟರ್‌ಲೂನ, ಪೆರಿಮೀಟರ್ ಇನ್ಸ್‌ಟಿಟ್ಯೂಟ್‌ ಫಾರ್ ಥಿಯೊರೆಟಿಕಲ್ ಫಿಸಿಕ್ಸ್‌ ಸಂಸ್ಥೆಯಲ್ಲಿ ಪ್ರತ್ಯೇಕ ಸಂಶೋಧಕ ಪ್ರಾಧ್ಯಾಪಕ ಸ್ಥಾನವನ್ನು ಕೂಡ ಅಲಂಕರಿಸಿದ್ದರು. ವಿಶ್ವವಿಜ್ಞಾನ ಹಾಗೂ ಕ್ವಾಂಟಮ್‌ ಗುರುತ್ವಾಕರ್ಷಣೆಯಲ್ಲಿ, ಅದರಲ್ಲಿಯೂ ಮುಖ್ಯವಾಗಿ ಕಪ್ಪು ರಂಧ್ರ/ಕೃಷ್ಣ ವಿವರಗಳನ್ನು ಕುರಿತು ನೀಡಿದ ತನ್ನ ಕೊಡುಗೆಗಳಿಗೆ ಪ್ರಸಿದ್ಧಿ ಹೊಂದಿದ್ದಾರೆ.ಸುಪ್ರಸಿದ್ಧ ವೈಜ್ಞಾನಿಕ ಕೃತಿಗಳಾದ ತನ್ನ ಸ್ವಂತ ಸಿದ್ಧಾಂತಗಳು ಹಾಗೂ ಸಾಮಾನ್ಯ ವಿಶ್ವವಿಜ್ಞಾನದಲ್ಲಿ ಅವರು ಯಶಸ್ಸನ್ನೂ ಗಳಿಸಿದ್ದಾರೆ; ಅವುಗಳಲ್ಲಿ ಪ್ರಮುಖವಾಗಿ ಮಾರಾಟವಾಗಲ್ಪಟ್ಟ ಎ ಬ್ರೀಫ್ ಹಿಸ್ಟರಿ ಆಫ್ ಟೈಮ್‌ ದಾಖಲೆಯಾಗಿ 237 ವಾರಗಳ ಕಾಲ ಬ್ರಿಟೀಷ್‌ ಸಂಡೇ ಟೈಮ್ಸ್‌ನ ಅತ್ಯಂತ ಯಶಸ್ವಿ ಮಾರಾಟದ ಪುಸ್ತಕಗ ಳ ಪಟ್ಟಿಯಲ್ಲಿ ಉಳಿದುಕೊಂಡಿದೆ.
ಹಾಕಿಂಗ್‌ರ, ರೋಜರ್ ಪೆನ್‌ರೋಸ್‌ ಜೊತೆಗೂಡಿ ಇಂದಿನ ತನಕ ಮಾಡಿದ ಪ್ರಮುಖ ವೈಜ್ಞಾನಿಕ ಸಾಧನೆಗಳು,ವೈಶಿಷ್ಟ್ಯತೆಗಳಾದ ಸಾಮಾನ್ಯ ಸಾಪೇಕ್ಷತೆ ಸಿದ್ಧಾಂತಗಳು, ಹಾಗೂ ಸೈದ್ಧಾಂತಿಕವಾಗಿ ಊಹಿಸಲಾದ ಕಪ್ಪು ರಂಧ್ರ/ಕೃಷ್ಣ ವಿವರಗಳು ವಿಕಿರಣವನ್ನು ಹೊರಸೂಸುತ್ತದೆ ಎಂಬುದನ್ನು ತಿಳಿಸಿದ್ದು, ಇದೇ ಹಾಕಿಂಗ್ ವಿಕಿರಣ ಹೊರಸೂಸುವಿಕೆ (ಅಥವಾ ಕೆಲವು ಬಾರಿ ಬೆಕೆನ್ಸ್‌ಟೀನ್‌-ಹಾಕಿಂಗ್ ವಿಕಿರಣ ಹೊರಸೂಸುವಿಕೆ) ಎಂದು ಇಂದು ಪ್ರಸಿದ್ಧವಾಗಿದೆ.
 
ಹಾಕಿಂಗ್, ಹಲವಾರು ವರ್ಷಗಳ ಕಾಲ ಬೆಳವಣಿಗೆ ಹೊಂದಿದ್ದು ಅವರನ್ನು ಸಂಪೂರ್ಣವಾಗಿ ಪಾರ್ಶ್ವವಾಯುವಿಗೆ ಒಳಪಡಿಸಿದ ಸ್ಥಿತಿಯಾದ ಅಮಿಯೊಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್‌ಗೆ (ALS) ಸಂಬಂಧಿಸಿದ ನರ-ಸ್ನಾಯು ಕ್ಷಯಕ್ಕೆ ಒಳಗಾದರು.[೧][೨] [೪][೫][೬]
 
== ಆರಂಭಿಕ ಜೀವನ ಹಾಗೂ ಶಿಕ್ಷಣ ==
ಸ್ಟೀಫನ್‌ ಹಾಕಿಂಗ್, ಜೀವಶಾಸ್ತ್ರಜ್ಞ ಸಂಶೋಧಕ Dr. ಫ್ರಾಂಕ್‌ ಹಾಕಿಂಗ್ ಹಾಗೂ ಐಸೊಬೆಲ್ ಹಾಕಿಂಗ್‌ರಿಗೆ ಮಗನಾಗಿ ಜನಿಸಿದನು. ಅವರಿಗೆ ಫಿಲಿಪ್ಪಾ ಹಾಗೂ ಮಾರಿಯಾ ಎಂಬ ಇಬ್ಬರು ಕಿರಿಯ ಸಹೋದರಿಯರಿದ್ದು, ಎಡ್ವರ್ಡ್‌ ಎಂಬ ದತ್ತು ತೆಗೆದುಕೊಂಡ ಸಹೋದರನೂ ಇದ್ದಾನೆ.[೧] ಹಾಕಿಂಗ್‌ರ ತಂದೆತಾಯಿಗಳು ಉತ್ತರ ಲಂಡನ್ನಿನಲ್ಲಿ ವಾಸಿಸುತ್ತಿದ್ದರೂ, ಐಸೊಬೆಲ್ ಸ್ಟೀಫನ್‌ನ ಗರ್ಭಿಣಿಯಾಗಿದ್ದಾಗ ತಮ್ಮ ಮೊದಲ ಮಗುವಿನ ಸುರಕ್ಷತೆಯ ಕಾರಣದಿಂದಾಗಿ ಆಕ್ಸ್‌‌ಫರ್ಡ್‌ಗೆ ತೆರಳಿದರು (ಆ ಸಮಯದಲ್ಲಿ ಲಂಡನ್ ಲುಫ್ತ್‌ವಾಫೆಯಿಂದ ದಾಳಿಗೆ ಒಳಗಾಗಿತ್ತು).[೨] ಹಾಕಿಂಗ್, ಒಂದು ಜರ್ಮನ್ ನಿರ್ಮಿತ V-2 ಕ್ಷಿಪಣಿಯು ಕೆಲವೇ ಬೀದಿಗಳ ಅಂತರದಲ್ಲಿ ಸಿಡಿಯಿತು ಎಂದು ಹೇಳುತ್ತಾರೆ.[೩]
"https://kn.wikipedia.org/wiki/ಸ್ಟೀಫನ್‌_ಹಾಕಿಂಗ್" ಇಂದ ಪಡೆಯಲ್ಪಟ್ಟಿದೆ