ಕಮ್ಯೂನಿಸಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
2405:204:5483:F427:8D1:AB44:752:A047 (talk) ರ 704995 ಪರಿಷ್ಕರಣೆಯನ್ನು ವಜಾ ಮಾಡಿ
ಚುNo edit summary
೧ ನೇ ಸಾಲು:
'''ಕಮ್ಯೂನಿಸಂ''' : ಎಲ್ಲ ಸ್ವತ್ತೂ ಸಮುದಾಯಕ್ಕೆ ಸೇರಿದುದೆಂದೂ ಪ್ರತಿಯೊಬ್ಬ ವ್ಯಕ್ತಿಯೂ ಶಕ್ತ್ಯನುಸಾರವಾಗಿ ದುಡಿದು ಆವಶ್ಯಕತೆಗೆ ಅನುಸಾರವಾಗಿ ಪ್ರತಿಫಲ ಪಡೆಯಬೇಕೆಂದೂ ಪ್ರತಿಪಾದಿಸುವ ತತ್ತ್ವ (ಸಾಮ್ಯವಾದ).[[ಕಾರ್ಲ್ ಮಾರ್ಕ್ಸ್|ಮಾರ್ಕ್ಸ್]] ಮತ್ತು [[ಫ್ರೆಡರಿಕ್ಫ್ರೆಡ್ರಿಕ್ ಎಂಗಲ್ಸ್ಎಂಗೆಲ್ಸ್| ಎಂಗೆಲ್ಸ್‌]] ರಿಂದ ಪ್ರಪ್ರಥಮವಾಗಿ ಶಾಸ್ತ್ರೀಯವಾಗಿ ಪ್ರತಿಪಾದಿತವಾದ ಈ ತತ್ತ್ವಕ್ಕೆ ವೈಜ್ಞಾನಿಕ ಸಮಾಜವಾದವೆಂದೂ ಹೆಸರಿದೆ.
==ಆರಂಭಿಕ ಕಮ್ಯೂನಿಸಂ==
19ನೆಯ ಶತಮಾನದ ಪುರ್ವಾರ್ಧದ ಹೊತ್ತಿಗೆ ಜನರಿಗೆ [[ಸಮಾಜವಾದ]]ವೆಂಬ ಹೆಸರೂ ಅದರ ಸ್ವರೂಪವೂ ಪರಿಚಯವಾಗಿದ್ದುವು. ಆದರೂ[[ಕಾರ್ಲ್ ಮಾರ್ಕ್ಸ್|ಮಾರ್ಕ್ಸ್]] ಮತ್ತು ಎಂಗೆಲ್ಸ್‌ರು ಸಮಾಜವಾದವನ್ನು ಸಮಾಜವಾದವೆಂದೇ ಕರೆಯದೆ ಕಮ್ಯೂನಿಸಂ ಎಂದು ಕರೆದುದಕ್ಕೆ ಕಾರಣವೂ ಇತ್ತು. 1848ರಲ್ಲಿ ಪ್ರಕಟಿಸಿದ ಕಮ್ಯೂನಿಸ್ಟ್‌ ಪ್ರಣಾಳಿಕೆಯ ಇಂಗ್ಲಿಷ್ ಆವೃತ್ತಿಗೆ 1888ರಲ್ಲಿ ಎಂಗೆಲ್ಸ್‌ ಬರೆದ ಮುನ್ನುಡಿಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾನೆ;''ನಾವು ಇದನ್ನು ಸಮಾಜವಾದಿಗಳ ಪ್ರಣಾಳಿಕೆ ಎಂದು ಕರೆಯಲು ಸಾಧ್ಯವಿರಲಿಲ್ಲ. 1847ರ ಹೊತ್ತಿಗೆ ಒಂದು ಕಡೆ ಸಮಾಜವಾದಿಗಳೆಂದು ಹೇಳಿಕೊಳ್ಳುವ ಭಾವನಾವಾದಿಗಳ ಗುಂಪಿಗೆ ಸೇರಿದ ತಂಡಗಳಿದ್ದುವು-ಇಂಗ್ಲೆಂಡಿನ ಓವೆನ್ನ ಹಿಂಬಾಲಕರೂ [[ಫ್ರಾನ್ಸ್|ಫ್ರಾನ್ಸಿನ]] ಫೂರ್ಯೇನ ಹಿಂಬಾಲಕರೂ ಇಂಥವರು. ಈ ಎರಡು ತಂಡಗಳೂ ಆಗಲೇ ಕೇವಲ ಬೋಧಕ ಗುಂಪುಗಳಾಗಿ ಕ್ಷೀಣಿಸುತ್ತ ಕೊನೆಯುಸಿರು ಎಳೆಯುತ್ತ ಇದ್ದುವು. ಇನ್ನೊಂದು ಕಡೆ ಕಾರ್ಮಿಕ ವರ್ಗದೊಡನೆ ಯಾವ ಸಂಪರ್ಕವೂ ಇಲ್ಲದಿದ್ದ, ಬಂಡವಾಳಕ್ಕಾಗಲೀ ಲಾಭಕ್ಕಾಗಲೀ ಯಾವ ಚ್ಯುತಿಯೂ ಇಲ್ಲದ ರೀತಿಯಲ್ಲಿ ಸಮಾಜದ ಕುಂದುಕೊರತೆಗಳನ್ನು ವಿದ್ಯಾವಂತರ ಬೆಂಬಲದಿಂದ ಗುಣಪಡಿಸಬಲ್ಲೆವೆಂದು ಹೇಳುತ್ತಿದ್ದ ಹಲವು ಬಗೆಯ ಸಮಾಜ ಸುಧಾರಕರ ವೇಷಧಾರಿ ಗುಂಪುಗಳಿದ್ದವು. ಆದರೆ ಕೇವಲ ರಾಜಕೀಯ ಕ್ರಾಂತಿಯ ಮಿತಿಯನ್ನು ಅರಿತಿದ್ದ ಮತ್ತು ಸಂಪುರ್ಣವಾಗಿ ಸಮಾಜದ ಬದಲಾವಣೆಯ ಆವಶ್ಯಕತೆಯನ್ನು ಘೋಷಿಸಿದ್ದ ಕಾರ್ಮಿಕ ವರ್ಗದ ಕೆಲವರು ಮಾತ್ರ ಕಮ್ಯೂನಿಸ್ಟ್‌ ಎಂದು ಕರೆದುಕೊಂಡಿದ್ದರು. ನೋಡುವುದಕ್ಕೆ ಇದು ಒರಟಾದ, ಸೂಕ್ಷ್ಮವಲ್ಲದ, ಸುಲಭ ಸಹಜವೇದ್ಯವೆನಿಸುವಂಥ ಕಮ್ಯೂನಿಸ್ಟ್‌ ಪಂಥ. ಆದರೂ ಇದು ಮುಖ್ಯ ವಿಷಯಗಳನ್ನು ಪ್ರಸ್ತಾಪಿಸಿದ್ದಲ್ಲದೆ, ಕಾರ್ಮಿಕ ವರ್ಗದಲ್ಲಿ ಪ್ರವೇಶಿಸಿ, ಫ್ರಾನ್ಸಿನಲ್ಲಿ ಕ್ಯಾಬೇ, [[ಜರ್ಮನಿ]]ಯಲ್ಲಿ ವೈಟಿಲಿಂಗ್ ಮೊದಲಾದವರ ಭಾವನಾಸಮಾಜವಾದಕ್ಕೆ ದಾರಿಮಾಡಿತ್ತು. ಹೀಗಾಗಿ 1847ರ ಹೊತ್ತಿಗೆ ಸಮಾಜವಾದ ಮಧ್ಯಮವರ್ಗದ ಚಳವಳಿಯಾಯಿತು. ಕಮ್ಯೂನಿಸಂ ಕಾರ್ಮಿಕ ವರ್ಗದ ಚಳವಳಿ; ವಾಸ್ತವವಾಗಿ [[ಯುರೋಪ್ ಖಂಡ]]ದಲ್ಲಿ ಸಮಾಜವಾದ ಸ್ವಲ್ಪಮಟ್ಟಿಗಾದರೂ ಸಂಭಾವಿತ ಚಳವಳಿಯಾಗಿದ್ದರೆ, ಕಮ್ಯೂನಿಸಂ ಮಾತ್ರ ಇದಕ್ಕೆ ಪ್ರತಿಯಾಗಿತ್ತು. ಕಾರ್ಮಿಕ ವರ್ಗದ ವಿಮೋಚನೆ ಕಾರ್ಮಿಕ ವರ್ಗದವರಿಂದ ಮಾತ್ರವೇ ಸಾದ್ಯ ಎಂಬುದೇ ಮೊದಲಿನಿಂದಲೂ ನಮ್ಮ ನಂಬಿಕೆಯಾಗಿತ್ತು. ಆದ್ದರಿಂದ ಈ ಎರಡು ಹೆಸರುಗಳಲ್ಲಿ ಯಾವುದನ್ನು ನಾವು ಅಂಗೀಕರಿಸಬೇಕೆನ್ನುವುದರಲ್ಲಿ ಸಂದೇಹವೇ ಇರಲಿಲ್ಲ; ಅದೂ ಅಲ್ಲದೆ, ಇದನ್ನು ನಿರಾಕರಿಸುವುದಕ್ಕೂ ನಾವು ಇಚ್ಛಿಸಲಿಲ್ಲ.''
"https://kn.wikipedia.org/wiki/ಕಮ್ಯೂನಿಸಮ್" ಇಂದ ಪಡೆಯಲ್ಪಟ್ಟಿದೆ