ಯುನೈಟೆಡ್ ಅರಬ್ ಎಮಿರೇಟ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೫೮ ನೇ ಸಾಲು:
}}
'''ಯುನೈಟೆಡ್ ಅರಬ್ ಎಮಿರೇಟ್ಸ್ (ಸಂಯುಕ್ತ ಅರಬ್ ಗಣರಾಜ್ಯ )''' ವಾಯವ್ಯ ಏಷ್ಯಾದ ಮಧ್ಯಪ್ರಾಚ್ಯದಲ್ಲಿ ಏಳು ಸ್ವಯಾಡಳಿತ ಎಮಿರ್ ಪ್ರಭುತ್ವ ಸಂಸ್ಥಾನಗಳ ಒಕ್ಕೂಟವಾಗಿರುವ ರಾಷ್ಟ್ರ. ಯು.ಎ.ಇ. ಅರಬ್ ಜಂಬೂದ್ವೀಪದ ಆಗ್ನೇಯ ಭಾಗದಲ್ಲಿದೆ. [[ಪರ್ಷಿಯನ್ ಕೊಲ್ಲಿ]]ಯ ಅಂಚಿನಲ್ಲಿರುವ ಯು.ಎ.ಇ. ಯ ನೆರೆರಾಷ್ಟ್ರಗಳೆಂದರೆ [[ಒಮಾನ್]] ಮತ್ತು [[ಸೌದಿ ಅರೆಬಿಯ]]. ಒಕ್ಕೂಟದ ಏಳು ಸಂಸ್ಥಾನಗಳು ಇವು : [[ಅಭ್ ಧಾಬಿ]], [[ಅಜ್ಮಾನ್]], [[ಷಾರ್ಜಾ]], ದುಬೈ, [[ರಾಸ್-ಅಲ್-ಖೈಮಾ]], [[ಫುಜೈರಾ]] ಮತ್ತು [[ಉಮ್ಮ್-ಅಲ್-ಖುಮೈನ್]]. ೧೯೭೦ರ ದಶಕದಲ್ಲಿ ಇಲ್ಲಿನ ತೈಲೋದ್ಯಮವು ತೀವ್ರಗತಿಯಲ್ಲಿ ಅಭಿವೃದ್ಧಿಗೊಂಡು ಇಂದು ಯು.ಎ.ಇ. ವಿಶ್ವದ ಸಂಪದ್ಭರಿತ ದೇಶಗಳಲ್ಲಿ ಒಂದಾಗಿದೆ.
ಈ ಅರಬ್ ಸಂಯುಕ್ತ ಪ್ರದೇಶ ಪೂರ್ವಪಶ್ಚಿಮವಾಗಿ 563 ಕಿಮೀ ಉತ್ತರ ದಕ್ಷಿಣವಾಗಿ 402 ಕಿಮೀ ಇದ್ದು 777 ಕಿಮೀ ತೀರ ಪ್ರದೇಶ ಹೊಂದಿದೆ. ಈ ಪ್ರದೇಶದವರೆಲ್ಲ ಅರಬ್ ಮುಸ್ಲಿಮರು. ಅರಾಬಿಕ್ ಇಲ್ಲಿನ ಆಡಳಿತ ಭಾಷೆ. ದುಬೈ ದೊಡ್ಡ ಬಂದರು ಹಾಗೂ ವ್ಯಾಪಾರ ಕೇಂದ್ರ.
== ಆಡಳಿತ == 1971ರ ವರೆಗೆ ಈ ದೇಶಗಳು ಬ್ರಿಟನ್ನಿನ ರಕ್ಷಣೆಯಲ್ಲಿದ್ದು ಇವನ್ನು ಟ್ರೂಷಿಯಲ್ ದೇಶಗಳೆಂದು ಕರೆಯಲಾಗುತ್ತಿತ್ತು. 1971ರ ಅನಂತರ ಇವು ಸರ್ವತಂತ್ರ ಸ್ವತಂತ್ರ ದೇಶಗಳಾಗಿ ಒಕ್ಕೂಟ ರಚಿಸಿಕೊಂಡವು. ಈ ಏಳು ಅರಬ್ ದೇಶಗಳು ಪ್ರತ್ಯೇಕವಾಗಿ ತಮ್ಮವದೇ ಆದ ಅಮೀರನೊಬ್ಬನ ಆಡಳಿತಕ್ಕೆ ಒಳಪಟ್ಟಿರುತ್ತದೆ. ಈ ಅಮೀರ ಆ ದೇಶದ ಒಳಾಡಳಿತವನ್ನು ನಿಯಂತ್ರಿಸುತ್ತಾನೆ. ಏಳು ದೇಶಗಳ ಏಳುಮಂದಿ ಅಮೀರರು ಸೇರಿ ಒಬ್ಬ ಅಧ್ಯಕ್ಷನನ್ನು ಆರಿಸಿ ಈ ಒಕ್ಕೂಟದ ಸಂಯುಕ್ತ ರಕ್ಷಣೆ, ವಿದೇಶಿ ನೀತಿ ಮುಂತಾದವು ಇವನ ಅಧೀನಕ್ಕೆ ಸೇರಿರುತ್ತವೆ. 25 ಮಂದಿ ಮಂತ್ರಿಗಳ ಸಭೆ ಈ ದೇಶಾಡಳಿತವನ್ನು ಗಮನಿಸುತ್ತದೆ . ತೈಲದಿಂದ ಬರುವ ಅಪಾರ ಆದಾಯವನ್ನು ದೇಶದಲ್ಲಿ ಹೊಸ ಶಾಲೆಗಳ ನಿರ್ಮಾಣಕ್ಕೆ, ಆಸ್ಪತ್ರೆಗಳ, ಹೊಸಮಾರ್ಗಗಳ, ನಿವೇಶನಗಳ, ವಸತಿಗೃಹಗಳ ನಿರ್ಮಾಣಕ್ಕೆ ಉಪಯೋಗಿಸಿ ದೇಶಕ್ಕೆ ಹೊಸರೂಪವನ್ನೆ ನೀಡಲಾಗಿದೆ. ಜನರ ಸೌಕರ್ಯ ಅಭಿವೃದ್ಧಿಯಾಗಿದೆ. 6 ರಿಂದ 12 ವರ್ಷದೊಳಗಿನ ಮಕ್ಕಳಿಗೆ ಶಾಲಾಶಿಕ್ಷಣ ಕಡ್ಡಾಯ. ವಿಶಾಲವಾದ ಮರಳು ಭೂಮಿಯಲ್ಲಿ ನೀರಿನ ಬಾವಿಗಳು, ಒಯಸಿಸ್ಗಳು ಇವೆ. ಕಚ್ಚಾತೈಲವನ್ನೇ ವಿದೇಶಗಳಿಗೆ ರಫ್ತುಮಾಡಿ ತಮಗೆ ಬೇಕಾದ ಕಟ್ಟಡ ಸಾಮಗ್ರಿ, ಬಟ್ಟೆಗಳು, ಆಹಾರವಸ್ತುಗಳು, ವಿವಿಧ ಯಂತ್ರೊಪಕರಣಗಳನ್ನು ಆಮದು ಮಾಡಿಕೊಳ್ಳುತ್ತಾರೆ. ಈ ಒಕ್ಕೂಟದ ವಿಸ್ತೀರ್ಣ 83,600 ಚ.ಕಿಮೀ. ಜನಸಂಖ್ಯೆ 26,03,000.
== ಭೂಸ್ವರೂಪ ==
== ವಾಯುಗುಣ ==
== ಆರ್ಥಿಕತೆ ==
ಇದು ಇಪ್ಪತ್ತನೆಯ ಶತಮಾನದ ಮಧ್ಯದವ ರೆಗೂ ಹಿಂದುಳಿದಿತ್ತು. ಮೀನುಗಾರಿಕೆ ಯೊಂದೇ ಆಗಿನ ಮುಖ್ಯ ಉದ್ಯೋಗ. ಆ ಶತಮಾನದ ಉತ್ತರಾರ್ಧದಲ್ಲಿ ತೈಲ ನಿಕ್ಷೇಪ ಪತ್ತೆಯಾದ ಮೇಲೆ ಇದು ಸಂಪದ್ಯುಕ್ತ ವೆನಿಸಿತು. ನಗರಗಳೂ ಆಧುನಿಕ ಕೈಗಾರಿಕೆಗಳೂ ಬೆಳೆದುವು. ಜನ ತೈಲ ಉದ್ದಿಮೆಗಳಲ್ಲಿ ಕೆಲಸಮಾಡಲು ಉದ್ಯೋಗ ಹೆಚ್ಚಿತು. 1970ರ ವೇಳೆಗೆ ಇದು ಪ್ರಪಂಚದ ಅಧಿಕ ವರಮಾನ ಪಡೆಯುವ ದೇಶಗಳ ಸಾಲಿಗೆ ಸೇರಿತು.
ಇಲ್ಲಿಯ ಮುಖ್ಯ ಉದ್ದಿಮೆಗಳು ಮೀನುಗಾರಿಕೆ, ಪೆಟ್ರೋ-ರಾಸಾಯನಿಕಗಳು, ಕಟ್ಟಡ ಸಾಮಗ್ರಿಗಳ ಉತ್ಪಾದನೆ, ದೋಣಿ ನಿರ್ಮಾಣ, ಕರಕುಶಲವಸ್ತುಗಳ ತಯಾರಿಕೆ ಮತ್ತು ಮುತ್ತುಗಳ ಸಂಗ್ರಹ.
== ಸಾರಿಗೆ ==
[[ವರ್ಗ:ಏಷ್ಯಾ ಖಂಡದ ದೇಶಗಳು]]
|