ಸಂಕಲನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೭ ನೇ ಸಾಲು:
 
ಅಂಕಗಣಿತದಲ್ಲಿ, [[ಭಿನ್ನರಾಶಿಗಳು]]([[Fractions]]) ಮತ್ತು [[ಋಣಸಂಖ್ಯೆ]]ಗಳನ್ನು ([[Negative numbers]]) ಸಂಕಲನದ ನಿಯಮಗಳನ್ನೊಳಗೊಂಡು ರೂಪಿಸಲಾಗಿರುತ್ತವೆ. [[ಬೀಜಗಣಿತ]] ([[Algebra]])ದಲ್ಲಿ, ಸಂಕಲನವನ್ನು ಅಮೂರ್ತವಾಗಿ ಅಭ್ಯಾಸ ಮಾಡಲಾಗುತ್ತದೆ.
 
ಸಂಕಲನವು ಹಲವಾರು ಪ್ರಮುಖ ಗುಣಗಳನ್ನು ಹೊಂದಿದೆ. ಅವುಗಳೆಂದರೆ,
 
'''[[ಪರಿವರ್ತನೀಯ ಗುಣ]] :''' ಸಂಖ್ಯೆಗಳು ಅಥವಾ ಬೀಜಪದಗಳ ಸಂಕಲನ ಮಾಡುವಾಗ ಅವುಗಳನ್ನು ಅದಲು ಬದಲು ಮಾಡಿ ಕೂಡಿದರೂ ಮೊತ್ತದಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ.
 
ಉದಾಹರಣೆ 1 : 5+6=11
 
6+5=11
 
ಅಂದರೆ 5+6= 6+5 ಆಗುವುದು.
 
ಉದಾಹರಣೆ 1 : x+n=n+x ಆಗುವುದು.
 
'''[[ಸಹವರ್ತನೀಯ ಗುಣ]] :''' ಸಂಖ್ಯೆ ಅಥವಾ ಬೀಜಪದಗಳ ಸಂಕಲನ ಮಾಡುವಾಗ ಅವುಗಳನ್ನು ಬೇರೆ ಬೇರೆ ಗುಂಪು ಮಾಡಿ ಕೂಡಿದರೂ ಅವುಗಳ ಮೊತ್ತದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.
 
ಉದಾಹರಣೆ 1 : (3+2)+4=5+4=9
 
3+(2+4)=3+6=9
 
ಅಂದರೆ (3+2)+4=3+(2+4) ಆಗುವುದು.
 
ಉದಾಹರಣೆ 1 : (a+b)+p=a+(b+p) ಆಗುವುದು.
 
 
ಸಂಖ್ಯೆ 1ರ ಪುನರಾವರ್ತಿತ ಸಂಕಲನವು ಕ್ರಮ ಸಂಖ್ಯೆಗಳಾಗಿರುತ್ತವೆ. ಸೊನ್ನೆಯನ್ನು ಸಂಖ್ಯೆಗಳಿಗೆ ಕೂಡಿಸಿದಾಗ ಮೊತ್ತದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ.
{{Elementary arithmetic}}
 
"https://kn.wikipedia.org/wiki/ಸಂಕಲನ" ಇಂದ ಪಡೆಯಲ್ಪಟ್ಟಿದೆ