ಉಪ್ಪಿನ ಕಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕಾರ ಎಂಬುದನ್ನು ಖಾರ ಎಂದು ಸರಿಪಡಿಸಿದೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು 80.2.250.56 (ಚರ್ಚೆ) ರ 817676 ಪರಿಷ್ಕರಣೆಯನ್ನು ವಜಾ ಮಾಡಿ
೧ ನೇ ಸಾಲು:
[[File:Vase by Bat Trang ceramic for pickling 2.JPG|thumb|ಉಪ್ಪಿನಕಾಯಿ ಭರಣಿಗಳು]]
'''ಉಪ್ಪಿನ ಕಾಯಿ''' [[ಉಪ್ಪು]], ಹುಳಿ(ಆಮ್ಲ), ಖಾರಕಾರ, ಕಾಡಿ (ವಿನೇಗರ್), [[ಎಣ್ಣೆ]], [[ಸಕ್ಕರೆ]] ಇಲ್ಲವೇ ಇವುಗಳ ಮಿಶ್ರಣದಲ್ಲೆ ಊರಿಟ್ಟ ಹಸಿಯ ಹುಳಿಗಾಯಿ, ತರಕಾರಿ ತೆರನ ವಸ್ತುಗಳೇ ಉಪ್ಪಿನಕಾಯಿ (ಪಿಕಲ್). ಬಹುಬೇಗ ಕೆಟ್ಟುಹೋಗುವ ಇಂಥ ಪದಾರ್ಥಗಳನ್ನು ಬಹುದಿನ ಕೆಡದಂತಿರಿಸಲು ಈ ವಿಧಾನವನ್ನು ಬಳಸುತ್ತಾರೆ. ಅಂದರೆ ರುಚಿಗೆ ತಕ್ಕಂತೆ ಉಪ್ಪಿನಕಾಯಿಯಲ್ಲಿ ಸಿಹಿ, ಹುಳಿ, ಎಂಬ ಎರಡು ಬಗೆಯವಿದೆ. ಉಪ್ಪಿನಕಾಯಿಗಳ ಹೆಚ್ಚಿನ ನೆರವು ಮೈಗೆ ಬಲು ಮುಖ್ಯವಾದ ಸಿ ಜೀವಾತನ್ನು ಕಾಲವಲ್ಲದ ಕಾಲಗಳಲ್ಲೂ ಸುಲಭವಾಗಿ ಒದಗಿಸುವುದು. ಅಲ್ಲದೆ ಹುಳಿಯಿಂದ ಹಸಿವು ಹುಟ್ಟಿ, ಜೊಲ್ಲೂ ಜಠರ ರಸವೂ ಹೆಚ್ಚು ಸುರಿವಂತಾಗುವುದರಿಂದ, ಹಸಿ ತರಕಾರಿ, ಮಾಂಸ, ಮೀನು ಮತ್ತಿತರ ರುಚಿಯಿಲ್ಲದ ಆಹಾರ ಪದಾರ್ಥಗಳೊಂದಿಗೂ ಹಸಿವು ಕುಂದಿರುವಾಗಲೂ ಬಳಕೆಗೆ ಬರುತ್ತದೆ. ಇದರಿಂದಲೇ ಜಠರದಲ್ಲಿ ಹುಣ್ಣಾಗಿರುವವರೂ ಉಪ್ಪಿನ ಪಥ್ಯ ಇರುವವರೂ ಇವನ್ನು ತಿನ್ನುವಂತಿಲ್ಲ. ಉಪ್ಪಿನಕಾಯಿಗಳನ್ನು ಮಿತವಾಗಿ ಬಳಸಿದರೆ ಬಲು ಆರೋಗ್ಯಕರ, ನಂಜಿಕೆಗೂ ಒಳ್ಳೆಯದು, ರುಚಿಗೂ ಹಿತಕರ.
ಹುಳಿಗಾಯನ್ನೂ ತರಕಾರಿಗಳನ್ನೂ ಈ ರೀತಿ ಕೆಡದಂತೆ ಇರಿಸುವ ವಿಧಾನಕ್ಕೆ ಊರಿಡಿಕೆ ಎಂದು ಹೆಸರು (ಪಿಕ್ಲಿಂಗ್). ಕ್ರಿಯೋಸೋಟು, ಮೈಲುತುತ್ತ (ಕಾಪರ್ ಸಲ್ಫೇಟು), ಹಾಲುತುತ್ತ (ಜಿಂಕ್ ಸಲ್ಫೇಟು) ಮತ್ತಿತರ ರಾಸಾಯನಿಕ ದ್ರಾವಣಗಳಲ್ಲಿ ಮರವನ್ನು ಜೋಪಾನಿಸುವುದಕ್ಕೂ ಇದೇ ಹೆಸರಿದೆ. ಕೆಲವು ಬಗೆಗಳ ಉಕ್ಕನ್ನು ಗಂಧಕಾಮ್ಲದಲ್ಲಿ ಊರಿಡುವುದುಂಟು. ಲೋಹ ಎರಕ ಹೊಯ್ಯುವಲ್ಲೂ ಹದಮಾಡಿ ಚರ್ಮ ತಯಾರಿಸುವುದರಲ್ಲೂ ಊರಿಡಿಕೆ ಬಳಕೆಯಲ್ಲಿದೆ.
 
==ಶಾಕಾಹಾರ ಊರಿಡಿಕೆ==
ಚಳಿಗಾಲ, ಮಳೆಗಾಲಗಳಲ್ಲಿ ಸಿಗದ ಹಸಿಯ ಕಸುಗಾಯಿ, ದೋರಹಣ್ಣುಗಳನ್ನು ಉಪ್ಪು, ಕಾರ, ಕಾಡಿಗಳೊಂದಿಗೆ ಜೋಪಾನಿಸಿಡುವುದು ಆದಿಕಾಲ ದಿಂದಲೂ ಬಂದ ಒಂದು ಒಳ್ಳೆಯ ಪದ್ಧತಿ, ಊರಿಡುವ ಈ ಹಳೆಯ ವಿಧಾನದ ಬದಲಾಗಿ ಈಗ ಡಬ್ಬಿ ತುಂಬುವ, ಶೀತಕಗಳೇ ಮುಂತಾದವಲ್ಲಿ ಕೆಡದಂತಿರಿಸುವ, ನೀರ್ಗಳೆತದ ವಿಧಾನಗಳು ಹೆಚ್ಚು ಹೆಚ್ಚಾಗಿ ಜಾರಿಗೆ ಬರುತ್ತಿದೆ.
"https://kn.wikipedia.org/wiki/ಉಪ್ಪಿನ_ಕಾಯಿ" ಇಂದ ಪಡೆಯಲ್ಪಟ್ಟಿದೆ