ಗ್ರೀಟ ಗಾರ್ಬೋ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್: 2017 source edit
No edit summary
ಟ್ಯಾಗ್: 2017 source edit
೭ ನೇ ಸಾಲು:
 
== ಚಿತ್ರರಂಗದಲ್ಲಿ ==
[[File:Portrait photograph of Greta Garbo, 1925.jpg|thumb|right|200px|Portrait photograph of Greta Garbo, 1925]]
ಮಾರೀಟ್ಜ ಸ್ಟಿಲ್ಲರ್ ಎಂಬ ಚಲನಚಿತ್ರ ನಿರ್ದೇಶಕ ತನ್ನ ದಿ ಸ್ಟೋರಿ ಆಫ್ ಗೋಷ್ಟಾ ಬರ್ಲಿಂಗ್ (1924) ಎಂಬ ಚಿತ್ರದಲ್ಲಿ ಕೌಂಟೆಸ್ ದ್ಹೋನಳ ಪಾತ್ರವಹಿಸಲು ಈಕೆಯನ್ನು ಆಯ್ಕೆ ಮಾಡಿದ. ಈತನೇ ಈಕೆಗೆ ಗ್ರೀಟ ಗಾರ್ಬೋ ಎಂಬ ಹೆಸರನ್ನಿತ್ತದ್ದು. ಸಿನಿಮಾ ರಂಗದ ನಟನೆಯ ಎಲ್ಲ ತಂತ್ರ ಗಳನ್ನೂ ಆತ ಈಕೆಗೆ ಹೇಳಿಕೊಟ್ಟ. ಸ್ಟಿಲ್ಲರನೊಡನೆ ಭೇಟಿಯಾದುದು ಗಾರ್ಬೋಳ ಜೀವನದಲ್ಲಿ ಒಂದು ಮಹತ್ತ್ವದ ಘಟನೆ. ಈಕೆ ಪಾತ್ರವಹಿಸಿದ ಮತ್ತಾವುದೇ ಚಿತ್ರವನ್ನು ಆತ ನಿರ್ದೇಶಿಸಲಿಲ್ಲವಾದರೂ ಸದಾಕಾಲವೂ ಈಕೆಯ ಬಳಿಯಲ್ಲೇ ಇರುತ್ತಿದ್ದ. ದಿ ಜಾಯ್ಲೆಸ್ ಸ್ಟ್ರೀಟ್ ಎಂಬ ಚಿತ್ರದಲ್ಲಿ ಪಾತ್ರವಹಿಸಿದ ಅನಂತರ ಗಾರ್ಬೋ ಸ್ಟಿಲ್ಲರನೊಡನೆ ಅಮೆರಿಕಕ್ಕೆ ಹೋದಳು (1925). ಖ್ಯಾತ ಚಿತ್ರನಿರ್ಮಾಣ ಸಂಸ್ಥೆಯಾದ ಎಂ.ಜಿ.ಎಂ. ನಲ್ಲಿ ಗಾರ್ಬೋಗೆ ಒಂದು ಅವಕಾಶ ಕಲ್ಪಿಸಲು ಸ್ಟಿಲ್ಲರ್ ಬಹಳ ಪ್ರಯತ್ನ ಮಾಡಿದ. ಸಿನಿಮಾ ಸಂಸ್ಥೆಯ ಪ್ರಚಾರ ಶಾಖೆಯ ತೀವ್ರ ಪ್ರಚಾರದಿಂದಾಗಿ ಕೆಲವೇ ದಿವಸಗಳಲ್ಲಿ ಗಾರ್ಬೋ ಹಾಲಿವುಡ್ಡಿನ ಪ್ರಮುಖ ತಾರೆಯಾಗಿ ಮೆರೆದಳು.
 
"https://kn.wikipedia.org/wiki/ಗ್ರೀಟ_ಗಾರ್ಬೋ" ಇಂದ ಪಡೆಯಲ್ಪಟ್ಟಿದೆ