ಡಮಾಸ್ಕಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೭೧ ನೇ ಸಾಲು:
(ಪಿ.ಬಿ.)
 
ಇತಿಹಾಸ
ಇತಿಹಾಸ: ನಿರಂತರವಾಗಿ ಜನವಸತಿ ಮುಂದುವರಿದುಕೊಂಡು ಬಂದಿರುವ ಅತ್ಯಂತ ಪ್ರಾಚೀನ ನಗರ ಡಮಾಸ್ಕಸ್, ಪ್ರಮುಖ ರಾಜ್ಯವೊಂದರ ರಾಜಧಾನಿಯೆಂದು ಹಳೆಯ ಒಡಂಬಡಿಕೆಯಲ್ಲಿ ಇದರ ಉಲ್ಲೇಖವಿದೆ. ಕ್ರಿ. ಪೂ. 332ರಲ್ಲಿ ಅಲೆಕ್ಸಾಂಡರ್ ಈ ನಗರವನ್ನು ವಶಪಡಿಸಿಕೊಂಡ. ಅವನ ಮರಣದ ಅನಂತರ ಆರ್ಮೇನಿಯನರು ಇದನ್ನು ವಶಪಡಿಸಿಕೊಳ್ಳಲು ಬಹಳ ಯತ್ನಿಸಿದರು. ಕ್ರಿ.ಪೂ. 64ರಲ್ಲಿ ಇದು ರೋಮನರ ವಶವಾಯಿತು. ರೋಮನ್ ಸಾಮ್ರಾಜ್ಯದ ಕಾಲದಲ್ಲಿ (ಕ್ರಿ.ಪೂ. 63-ಕ್ರಿ.ಶ. 635) ಈ ಪಟ್ಟಣ ತುಂಬ ಉಚ್ಛ್ರಾಯಸ್ಥಿತಿಗೆ ಬಂತು. ಆ ಕಾಲದ ಕೋಟೆಯ ಗೋಡೆಯ ಮತ್ತು ಜûೂಸ್ ದೇವಮಂದಿರದ ಹಲವು ಭಾಗಗಳು ಉಳಿದಿವೆ. ರೋಂ ಸಾಮ್ರಾಜ್ಯದ ಹತ್ತು ಪ್ರಮುಖ ನಗರಗಳಲ್ಲಿ ಡಮಾಸ್ಕಸ್ ಕೂಡ ಒಂದಾಯಿತು. ಸೇಂಟ್ ಪಾಲ್ ಡಮಾಸ್ಕಸಿನವರನ್ನು ಕ್ರೈಸ್ತಧರ್ಮಾನುಯಾಯಿಗಳಾಗಿ ಮಾಡಿದ್ದ. 635ರಲ್ಲಿ ಡಮಾಸ್ಕಸ್ ಸಂಪೂರ್ಣವಾಗಿ ಅರಬ್ಬರ ವಶವಾಯಿತು. ಮುಸ್ಲಿಂ ನಗರವಾಗಿ ವಿಶ್ವಖ್ಯಾತಿ ಪಡೆಯಿತು. 375ರಲ್ಲಿ ಸಾಮ್ರಾಟ 1ನೆಯ ತೀಯೊಡೋಸಿಯಸ್ ಕಟ್ಟಿಸಿದ್ದ ಕ್ರೈಸ್ತಮಂದಿರವನ್ನು ಅರಬ್ಬರು ಮಸೀದಿಯನ್ನಾಗಿ ಪರಿವರ್ತಿಸಿದರು. 661-750ರಲ್ಲಿ ಈ ನಗರ ಉಮಯ್ಯಾದ್ ಖಲೀಫರ ಚಟುವಟಿಕೆಯ ಕೇಂದ್ರವಾಗಿತ್ತು. 750ರಲ್ಲಿ ಅಬ್ಬಾಸಿದರು ಉಮಯ್ಯಾದರ ಬಲವನ್ನು ಮುರಿದರು. ಅನಂತರ ಇದರ ಒಡೆತನ ಆಗಿಂದಾಗ್ಗೆ ಬದಲಾಗುತ್ತಿತ್ತು. 9ನೆಯ ಶತಮಾನದ ನಡುಗಾಲದವರೆಗೂ ಇದು ಈಜಿಪ್ಟನ್ನಾಳುವವರ ವಶದಲ್ಲಿತ್ತು. 1676ರಲ್ಲಿ ಇದನ್ನು ಸೆಲ್ಜುಕ್ ತುರ್ಕರು ಆಕ್ರಮಿಸಿಕೊಂಡರು. 1154ರಲ್ಲಿ ನುರೆದ್ದೀನನ ವಶಕ್ಕೆ ಬಂತು. ಅನಂತರ ಅವನ ಮಗ ಸಾಲದೀನನ ಒಡೆತನದಲ್ಲಿತ್ತು. ಈತ ಅಯ್ಯೂಬಿದ್ ವಂಶದ ಸ್ಥಾಪಕ. ಈ ಕಾಲದಲ್ಲಿ ಡಮಾಸ್ಕಸ್ ಪುರೋಭಿವೃದ್ಧಿ ಹೊಂದಿತು. ಧಾರ್ಮಿಕ ಸಾಂಸ್ಕøತಿಕ ಚಟುವಟಿಕೆಗಳು ಬೆಳೆದುವು. 1260ರಲ್ಲಿ ಮಂಗೋಲರು ಇದನ್ನು ಆಕ್ರಮಿಸಿಕೊಂಡರು. 14ನೆಯ ಶತಮಾನದಲ್ಲಿ ಇದು ತೈಮೂರನ ವಶವಾಯಿತು. 1516ರ ಅನಂತರ ಆಟೊಮನ್ ತುರ್ಕರ ಅಧೀನದಲ್ಲಿತ್ತು. ಒಂದನೆಯ ಮಹಾಯುದ್ಧದ ಅಂತ್ಯದಲ್ಲಿ ಬ್ರಿಟಿಷ್‍ರ ವಶವಾಗಿತ್ತು. 1920-1941ರಲ್ಲಿ ಸಿರಿಯ, ಲೆಬನನ್‍ಗಳು ರಾಷ್ಟ್ರಗಳ ಕೂಟದ ಪ್ರಾದೇಶಕ್ಕೆ ಅನುಗುಣವಾಗಿ ಫ್ರೆಂಚರ ಅಧೀನದಲ್ಲಿದ್ದಾಗ ಡಮಾಸ್ಕಸ್ಸೂ ಅವರ ವಶದಲ್ಲಿತ್ತು. 1946ರಲ್ಲಿ ಡಮಾಸ್ಕಸ್ ಸ್ವತಂತ್ರ ಸಿರಿಯದ ರಾಜಧಾನಿಯಾಯಿತು. 1958ರಲ್ಲಿ ಸಿರಿಯ, ಈಜಿಪ್ಟ್‍ಗಳು ಒಂದಾಗಿ ಸಂಯುಕ್ತ ಅರಬ್ ಗಣರಾಜ್ಯವಾದಾಗ ಡಮಾಸ್ಕಸ್ ಸಿರಯನ್ (ಉತ್ತರ) ಪ್ರದೇಶದ ಆಡಳಿತಕೇಂದ್ರವಾಗಿತ್ತು. ಸಂಯುಕ್ತ ಗಣರಾಜ್ಯದಿಂದ ಸಿರಿಯ ಹೊರ ಬಂದಾಗ (1961) ಮತ್ತೆ ಇದು ಸಿರಿಯದ ರಾಜಧಾನಿಯಾಯಿತು.
 
== ಹೊರಗಿನ ಸಂಪರ್ಕಗಳು ==
"https://kn.wikipedia.org/wiki/ಡಮಾಸ್ಕಸ್" ಇಂದ ಪಡೆಯಲ್ಪಟ್ಟಿದೆ