ಕೋಲೆಬಸವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು added Category:ಜಾನಪದ using HotCat
No edit summary
 
೧ ನೇ ಸಾಲು:
'''''ಕೋಲೆಬಸವ'''''-[[ಜಾನಪದ]] ವೃತ್ತಿಜೀವನದಲ್ಲಿ ಒಂದು ಕಲೆಯಾಗಿ ಪರಿಣಮಿಸಿರುವ ಮನೋರಂಜಕ ಆಟ. ಸಾಮಾನ್ಯವಾಗಿ ಕೆಲವು ಗ್ರಾಮಗಳಲ್ಲಿ, ತೀರಿಕೊಂಡವರ ಹೆಸರಿನಲ್ಲಿ ಒಂದು ಹೆಣ್ಣುಕರುವನ್ನೋ ಅಥವಾ ಹೋರಿಕರುವನ್ನೋ ಮುದ್ರೆಯೊತ್ತಿ ಬಿಟ್ಟುಬಿಡುವ ಸಂಪ್ರದಾಯ ಈಗಲೂ ಉಂಟಷ್ಟೆ. ಸ್ವೇಚ್ಛೆಯಾಗಿ ತಿರುಗಾಡುವ ಅಂಥ ಬೀದಿಕರುಗಳನ್ನು ಹಿಡಿದುಕೊಂಡು ಈ ಆಟಕ್ಕೆ ಬಳಸಲಾಗುತ್ತದೆ.
 
ಕೋಲುಬಸವ ಎಂಬುದು ಕಪಿಲೆಬಸವ ಎಂಬುದರ ಅಪಭ್ರಂಶವಿರಬಹುದು. ಕಪಿಲೆಬಸವ ಎಂಬುವುದೇ ಕವಲೆಬಸವ, ಕೌಲೆಬಸವ, ಕೋಲೆಬಸವ-ಎಂದು ರೂಪಾಂತರ ಹೊಂದಿದೆ. ಕೆಲವು ಕಡೆಗಳಲ್ಲಿ ಕೌಲೆತ್ತು ಇಲ್ಲವೆ ಗಂಗೆತ್ತು ಎಂತಲೂ ಇದನ್ನು ಕರೆಯಲಾಗುತ್ತದೆ.ಇಲ್ಲಿ ಕಪಿಲೆ ಎಂದರೆ ಹಸು. ಈ ಹಸುವಿನ ಜೊತೆ ಬಸವನ್ನು ಜೋಡಿಸಿಕೊಂಡು ಕೋಲೆಬಸವನ ಆಟ ಏರ್ಪಟ್ಟಿದೆ. ಬಸವನನ್ನು [[ರಾಮ|ರಾಮನೆಂತಲೂ]] ಹಸುವನ್ನು [[ಸೀತೆ|ಸೀತೆಯೆಂತಲೂ]] ಕರೆಯುವುದು ವಾಡಿಕೆ. ಜೊತೆಗೆ ಒಂದು ಚಿಕ್ಕ ಇಳಗರುವನ್ನೂ ಲಗತ್ತಿಸಿಕೊಂಡು ಅದನ್ನು [[ಲಕ್ಷ್ಮಣ|ಲಕ್ಷ್ಮಣನಾಗಿ]] ಬಳಿಸಿಕೊಳ್ಳುವುದೂ ಉಂಟು.
 
ಗ್ರಾಮದಿಂದ ಗ್ರಾಮಕ್ಕೆ ಸಾಗುವ ಈ ಜನರ ಆಟ ಬಹಳ ವಿಚಿತ್ರವಾಗಿ ಕಾಣುತ್ತದೆ. ಕೋಲೆಬಸವಗಳು ಪ್ರಯಾಣ ಕಾಲದಲ್ಲಿ ಮಾಲೀಕರ ಗಂಟುಮೂಟೆ ಹೊರುತ್ತವೆ. ಯಾವುದಾದರೂ ಹಳ್ಳಿಗೆ ಬಂದರೆ ಊರ ಹೊರಗಿನ ಚಾವಡಿಯಲ್ಲಿ ಇಲ್ಲವೇ ಆಲದ ಮರದ ನೆರಳಡಿಯೇ ಇವರ ಬಿಡಾರ.
 
== ಕೋಲೆಬಸವನ ಆಟ ==
ಕೋಲೆಬಸವನ ಜೋಡಿ ನೋಡಲು ಬಹಳ ಸುಂದರವಾಗಿ ಕಾಣುತ್ತದೆ. ಅವುಗಳ ದೇಹ ಮತ್ತು ಭುಜಗಳನ್ನು ಎತ್ತರವಾಗಿ ಕಾಣುವಂತೆ ವರ್ಣವರ್ಣದ ಜೂಲುಗಳಿಂದ ಅಲಂಕರಿಸಿರುತ್ತಾರೆ. ಕೋಡುಗಳು ಪುಟ್ಟದಾಗಿದ್ದರೂ ಉದ್ದನಾಗಿ ತೋರುವಂತೆ ಬಟ್ಟೆ ಸುತ್ತಿ ಸಿಂಗರಿಸಿರುತ್ತಾರೆ. ಕೋಡಿನ ತುದಿಗಳಲ್ಲಿ ಬಣ್ಣ ಬಣ್ಣದ ಕುಚ್ಚುಗಳನ್ನು ಜೋಡಿಸಿರುತ್ತಾರೆ. ಕಾಲುಗಳಿಗೆ ಗಗ್ಗರ ಕಟ್ಟಿರುತ್ತಾರೆ. ಹಣೆಯ ಮೇಲೆ ಲೋಹದಿಂದ ಮಾಡಿದ ಶ್ರೀರಾಮನ ಇಲ್ಲವೆ [[ಆಂಜನೇಯ|ಆಂಜನೇಯನ]] ಲಾಂಛನವನ್ನು ಅಳವಡಿಸಿರುತ್ತಾರೆ; ಇಲ್ಲವೆ ಕವಡೆಸರದಲ್ಲಿ ಶೃಂಗರಿಸುತ್ತಾರೆ. ಕೋಲೆಬಸವನನ್ನು ಆಡಿಸುವ ಜನರಲ್ಲಿ ಇಬ್ಬರು ವಾದ್ಯದವರು. ಅವರಲ್ಲಿ ಒಬ್ಬಾತ ಮುಖವೀಣೆ ಬಾರಿಸುತ್ತಾನೆ. ಮತ್ತೊಬ್ಬ ಡೋಲು ಬಾರಿಸುತ್ತಾನೆ. ಉಳಿದಿಬ್ಬರು ಬಸವನನ್ನು ಆಡಿಸುತ್ತಾರೆ.
 
ಕೋಲೆಬಸವನ ಆಟದಲ್ಲಿ ಮುಖ್ಯವಾಗಿ ಗಮನಿಸಬೇಕಾದುದು ಅವುಗಳ ಸಿಂಗಾರ, ನಟನೆ, ಆಟಗಾರರ ಮಾತುಗಾರಿಕೆ-ಇವು. ಆಟದ ಮುಖ್ಯ ಕಥೆ ಸೀತಾರಾಮರ ಲಗ್ನ. ಸೀತೆ ಹಾಗೂ ರಾಮರ ಕಡೆ ಒಬ್ಬೊಬ್ಬರು ನಿಂತು ಲಗ್ನ ಮಾಡಿಸುವಾಗ ಅವರಲ್ಲಿ ನಡೆಯುವ ಸಂಭಾಷಣೆ, ಏರ್ಪಡುವ ಸನ್ನಿವೇಶಗಳು ತುಂಬ ವಿನೋದವಾಗಿರುತ್ತದೆ. ಆಟಗಾರರಲ್ಲಿ ಒಬ್ಬಾತ ರಾಮನನ್ನು (ಬಸವ) ಕರೆದು `ಗೌಡರ ಹೆಸರನ್ನು ಕೇಳಿ, ಗೌಡರು ದಾನಧರ್ಮ ತೂಗುವುದು ಬಲಗೈ. . . . . . . ಗೊತ್ತಾಯ್ತಾ ಎಂದು ಅವರ ಬಲಗೈ ತೋರಿಸಿದರೆ ಬಸವ ತನ್ನ ಬಲಗಾಲನ್ನು ಹಿಂದಕ್ಕೆ ಕೊಂಚ ಎತ್ತಿ ತೋರಿಸುತ್ತದೆ; ಗೌಡರಿಗೆ ನಮಸ್ಕಾರ ಮಾಡೆಂದರೆ ಬಾಗಿ ಮುಂದಿನ ಕಾಲನ್ನು ಹಿಂಭಾಗಕ್ಕೆ ಬಾಗಿಸಿ ತಲೆಬಾಗಿ ನಮಸ್ಕರಿಸುತ್ತದೆ.
"https://kn.wikipedia.org/wiki/ಕೋಲೆಬಸವ" ಇಂದ ಪಡೆಯಲ್ಪಟ್ಟಿದೆ