ಚಿ.ಉದಯಶಂಕರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಮಾಹಿತಿ ಸೇರ್ಪಡೆ ಮತ್ತು ಪರಿವಿಡಿ ತಯಾರಿ
(ಮಾಹಿತಿ ಸೇರ್ಪಡೆ ಮತ್ತು ಪರಿವಿಡಿ ತಯಾರಿ)
'''ಚಿ. ಉದಯಶಂಕರ್''' ಕನ್ನಡದ ಜನಪ್ರಿಯ ಚಿತ್ರಸಾಹಿತಿಗಳಲ್ಲೊಬ್ಬರು. ಇವರು ಕನ್ನಡದ ಚಿತ್ರಸಾಹಿತಿಯಾಗಿದ್ದ [[ಚಿ.ಸದಾಶಿವಯ್ಯ]]ನವರ ಪುತ್ರ.
"ಸಂತ ತುಕಾರಾಂ" ಉದಯಶಂಕರ್ ಸಾಹಿತ್ಯ ನೀಡಿದ ಮೊದಲ ಚಿತ್ರ.ಚಿ.ಉದಯಶಂಕರ್ ಅವರ ಸಾಹಿತ್ಯ ಸರಳವಾದುದ್ದು ಎಂದೇ ವಿಮರ್ಶಕರ ಅಭಿಪ್ರಾಯ.[[ಕಸ್ತೂರಿ ನಿವಾಸ]] ಚಿತ್ರದ ಇವರ ರಚನೆಯಲ್ಲಿರುವ 'ಆಡಿಸಿನೋಡು ಬೀಳಿಸಿ ನೋಡು ಉರುಳಿ ಹೋಗದು' ಗೀತೆ, ಕನ್ನಡಿಗರಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದೆ.[[ಆಪರೇಷನ್ ಡೈಮಂಡ್ ರ್ಯಾಕೆಟ್]] ಚಿತ್ರದಲ್ಲಿನ [[ಡಾ. ರಾಜ್‌ಕುಮಾರ್]] ಗಾಯನದಲ್ಲಿರುವ "If you come today, its too early" ಎನ್ನುವ ವಿಭಿನ್ನ ಗೀತೆಯನ್ನು ರಚಿಸಿದವರು ಚಿ.ಉದಯಶಂಕರ್. ಈ ಹಾಡಿನ ಸಂಪೂರ್ಣ ಸಾಹಿತ್ಯ, ಆಂಗ್ಲಭಾಷೆಯಲ್ಲಿರುವುದು ಒಂದು ವಿಶೇಷ.ಶಿವಾಜಿ ಗಣೇಶನ್ ಇವರನ್ನು ಕನ್ನಡದ "ಕಣ್ಣದಾಸನ್"(ಕಣ್ಣದಾಸನ್ ತಮಿಳಿನ ಪ್ರಸಿದ್ಧ ಚಿತ್ರ ಸಾಹಿತಿ) ಎಂದು ಅಭಿಮಾನ ಪಟ್ಟು ಕರೆದಿದ್ದಾರೆ.ಆದರೊ ಇವರಿಗೆ ಗೀತ ರಚನೆಗೆ ಒಂದು ಸಲವೂ ರಾಜ್ಯಪ್ರಶಸ್ತಿ ದೊರಕಲಿಲ್ಲ. [[ಭಾಗ್ಯದ ಲಕ್ಷ್ಮಿ ಬಾರಮ್ಮ]] ಮತ್ತು [[ಆನಂದ್]] ಚಿತ್ರಗಳ ಚಿತ್ರಕಥೆಗೆ ಇವರಿಗೆ ರಾಜ್ಯ ಪ್ರಶಸ್ತಿ ದೊರಕಿದೆ.<ref>[http://www.kannadaprabha.com/supplements/art-literature/ಸಾಹಿತ್ಯೋದಯ/176406.html ಸರಳ ಗೀತೆಗಳಲ್ಲೆ ಮನಗೆದ್ದ ಸಾಹಿತಿ]</ref>.ಚಿ. ಉದಯಶಂಕರ್ ಕೆಲವು ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.ಡಾ.ರಾಜ್ ಕುಮಾರ್ ಅವರಿಗಾಗಿ ೪೦೦ಕ್ಕೂ ಮಿಕ್ಕಿ ಗೀತೆಗಳನ್ನು ರಚಿಸಿದ್ದಾರೆ,ಚಿತ್ರ ಸಾಹಿತಿಯಾಗಿ ಇವರು ೪೦೦೦ಕ್ಕೂ ಮಿಕ್ಕಿ ಗೀತೆಗಳನ್ನೂ ರಚಿಸಿ ಗಿನ್ನೀಸ್ ದಾಖಲೆ ಮಾಡಿದ್ದಾರೆ.ಇವರು ಕಾರ್ಯನಿರ್ವಹಿಸಿದ ಕಡೆಯ ಚಿತ್ರ [[ಒಡಹುಟ್ಟಿದವರು]].ನಮನ.<ref>[https://www.google.co.in/amp/m.vijaykarnataka.com/entertainment/gossip/-/amp_articleshow/46245098.cms?client=ms-opera-mobile&espv=1 ಚಿರಕಾಲ ಉಳಿಯುವ ಹೆಸರು- ಚಿ.ಉದಯಶಂಕರ್]</ref>.
== ಬದುಕು ==
ಉದಯಶಂಕರ್ ಶಾರದಮ್ಮ ಅವರನ್ನು ಮದುವೆ ಆಗಿದ್ದರು. ಶಾರದಮ್ಮ ಮತ್ತು ಉದಯ್ಶಂಕರ್ ದಂಪತಿಗೆ ಮೂರುಜನ ಮಕ್ಕಳಿದ್ದಾರೆ. ಉದಯ್ಶಂಕರ್ ಮಗ ಗುರುದತ್ ಕೂಡ ನಟ, ನಿರ್ಮಾಪಕ ಮತ್ತು ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ .
ಕನ್ನಡ ಚಿತ್ರರಂಗಕ್ಕೆ ಮೇರು ಕೊಡುಗೆ ಸಲ್ಲಿಸಿದ್ದ ಉದಯಶಂಕರ್ 3 ಜುಲೈ 1993 ರಲ್ಲಿ ನಿಧನ ಹೊಂದಿದರು.
 
== ಸಾಧನೆ ==
ಉದಯಶಂಕರ್ ಕನ್ನಡದ 3000ಕ್ಕೂ ಅಧಿಕ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದರು. ಆರಂಭದಲ್ಲಿ ಉದಯಶಂಕರ್ ಎಲ್ಲರಂತೆ ಅಸ್ಥಿತ್ವಕ್ಕಾಗಿ ಪರದಾಡಿದ್ದರು. ಆದ್ರೆ ವರನಟ ಡಾ. ರಾಜ್ಕುಮಾರ್ ಚಿತ್ರವೊಂದು ಉದಯಶಂಕರ್ಗೆ ದೊಡ್ಡ ಬ್ರೇಕ್ ಕೊಟ್ಟಿತ್ತು. ಉದಯಶಂಕರ್ ಪಾಲಿಗೆ ಸಂಜೀವಿನಿಯಾದ ಚಿತ್ರದ ಹೆಸರು ಸಂತ ತುಕಾರಾಮ.
# ಸಂತ ತುಕಾರಾಮ ಚಿತ್ರ 1963 ರಲ್ಲಿ ತೆರೆಕಂಡಿತ್ತು. ನಟ ಸಾರ್ವಭೌಮ ರಾಜ್ಕುಮಾರ್ ಅಭಿನಯದ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದು ಕೂಡ ಉದಯ್ಶಂಕರ್. ಇಲ್ಲಿಂದ ಮುಂದೆ ಉದಯ್ಶಂಕರ್ ಮುಟ್ಟಿದ್ದೆಲ್ಲವೂ ಚಿನ್ನವಾಗಿತ್ತು. ರಾಜ್ಕುಮಾರ್ ಅಭಿನಯದ ಹಲವು ಚಿತ್ರಗಳಿಗೆ ಸಂಭಾಷಣೆ ಹಾಗೂ ಸಾಹಿತ್ಯ ಬರೆದಿದ್ದರು. ಒಂದು ಕಾಲದಲ್ಲಿ ರಾಜ್ಕುಮಾರ್ ಮತ್ತು ಉದಯ್ ಶಂಕರ್ ಕಾಂಬಿನೇಷನ್ ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಆಗಿತ್ತು. ರಾಜ್ ಅವರ ಸುಮಾರು 88 ಚಿತ್ರಗಳಿಗೆ ಸಂಭಾಷಣೆ ಬರೆದಿದ್ದು ಕೂಡ ಚಿ. ಉದಯ್ಶಂಕರ್ ಅನ್ನೋದು ಮತ್ತೊಂದು ಅಚ್ಚರಿ. ಆರಂಭದಲ್ಲಿ ಉದಯಶಂಕರ್ ತಂದೆ ಸದಾಶಿವಯ್ಯ ಜೊತೆಗೂಡಿ ಕನ್ನಡ ಚಿತ್ರಗಳಿಗೆ ಸಾಹಿತ್ಯ ಬರೆಯುತ್ತಿದ್ದರು. ಮುಂದೆ ಒಂದೊಂದೇ ಹೆಜ್ಜೆ ಮುಂದಿಟ್ಟ ಉದಯಶಂಕರ್ ಸಂಭಾಷಣೆ ಮತ್ತು ಸಂಗೀತ ಸಂಯೋಜನೆ ಮಾಡಲು ಆರಂಭಿಸಿದ್ರು.
#ಉದಯಶಂಕರ್ ಕೇವಲ ಸಾಹಿತ್ಯ ಮತ್ತು ಸಂಭಾಷಣೆ ಬರೆಯೋದಿಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಕನ್ನಡ ಚಿತ್ರವೊಂದನ್ನು ನಿರ್ದೇಶನ ಕೂಡ ಮಾಡಿದ್ದರು. ಉದಯ್ಶಂಕರ್ ವಿಶೇಷತೆ ಅಂದ್ರೆ, ಅವರು ಬರೆದಿದ್ದ ಸಾಹಿತ್ಯ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿತ್ತು. ಸುಲಭವಾದ ಪದಗಳನ್ನು ಬಳಸಿ ಸಾಹಿತ್ಯ ಬರೆಯುತ್ತಿದ್ದರು. ಉದಯ್ಶಂಕರ್ಗೆ ಸಾಹಿತ್ಯ ರತ್ನ ಎಂಬ ಬಿರುದು ಕೂಡ ಇದೆ. ಮಹಾಸತಿ ಅನಸೂಯಾ, ಸತಿ ಸಾವಿತ್ರಿ, ಭಾಗ್ಯದ ಬಾಗಿಲು, ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮಾ , ದೇವರ ಮಕ್ಕಳು ಹೀಗೆ ಇನ್ನೂ ಮುಂತಾದ ಚಿತ್ರಗಳಿಗೆ ಸಾಹಿತ್ಯ ಮತ್ತು ಸಂಭಾಷಣೆಯನ್ನು ಉದಯ್ಶಂಕರ್ ಬರೆದಿದ್ದರು.
 
== ಪ್ರಶಸ್ತಿಗಳು ==
ಕನ್ನಡ ಚಿತ್ರರಂಗಕ್ಕೆ ಉದಯ್ಶಂಕರ್ ನೀಡಿದ ಕೊಡುಗೆಗೆ ಹಲವು ಪ್ರಶಸ್ತಿಗಳು ಕೂಡ ದೊರಕಿವೆ.
ಉದಯ್ಶಂಕರ್ ಸಂಭಾಷಣೆ ಬರೆದಿದ್ದ ಕುಲಗೌರವ, ನಾಗರಹಾವು , ಜೀವನ ಚೈತ್ರ ಮತ್ತು ಪ್ರೇಮದ ಕಾಣಿಕೆ ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ದೊರಕಿದೆ. ಭಾಗ್ಯದ ಲಕ್ಷ್ಮಿ ಬಾರಮ್ಮ ಮತ್ತು ಆನಂದ್ ಚಿತ್ರಗಳಿಗೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಗೌರವವೂ ಲಭಿಸಿತ್ತು .
 
 
== ಚಿತ್ರಗಳು ==
(ಇದು ಉದಯಶಂಕರ್ ಅವರ ಕಥೆ,ಚಿತ್ರಕಥೆ,ಸಂಭಾಷಣೆ,ಸಾಹಿತ್ಯ ಇರುವ ಎಲ್ಲಾ ಚಿತ್ರಗಳ ಪಟ್ಟಿ) <ref>{{cite web|url=http://kannadamoviesinfo.wordpress.com|title= '''chi-udayashankar-movies'''accessdate 08 December 2016|publisher=kannadamoviesinfo.wordpress.com}}</ref>
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/817257" ಇಂದ ಪಡೆಯಲ್ಪಟ್ಟಿದೆ