ಚನ್ನರಾಯಪಟ್ಟಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಟ್ಯಾಗ್: 2017 source edit
ಚುNo edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೭೯ ನೇ ಸಾಲು:
ಚನ್ನರಾಯನಪಟ್ಟಣಕ್ಕೆ 6 ಕಿ.ಮೀ. ದೂರದಲ್ಲಿ ಚನ್ನರಾಯನಪಟ್ಟಣ-ತಿಪಟೂರು ರಸ್ತೆಯಲ್ಲಿರುವ ಊರು ದಿಂಡಗೂರು. ಇದಕ್ಕೆ ಹಿಂದೆ ಮಲ್ಲಿಕಾರ್ಜುನಪುರ ಅಗ್ರಹಾರವೆಂಬ ಹೆಸರಿತ್ತು. ಇದನ್ನು ಪಂಡಿತ ದಂಡನಾಥ 13ನೆಯ ಶತಮಾನದಲ್ಲಿ ಕಟ್ಟಿಸಿದ. ಕೇಶವ ಮತ್ತು ಈಶ್ವರ ದೇವಾಲಯಗಳಿವೆ. ಹಳೆಬೆಳಗೊಳ ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಚನ್ನರಾಯನಪಟ್ಟಣಕ್ಕೆ 18 ಮೈ ದೂರದಲ್ಲಿದೆ. ಇಲ್ಲಿ ಹೊಯ್ಸಳ ಮಾದರಿಯ ಜೈನದೇವಾಲಯವೊಂದುಂಟು. ಇದು ಶಿಥಿಲಾವಸ್ಥೆಯಲ್ಲಿದೆ. ಇದನ್ನು ನಿರ್ಮಿಸಿದ ಕಾಲ ಸು. 1094 ಇರಬಹುದು. ಕೇಶವ ಮತ್ತು ಶಿವದೇವಾಲಯಗಳೂ ಇವೆ. ಹೆಬ್ಬಳಲು ಚನ್ನರಾಯಪಟ್ಟಣಕ್ಕೆ 32 ಕಿ.ಮೀ. ದೂರದಲ್ಲಿ ಹಿರೇಸಾವೆ ರಸ್ತೆಯಲ್ಲಿದೆ. ಇಲ್ಲಿರುವ ಸಿಂಗೇಶ್ವರ ದೇವಾಲಯ ಸು. 1200ರಲ್ಲಿ ಹೊಯ್ಸಳ ಇಮ್ಮಡಿ ಬಲ್ಲಾಳನ ಕಾಲದಲ್ಲಿ ಕಟ್ಟಿಸಿದ್ದು. ಜಿನನಾಥಪುರ ಗ್ರಾಮ ಕಾಂತರಾಜಪುರ-ಶ್ರವಣಬೆಳಗೊಳ ರಸ್ತೆಯಲ್ಲಿ ಚನ್ನಪಟ್ಟಣಕ್ಕೆ 14 ಕಿ.ಮಿ. ದೂರದಲ್ಲಿದೆ. 1117ರಲ್ಲಿ ವಿಷ್ಣುವರ್ಧನನ ದಂಡನಾಯಕ ಗಂಗರಾಜ ಸ್ಥಾಪಿಸಿದನೆಂದು ಹೇಳುವ ಒಂದು ಶಾಸನ ಇಲ್ಲಿದೆ. ಇಲ್ಲಿರುವ ಶಾಂತಿನಾಥ ಬಸ್ತಿ ಸು. 1200ರಲ್ಲಿ ನಿರ್ಮಿತವಾದ್ದು. ಇದು ಹೊಯ್ಸಳ ಶೈಲಿಗೆ ಉತ್ತಮ ನಿದರ್ಶನ. ಅರೆಗಲ್ ಬಸ್ತಿಯಲ್ಲಿ ಪಾಶ್ರ್ವನಾತ ವಿಗ್ರಹವಿದೆ. (ನೋಡಿ- ಜಿನನಾಥಪುರ)
 
=== ಕುಂದೂರು ಮಠ ===
ಚನ್ನರಾಯಪಟ್ಟಣಕ್ಕೆ 20 ಕಿ.ಮೀ. ದೂರದಲ್ಲಿರುವ ಕುಂದೂರಿನಲ್ಲಿ ಚಾಮುಂಡೇಶ್ವರಿ'''ಮೆಳಿಯಮ್ಮ''', ರಂಗನಾಥ ಮತ್ತು ಸುಬ್ರಹ್ಮಣೇಶ್ವರ ದೇವಾಲಯಗಳಿವೆ. ಇಲ್ಲೊಂದು ಒಕ್ಕಲಿಗರ ಮಠ ಉಂಟು. ಹಳ್ಳಿಯ ಬಳಿ ಕುಡ್ಲುಕಲ್ಲು ಎಂಬ ಸ್ತಂಭವೊಂದಿದೆ.
 
=== ನುಗ್ಗೇಹಳ್ಳಿ ===
"https://kn.wikipedia.org/wiki/ಚನ್ನರಾಯಪಟ್ಟಣ" ಇಂದ ಪಡೆಯಲ್ಪಟ್ಟಿದೆ