ಸಾಧನಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಮುಂಬೈ → ಮುಂಬಯಿ (4) using AWB
೧೨ ನೇ ಸಾಲು:
}}
==ಜೀವನ==
ಸಾಧನಾ ೧೯೪೧ರಲ್ಲಿ ಸಿಂಧಿ ಮನೆತನದಲ್ಲಿ ಜನಿಸಿದರು. ಪ್ರಸಿದ್ಧ ಚಿತ್ರನಟಿ ಬಬಿತಾ ಅವರ ತಂದೆ ಹರಿ ಶಿವದಾಸಾನಿ ಅವರು ಸಾಧನಾ ಅವರ ಚಿಕ್ಕಪ್ಪ. ಭಾರತದ ವಿಭಜನೆಯಾದಾಗ ಇವರ ಕುಟುಂಬ ಕರಾಚಿಯಿಂದ ವಲಸೆ ಬಂದು ಮುಂಬಯಿಯಲ್ಲಿ ನೆಲೆಸಿತು. ಮುಂಬಯಿನ ಆಕ್ಸಿಲಿಯಮ್ [[ಕಾನ್ವೆಂಟ್]] ಮತ್ತು ಜೈಹಿಂದ್ ಕಾಲೇಜಿನಲ್ಲಿ ಸಾಧನಾ ತಮ್ಮ ಶಿಕ್ಷಣ ಪೂರೈಸಿದರು. ತಂದೆಯ ಸಹಾಯದಿಂದ ಅವರು ಚಲನಚಿತ್ರರಂಗವನ್ನು ಪ್ರವೇಶಿಸಿದರು. ರಾಜಕಪೂರ್ ಅವರ ಶ್ರೀ ೪೨೦ ಎಂಬ ಚಿತ್ರದಲ್ಲಿ "ಮುಡ್ ಮುಡ್ ಕೇ ನ ದೇಖ್" ಎಂಬ ಹಾಡಿನಲ್ಲಿ ಆಕೆ ನರ್ತಕಿಯರ ಸಮೂಹದಲ್ಲಿ ಒಬ್ಬರಾಗಿ ಕಾಣಿಸಿಕೊಂಡರು. ಮುಂದೆ ಇದೇ ನಟಿ ಹಿಂದಿ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದ ನಾಯಕಿಯಾದರು.
"ಲವ್ ಇನ್ ಶಿಮ್ಲಾ" ಚಿತ್ರದ ಸಹಾಯಕ ನಿರ್ದೇಶಕರಾದ ಆರ್.ಕೆ. ನಯ್ಯರ್ ಅವರನ್ನು ಸಾಧನಾ ಮದುವೆಯಾದರು. ಅವರಿಗೆ ಮಕ್ಕಳಿರಲಿಲ್ಲ. ಥೈರಾಯ್ಡ್ ಗ್ರಂಥಿಯ ತೊಂದರೆಯಿಂದ ಅವರ ಕಣ್ಣಿನಲ್ಲಿ ದೋಷ ಕಾಣಿಸಿಕೊಂಡಿತು. ಒಂದು ಕಾಲದಲ್ಲಿ ಅತ್ಯಂತ ರೂಪಸಿ ಎಂದು ಹೆಸರಾಗಿದ್ದ ಸಾಧನಾ ಈಗ ತಮ್ಮ ಛಾಯಾಚಿತ್ರ ತೆಗೆಸಲು ನಿರಾಕರಿಸುತ್ತಿದ್ದರು.
೨೫ ಡಿಸೆಂಬರ್ ೨೦೧೫ರಂದು ಆಕೆ ಮುಂಬಯಿ ನಗರದಲ್ಲಿ ತಮ್ಮ ೭೪ನೇ ವಯಸ್ಸಿನಲ್ಲಿ ದೀರ್ಘ ಕಾಲದ ಅನಾರೋಗ್ಯದ ನಂತರ ತೀರಿಕೊಂಡರು.
"https://kn.wikipedia.org/wiki/ಸಾಧನಾ" ಇಂದ ಪಡೆಯಲ್ಪಟ್ಟಿದೆ