ಕೊಪ್ಪಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೮೨ ನೇ ಸಾಲು:
ವ್ಯವಸಾಯ: ಕೊಪ್ಪಳ ಜಿಲ್ಲೆ ವ್ಯವಸಾಯ ಪ್ರಧಾನವಾದುದು. ಜಿಲ್ಲೆಯ ಸೇ.75 ರಷ್ಟು ಜನರು ವ್ಯವಸಾಯ ಮತ್ತು ಆ ಸಂಬಂಧವಾದ ಕಸಬುಗಳನ್ನು ಅವಲಂಬಿಸಿದ್ದಾರೆ. ಮಳೆ ಕಡಿಮೆ ಪ್ರಮಾಣದಲ್ಲಿ ಬೀಳುವುದರಿಂದ ಸಾಗುವಳಿಗಾರರ ಬದುಕು ಅನಿಶ್ಚಿತ ಆದಾಯವನ್ನು ಆಧರಿಸಿದೆ. ಹಿಂದಿನ ವಿಜಯನಗರ ಕಾಲದ ನಾಲೆಗಳು ಸ್ಥಳೀಯವಾಗಿ ಸೀಮಿತ ಪ್ರದೇಶಗಳಿಗೆ ನೀರೊದಗಿಸುತ್ತಿದ್ದವು. ಸುದೈವವಶಾತ್ ಈ ಜಿಲ್ಲೆಯು ರಾಜ್ಯದ ಪ್ರಮುಖ ನದಿಗಳಾದ ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ದೋಆಬ್ ಪ್ರದೇಶದಲ್ಲಿ ಬರುವುದರಿಂದ ನೀರಾವರಿ ಯೋಜನೆಗಳಿಂದ ಜಿಲ್ಲೆ ಹೆಚ್ಚು ಪ್ರಯೋಜನ ಪಡೆದಿದೆ.
 
== ಕೃಷಿ, ಪಶುಸಾಕಾಣಿಕೆ, ಮೀನುಗಾರಿಕೆ ==
ಹೈದರಬಾದ್ ಸಂಸ್ಥಾನದ ಆಡಳಿತದಲ್ಲಿದ್ದಾಗ ತುಂಗಭದ್ರಾ ನದಿಯ ಅಣೆಕಟ್ಟು ಯೋಜನೆಗಳನ್ನು ಕಾರ್ಯಗತಗೊಳಿಸಲು ವಿವಿಧ ಪ್ರಯತ್ನಗಳು ನಡೆದವು. ಆಗಿನ ಮೈಸೂರು ಸಂಸ್ಥಾನ ಮತ್ತು ಮದರಾಸು ಪ್ರಾಂತಗಳು ಈ ಸರಹದ್ದಿನಲ್ಲಿ ಬರುತ್ತಿದ್ದುದರಿಂದ ಅವುಗಳೊಂದಿಗೆ ಸಮಾಲೋಚನೆ ಮತ್ತು ಒಪ್ಪಂದಗಳ ಅಂಗೀಕಾರದಲ್ಲೇ ಸಾಕಷ್ಟು ಕಾಲ ಕಳೆಯಿತು. ಸ್ವಾತಂತ್ರ್ಯ ಬಂದ ಮೇಲೆ 1950ರ ದಶಕದಲ್ಲಿ ತುಂಗಭದ್ರಾ ನದಿಗೆ ಹೊಸಪೇಟೆ ಬಳಿ ಬೃಹತ್ ಜಲಾಶಯ ನಿರ್ಮಿಸುವ ಕಾರ್ಯಯೋಜನೆ ತ್ವರಿತಗೊಂಡಿತು. ಇದು 1968ರ ಹೊತ್ತಿಗೆ ಪೂರ್ಣಗೊಂಡು ಕೊಪ್ಪಳವನ್ನು ಒಳಗೊಂಡಂತೆ ಹಿಂದಿನ ರಾಯಚೂರು ಜಿಲ್ಲೆಯ - ಈ ಜಲಾಶಯದ ಎಡದಂಡೆ ಕಾಲುವೆ ಮೂಲಕ ಹೆಚ್ಚು ಪ್ರದೇಶಗಳಿಗೆ ನೀರಾವರಿ ಸೌಲಭ್ಯ ದೊರೆಯಿತು. ಈಗಿನ ಕೊಪ್ಪಳ ಜಿಲ್ಲೆಯ ಕೊಪ್ಪಳ, ಗಂಗಾವತಿ ತಾಲ್ಲೂಕುಗಳಲ್ಲಿ ನೀರಾವರಿ ಪ್ರದೇಶ ಹೆಚ್ಚಿತು. ಇದಲ್ಲದೆ ಹಳೆಯ ನಾಲಾಗಳು, ಸಣ್ಣ ಪ್ರಮಾಣದ ಅಣೆಕಟ್ಟುಗಳು ಅಥವಾ ಬ್ಯಾರೇಜ್‍ಗಳು ನಿರ್ಮಾಣವಾಗಿದ್ದು ಇವು ಬೇಸಗೆಯ ಬೆಳೆಗಳಿಗೆ ಆಶ್ರಯವಾಗಿವೆ. ಹಾಲಿ ಜಿಲ್ಲೆಯಲ್ಲಿ ಕಾಲುವೆಗಳಿಂದ 63,411 ಹೆಕ್ಟೇರ್, ಕೆರೆಗಳಿಂದ 1763 ಹೆಕ್ಟೇರ್ ಬಾವಿಗಳಿಂದ, 20,262 ಹೆಕ್ಟೇರ್ ಮತ್ತು ಕೊಳವೆ ಬಾವಿಗಳಿಂದ 6363 ಹೆಕ್ಟೆರ್ ಜಮೀನಿಗೆ ನೀರೊದಗುತ್ತಿದೆ.
ಬತ್ತ, ಜೋಳ, ಸಜ್ಜೆ, ಹುರುಳಿ, ಹೆಸರು, ಮುಸುಕಿನ ಜೋಳ, ಕಡಲೆ, ಎಳ್ಳು, ದ್ವಿದಳ ಧಾನ್ಯಗಳು, ಸೂರ್ಯಕಾಂತಿ, ಸೋಯಾಬೀನ್, ಹತ್ತಿ, ತೊಗರಿ, ಹರಳುಬೀಜ, ನೆಲಗಡಲೆ, ಅಗಸೆ ಇವು ಮುಖ್ಯ ಬೆಳೆಗಳಾಗಿವೆ. ತೋಟಗಾರಿಕೆ ಬೆಳೆಗಳಲ್ಲಿ ಮಾವು, ಸಪೆÇೀಟಸಪೋಟ, ಸೀಬೆ, ಬಾಳೆ, ನಿಂಬೆ, ದಾಳಿಂಬೆ, ಅಂಜೂರ ಮೊದಲಾದವು ಪ್ರಮುಖವಾದವು.
 
ಪಶುಸಂಗೋಪನೆ ಕೃಷಿಯೊಂದಿಗೆ ಜಿಲ್ಲೆಯ ಮುಖ್ಯ ಉಪಕಸಬುಗಳಲ್ಲಿ ಒಂದಾಗಿದೆ. ಇಲ್ಲಿ ಖಿಲಾರ್ ತಳಿಯ ಜಾನುವಾರುಗಳು ಹೆಚ್ಚು. ಅದಿsಕ ಹಾಲು ಉತ್ಪಾದನೆಯ ದೃಷ್ಟಿಯಿಂದ ಮಿಶ್ರತಳಿಗಳನ್ನು ಅಬಿsವೃದ್ಧಿಪಡಿಸಲಾಗಿದೆ. ಜಾನುವಾರು ಮತ್ತು ಕುರಿಗಳ ತಳಿ ಅಬಿsವೃದ್ಧಿಗಾಗಿ ವಿವಿಧ ಫಾರಂಗಳನ್ನು ಸ್ಥಾಪಿಸಿದೆ. 1953ರಲ್ಲಿ ಕೊಪ್ಪಳ ತಾಲ್ಲೂಕಿನ ಮುನಿರಾಬಾದಿನಲ್ಲಿ ಸ್ಥಾಪಿಸಲಾದ ಫಾರಂ ಅವುಗಳಲ್ಲಿ ಪ್ರಮುಖವಾದುದು. ಇಲ್ಲಿ ಆಂಧ್ರ ಮತ್ತು ವಿದೇಶಗಳಿಂದ ತಂದ ತಳಿಗಳೊಂದಿಗೆ ಸ್ಥಳೀಯ ತಳಿಗಳ ಸಂಕರ ಮಾಡುವ ಮೂಲಕ ಹೊಸ ತಳಿಗಳನ್ನು ಬೆಳೆಸಲಾಗುತ್ತಿದೆ. ಕೋಳಿಗಳ ತಳಿ ಅಬಿsವೃದ್ಧಿಗೆ ಸಹ ಇಲ್ಲಿ ಒಂದು ಕೇಂದ್ರವಿದೆ. ಗಂಗಾವತಿಯಲ್ಲಿ ಪ್ರಾದೇಶಿಕ ಕೋಳಿ ಸಾಕಣೆ ಫಾರಂ ಇದೆ. ಆಗಾಗ ಬರಗಾಲಕ್ಕೆ ತುತ್ತಾಗುವ ಪ್ರದೇಶಗಳಲ್ಲಿ ಜಾನುವಾರುಗಳ ಸಂರಕ್ಷಣೆಗಾಗಿ ಗೋಶಾಲೆಗಳಿವೆ. ಮೇವು ಬೆಳೆಸುವ ಫಾರಂಗಳಿವೆ. 1998-99ರ ಅಂಕಿಅಂಶಗಳ ಮೇರೆಗೆ 249,976 ಸ್ಥಳೀಯ ಜಾನುವಾರುಗಳು; 2,165 ವಿದೇಶಿ ತಳಿಯ ಹಸುಗಳು, 8037 ಮಿಶ್ರತಳಿ ಹಸುಗಳು, 90078, ಎಮ್ಮೆಗಳೂ 191912 ಕುರಿಗಳು, 136671 ಮೇಕೆಗಳು ಜಿಲ್ಲೆಯಲ್ಲಿದ್ದವು. ಸಾಕು ಪ್ರಾಣಿಗಳ ಕ್ಷೇಮಾಬಿsವೃದ್ಧಿಗೆ ಪಶುಸಂಗೋಪನ ಇಲಾಖೆಯ ಆಸ್ಪತ್ರೆಗಳು, ಚಿಕಿತ್ಸಾಲಯಗಳು ಇವೆ. ಜಿಲ್ಲೆಯಲ್ಲಿ 9 ಪಶುವೈದ್ಯ ಆಸ್ಪತ್ರೆಗಳು, 11 ಚಿಕಿತ್ಸಾಲಯಗಳು, 59 ಪ್ರಾಥಮಿಕ ಪಶುವೈದ್ಯಕೇಂದ್ರಗಳು, 5 ಸಂಚಾರಿ ಚಿಕಿತ್ಸಾಲಯಗಳು, 12 ಕೃತಕ ಗರ್ಭಧಾರಣಾ ಕೇಂದ್ರಗಳಿವೆ.
೯೬ ನೇ ಸಾಲು:
 
== ವ್ಯಾಪಾರ-ವಹಿವಾಟು ==
ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಗಳು ಅದಿsಕವಾಗಿ ಬೆಳೆಯುವುದರಿಂದ ಹೊರ ಜಿಲ್ಲೆಗಳು ಮತ್ತು ಹೊರ ರಾಜ್ಯಗಳೊಂದಿಗೆ ವ್ಯಾಪಾರ ವಹಿವಾಟು ಹೆಚ್ಚು. ಎಣ್ಣೆ ಬೀಜಗಳು, ಸೇಂಗಾ ಎಣ್ಣೆ, ದ್ವಿದಳ ಧಾನ್ಯಗಳು ಮತ್ತು ಹತ್ತಿ ಹೊರ ರಾಜ್ಯಗಳಿಗೆ ರಫ್ತಾಗುತ್ತವೆ. ಮಹಾರಾಷ್ಟ್ರದ ಸೋಲಾಪುರ, ಪುಣೆ, ಮುಂಬಯಿ ಹಾಗೂ ತಮಿಳುನಾಡಿನ ಕೊಯಮತ್ತೂರುಗಳಿಗೆ ಇಲ್ಲಿಂದ ಸರಕುಗಳು ಹೋಗುತ್ತವೆ. ಹದಮಾಡಿದ ಚರ್ಮಕ್ಕೆ ಹೊಸಪೇಟೆ, ಗದಗಗಳಲ್ಲಿ ಮಾರುಕಟ್ಟೆಗಳಿವೆ. ತೆಂಗಿನಕಾಯಿ, ಬೆಲ್ಲ, ಮರ, ವನಸ್ಪತಿ, ಹೊಗೆಸೊಪುŒಹೊಗೆಸೊಪ್ಪು, ಕೃತಕ ರೇಷ್ಮೆ ಮೊದಲಾದ ವಸ್ತುಗಳನ್ನು ಜಿಲ್ಲೆಗೆ ಆಮದು ಮಾಡಿಕೊಳ್ಳಲಾಗುವುದು. ಹತ್ತಿ, ಸೇಂಗಾ, ಹುಣಿಸೆಹಣ್ಣು, ಮೆಣಸಿನಕಾಯಿ ಮತ್ತು ಕೈಮಗ್ಗದ ಬಟ್ಟೆಗಳಿಗೆ ಕೊಪ್ಪಳ ದೊಡ್ಡ ವ್ಯಾಪಾರ ಕೇಂದ್ರ. ಬತ್ತ, ಜೋಳ, ಸೇಂಗಾ, ಬೆಲ್ಲ, ಹರಳು, ಸಜ್ಜೆ ಇವುಗಳಿಗೆ ಗಂಗಾವತಿ ಮುಖ್ಯ ವ್ಯಾಪಾರ ಸ್ಥಳ. ಕುಷ್ಟಗಿ, ಯಲಬುರ್ಗ, ಕುಕನೂರು ಇತರ ಮುಖ್ಯ ವ್ಯಾಪಾರ ಕೇಂದ್ರಗಳು. 93 ಕೃಷಿ ಮಾರಾಟ ಸಹಕಾರ ಸಂಘಗಳಿವೆ. 4 ನಿಯಂತ್ರಿತ ಮಾರುಕಟ್ಟೆಗಳು, 12ಉಪ ಮಾರುಕಟ್ಟೆಗಳಿವೆ.
 
ಸಹಕಾರಿ ರಂಗ ಆರ್ಥಿಕ ಚಟುವಟಿಕೆಗಳ ಎಲ್ಲ ಕ್ಷೇತ್ರಗಳಲ್ಲೂ ಕೈ ಹಾಕಿದೆ. ಜಿಲ್ಲಾ ಸಹಕಾರಿ ಬ್ಯಾಂಕಿಂಗ್ ವ್ಯವಸ್ಥೆ ಕೃಷಿ ಸಾಲಗಳನ್ನು ನೀಡುತ್ತ ಬಂದಿದೆ. 172 ಕೃಷಿ ಸಾಲ ನೀಡಿಕೆ ಸಹಕಾರ ಸಂಘಗಳು ಕಾರ್ಯನಿರತವಾಗಿವೆ. ವ್ಯವಸಾಯೇತರ ಸಾಲನೀಡಿಕೆ ಸಹಕಾರ ಸಂಘಗಳ ಸಂಖ್ಯೆ 55. ಸಾಲೇತರ ಸಹಕಾರ ಸಂಘಗಳ ಸಂಖ್ಯೆ 465 (1998). ಹಾಲು ಉತ್ಪಾದನೆ, ಕೋಳಿ ಸಾಕಣೆ, ಮೀನು ಮಾರಾಟ, ಕಂಬಳಿ ಮಾರಾಟ, ತೋಟಗಾರಿಕೆ ಉತ್ಪನ್ನಗಳ ಮಾರಾಟ ಈ ಎಲ್ಲ ವ್ಯವಹಾರಗಳಲ್ಲೂ ಸಹಕಾರಿ ಸಂಘಗಳ ಪಾತ್ರ ಪ್ರಮುಖವಾಗಿದೆ.
"https://kn.wikipedia.org/wiki/ಕೊಪ್ಪಳ" ಇಂದ ಪಡೆಯಲ್ಪಟ್ಟಿದೆ