ಅಹಮದ್ ಷಾ ದುರಾನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
added links
೧ ನೇ ಸಾಲು:
[[ಚಿತ್ರ:Portrait miniature of Ahmad Shah Durrani.jpg|thumb|ಅಹಮದ್ ಷಾ ದುರಾನಿ]]
[[ಚಿತ್ರ:NadirShah.jpg|thumb|ನಾದಿರ್ ಷಾ]]
'''ಅಹಮದ್ ಷಾ ದುರಾನಿ'''<ref>https://www.sikhiwiki.org/index.php/Ahmad_Shah_Durrani</ref> ಆಫ್ಘನರಲ್ಲಿ ಅಬ್ದಾಲಿ ಮನೆತನಕ್ಕೆ ಸೇರಿದವ. [[ದುರಾನಿ ಸಾಮ್ರಾಜ್ಯ]] ಸ್ಥಾಪಕ. [[ಆಫ್ಘಾನಿಸ್ತಾನ]]ವನ್ನು ವಶಪಡಿಸಿಕೊಳ್ಳುವ ಪ್ರಯತ್ನದಲ್ಲಿ 'ನಾದಿರ್ ಷಾ'<ref>https://www.britannica.com/biography/Nadir-Shah</ref>ನಿಗೆ ನೆರವಾದ (೧೭೩೮). ೧೭೪೭ರಲ್ಲಿ ನಾದಿರ್ ಷಾ ಕೊಲೆಯಾದ. ಅನಂತರ ಆಫ್ಘಾನಿಸ್ತಾನದಲ್ಲಿ ದೊರೆಯಾದ ದುರಾನಿ (ದುರ್-ಇ-ದುರಾನ್, ಎಂದರೆ ಮುತ್ತುಗಳಲ್ಲಿ ಶ್ರೇಷ್ಠ) ಎಂಬ ಬಿರುದನ್ನು ಧರಿಸಿ ಸಿಂಹಾಸನವನ್ನೇರಿದ. ಉತ್ತರ ಹಿಂದೂಸ್ತಾನದಲ್ಲಿ ಅನಾಯಕತ್ವ ಹರಡುತ್ತಿದ್ದ ಕಾಲವದು. ಆಗ [[ಮೊಘಲ್ ಸಾಮ್ರಾಜ್ಯ]] ಬಲಗುಂದಿ ಇಳಿಗತಿಯಲ್ಲಿ ಸಾಗುತ್ತಿತ್ತು. [[ಮರಾಠಾ ಸಾಮ್ರಾಜ್ಯ]] ಉತ್ತರ ಹಿಂದೂಸ್ತಾನದಲ್ಲೂ ವ್ಯಾಪಿಸಿ, ಹರಡಿದಷ್ಟೂ ಶಿಥಿಲತೆ ಎಡೆಮಾಡಿಕೊಟ್ಟಿತು; ರಜಪೂತರ[[ರಜಪೂತ]]ರ ಕ್ಷಾತ್ರ ಕುಂದಿತ್ತು. ಇದನ್ನು ಕಂಡು ಅಹಮದ್ ಷಾ ಹಿಂದೂಸ್ತಾನಕ್ಕೆ ಅನೇಕ ಬಾರಿ ನುಗ್ಗಿ ಅಲ್ಲಿನ ಸಂಪತ್ತನ್ನು ದೋಚಿಕೊಂಡು ಹಿಂತಿರುಗಿದ. [[ಮಥುರಾ]], ಬೃಂದಾವನ ಮುಂತಾದ ಅನೇಕ ಪವಿತ್ರ ಕ್ಷೇತ್ರಗಳಿಗೆ ನುಗ್ಗಿ ಗುಡಿಗೋಪುರಗಳನ್ನು ನೆಲಸಮ ಮಾಡಿ, ಅಸಂಖ್ಯಾತ ಹಿಂದೂಗಳನ್ನು ಕೊಂದು ಅಲ್ಲಿನ ಸಂಪತ್ತನ್ನು ಸೂರೆ ಮಾಡಿದ. ಎರಡು ಸಲ (೧೭೫೬, ೧೭೬೦) ದೆಹಲಿಯ[[ದೆಹಲಿ]]ಯ ಲೂಟಿ ನಡೆಯಿತು. ಮೂರನೆಯ ಪಾಣೀಪತ್ ಕಾಳಗದಲ್ಲಿ (೧೭೬೧) ಮರಾಠರನ್ನು[[ಮರಾಠಿ|ಮರಾಠ]]ರನ್ನು ಸೋಲಿಸಿ ಅವರ ಅವನತಿಗೆ ಕಾರಣನಾದ. ಭಾರತದ ದಿಗ್ವಿಜಯಗಳಿಂದ ತನ್ನ ನಾಡಿನಲ್ಲಿ ಪ್ರತಿಷ್ಠೆ ಹೆಚ್ಚಿಸಿಕೊಂಡ. [[ಕಾಂದಹಾರ್]], ಷೇಷಾವರ್[[ಪೇಶಾವರ್]], [[ಪಂಜಾಬ್]], [[ಕಾಶ್ಮೀರ|ಕಾಶ್ಮೀರ್]], ಸಿಂಧ್‍ಗಳ ಮೇಲೂ ಇವನ ಅಧಿಕಾರವಿತ್ತು. ೧೭೬೨ರ ಅನಂತರ ಪಂಜಾಬಿನಲ್ಲಿ[[ಪಂಜಾಬ್|ಪಂಜಾಬಿ]]ನಲ್ಲಿ ಸಿಕ್ಕರು ದಂಗೆಯೆದ್ದು ೧೭೬೭ರ ಹೊತ್ತಿಗೆ ಅವನ ಸೈನಿಕರನ್ನು ಅಲ್ಲಿಂದ ಓಡಿಸಿದರು. ಅನಿವಾರ್ಯವಾಗಿ ಅಹಮದ್ ಷಾ ಪಂಜಾಬನ್ನು ಸಿಕ್ಕರಿಗೆ ಬಿಟ್ಟುಕೊಡಬೇಕಾಯಿತು. ಅವನು ತನ್ನ ನಾಡಿಗೆ ಹಿಂದಿರುಗಿದ ಮೇಲೆ ಅದೇ ತಾನೆ ಬಂಗಾಳದಲ್ಲಿ[[ಪಶ್ಚಿಮ ಬಂಗಾಳ|ಬಂಗಾಳ]]ದಲ್ಲಿ ಕಾಲಿಟ್ಟಿದ್ದ ಬ್ರಿಟಿಷರು ದೇಶದಲ್ಲಿ ವ್ಯಾಪಿಸಲು ಅನುಕೂಲವಾಯಿತು. ಇವನ ವಂಶದವರು ದೋಸ್ತ್ ಮಹಮ್ಮದನ (೧೮೬೩) ಕಾಲದವರೆಗೂ ಆಫ್ಘಾನಿಸ್ತಾನವನ್ನು ಆಳಿದರು. (ಎಚ್.ಜಿ.ಆರ್.)
(ಎಚ್.ಜಿ.ಆರ್.)
 
== ಉಲ್ಲೇಖಗಳು ==
"https://kn.wikipedia.org/wiki/ಅಹಮದ್_ಷಾ_ದುರಾನಿ" ಇಂದ ಪಡೆಯಲ್ಪಟ್ಟಿದೆ