ಕಾಬುಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೮ ನೇ ಸಾಲು:
<br clear="all">
 
ಕಾಬೂಲ್
{{ಏಷ್ಯಾ ಖಂಡದ ರಾಜಧಾನಿ ನಗರಗಳು}}
 
 ಆಘ್ಘಾನಿಸ್ತಾನದ ರಾಜಧಾನಿ, ಆ ದೇಶದ ಅತ್ಯಂತ ದೊಡ್ಡ ನಗರ. ಕಾಬೂಲ್ ನದಿಯ ಬಲದಂಡೆಯ ಮೇಲೆ, ಸಮುದ್ರಮಟ್ಟದಿಂದ 6,000' ಎತ್ತರದಲ್ಲಿದೆ. ಜನಸಂಖ್ಯೆ (ಅಂದಾಜು) 2,26,000 (1962). ಇಲ್ಲಿರುವ ಬಹುತೇಕ ಜನ ಪರ್ಷಿಯನ್ ಭಾಷೆಯನ್ನಾಡುವವರು ; ಪಠಾಣರೂ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಅಸ್ಮೈ ಮತ್ತು ಷೇರ್ ದರ್ವಾಜಾó ಬೆಟ್ಟಗಳ ಮಧ್ಯದ ಕಣಿವೆಯಲ್ಲಿ ಈ ನಗರವಿದೆ. ಇಕ್ಕಟ್ಟಾದ ಕಣಿವೆಯೊಂದರ ಮುಖಾಂತರ ಹೊರಪ್ರದೇಶಗಳೊಡನೆ ಸಂಪರ್ಕ ಪಡೆದಿದೆ. ಈ ಕಣಿವೆಯ ಮೂಲಕವೇ ಕಾಬೂಲ್ ನದಿಯೂ ಘಜಿó ಮತ್ತು ಪಫ್‍ಮಾನ್ ರಸ್ತೆಗಳೂ ಹಾದುಹೋಗುತ್ತವೆ. ಬೆಟ್ಟಗಳ ಮೇಲಿರುವ ಮಣ್ಣಿನ ಕೋಟೆಯ ಅವಶೇಷಗಳು ಕಾಬೂಲ್‍ಷಾಹಿ ಸುಲ್ತಾನರಿಂದ ನಿರ್ಮಿತವಾದ ಕೋಟೆಯ ಉಳಿಕೆಗಳಿರಬಹುದು. ಹಿಂದೂಕುಷ್ ಪರ್ವತಗಳ ಮೂಲಕ ಹಾದುಹೋಗುವ ಉತ್ತರದ ಇಲ್ಲ ಕಣಿವೆಮಾರ್ಗಗಳ ಮೇಲೂ ತನ್ನ ಪ್ರಭಾವ ಬೀರುವ ಈ ನಗರದ ಭೌಗೋಳಿಕ ನೆಲೆ ಭಾರತ ಪಾಕಿಸ್ತಾನ ಮತ್ತು ಪಾಶ್ಚಾತ್ಯ ರಾಷ್ಟ್ರಗಳ ಭೂಸಂಪರ್ಕಕ್ಕೆ ಮುಖ್ಯ ದ್ವಾರದಂತಿದೆ.
 
 ಹಳೆಯ ಮತ್ತು ಈಗಿನ ನಗರ ವಿಭಾಗಗಳು ಒಂದಾಗಿ ಸೇರಿದ್ದು ಇದು ಇಕ್ಕಟ್ಟಾದ ಮತ್ತು ಅಗಲವಾದ ರಸ್ತೆಗಳಿಂದಲೂ ಹಳೆಯ ಮತ್ತು ಆಧುನಿಕ ಕಟ್ಟಡಗಳಿಂದಲೂ ಕೂಡಿದೆ. ನಗರವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಅನೇಕ ಸ್ಮಾರಕಗಳೂ ಆಧುನಿಕ ಭವ್ಯ ಕಟ್ಟಡಗಳೂ ಉದ್ಯಾನಗಳೂ ಇಲ್ಲುಂಟು. ಆಫ್ಘಾನಿಸ್ತಾನದ ಪ್ರಮುಖ ಕೈಗಾರಿಕಾ ಕೇಂದ್ರವಾದ ಇಲ್ಲಿ ಬೆಂಕಿಕಡ್ಡಿ, ಚರ್ಮ, ಹತ್ತಿ ಮತ್ತು ಉಣ್ಣೆ ಗಿರಣಿಗಳು ಸ್ಥಾಪಿತವಾಗಿವೆ.
 
(ಡಿ.ಎನ್.ಎ.)
 
 ಅರಬರು ಕಾಬೂಲನ್ನು ಗೆದ್ದರೂ (656) ಹಲವು ಶತಮಾನಗಳವರೆಗೂ ಈ ಪ್ರದೇಶದ ಮೇಲೆ ಮಹಮ್ಮದೀಯರು ಶಾಶ್ವತ ಅಧಿಕಾರ ಪಡೆಯಲಾಗಲಿಲ್ಲ.
 
 ಬಾಬರ್ 1504ರಲ್ಲಿ ಈ ಪ್ರಾಂತ್ಯವನ್ನು ಗೆದ್ದ. 1526ರಲ್ಲಿ ಆತ ಭಾರತದ ಮೇಲೆ ಆಕ್ರಮಣ ನಡೆಸುವವರೆಗೂ ಕಾಬೂಲ್ ಅವನ ರಾಜಧಾನಿಯಾಗಿತ್ತು. ಮೊಗಲ್ ಸಾಮ್ರಾಜ್ಯದ ಕಾಲದಲ್ಲಿ ಪ್ರಾದೇಶಿಕ ರಾಜಧಾನಿಯಾಯಿತು. 1738ರಲ್ಲಿ ನಾದಿರ್ ಷಾನ ವಶವಾಯಿತು. ಅಹ್ಮದ್ ಷಾ 1747ರಲ್ಲಿ ನಾದಿರ್ ಷಾನನ್ನು ಕೊಂದು ಸ್ವತಂತ್ರ ಆಫ್ಘನ್ ರಾಜ್ಯ ಸ್ಥಾಪಿಸಿದ. 1ನೆಯ ಮತ್ತು 2ನೆಯ ಆಫ್ಘನ್ ಯುದ್ಧಗಳ ಪರಿಣಾಮವಾಗಿ ಇದು ಬ್ರಿಟಿಷರ ವಶವಾಯಿತು. 1880ರ ಅನಂತರ ಸ್ವತಂತ್ರ ಆಫ್ಘಾನಿಸ್ತಾನದ ರಾಜಧಾನಿಯಾಗಿ ಸರ್ವತೋಮುಖ ಪ್ರಗತಿ ಸಾಧಿಸಿದೆ.
 
 ಕಾಬೂಲ್ ಪ್ರಾಂತ್ಯ:  ಆಫ್ಘಾನಿಸ್ತಾನದ ಒಂದು ದೊಡ್ಡ ಪ್ರಾಂತ್ಯ. ವಿಸ್ತೀರ್ಣ 18,000 ಚ.ಮೈ. ಜನಸಂಖ್ಯೆ 16,32,300 (1962ರ ಅಂದಾಜು), ಕಾಬೂಲ್ ನಗರದ ಸುತ್ತಣ ಪ್ರದೇಶದಲ್ಲಿ ಪ್ರಧಾನವಾಗಿ ತಾಜಿಕರೂ ಪಠಾಣರೂ ವಾಸವಾಗಿದ್ದಾರೆ. ಪ್ರಾಂತ್ಯದ ಪರ್ವತಮಯವಾದ ಪಶ್ಚಿಮಾರ್ಧ ಪ್ರದೇಶದಲ್ಲಿ ಮಂಗೋಲ್ ವಂಶದ ಹಜಾರಾ ಜನರಿದ್ದಾರೆ. ಬೇಸಗೆಯಲ್ಲಿ ಪಾಕಿಸ್ತಾನ್ ಗಡಿಯ ಬಳಿಯ ಕುಚಿ ಅಲೆಮಾರಿ ಜನ ತಮ್ಮ ಕುರಿಮಂದೆಗಳನ್ನು ಇಲ್ಲಿಗೆ ಮೇವಿಗಾಗಿ ಕರೆತರುತ್ತಾರೆ.
 
 ಕಾಬೂಲ್ ಪ್ರಾಂತ್ಯದ ವಾಯುಗುಣ ಹಿತಕರ. ವಸಂತಕಾಲದಲ್ಲಿ ಗುಡುಗು ಸಿಡಿಲುಗಳಿಂದ ಕೂಡಿ ಮಳೆ ಸುರಿಯುತ್ತದೆ. ಕೃಷಿ ಮಾಡಬಹುದಾದ ಪ್ರದೇಶಗಳ ಮುಖ್ಯ ಬೆಳೆಗಳು ಗೋದಿ ಮತ್ತು ಬಾರ್ಲಿ ಹಣ್ಣುಗಳೂ ವಿಶೇಷವಾಗಿ ಬೆಳೆಯುತ್ತವೆ. ಇಲ್ಲಿಯ ಕೋಹ-ಇ-ದಾಮನ್ ಕಣಿವೆ ಅತ್ಯಂತ ಸುಂದರವಾದ್ದು. ಪ್ರಾಚೀನ ಇತಿಹಾಸದಲ್ಲಿ ಇದು ವಹಿಸಿದ್ದ ಪಾತ್ರ ಹಿರಿದು. ಇಸ್ಲಾಂ ಪೂರ್ವಕಾಲದಲ್ಲಿ ಇದು ಆಗಿನ ಸಂಸ್ಕøತಿಯ ನೆಲೆಯಾಗಿತ್ತು. ಇಲ್ಲಿ ಅನೇಕ ಪಟ್ಟಣಗಳು ಪ್ರವರ್ಧಮಾನವಾಗಿದ್ದವು.
 
 ಕಾಬೂಲಿಗೆ 25 ಮೈ. ಉತ್ತರದಲ್ಲಿ ಕಣಿವೆಯ ಪಶ್ಚಿಮ ಭಾಗದಲ್ಲಿರುವ ಸುಂದರ ಪಟ್ಟಣ ಇಸ್ತಾಲಿಫ್. ಬಾಬರ್ ಇದನ್ನು ಹೊಗಳಿದ್ದಾನೆ. ಸುಂದರವಾದ ಮಡಕೆ ಕುಡಿಕೆಗಳನ್ನೂ ಬಣ್ಣಬಣ್ಣದ ಕಂಬಳಿಗಳನ್ನೂ ಇಲ್ಲಿ ತಯಾರಿಸುತ್ತಾರೆ. ಕಾಬೂಲಿನ ಪಶ್ಚಿಮಕ್ಕೆ 16 ಮೈ. ದೂರದಲ್ಲಿ ಪಫ್‍ಮಾನ್ ಪಟ್ಟಣವಿದೆ. ಇದು ಬೇಸಗೆಯ ವಿಶ್ರಾಂತಿಧಾಮ. ದೊರೆಯ ಮತ್ತು ಅನೇಕ ಶ್ರೀಮಂತರ ಬೇಸಗೆ ಬಿಡಾರಗಳು ಇಲ್ಲಿವೆ. ಇಲ್ಲಿ ಅನೇಕ ಸುಂದರ ಉಪವನಗಳುಂಟು. ಕಾಬೂಲಿಗೂ ಈ ಪಟ್ಟಣಕ್ಕೂ ಮಧ್ಯದಲ್ಲಿ ಹರಿಯುವ ಪಫ್‍ಮಾನ್ ನದಿಗೆ ಕಟ್ಟೆ ಕಟ್ಟಿ ನಿರ್ಮಿಸಲಾಗಿರುವ ಜಲಾಶಯವೂ ಒಂದು ವಿಹಾರ ಸ್ಥಳ.
 
<nowiki>[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]</nowiki>{{ಏಷ್ಯಾ ಖಂಡದ ರಾಜಧಾನಿ ನಗರಗಳು}}
 
[[ವರ್ಗ:ಏಷ್ಯಾ ಖಂಡದ ರಾಜಧಾನಿ ನಗರಗಳು]]
"https://kn.wikipedia.org/wiki/ಕಾಬುಲ್" ಇಂದ ಪಡೆಯಲ್ಪಟ್ಟಿದೆ