ಬ್ರಸೆಲ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 langlinks, now provided by Wikidata on d:q240
No edit summary
೬೦ ನೇ ಸಾಲು:
 
'''ಬ್ರಸೆಲ್ಸ್''' ([[ಫ್ರೆಂಚ್ ಭಾಷೆ|ಫ್ರೆಂಚ್]]:Bruxelles, [[ಡಚ್ ಭಾಷೆ|ಡಚ್]]:Brussel), ಅಧಿಕೃತವಾಗಿ '''ಬ್ರಸೆಲ್ಸ್ ರಾಜಧಾನಿ-ಪ್ರದೇಶ''', [[ಬೆಲ್ಜಿಯಂ]] ದೇಶದ [[ರಾಜಧಾನಿ]] ಮತ್ತಿ ಅದರ ಅತ್ಯಂತ ದೊಡ್ಡ ನಗರ ಪ್ರದೇಶವಾಗಿದೆ. [[ಯುರೋಪಿಯನ್ ಒಕ್ಕೂಟ]]ದ ಅನೇಕ ಪ್ರಮುಖ ರಾಜಕೀಯ ಸಂಸ್ಥೆಗಳು ಈ ನಗರದಲ್ಲಿರುವ ಕಾರಣ ಇದನ್ನು [[ಯುರೋಪಿಯನ್ ಒಕ್ಕೂಟ]]ದ ರಾಜಧಾನಿ ಎಂದೂ ಕರೆಯಲಾಗುತ್ತದೆ. [[ಎರಡನೆಯ ಮಹಾಯುದ್ಧ]]ದ ನಂತರ ಇದು ಅಂತರ್ರಾಷ್ಟ್ರೀಯ ರಾಜಕೀಯದ ಪ್ರಮುಖ ಕೇಂದ್ರವಾಗಿ ಬೆಳೆದಿದೆ. [[ಯುರೋಪಿಯನ್ ಒಕ್ಕೂಟ]]ದ ಸಂಸ್ಥೆಗಳಲ್ಲದೆ [[ನೇಟೊ]]ವಿನ ಮುಖ್ಯ ಕಾರ್ಯಲಯ ಕೂಡ ಇಲ್ಲಿ ಸ್ಥಿತವಾಗಿದೆ.
 
ಬ್ರಸೆಲ್ಸ್
 
ಬೆಲ್ಜಿಯಮ್ ದೇಶದ ರಾಜಧಾನಿ. ಬ್ರಬಾಂಟ್ ಪ್ರಾಂತ್ಯದ ಮತ್ತು ಬ್ರಸೆಲ್ಸಿನ ಆಡಳಿತ ಕೇಂದ್ರನಗರ. ಜನಸಂಖ್ಯೆ 1,008,715 (1980). ಪೂರ್ವಕಾಲದ ಮತ್ತು ಇತ್ತೀಚಿನ ಆಧುನಿಕ ಸುಂದರ ಕಟ್ಟಡಗಳಿಂದಲೂ ವಿಶಾಲ ಬೀದಿಗಳಿಂದಲೂ ಕಲೆ, ಸಾಹಿತ್ಯ, ಶಿಕ್ಷಣ ಮತ್ತು ವ್ಯಾಪಾರ ವಾಣಿಜ್ಯಗಳಿಂದಲೂ ಪ್ರಸಿದ್ಧವಾಗಿದೆ. ಈ ಸುಂದರ ನಗರವನ್ನು ಪುಟ್ಟ ಪ್ಯಾರಿಸ್ ಎಂದು ಕರೆಯುವುದುಂಟು. ಸುಮಾರು 5ನೆಯ ಶತಮಾನದ ಮಧ್ಯದಲ್ಲಿ ಬ್ರಸೆಲ್ಸ್ ನಗರ ಸ್ಥಾಪಿತವಾಯಿತು. ಅನಂತರ ಅಸ್ಟ್ರಿಯದ ನೆದರ್ಲೆಂಡಿನ ರಾಜಧಾನಿಯಾಗಿ (1477) ಯೂರೊಪಿನ ಉಚ್ಛ್ರಾಯ ನಗರವೆಂದು ಖ್ಯಾತಿ ಪಡೆಯಿತು. 1794ರಲ್ಲಿ ಫ್ರೆಂಚರ ವಶವಾಗಿ 1814ರ ತನಕ ಅವರ ಅಧೀನದಲ್ಲಿತ್ತು. ಈ ನಗರದಿಂದ 19 ಕಿಮೀ ದೂರದಲ್ಲಿ ಪ್ರಸಿದ್ಧ ವಾಟರ್ಲೂ ಕದನ ನಡೆಯಿತು (1815). ನೆದರ್ಲೆಂಡ್ಸಿನ ಭಾಗವಾಗಿ 1830ರ ತನಕ ಇತ್ತು. ಇದೇ ವರ್ಷದಲ್ಲಿ ಬೆಲ್ಜಿಯಮ್ ರಾಜ್ಯ ರೂಪುಗೊಂಡಾಗ ಬ್ರಸೆಲ್ಸ್ ಅದರ ರಾಜಧಾನಿಯಾಯಿತು. ಎರಡು ಮಹಾಯುದ್ಧಗಳ ಸಮಯದಲ್ಲೂ ಜರ್ಮನರು ಬೆಲ್ಜಿಯಮ್ಮಿನಲ್ಲಿ ಬೀಡು ಬಿಟ್ಟಿದ್ದರು. ಹೀಗಾಗಿ ಬೆಲ್ಜಿಯಮ್ ಅನುಸರಿಸುತ್ತಿದ್ದ ತಟಸ್ಥ ನೀತಿ ಮೂಲೆಗುಂಪಾಗಬೇಕಾಯಿತು. 1944ರಲ್ಲಿ ನಾಟ್ಸೀಗಳ ಹಿಡಿತದಿಂದ ಮುಕ್ತವಾಯಿತು.
 
ಬ್ರಸೆಲ್ಸ್ ನಗರವನ್ನು ಮೇಲಣ ಮತ್ತು ಕೆಳಗಿನ ನಗರಗಳೆಂದು ಎರಡು ಭಾಗಗಳಾಗಿ ವಿಂಗಡಿಸಿದ್ದಾರೆ. ಮೇಲಣನಗರದಲ್ಲಿ ದೊರೆಯ ಅರಮನೆ, ಸರಕಾರಿ ಕಛೇರಿಗಳು, ಉದ್ಯಾನವನಗಳು ಮತ್ತು ವಿಶಾಲ ಬೀದಿಗಳು ಇವೆ. ಕೆಳನಗರ ಹಳೆಯ ಊರು. ಈ ವಿಭಾಗ ವ್ಯಾಪಾರ ಕೇಂದ್ರ ಇದರಲ್ಲಿ ಮಾರುಕಟ್ಟೆ ಚೌಕಗಳು, 1200ರಷ್ಟು ಹಿಂದೆ ಕಟ್ಟಿದ ಕಟ್ಟಡ ಇತ್ಯಾದಿಗಳಿವೆ.
 
ಪ್ರಪಂಚ ಖ್ಯಾತವಾದ ಲೇಸ್, ಹತ್ತಿ ಮತ್ತು ಉಣ್ಣೆಯ ಪದಾರ್ಥಗಳು, ಕಾಗದ, ಲೋಹದಸಾಮಾನುಗಳು, ಮಾದಕಪಾನೀಯಗಳು, ಬಟ್ಟೆ, ಸಕ್ಕರೆ ಶುದ್ಧೀಕರಣ ಯಂತ್ರಗಳು ತಯಾರಾಗುತ್ತವೆ. ಫಾಂಡ್ರಿ ರಾಸಾಯನಿಕಗಳು, ಔಷಧಿ ಚರ್ಮ ವಸ್ತುಗಳು ತಯಾರಿಕೆ ಮೊದಲಾದ ಉದ್ಯಮಗಳೂ ಉಂಟು. ವಿಜ್ಞಾನ, ಕಲೆ, ಸಂಗೀತ ಕಾಲೇಜುಗಳು ಇವೆ. ರೈಲುಮಾರ್ಗಗಳು, ಕಾಲುವೆಗಳು ಸಾರಿಗೆಯ ಮೂಲಗಳು. ಬೆಲ್ಜಿಯಮ್ಮಿನ ಎಲ್ಲ ಕಡೆಗೆ ಉತ್ತಮ ಸಂಪರ್ಕ ಉಂಟು.
*
 
== ಉಲ್ಲೇಖಗಳು ==
"https://kn.wikipedia.org/wiki/ಬ್ರಸೆಲ್ಸ್" ಇಂದ ಪಡೆಯಲ್ಪಟ್ಟಿದೆ