ಸ್ಲಾತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಮಾಹಿತಿ ಸೇರ್ಪಡೆ
೭ ನೇ ಸಾಲು:
ಇವು ನೆಲದ ಮೇಲೆ ಅಸಹಾಯಕ ಪ್ರಾಣಿಗಳಾಗಿವೆ, ಆದರೆ ನೀರಿನಲ್ಲಿ ಈಜಬಲ್ಲವು. ಇವುಗಳ ಮೈಮೇಲೆ ಇರುವ ದಟ್ಟವಾದ ಕೂದಲಿನ ಮೇಲೆ ಹಸಿರು ಪಾಚಿ ಬೆಳೆದಿರುತ್ತದೆ. ಇದು ಸ್ಲಾತ್ ಗಳಿಗೆ ಛದ್ಮವೇಷ (camouflage) ಧರಿಸಲು ನೆರವಾಗುತ್ತದೆ. ಇವುಗಳಿಂದ ಸ್ಲಾತ್ ಗೆ ಪೋಷಕಾಂಶಗಳೂ ದೊರೆಯುತ್ತದೆ. ಈ ಪಾಚಿಗಳು ಕೆಲವು ಜಾತಿಯ [[ಪತಂಗ|ಪತಂಗಗಳಿಗೂ]] ಆಹಾರವಾಗಿದ್ದು ಆ ಪತಂಗಗಳು ಕೇವಲ ಸ್ಲಾತ್ ಮೈಮೇಲೆ ಮಾತ್ರ ಬೆಳೆಯುವಂತವಾಗಿದ್ದು ’ಸ್ಲಾತ್ ಪತಂಗ’ಗಳೆಂದೇ ಕರೆಯಲ್ಪಡುತ್ತವೆ.<ref name="gizmodo">{{cite web|last1=Bennington-Castro|first1=Joseph|title=The Strange Symbiosis Between Sloths and Moths|url=https://io9.gizmodo.com/the-strange-symbiosis-between-sloths-and-moths-1506856445|website=Gizmodo|accessdate=1 December 2017}}</ref>
 
==ದೇಹಲಕ್ಷಣಗಳು==
 
ಸ್ಲಾತ್‍ಗಳು ಸಾಮಾನ್ಯವಾಗಿ ೬೦ ರಿಂದ ೮೦ ಸೆಂ.ಮೀ. ಉದ್ದ ಹಾಗೂ ೩.೬ ರಿಂದ ೭.೭ ಕಿಲೋ ಭಾರವಿರುತ್ತವೆ. ಎರಡು ಬೆರಳಿನ ಸ್ಲಾತ್‍ಗಳು ಸ್ವಲ್ಪ ದೊಡ್ಡ ಗಾತ್ರದಾಗಿರುತ್ತವೆ. ಸ್ಲಾತ್‍ಗಳ ಕೈಗಳು ಉದ್ದವಾಗಿದ್ದು, ಗುಂಡಾಕಾರದ ತಲೆ ಮತ್ತು ಸಣ್ಣ ಕಿವಿಗಳನ್ನು ಹೊಂದಿರುತ್ತವೆ. ಮೂರುಬೆರಳಿನ ಸ್ಲಾತ್‍ಗಳಿಗೆ ೫ರಿಂದ ೬ ಸೆಂ.ಮೀ. ಉದ್ದದ ಬಾಲವಿರುತ್ತದೆ. ಬಹುತೇಕ ಎಲ್ಲಾ ಸಸ್ತನಿಗಳಿಗೆ ಏಳು ಕುತ್ತಿಗೆಯ ಮೂಳೆ (cervical vertebrae)ಗಳಿರುತ್ತವೆ. ಆದರೆ ಎರಡು ಬೆರಳಿನ ಸ್ಲಾತ್ ಗೆ ಒಂಬತ್ತು ಹಾಗೂ ಮೂರುಬೆರಳಿನ ಸ್ಲಾತ್‍ಗೆ ಆರು ಮೂಳೆಗಳಿರುತ್ತವೆ. ಇದರಿಂದ ಅವುಗಳ ಕುತ್ತಿಗೆಯನ್ನು ೨೭೦ಡಿಗ್ರಿಗಳಷ್ಟು ತಿರುಗಿಸಲು ಸಾಧ್ಯವಾಗುತ್ತದೆ.
 
ಇವುಗಳು ಬಣ್ಣಗಳನ್ನು ಗುರುತಿಸುವ ದೃಷ್ಟಿ ಹೊಂದಿರುತ್ತವೆ. ಆದರೆ ಇವುಗಳ ದೃಷ್ಟಿಶಕ್ತಿ ಹಾಗೂ ಶ್ರವಣಶಕ್ತಿ ಉತ್ತಮವಾಗಿರುವುದಿಲ್ಲ. ಆದ್ದರಿಂದ ಇವು ವಾಸನೆ ಮತ್ತು ಸ್ಪರ್ಶದ ಮೂಲಕ ಸುತ್ತಲಿನ ವಾತಾವರಣ, ವಸ್ತುಗಳನ್ನು ಗುರುತಿಸುತ್ತವೆ.
 
==ಉಲ್ಲೇಖಗಳು==
"https://kn.wikipedia.org/wiki/ಸ್ಲಾತ್" ಇಂದ ಪಡೆಯಲ್ಪಟ್ಟಿದೆ