ಕೊಪ್ಪಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧೨೩ ನೇ ಸಾಲು:
 
== ಸಾರಿಗೆ ಸಂಪರ್ಕ ==
ಕೊಪ್ಪಳ ಜಿಲ್ಲೆಯಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿ ಸಂಪರ್ಕಗಳಿವೆ. ರಾಷ್ತ್ರೀಯ ಹೆದ್ದಾರಿ ೧೩ (NH-13) ಮಹಾರಾಷ್ಟ್ರದ ಸೊಲ್ಲಾಪುರದಿಂದ [[ವಿಜಯಪುರ]], ಚಿತ್ರದುರ್ಗ ಮಾರ್ಗವಾಗಿ ಮಂಗಳೂರಿಗೆ ತಲುಪುತ್ತದೆ. ಇದು ಜಿಲ್ಲೆಯ ಮುಖ್ಯ ಪಟ್ಟಣವಾದ ಕುಷ್ಟಗಿಯ ಮೂಲಕ ಹಾದು ಹೋಗುತ್ತದೆ. ರಾಷ್ಟ್ರೀಯ ಹೆದ್ದಾರಿ ೬೩ (NH-63) ಆಂಧ್ರ ಪ್ರದೇಶದ ಗುತ್ತಿಯಿಂದ ಬಳ್ಳಾರಿ, ಹುಬ್ಬಳ್ಳಿ ಮಾರ್ಗವಾಗಿ ಉತ್ತರ ಕನ್ನಡ ಜಿಲ್ಲೆಯ [[ಅಂಕೋಲ]] ತಲುಪುತ್ತದೆ<ref>{{cite web|last1=CENTRAL GROUND WATER BOARD|last2=MINISTRY OF WATER RESOURCES|first2=GoI|title=GROUND WATER INFORMATION BOOKLET KOPPAL DISTRICT, KARNATAKA|url=http://cgwb.gov.in/District_Profile/karnataka/2012/KOPPA-2012L.pdf|website=CENTRAL GROUND WATER BOARD|publisher=CENTRAL GROUND WATER BOARD|accessdate=19 February 2018}}</ref>. ಜಿಲ್ಲೆಯ ಒಳಗೆ ಜಿಲ್ಲಾ ಕೇಂದ್ರದಿಂದ ಎಲ್ಲ ತಾಲ್ಲೂಕುಗಳನ್ನು ಕೂಡಿಸುವ ರಾಜ್ಯ ಹೆದ್ದಾರಿಗಳಿವೆ. ಕೊಪ್ಪಳದಿಂದ ರಾಯಚೂರು, ಗದಗ, ಶೋರಾಪುರ, ಬಳ್ಳಾರಿ, ಮೊದಲಾದ ಜಿಲ್ಲೆಯ ಹೊರ ಸ್ಥಳಗಳಿಗೆ ರಸ್ತೆ ಸಂಪರ್ಕವಿದೆ. ಹುಬ್ಬಳ್ಳಿ-ಗುಂತಕಲ್ ರೈಲುಮಾರ್ಗವು ಕೊಪ್ಪಳ ಜಿಲ್ಲೆಯಲ್ಲಿ ಹಾದು ಹೋಗುತ್ತದೆ. ಬೆಂಗಳೂರು, ಕೊಲ್ಹಾಪುರ, ಹೈದರಾಬಾದ್, ವಿಜಯವಾಡ ನಗರಗಳಿಗೆ ರೈಲುಸಂಪರ್ಕವಿದೆ. ಕೊಪ್ಪಳ ಹಾಗು ಮುನಿರಾಬಾದಿನ ರೈಲು ನಿಲ್ದಾಣಗಳು [[ನೈರುತ್ಯ ರೇಲ್ವೆ]]ಯ ಹುಬ್ಬಳ್ಳಿ ವಿಭಾಗಕ್ಕೆ ಸೇರುತ್ತವೆ<ref>{{cite web|last1=CENTRAL GROUND WATER BOARD|last2=MINISTRY OF WATER RESOURCES|first2=GoI|title=GROUND WATER INFORMATION BOOKLET KOPPAL DISTRICT, KARNATAKA|url=http://cgwb.gov.in/District_Profile/karnataka/2012/KOPPA-2012L.pdf|website=CENTRAL GROUND WATER BOARD|publisher=CENTRAL GROUND WATER BOARD|accessdate=19 February 2018}}</ref>. ಕೊಪ್ಪಳದಿಂದ ೮ ಕಿ.ಮೀ. ದೂರದಲ್ಲಿರುವ ಗಿಣಿಗೇರಾ ಸಮೀಪ ಮೆಸರ್ಸ್. ಎಂ.ಎಸ್.ಪಿ.ಎಲ್ ಲಿಮಿಟೆಡ್ ರವರ ವಿಮಾನ ನಿಲ್ದಾಣ ಬಳಕೆಯಲ್ಲಿದೆ<ref>{{cite web|last1=CENTRAL GROUND WATER BOARD|last2=MINISTRY OF WATER RESOURCES|first2=GoI|title=GROUND WATER INFORMATION BOOKLET KOPPAL DISTRICT, KARNATAKA|url=http://cgwb.gov.in/District_Profile/karnataka/2012/KOPPA-2012L.pdf|website=CENTRAL GROUND WATER BOARD|publisher=CENTRAL GROUND WATER BOARD|accessdate=19 February 2018}}</ref>.
ಆರ್ಥಿಕವಾಗಿ ಹಿಂದುಳಿದಿದ್ದು ತುಂಗಭದ್ರಾನದಿ ಮತ್ತು ಕಣಿವೆಗಳಿಂದ ಕೂಡಿದ ಈ ಜಿಲ್ಲೆ ರಸ್ತೆ ಸಂಪರ್ಕದಲ್ಲಿ ತುಂಬಾ ಕನಿಷವಿ ಸೌಲಭ್ಯ ಹೊಂದಿದ್ದಿತು. ತುಂಗಭದ್ರಾ ನದಿಗೆ ಸೇತುವೆಗಳಾದ ಮೇಲೆ ಹೊರ ಪ್ರದೇಶಗಳೊಂದಿಗೆ ಹೆಚ್ಚು ಸಂಪರ್ಕವೇರ್ಪಟ್ಟಿತು. ಚೆನ್ನೈ-ಪುಣೆ ರಾಷ್ಟ್ರೀಯ ಹೆದ್ದಾರಿ ಈ ಜಿಲ್ಲೆಯ ಕೊಪ್ಪಳ-ಕುಷ್ಟಗಿ ಮೂಲಕ ಹಾದುಹೋಗಿದ್ದು ಅದರ ಉದ್ದ ಜಿಲ್ಲೆಯಲ್ಲಿ 125ಕಿಮೀ ಬಿಜಾಪುರ ಜಿಲ್ಲೆಯ ಹುನಗುಂದದಿಂದ ಕುಷ್ಟಗಿ ಇರಕಲ್‍ಗಡ ಕೊಪ್ಪಳ ಮೂಲಕ ಬಳ್ಳಾರಿ ಸೇರುವ ಮಾರ್ಗ ಪ್ರಮುಖ ರಾಜ್ಯ ಹೆದ್ದಾರಿಯಾಗಿದೆ. ಕೊಪ್ಪಳದಿಂದ ಹುಬ್ಬಳಿ-ಧಾರವಾಡದೊಡನೆ ಸಂಪರ್ಕಿಸುವ ರಸ್ತೆ ಇನ್ನೊಂದು ಪ್ರಮುಖ ರಸ್ತೆ ಮಾರ್ಗ. ಕೊಪ್ಪಳದಿಂದ ರಾಯಚೂರು, ಗದಗ, ಶೋರಾಪುರ, ಲಿಂಗಸುಗೂರು, ಮುದ್ಗಲ್ ಮೊದಲಾದ ಜಿಲ್ಲೆಯ ಹೊರ ಸ್ಥಳಗಳಿಗೆ ಉತ್ತಮ ರಸ್ತೆ ಸಂಪರ್ಕವಿದೆ. ಜಿಲ್ಲೆಯ ಒಳಗೆ ಜಿಲ್ಲಾ ಕೇಂದ್ರದಿಂದ ಎಲ್ಲ ತಾಲ್ಲೂಕುಗಳನ್ನು ಕೂಡಿಸುವ ಜಿಲ್ಲಾ ರಸ್ತೆಗಳಿವೆ. ಗ್ರಾಮೀಣ ರಸ್ತೆಗಳು ನಿಧಾನಗತಿಯಲ್ಲಿ ಅಬಿsವೃದ್ಧಿ ಕಾಣುತ್ತಿವೆ. ಜಿಲ್ಲೆಯಲ್ಲಿ 270ಕಿಮೀ ರಾಜ್ಯ ಹೆದ್ದಾರಿ; 537ಕಿಮೀ ಜಿಲ್ಲಾ ರಸ್ತೆಗಳು ಮತ್ತು 1251ಕಿಮೀ ಗ್ರಾಮ ರಸ್ತೆಗಳಿವೆ. ಭಾರಿ ಸೇತುವೆಗಳ ಸಂಖ್ಯೆ 19 (2001). ಹುಬ್ಬಳ್ಳಿ-ಬಳ್ಳಾರಿ ರೈಲು ಮಾರ್ಗ ಮುನಿರಾಬಾದ್ ಮತ್ತು ಕೊಪ್ಪಳದ ಮೂಲಕ ಹಾದುಹೋಗುತ್ತದೆ. ಅದರ ಉದ್ದ 55ಕಿಮೀ.
 
== ಇತಿಹಾಸ ==
"https://kn.wikipedia.org/wiki/ಕೊಪ್ಪಳ" ಇಂದ ಪಡೆಯಲ್ಪಟ್ಟಿದೆ