ವಡೋದರಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೮೮ ನೇ ಸಾಲು:
'''ವಡೋದರಾ''' (ಮೊದಲು '''ಬರೋಡಾ''') ಇದು [[ಗುಜರಾತ್]] ರಾಜ್ಯದ ಮೂರನೇಯ ಅತಿ ಹೆಚ್ಚು ಜನಸಂಖ್ಯೆ ಇರುವ ನಗರ. ಇದು ಹಿಂದೆ [[ಗಾಯಕವಾಡ್]] ಸಂಸ್ಥಾನದ ರಾಜಧಾನಿಯಾಗಿತ್ತು. ಈ ನಗರವು [[ವಿಶ್ವಾಮಿತ್ರಿ ನದಿ]] ದಂಡೆಯ ಮೇಲಿದೆ.
 
ಬರೋಡ ಗುಜರಾತ್ ರಾಜ್ಯದ ಒಂದು ಜಿಲ್ಲೆ ; ಆ ಜಿಲ್ಲೆಯ ಮುಖ್ಯ ಪಟ್ಟಣ. ವಡೋದರ ಎಂಬುದು ಇದರ ಈಗಿನ ಅಧಿಕೃತ ನಾಮ. ಬರೋಡ ಜಿಲ್ಲೆ ನರ್ಮದಾ ಮತ್ತು ಮಾಹಿ ನದಿಗಳ ನಡುವೆ ಹಬ್ಬಿದೆ. ಜಿಲ್ಲೆಯಲ್ಲಿರುವ ತಾಲ್ಲೂಕುಗಳು ವಡೋದರ (ಬರೋಡ), ಕರ್ಜನ್, ಪಾದ್ರ, ಸಾವ್ಲಿ, ವಾಘೋಡಿಯ, ದಾಭೋಯಿ, ಸಂಖೇಡ, ಜಬುಗಾಮ್, ಛೋಟಾ ಉದಯಪುರ, ನಸ್‍ವಾಡಿ, ತಿಲಕವಾಡಾ ಮತ್ತು ಸಿನೋರ್. ಜಿಲ್ಲೆಯ ವಿಸ್ತೀರ್ಣ 7,788 ಚ.ಕಿಮೀ. ಜನಸಂಖ್ಯೆ 2,558,092 (1981). ಇದು ಸ್ಥೂಲವಾಗಿ ಹಿಂದಿನ ಬರೋಡ ಸಂಸ್ಥಾನದ ಬರೋಡ ಜಿಲ್ಲೆಯ ಪ್ರದೇಶವನ್ನೊಳಗೊಂಡಿದೆ. ಬರೋಡ ಸಂಸ್ಥಾನದಲ್ಲಿ ಈ ಪ್ರದೇಶವಲ್ಲದೆ ದಕ್ಷಿಣದಲ್ಲಿ ತಪತಿ ನದಿ ಕಣಿವೆ ಮತ್ತು ಅದರ ಆಚೆಗಿನ ಪ್ರದೇಶವೂ ಕಾಠಿಯಾವಾಡ್ ಮತ್ತು ಉತ್ತರ ಗುಜರಾತ್ ಭಾಗಗಳೂ ಸೇರಿದ್ದುವು. ಸ್ವಾತಂತ್ರ್ಯಾನಂತರದ ಅವಧಿಯಲ್ಲಿ ಈ ಜಿಲ್ಲೆಯಲ್ಲಿ ಪತ್ತೆಯಾದ ತೈಲನಿಕ್ಷೇಪಗಳಿಂದಾಗಿ ಈ ಜಿಲ್ಲೆಗೆ ಹೊಸ ಮಹತ್ತ್ವ ಪ್ರಾಪ್ತವಾಗಿದೆ. ಬರೋಡ ನಗರದಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಯಗಾರವಿದೆ. ಅಲ್ಲದೆ ತೈಲ ಶುದ್ಧೀಕರಣ, ರಸಗೊಬ್ಬರ ಮತ್ತು ಸಿಮೆಂಟ್ ಕಾರ್ಖಾನೆಗಳು ಸ್ಥಾಪಿತವಾಗಿವೆ. ಈ ಜಿಲ್ಲೆಯಲ್ಲಿ ಫ್ಲೂರೈಡ್ ಧಾತುವಿನ ನಿಕ್ಷೇಪಗಳಿವೆ.
 
ಜಿಲ್ಲೆಯಲ್ಲಿ ವರ್ಷಕ್ಕೆ ಸರಾಸರಿ 762 ಮಿಮೀ. ಮಳೆಯಾಗುತ್ತದೆ. ಫಲವತ್ತಾದ ಭೂಮಿ ಇರುವ ಈ ಜಿಲ್ಲೆಯ ಮುಖ್ಯ ಬೆಳೆಗಳು ಗೋದಿ, ಜೋಳ, ಬಾಜ್ರ, ದ್ವಿದಳ ಧಾನ್ಯಗಳು, ಎಣ್ಣೆಕಾಳು, ಸಜ್ಜೆ, ಬತ್ತ, ಹತ್ತಿ, ಕಬ್ಬು, ತಂಬಾಕು ಮತ್ತು ಹಣ್ಣು, ಬೇಸಾಯ, ಶಿಕ್ಷಣ, ಆರೋಗ್ಯ ಮತ್ತು ಕೈಗಾರಿಕಾರಂಗಗಳಲ್ಲಿ ಸಾಧಿಸಿದ ಪ್ರಗತಿಯಿಂದಾಗಿ ಈ ಜಿಲ್ಲೆ ಗುಜರಾತಿನ ಇತರ ಜಿಲ್ಲೆಗಳಿಗಿಂತ ಮುಂದುವರಿದಿದೆ.
೧೦೨ ನೇ ಸಾಲು:
1297ರ ವರೆಗೆ ಬರೋಡ ಹಿಂದೂ ರಾಜರ ವಶದಲ್ಲಿತ್ತು. ಅನಂತರ 15ನೆಯ ಶತಮಾನದ ಆರಂಭದವರೆಗೆ ಇದು ದೆಹಲಿಯ ಸುಲ್ತಾನರ ಆಳ್ವಿಕೆಗೆ ಒಳಪಟ್ಟಿತ್ತು. ಅನಂತರ 16ನೆಯ ಶತಮಾನದ ಮೂರನೆಯ ಪಾದದ ವರೆಗೆ ಇದನ್ನು ಸ್ವತಂತ್ರ ಸುಲ್ತಾನರು ಆಳಿದರು. 1572ರ ಸುಮಾರಿನಿಂದ 1734ರ ವರೆಗೆ ಇದು ಮೊಗಲ್ ಚಕ್ರಾಧಿಪತ್ಯಕ್ಕೆ ಸೇರಿತ್ತು. ಅನಂತರ, 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸುವವರೆಗೆ ಇದು ಮರಾಠಾ ವಂಶದವರ ಆಳ್ವಿಕೆಯಲ್ಲಿತ್ತು. 1734ರಲ್ಲಿ ಮೊಗಲರಿಂದ ಗುಜರಾತನ್ನು ವಶಪಡಿಸಿಕೊಂಡ ಗಾಯಕವಾಡ ಮನೆತನದ ಅರಸರಿಗೆ ಬರೋಡ ರಾಜಧಾನಿಯಾಗಿತ್ತು. ಗುಜರಾತು ಬ್ರಿಟಿಷರ ವಶವಾಯಿತು. ಬರೋಡದಲ್ಲಿ ಗಾಯಕವಾಡ ಮನೆತನದ ಆಳ್ವಿಕೆ ಮುಂದುವರಿಯಿತು. ಬರೋಡ ಬ್ರಿಟಿಷ್ ಆಶ್ರಿತ ಸಂಸ್ಥಾನವಾಯಿತು.
 
ಶತ್ರುಗಳ ಆಕ್ರಮಣವಾದಾಗಲೆಲ್ಲ ಬರೋಡ ನಗರ ಅದರ ಪರಿಣಾಮವನ್ನು ಅನುಭವಿಸಿದೆ. 1451ರಲ್ಲಿ ಮಾಳ್ವದ ಸುಲ್ತಾನ 1ನೆಯ ಖಿಲ್ಜಿ ಮಹಮೂದ್ ಇದನ್ನು ಲೂಟಿ ಮಾಡಿದ. 1459-1511ರಲ್ಲಿ ಗುಜರಾತಿನ ಸುಲ್ತಾನನಾಗಿದ್ದ ಮಹಮೂದ್ ಬೇಗಾರ ಈಗಿನ ನಗರದ ಹೃದಯಭಾಗವನ್ನು ನಿರ್ಮಿಸಿದ. ಇದರ ನಾಲ್ಕೂ ಕಡೆ ನಾಲ್ಕು ಮಹಾದ್ವಾರಗಳನ್ನು ಕಟ್ಟಿಸಿದ. 1734ರಲ್ಲಿ ಮರಾಠರು ಇದನ್ನು ಸೂರೆ ಮಾಡಿದರು. ಪಿಲಾಜಿ ಗಾಯಕವಾಡ ಇದನ್ನು ವಶಪಡಿಸಿಕೊಂಡ. 1768ರಲ್ಲಿ ಇದು ಗಾಯಕವಾಡ ಮನೆತನದ ರಾಜಧಾನಿಯಾಯಿತು. 3ನೆಯ ಸಯಾಜಿ ರಾವ್ ಆಳ್ವಿಕೆಯ ಕಾಲದಲ್ಲಿ ನಗರಕ್ಕೆ ಆಧುನಿಕ ರೂಪ ಪ್ರಾಪ್ತವಾಯಿತು. ಅನೇಕ ಭವ್ಯ ಭವನಗಳೂ ಉದ್ಯಾನವೇ ಮುಂತಾದವೂ ಇಲ್ಲಿ ನಿರ್ಮಿತವಾದುವು. ಬರೋಡ ಜಿಲ್ಲೆಯ ಇತರ ಪ್ರಮುಖ ಸ್ಥಳಗಳ ಪೈಕಿ ಒಂದು ದಭೋಯಿ. ಇದು ಬರೋಡಕ್ಕೆ ಆಗ್ನೇಯದಲ್ಲಿ 27 ಕಿಮೀ. ದೂರದಲ್ಲಿದೆ. ಬಹುಶಃ 13ನೆಯ ಶತಮಾನದ ಒಂದು ವಿಶಾಲವಾದ ಕೋಟೆ ಇಲ್ಲಿದೆ. ಇದರ ನಾಲ್ಕು ಮಹಾದ್ವಾರಗಳೂ ಸುಂದರವಾಗಿವೆ; ಸುಸ್ಥಿತಿಯಲ್ಲಿ ಉಳಿದು ಬಂದಿವೆ. ಇಲ್ಲಿ ಮೂರು ಸುಂದರ ದೇವಾಲಯಗಳಿವೆ. (ಬಿ.ಎ.ಎಸ್.){{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬರೋಡ}}
 
== ==
<references/>
 
"https://kn.wikipedia.org/wiki/ವಡೋದರಾ" ಇಂದ ಪಡೆಯಲ್ಪಟ್ಟಿದೆ