ಬನ್ನಂಜೆ ಗೋವಿಂದಾಚಾರ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨ ನೇ ಸಾಲು:
 
 
ಬನ್ನಂಜೆ ಗೋವಿಂದಾಚಾರ್ಯರು ದೇಶದ ಪ್ರಮುಖ ವಿದ್ವಾಂಸರಲ್ಲಿ ಒಬ್ಬರು. ಇವರು [[ಉಡುಪಿ]] ಜಿಲ್ಲೆಯ [[ಅಂಬಲಪಾಡಿ|ಅಂಬಲಪಾಡಿಯಲ್ಲಿ]] [[೧೯೩೬]]ರಲ್ಲಿ ಜನಿಸಿದರು. ತಮ್ಮ ಪ್ರವಚನಗಳ ಮೂಲಕ ತತ್ವ ಪ್ರಚಾರ ಕೈಗೊಂಡಿದ್ದಾರೆ. ಮಾಧ್ವ ತತ್ವದಲ್ಲಿ ಅಮೋಘ ಪಾ೦ಡಿತ್ಯ ಸಾಧಿಸಿರುವ ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಹಾಗೂ ಸಂಸ್ಕೃತ ಭಾಷೆಯಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ.
ಅನೇಕ ಸಂಸ್ಕೃತ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಬಾಣಭಟ್ಟನ ಕಾದಂಬರಿ, ಕಾಳೀದಾಸನ ಶಾಕುಂತಲಾ, ಶೂದ್ರಕನ ’ಮೃಚ್ಛಕಟಿಕ’ ಇತ್ಯಾದಿ ಚಾರಿತ್ರಿಕ ಕೃತಿಗಳು ಇವರ ಅನುವಾದಿತ ಕೃತಿಗಳಲ್ಲಿ ಪ್ರಮುಖವಾದುವು. ಶ್ರೀ ಶ್ರೀ ತ್ರಿವಿಕ್ರಮಾಚಾರ್ಯದಾಸರ ’ಆನ೦ದಮಾಲಾ’, ತ್ರಿವಿಕ್ರಮ ಪ೦ಡಿತರ ’ವಾಯುಸ್ತುತಿ’, ’ವಿಷ್ಣುಸ್ತುತಿ’ ಇತ್ಯಾದಿ ಕೃತಿಗಳಿಗೆ ಟಿಪ್ಪಣಿಯನ್ನು ಬರೆದಿದ್ದಾರೆ. ಆರು ಉಪನಿಷತ್ತುಗಳಿಗೆ ಟೀಕೆಯನ್ನು ಬರೆದಿದ್ದಾರೆ. ಮಧ್ವಾಚಾರ್ಯರ ಮಹಾಭಾರತದ ತಾತ್ಪರ್ಯದ ಟೀಕಾ ಕೃತಿಯಾದ ’ಯಮಕ ಭಾರತ’ ಕೃತಿಗೆ ಟಿಪ್ಪಣಿಯನ್ನು ಬರೆದಿದ್ದಾರೆ. ಅಂತೆಯೇ ’ಭಾಗವತ ತಾತ್ಪರ್ಯ’ ಕೃತಿಗೂ ಟಿಪ್ಪಣಿ ಬರೆದಿದ್ದಾರೆ.
 
ಅನೇಕ ಸೂಕ್ತ ಮಂತ್ರಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಪುರುಷಸೂಕ್ತ, ಶ್ರೀ ಮದ್ಭಗವದ್ಗೀತೆ, ಶ್ರೀ ಸೂಕ್ತ , ಶಿವಸೂಕ್ತ, ನರಸಿಂಹ ಸ್ತುತಿ, ತಂತ್ರಸಾರ ಸಂಗ್ರಹ ಇತ್ಯಾದಿಗಳನ್ನು ಕನ್ನಡೀಕರಿಸಿದ್ದಾರೆ. ಮಧ್ವಾಚಾರ್ಯರ ’ಮಾಧ್ವರಾಮಾಯಣ’, ರಾಜರಾಜೇಶ್ವರಿ ಯತಿಗಳ ಮಂಗಲಾಷ್ಟಕ ಇತ್ಯಾದಿ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
 
ಚಲನಚಿತ್ರ ಲೋಕಕ್ಕೂ ಬನ್ನಂಜೆಯವರು ಕೆಲಸ ಮಾಡಿದ್ದಾರೆ. [[ಜಿ.ವಿ. ಅಯ್ಯರ್]] ಅವರ[[ಸಂಸ್ಕೃತ]] ಚಲನಚಿತ್ರ ’ಶ್ರೀ ಶಂಕರಾಚಾರ್ಯ’, ’ಶ್ರೀ ಮಧ್ವಾಚಾರ್ಯ’, ’ಶ್ರೀ ರಾಮಾನುಜಾಚಾರ್ಯ’ ಚಲನಚಿತ್ರಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ನಿರ್ವಹಿಸುವುದಲ್ಲದೆ, ಸಂಭಾಷಣೆಯನ್ನು ರಚಿಸಿದ್ದಾರೆ.
 
 
==ಅನುವಾದಿತ ಕೃತಿಗಳು==
 
 
 
 
==ಗೌರವಗಳು==
 
 
Line ೨೨ ⟶ ೨೮:
 
 
 
 
 
 
 
 
 
{ಚುಟುಕು}
[[en:Bannanje Govindacharya]]