ಚಿತ್ರದುರ್ಗ ಜಿಲ್ಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಪುಟ ಸಂಯೋಜನೆ (via JWB)
೭೨ ನೇ ಸಾಲು:
[[ವಿಜಯನಗರ | ವಿಜಯನಗರದ]] ಕಾಲದಲ್ಲಿ ತಿಮ್ಮಣ್ಣ ನಾಯಕನೆಂಬ ಸೇನಾಪತಿಗೆ ತನ್ನ ಪರಾಕ್ರಮಕ್ಕೆ ಮೆಚ್ಚಿದ ವಿಜಯನಗರದ ಚಕ್ರಾಧಿಪತ್ಯದಿಂದ ಚಿತ್ರದುರ್ಗಕ್ಕೆ ರಾಜ್ಯಪಾಲನಾಗಿ ಬಳುವಳಿ ದೊರೆಯಿತಂತೆ. ಇವನ ಮಗ ಓಬಣ್ಣ ಅಥವಾ [[ಮದಕರಿ ನಾಯಕ]]. ಮದಕರಿ ನಾಯಕನ ಮಗ ಕಸ್ತೂರಿ ರಂಗಪ್ಪ ಇವನ ಆಳ್ವಿಕೆಯನ್ನು ಶಾಂತಿಯಿಂದ ಮುಂದುವರೆಸಿದನು. ಇವನಿಗೆ ಮಕ್ಕಳಿರಲಿಲ್ಲವಾದ್ದರಿಂದ ದತ್ತು ತೆಗೆದುಕೊಂಡನಂತೆ. ಆದರೆ ದಳವಾಯಿಗಳು ಮಗುವನ್ನು ಕೊಲ್ಲಿಸಿದರಂತೆ. ಚಿಕ್ಕಣ್ಣ ನಾಯಕ - ಮದಕರಿ ನಾಯಕನ ತಮ್ಮ ೧೬೭೬ರಲ್ಲಿ ಗದ್ದುಗೆ ಏರಿದನಂತೆ. ಇದರ ಬಳಿಕ ಬಹಳಷ್ಟು ಮಂದಿ ಗದ್ದುಗೆ ಏರಿ ಇಳಿದರಾದರೂ ಹೇಳಿಕೊಳ್ಳುವಂತಹ ರಾಜ್ಯಭಾರ ಯಾವುದೂ ಇರಲಿಲ್ಲವೆಂದು ಸಾಧಾರಣ ಅಭಿಪ್ರಾಯ.
 
'''[[ಇಸಿಲ]]''' - ಇದು ಚಿತ್ರದುರ್ಗದ ಈಶಾನ್ಯ ದಿಕ್ಕಿಗಿರುವ ಬ್ರಹ್ಮಗಿರಿಗೆ ಹೊಂದಿಕೊಂಡಿದೆ. ಅಶೋಕನ ಕಾಲದಲ್ಲಿ ಪ್ರಾಂತೀಯ ರಾಜಧಾನಿಯಾಗಿತ್ತು. ಆ ಕಾಲದಲ್ಲಿ ಇಟ್ಟಿಗೆಯಲ್ಲಿ ನಿರ್ಮಿಸಿದ ಚೈತ್ಯಾಲಯವೊಂದು ಇಲ್ಲಿದೆ. ಅಶೋಕನ ಶಾಸನದಲ್ಲಿ ಇಸಿಲ ಎಂಬ ಶಬ್ಧ ದೊರಕುತ್ತದೆ.
 
'''ಸಿದ್ಧಾಪುರ''' ಇಲ್ಲಿ ಅಶೋಕನ ಶಾಸನ ದೊರಕಿದೆ.