ಜಪಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೪೬೯ ನೇ ಸಾಲು:
ಅಮೆರಿಕದ ನೇತೃತ್ವದಲ್ಲಿ ಮಿತ್ರ ರಾಷ್ಟ್ರಗಳು 1945ರಿಂದ 1952ರ ವರೆಗೆ ಅಲ್ಲಿ ಆಳ್ವಿಕೆ ನಡೆಸಿದುವು. ದಂಡನಾಯಕ ಮೆಕಾರ್ಥರ್ ಈ ಆಡಳಿತದ ಮುಖ್ಯಾಧಿಕಾರಿಯಾಗಿದ್ದ. ಯುದ್ಧಾಪರಾಧಗಳ ವಿಚಾರಣೆ ನಡೆದು 28 ಪ್ರಧಾನ ಯುದ್ಧಕೈದಿಗಳಿಗೆ ಗಲ್ಲಿನ ಶಿಕ್ಷೆಯಾಯಿತು. 1946ರಲ್ಲಿ ಜಪಾನಿನಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದುವು. ಆ ವರ್ಷವೇ ಜಪಾನಿನ ಹೊಸ ಸಂವಿಧಾನದ ರಚನೆಯಾಗಿ 1947ರ ಮೇ 3ರಂದು ಅದು ಅಧಿಕೃತವಾಗಿ ಜಾರಿಗೆ ಬಂತು. ಚಕ್ರವರ್ತಿಯಲ್ಲಿ ಕೇಂದ್ರೀಕೃತವಾಗಿದ್ದ ಕಾರ್ಯಾಂಗದ ಅಧಿಕಾರಗಳನ್ನು ತೆಗೆದುಹಾಕಲಾಯಿತು. ಸ್ತ್ರೀಯರಿಗೂ ಮತದಾನದ ಹಕ್ಕು ಲಭ್ಯವಾಯಿತು. ಸೇನೆ ಮತ್ತು ನೌಕೆಯನ್ನು ರದ್ದು ಮಾಡಿದ ಸಂವಿಧಾನದಲ್ಲಿ, ಯುದ್ಧವನ್ನು ರಾಜಕೀಯ ಅಸ್ತ್ರದಂತೆ ಜಪಾನ್ ಎಂದೆಂದಿಗೂ ಬಳಸುವುದಿಲ್ಲವೆಂದು ಘೋಷಿಸಲಾಯಿತು. ಅಮೆರಿಕದ ನೆರವಿನಿಂದ ಜಪಾನಿನ ಆರ್ಥಿಕ ಸ್ಥಿತಿ ಸುಧಾರಿಸುತ್ತ ನಡೆಯಿತು. ಭೂ ಸುಧಾರಣೆಗಳಾದುವು. ಉಳುವವರು ಭೂಮಿಯ ಒಡೆಯರಾದರು. ಕೈಗಾರಿಕಾ ಕ್ಷೇತ್ರದಲ್ಲಿ ಜೈಬಟ್ಸುವಿನ ಪ್ರಭಾವ ತಗ್ಗಿಸುವ ಏರ್ಪಾಡುಗಳಾದುವು. 1950ರ ಕೊರಿಯ ಯುದ್ಧ ಮತ್ತು ಅನಂತರ ಜಪಾನಿನ ಕೈಗಾರಿಕೆ ಬಹು ಬೇಗ ಹಿಂದಿನ ಸ್ಥಿತಿಗೆ ಬಂತು. ಆ ಕಾಲದಲ್ಲಿ ಜಪಾನಿನ ಪ್ರಧಾನಿಯಾಗಿದ್ದ ಷಿಗೆಯ ಯೋಷಿದಾ ಅಮೆರಿಕದೊಡನೆ ಹೊಂದಾಣಿಕೆಯ ನೀತಿ ಅನುಸರಿಸಿದರು. ಜಪಾನ್ ಪ್ರಜಾಪ್ರಭುತ್ವದ ಹಾದಿ ಹಿಡಿಯಿತು.
 
===== ಯುದ್ಧೋತ್ತರ ಪ್ರಗತಿ =====
1951ರ ಸೆಪ್ಟೆಂಬರ್ 8ರಂದು ಅಮೆರಿಕದ ಸ್ಯಾನ್ ಫ್ರಾನ್ಸಿಸ್‍ಕೋ ನಗರದಲ್ಲಿ 48 ಮಿತ್ರರಾಷ್ಟ್ರಗಳ ಸಮ್ಮೇಳನ ನಡೆದು, ಜಪಾನ್ ಶಾಂತಿ ಕೌಲಿಗೆ ಸಹಿ ಹಾಕಿತು. ಇದು ಅಧಿಕೃತವಾಗಿ ಜಾರಿಗೆ ಬಂದದ್ದು 1952ರ ಏಪ್ರಿಲ್ 28ರಂದು. ಮಿತ್ರರಾಷ್ಟ್ರಗಳ ಆಡಳಿತ ಕೊನೆಗೊಂಡಿತು. ಜಪಾನ್ ಸಂಪೂರ್ಣವಾಗಿ ಸ್ವತಂತ್ರವಾಯಿತು. ಜಪಾನ್ ಅಮೆರಿಕದೊಡನೆ ಭದ್ರತಾ ಒಪ್ಪಂದವೊಂದನ್ನು ಮಾಡಿಕೊಂಡಿತು. 1952ರಲ್ಲಿ ಜಪಾನ್ ವಿಶ್ವಸಂಸ್ಥೆಯ ಸದಸ್ಯರಾಷ್ಟ್ರವಾಗಲು ಬಯಸಿ ವಿಫಲವಾಯಿತು. ಇದಕ್ಕೆ ಕಾರಣ ಸೋವಿಯೆತ್ ದೇಶದ ವಿರೋಧ. 1956ರಲ್ಲಿ ಸೋವಿಯೆತ್ ದೇಶ ಮತ್ತು ಜಪಾನ್‍ಗಳ ನಡುವೆ ಶಾಂತಿ ಒಪ್ಪಂದ ಆದ ಮೇಲೆ ಆ ವರ್ಷದ ಡಿಸೆಂಬರ್ ತಿಂಗಳಲ್ಲಿ ಜಪಾನ್ ವಿಶ್ವಸಂಸ್ಥೆಯ ಸದಸ್ಯತ್ವ ಪಡೆಯಿತು. 1955ರಲ್ಲಿ ಇಂಡೊನೇಷ್ಯದ ಬಾಂಡುಂಗ್‍ನಲ್ಲಿ ನಡೆದ ಆಫ್ರೊ-ಏಷ್ಯನ್ ಆಗ್ರ ಸಮ್ಮೇಳನದಲ್ಲಿ ಜಪಾನೂ ಭಾಗವಹಿಸಿತು. ಅಲ್ಲಿಂದೀಚೆಗೆ ಜಪಾನ್ ಎಲ್ಲ ಕ್ಷೇತ್ರಗಳಲ್ಲೂ ಮುಂದುವರಿದು ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲೊಂದಾಗಿದೆ. (ಕೆ.ಎಸ್.ಎಸ್.)
 
== ಆರ್ಥಿಕ ಅಭಿವೃದ್ಧಿ ==
"https://kn.wikipedia.org/wiki/ಜಪಾನ್" ಇಂದ ಪಡೆಯಲ್ಪಟ್ಟಿದೆ