ನೇಮಿಚಂದ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೬ ನೇ ಸಾಲು:
==ಕೃತಿಗಳು==
===ಲೀಲಾವತೀ ಪ್ರಬಂಧ===
ಲೀಲಾವತೀ ಪ್ರಬಂಧ ಹದಿನಾಲ್ಕು ಆಶ್ವಾಸಗಳುಳ್ಳ ಪ್ರೌಢ ಚಂಪೂಕಾವ್ಯ. ಇದನ್ನು ಒಂದೇ ವರ್ಷದಲ್ಲಿ ಬರೆದು ಮುಗಿಸಿ ಕಾವ್ಯದಲ್ಲಿ ಶೃಂಗಾರವನ್ನು ಸೆರೆಹಿಡಿದಿಟ್ಟಿರುವುದಾಗಿ ಕವಿ ಹೇಳಿಕೊಂಡಿದ್ದಾನೆ. ಅದ್ದರಿಂದಲೇ ಈತನಿಗೆ "'ಶೃಂಗಾರಕಾರಾಗೃಹ"' ಎಂಬ ಬಿರುದು. ಈ ಕಾವ್ಯದಲ್ಲಿ ಕಥೆ ಬಹಳ ಸ್ವಲ್ಪ. ವರ್ಣನೆಯೇ ಅಪಾರ. ಕಂದರ್ಪದೇವನೆಂಬ ಒಬ್ಬ ರಾಜಕುಮಾರ ಒಂದು ರಾತ್ರಿ ಕನಸಿನಲ್ಲಿ ಮಹಾಸುಂದರಿಯಾದ ತರುಣಿಯೊಬ್ಬಳನ್ನು ಕಂಡು ಅವಳನ್ನು ಮೆಚ್ಚಿ ಮೋಹಿಸಿದ. ಮಾರನೆಯ ದಿನ ಬೆಳಗ್ಗೆ ತನ್ನ ಕನಸಿನ ಸುಂದರಿ ಎಲ್ಲಿರುವಳೋ ಎಂದು ಹುಡುಕಲು ನಿರ್ಧರಿಸಿದ. ತನ್ನ ಸ್ನೇಹಿತನಾದ ಮಂತ್ರಿಪುತ್ರ ಮಕರಂದವನ್ನೂ ಜತೆಯಲ್ಲಿ ಕರೆದುಕೊಂಡು ಪ್ರಯಾಣ ಹೊರಟ. ಕುಸುಮಪುರದ ಅರಸ ಶೃಂಗಾರಶೇಖರನ ಮಗಳು ಲೀಲಾವತಿ ತನ್ನ ಕನಸಿನಲ್ಲಿ ಸುಂದರ ಪುರುಷನೊಬ್ಬನನ್ನು ಕಂಡು ಮೋಹಿಸಿ ಅವನನ್ನು ಹುಡುಕಲು ಜನರನ್ನು ಅಟ್ಟಿದಳು. ಕೊನೆಗೆ ಇವರಿಬ್ಬರೂ ಸಂಧಿಸಿ ಪರಸ್ಪರ ಒಲಿದು ಮದುವೆಯಾದರು. ಕಂದರ್ಪದೇವ ಲೀಲಾವತೀ ಸಮೇತನಾಗಿ ಬನವಾಸಿಗೆ ಬಂದು ಸುಖವಾಗಿ ರಾಜ್ಯವಳಿದ. ಈ ಕಥೆಯ ಹಂದರದ ಮೇಲೆ ಕವಿ ಅನೇಕ ಸನ್ನಿವೇಶಗಳನ್ನು ಸೃಷ್ಟಿಸಿ ಶೃಂಗಾರರಸ ಪ್ರತಿಪಾದನೆಗೆ ಬೇಕಾದಷ್ಟು ಅವಕಾಶವನ್ನು ಕಲ್ಪಿಸಿ ಕೊಂಡಿದ್ದಾನೆ. ಸ್ವಪ್ನ ಸಂದರ್ಶನದಿಂದಲೇ ಮನಸ್ಸಿನಲ್ಲಿ ಮೊಳೆತೆ ಮೆಚ್ಚಿಗೆಯ ಮೋಹಬಲಿತು ಪ್ರೇಮಿಗಳು ಪರಸ್ಪರ ಸಂದರ್ಶನಕ್ಕೆ ಹಂಬಲಿಸಿ ಅನ್ವೇಷಣೆ ನಡೆಸಿದ ವೃತ್ತಾಂತ. ನಾಯಕ ನಾಯಕಿಯರ ಪರಸ್ಪರ ಸಂದರ್ಶನ. ಸಮ್ಮೋಹ ಸಮಾಗಮಗಳ ಕಥೆ ಶೃಂಗಾರರಸ ಪ್ರತಿಪಾದನೆಗೆ ಹಲವು ಸಂದರ್ಭಗಳನ್ನು ಒದಗಿಸಿದೆ. ಅದರೆ ಕವಿ ಪ್ರೇಮಿಗಳ ಮನೋವೃತ್ತಿಯ ನಾನಾ ಅವಸ್ಥೆಗಳನ್ನು ಬಣ್ಣಿಸುವ ಭರದಲ್ಲಿ ಅನೇಕ ಕಡೆ ಲಜ್ಜೆ. ಸಂಕೋಚ ಮತ್ತು ಗಾಂಭೀರ್ಯಗಳನ್ನು ಮರೆತಿದ್ದಾನೆ. ಈತನ ಒಲವು ಆಂಗಿಕ ಶೃಂಗಾರ ನಿರೂಪಣೆಯ ಕಡೆಗೇ ಇದೆಯೆಂದು ಹೇಳಿದರೆ ತಪ್ಪಾಗಲಾರದು.
ಲೀಲಾವತೀ ಪ್ರಬಂಧ ಬಹಳ ಮಟ್ಟಿಗೆ ಸುಬಂಧು ಕವಿಯ ವಾಸವದತ್ತಾ ಎಂಬ ಕಥೆಯನ್ನು ಹೋಲುತ್ತದೆ. ಅದರ ಅಧಾರದ ಮೇಲೆಯೇ ನೇಮಿಚಂದ್ರ ಈ ಕೃತಿಯನ್ನು ಕಟ್ಟಿರುವಂತೆ ತೋರುತ್ತದೆ. ಕವಿ ಕಥೆಯಲ್ಲಿ ಒಂದೆರಡು ಮಾರ್ಪಾಟುಗಳನ್ನು ಮಾಡಿದ್ದಾನೆ. ಪಾತ್ರಗಳ ಹೆಸರುಗಳನ್ನು ಕೆಲವು ಕಡೆ ವ್ಯತ್ಯಾಸ ಮಾಡಿದ್ದಾನೆ. ಅಲ್ಲದೆ ಸುಬಂಧುವಿನ ಕೃತಿಯಲ್ಲಿ ಇಲ್ಲದ ಜೈನಮತದ ಆವರಣವನ್ನು ಕಲ್ಪಿಸಿದ್ದಾನೆ.
 
 
 
===ನೇವಿನಾಥ ಪುರಾನಾ===
"https://kn.wikipedia.org/wiki/ನೇಮಿಚಂದ್ರ" ಇಂದ ಪಡೆಯಲ್ಪಟ್ಟಿದೆ