ಬಾಯಾಪ್ಸಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
೧ ನೇ ಸಾಲು:
[[ಚಿತ್ರ:Brain biopsy under stereotaxy.jpg|thumb|ಮಿದುಳಿನ ಬಾಯಾಪ್ಸಿ]]
'''ಬಾಯಾಪ್ಸಿ(ಜೀವುಂಡಿಗೆ)'''ಯು ಪರಿಶೀಲನೆಗಾಗಿ [[ಜೀವಕೋಶ]]ಗಳು ಅಥವಾ [[ಅಂಗಾಂಶ]]ಗಳಗಳನ್ನು ತೆಗೆಯುವಿಕೆಯನ್ನುಹೊರತೆಗೆದು ಒಳಗೊಳ್ಳುವಸೂಕ್ಷ್ಮದರ್ಶಕದ ಮೂಲಕ ಪರೀಕ್ಷಿಸಿ ನೋಡುವ ಒಂದು [[ವೈದ್ಯಕೀಯ ಪರೀಕ್ಷೆ]]. ಅದು ಒಂದು ರೋಗದ ಇರವು ಅಥವಾ ವೈಶಾಲ್ಯವನ್ನು ನಿರ್ಧರಿಸಲು ಜೀವಂತ ವ್ಯಕ್ತಿಯ ಅಂಗಾಂಶದ ವೈದ್ಯಕೀಯ ತೆಗೆಯುವಿಕೆ. ಅಂಗಾಂಶವನ್ನು ಸಾಮಾನ್ಯವಾಗಿ [[ರೋಗ ಶಾಸ್ತ್ರಜ್ಞ]]ನಿಂದ [[ಸೂಕ್ಷ್ಮದರ್ಶಕ]]ದ ಕೆಳಗೆ ಪರಿಶೀಲಿಸಲಾಗುತ್ತದೆ, ಮತ್ತು ರಾಸಾಯನಿಕವಾಗಿಯೂ ವಿಶ್ಲೇಷಿಸಬಹುದು.
 
== ಉಪಯೋಗಗಳು ==
ವಿಪತ್ಕಾರಕ ಹಾಗೂ ಅಪಾಯಕರವಲ್ಲದ ಗಡ್ಡೆಗಳನ್ನು ಪತ್ತೆಹಚ್ಚಲು ಈ ವಿಧಾನ ಅಗತ್ಯ. ಈ ಪರೀಕ್ಷೆಯಿಂದ ಏಡಿಗಂತಿಗಳ ಸ್ಥಳೀಯ ವ್ಯಾಪನೆಯ ಕ್ಷೇತ್ರವನ್ನು ತಿಳಿದುಕೊಳ್ಳಬಹುದು. ಸ್ಥಳೀಯ ದುಗ್ಧರಸ ಗ್ರಂಥಿಗಳಿಗೆ ಏಡಿಗಂತಿಯ ಕೋಶಗಳು ಆಗಲೇ ಒಯ್ಯಲ್ಪಟ್ಟಿವೆಯೇ ಎನ್ನುವುದನ್ನೂ ತಿಳಿದುಕೊಳ್ಳಬಹುದು. ಗಡ್ಡೆಯನ್ನು ಶಸ್ತ್ರಕ್ರಿಯೆಯಿಂದ ತೆಗೆದುಹಾಕಬೇಕೇ, ಹಾಗೆ ತೆಗೆದರೆ ಎಷ್ಟರಮಟ್ಟಿಗೆ ತೆಗೆಯಬೇಕು ಮತ್ತು ತೆಗೆದಿರುವುದು ಸಾಕಾಗಿದೆಯೇ ಎನ್ನುವ ಮಾಹಿತಿಗಳನ್ನು ಈ ಪರೀಕ್ಷಾವಿಧಾನ ಒದಗಿಸುತ್ತದೆ. ವೃಷಣ, ಗರ್ಭಕೋಶ, ಯೋನಿ ಇವುಗಳ ಜೀವುಂಡಿಗೆಗಳು ಈ ಅಂಗಗಳಲ್ಲಿ ಸ್ವಾಭಾವಿಕ ದೈಹಿಕಕ್ರಿಯೆಗಳು ಜರಗುತ್ತಿವೆಯೋ ಇಲ್ಲವೋ ಎನ್ನುವುದನ್ನು ತಿಳಿಸುತ್ತವೆ. ಎಡೆಬಿಡದ ಜ್ವರದಲ್ಲಿ ಸೋಂಕಿನ ಮೂಲ ತಿಳಿಯದಾದಾಗ ಕೆಲವುಬಾರಿ ಜೀವುಂಡಿಗೆಯ ವಿಧಾನದಿಂದ ಅದರ ಕಾರಣವನ್ನು ಪತ್ತೆಹಚ್ಚಬಹುದು.
 
== ಶಸ್ತ್ರವಿಧಾನಗಳು , ಎಚ್ಚರಿಕೆ ಮತ್ತು ಜಟಿಲತೆಗಳು ==
ಈ ಪರೀಕ್ಷಾವಿಧಾನದಿಂದ ಅನುಕೂಲವಾಗಲು ಅಂಗದ ತುಣುಕೊಂದನ್ನು ಅಥವಾ ಒಳಗಿರುವ ದ್ರವವನ್ನು ತಕ್ಕ ಶಸ್ತ್ರಕಾರ್ಯದಿಂದ ತೆಗೆದುಕೊಳ್ಳುವುದು ಎಷ್ಟು ಮುಖ್ಯವೋ ಆ ವಸ್ತು ಕೆಡದಂತೆ ಅದನ್ನು ಜೋಪಾನಮಾಡಿ ತಕ್ಕ ರಾಸಾಯನಿಕಗಳಿಂದ ಸಿದ್ಧಗೊಳಿಸಿ ಸೂಕ್ಷ್ಮದರ್ಶಕದ ಪರೀಕ್ಷೆಗೆ ಅಣಿಮಾಡುವುದು ಕೂಡ ಅಷ್ಟೇ ಮುಖ್ಯ. ಈ ಎರಡು ಕಾರ್ಯಗಳಲ್ಲಿ ಯಾವುದು ಕೆಟ್ಟರೂ ಪರೀಕ್ಷೆಯಿಂದ ಒದಗುವ ಮಾಹಿತಿ ತಪ್ಪಾಗಿ ರೋಗದ ವಿಷಯದಲ್ಲಿ ಮುಂದೆ ಅನುಸರಿಸಬೇಕಾದ ಕ್ರಮದಲ್ಲಿ ಏರುಪೇರಾಗಿ ಅಪಾಯ ಸಂಭವಿಸಬಹುದು.
 
ಜೀವುಂಡಿಗೆ - ದೇಹದ ಯಾವುದೇ ತುಣುಕೊಂದನ್ನು ಹೊರತೆಗೆದು ಸೂಕ್ಷ್ಮದರ್ಶಕದ ಮೂಲಕ ಪರೀಕ್ಷಿಸಿ ನೋಡುವ ಬಗೆ (ಬಯಾಪ್ಸಿ). ವಿಪತ್ಕಾರಕ ಹಾಗೂ ಅಪಾಯಕರವಲ್ಲದ ಗಡ್ಡೆಗಳನ್ನು ಪತ್ತೆಹಚ್ಚಲು ಈ ವಿಧಾನ ಅಗತ್ಯ. ಈ ಪರೀಕ್ಷೆಯಿಂದ ಏಡಿಗಂತಿಗಳ ಸ್ಥಳೀಯ ವ್ಯಾಪನೆಯ ಕ್ಷೇತ್ರವನ್ನು ತಿಳಿದುಕೊಳ್ಳಬಹುದು. ಸ್ಥಳೀಯ ದುಗ್ಧರಸ ಗ್ರಂಥಿಗಳಿಗೆ ಏಡಿಗಂತಿಯ ಕೋಶಗಳು ಆಗಲೇ ಒಯ್ಯಲ್ಪಟ್ಟಿವೆಯೇ ಎನ್ನುವುದನ್ನೂ ತಿಳಿದುಕೊಳ್ಳಬಹುದು. ಗಡ್ಡೆಯನ್ನು ಶಸ್ತ್ರಕ್ರಿಯೆಯಿಂದ ತೆಗೆದುಹಾಕಬೇಕೇ, ಹಾಗೆ ತೆಗೆದರೆ ಎಷ್ಟರಮಟ್ಟಿಗೆ ತೆಗೆಯಬೇಕು ಮತ್ತು ತೆಗೆದಿರುವುದು ಸಾಕಾಗಿದೆಯೇ ಎನ್ನುವ ಮಾಹಿತಿಗಳನ್ನು ಈ ಪರೀಕ್ಷಾವಿಧಾನ ಒದಗಿಸುತ್ತದೆ. ವೃಷಣ, ಗರ್ಭಕೋಶ, ಯೋನಿ ಇವುಗಳ ಜೀವುಂಡಿಗೆಗಳು ಈ ಅಂಗಗಳಲ್ಲಿ ಸ್ವಾಭಾವಿಕ ದೈಹಿಕಕ್ರಿಯೆಗಳು ಜರಗುತ್ತಿವೆಯೋ ಇಲ್ಲವೋ ಎನ್ನುವುದನ್ನು ತಿಳಿಸುತ್ತವೆ. ಎಡೆಬಿಡದ ಜ್ವರದಲ್ಲಿ ಸೋಂಕಿನ ಮೂಲ ತಿಳಿಯದಾದಾಗ ಕೆಲವುಬಾರಿ ಜೀವುಂಡಿಗೆಯ ವಿಧಾನದಿಂದ ಅದರ ಕಾರಣವನ್ನು ಪತ್ತೆಹಚ್ಚಬಹುದು. ಈ ಪರೀಕ್ಷಾವಿಧಾನದಿಂದ ಅನುಕೂಲವಾಗಲು ಅಂಗದ ತುಣುಕೊಂದನ್ನು ಅಥವಾ ಒಳಗಿರುವ ದ್ರವವನ್ನು ತಕ್ಕ ಶಸ್ತ್ರಕಾರ್ಯದಿಂದ ತೆಗೆದುಕೊಳ್ಳುವುದು ಎಷ್ಟು ಮುಖ್ಯವೋ ಆ ವಸ್ತು ಕೆಡದಂತೆ ಅದನ್ನು ಜೋಪಾನಮಾಡಿ ತಕ್ಕ ರಾಸಾಯನಿಕಗಳಿಂದ ಸಿದ್ಧಗೊಳಿಸಿ ಸೂಕ್ಷ್ಮದರ್ಶಕದ ಪರೀಕ್ಷೆಗೆ ಅಣಿಮಾಡುವುದು ಕೂಡ ಅಷ್ಟೇ ಮುಖ್ಯ. ಈ ಎರಡು ಕಾರ್ಯಗಳಲ್ಲಿ ಯಾವುದು ಕೆಟ್ಟರೂ ಪರೀಕ್ಷೆಯಿಂದ ಒದಗುವ ಮಾಹಿತಿ ತಪ್ಪಾಗಿ ರೋಗದ ವಿಷಯದಲ್ಲಿ ಮುಂದೆ ಅನುಸರಿಸಬೇಕಾದ ಕ್ರಮದಲ್ಲಿ ಏರುಪೇರಾಗಿ ಅಪಾಯ ಸಂಭವಿಸಬಹುದು. ವಾಯುಚೂಷಣ ಸೂಜಿ, ಹೀರೊತ್ತುವ ಸ್ಪಂಜು, ಕೆರೆಯುವ ಚಮಚ, ಹೆರೆಯುವ ಕಿರುಗತ್ತಿ, ಮೂಳೆ ಕೊರೆಯುವ ಉರುಳು ಗರಗಸ, ಕತ್ತರಿಸುವ ಇಕ್ಕಳ-ಇವೇ ಮುಂತಾದವು ಜೀವುಂಡಿಗೆಯನ್ನು ಪಡೆಯಲು ಉಪಯೋಗಿಸುವ ಶಸ್ತ್ರವಿಧಾನಗಳು. ಸಾಮಾನ್ಯವಾಗಿ ಇವು ಸಣ್ಣ ಶಸ್ತ್ರಕ್ರಿಯೆಗಳೆಂದು ಪರಿಗಣಿಸಲ್ಪಟ್ಟರೂ ಸಾಕಷ್ಟು ಎಚ್ಚರದಿಂದಿರದಿದ್ದರೆ ಜಟಿಲತೆಗಳು ಉಂಟಾಗಬಹುದು. ಹತ್ತಿರದ ರಕ್ತನಾಳಗಳೂ ನರಗಳೂ ಕತ್ತರಿಸಿಹೋಗುವುದು. ಜೀವುಂಡಿಗೆ ಹಾಕಿದ ಸ್ಥಳದಲ್ಲಿ ಸೋಂಕು ಉಂಟಾಗಿ ಕೀತು ವ್ರಣವಾಗುವುದು. ಒರಟು ವಿಧಾನಗಳಿಂದ ಏಡಿಗಂತಿಯ ಕೋಶಗಳು ದೇಹದ ಇತರ ಭಾಗಗಳಿಗೆ ರಕ್ತನಾಳ ದುಗ್ಧರಸನಾಳಗಳ ಮೂಲಕ ಪಸರಿಸುವುದು, ಉಂಡಿಗೆ ಹಾಕುವಾಗ ಉಪಯೋಗಿಸುವ ಸ್ಥಳೀಕಸಂವೇದನಾ ನಾಶಕವಸ್ತುವಿನಿಂದ ಅನನುಕೂಲ ಪರಿಣಾಮಗಳು ತಲೆದೋರುವುದು-ಇವೆಲ್ಲ ಇಂಥ ಜಟಿಲತೆಗಳು.{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜೀವುಂಡಿಗೆ}}
 
[[ವರ್ಗ:ವೈದ್ಯಕೀಯ ಪರೀಕ್ಷೆಗಳು]]
[[ವರ್ಗ:ವೈದ್ಯಕೀಯ]]
 
{{ಚುಟುಕು}}
"https://kn.wikipedia.org/wiki/ಬಾಯಾಪ್ಸಿ" ಇಂದ ಪಡೆಯಲ್ಪಟ್ಟಿದೆ