ಇರಾಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಕೀಕರಣ
ಚುNo edit summary
೭೩ ನೇ ಸಾಲು:
 
== ಭೂ ಇತಿಹಾಸ ==
ಪೂರ್ವ, ಪಶ್ಚಿಮ ಮತ್ತು ಉತ್ತರ ದಿಕ್ಕುಗಳಲ್ಲಿರುವ ಗುಡ್ಡ ಪ್ರದೇಶಗಳಿಂದ ಸುತ್ತುವರಿದಿರುವ ತಗ್ಗು ಪ್ರದೇಶವೇ ಇರಾಕ್, ಆಗ್ನೇಯ ದಿಕ್ಕಿನತ್ತ ಇದು ಮುಂದುವರಿದು ಪರ್ಷಿಯನ್ ಕೊಲ್ಲಿ ಎನಿಸಿಕೊಳ್ಳುತ್ತದೆ. ಇರಾಕ್ ಅಸ್ಥಿರ ಭೂಭಾಗವಾಗಿದ್ದು ಕೊಂಚಮಟ್ಟಿಗೆ ಭೂ ಕುಸಿತಕ್ಕೂ ಒಳಗಾಗಿದೆ. ಇಲ್ಲಿ ವಯಸ್ಸಿನಲ್ಲಿ ಕಿರಿಯದಾದ ಜಲಜಶಿಲಾಪ್ರಸ್ತರಗಳಿವೆ. ಪಶ್ಚಿಮದತ್ತ ಅತಿ ಪುರಾತನ ಮತ್ತು ಗಡುಸಾದ ಶಿಲೆಗಳಿಂದ ಕೂಡಿದ ಸಿರಿಯ-ಅರೇಬಿಯ ಭೂಪ್ರದೇಶವೂ ಪೂರ್ವ ಮತ್ತು ಉತ್ತರದ ಕಡೆಗೆ ತೀವ್ರ ಮಡಿಕೆ ಬಿದ್ದಿರುವ ಮತ್ತು ಉನ್ನತವಾಗಿರುವ ಜಾಗ್ರೋಸ್ ಮತ್ತು ಆನತೋಲಿಯನ್ ಪರ್ವತ ಪಂಕ್ತಿಗಳೂ ಇವೆ. ಈ ಪರ್ವತಗಳೂ ಕಿರಿಯ ವಯಸ್ಸಿನ ಶಿಲಾಶ್ರೇಣಿಗಳಿಂದಾದುವು. eóÁಗ್ರೋಸಿನವು ಬಹು ವಿಸ್ತಾರವಾದ ಮೇಲ್ಮಡಿಕೆಗಳು. ಇವು ಕಡಿದಾದ ಬೆಟ್ಟಗಳೋಪಾದಿಯಲ್ಲಿದ್ದು ವಾಯವ್ಯ-ಆಗ್ನೇಯ ಜಾಡಿನಲ್ಲಿ ಹಬ್ಬಿವೆ. ಅಲ್ಲದೆ ಮಟ್ಟಸವಾದ ನದೀ ಮೆಕ್ಕಲಿನ ಬಯಲುಪ್ರದೇಶದಿಂದ ಧಿಡೀರನೆ ಎದ್ದುನಿಂತು ಗಂಭೀರವಾಗಿ ತೋರುತ್ತವೆ. ಇರಾಕ್-ಇರಾನ್ ಗಡಿ ಈ ಜಾಡನ್ನನುಸರಿಸಿ ಸುಮಾರು 250 ಮೈ. ಉದ್ದಕ್ಕೂ ಹಬ್ಬಿದೆ. ಇನ್ನೂ ದಕ್ಷಿಣಕ್ಕೆ ಕಡಿದಾದ ಬೆಟ್ಟಗಳಿಂದ ಕೂಡಿದ ಪ್ರದೇಶವಿದೆ. ವಾಯುವ್ಯ-ಪಶ್ಚಿಮ ದಿಕ್ಕುಗಳಲ್ಲಿ ನೆಲಭಾಗ ಕ್ರಮೇಣ ಸಮುದ್ರಮಟ್ಟದಿಂದ ಎತ್ತರವಾಗುತ್ತ ಸಿರಿಯ-ಅರೇಬಿಯ ಪ್ರಸ್ಥಭೂಮಿಯಲ್ಲಿ ಪರ್ಯವಸಾನಗೊಳ್ಳುತ್ತದೆ. ಇಲ್ಲಿ ಮುಖ್ಯವಾಗಿ ಆರ್ಕೀಯನ್ ಯುಗದ ಗ್ರ್ಯಾನೈಟುಗಳಿವೆ. ಇವುಗಳ ಮೇಲೆ ಜೂರಾಸಿಕ್, ಕ್ರಿಟೇಷಸ್, ಇಯೋಸೀನ್ ಮತ್ತು ಮಯೊಸೀನ್ ಯುಗಗಳ ಜಲಜ ಶಿಲಾಪ್ರಸ್ತರಗಳು ನಿಕ್ಷೇಪಗೊಂಡಿವೆ. ಈ ಪ್ರಸ್ತರಗಳು ಮಟ್ಟಸವಾಗಿರದೆ ಕೊಂಚ ಮಟ್ಟಿಗೆ ವಾಲಿವೆ. ಅನೇಕ ಕಡೆ ಭೂಸವೆತಕ್ಕೊಳಗಾಗಿ ಸಣ್ಣಪುಟ್ಟ ವೈಲಕ್ಷಣ್ಯಗಳು ಮೈದೋರಿವೆ. ಯೂಫ್ರೆಟಿಸ್ ಕಣಿವೆಯ ಪಶ್ಚಿಮದ ಅಂಚಿನಲ್ಲಿ ಎದ್ದು ಕಾಣುವ ಕಡಿದಾದ ಬೆಟ್ಟವಿದೆ. ದೇಶಭಾಷೆಯಲ್ಲಿ ಇದಕ್ಕೆ ಇರಾಕ್ ಎಂದು ಹೆಸರು. ಬಹುಶಃ ಈ ಹೆಸರೇ ಇಡೀ ದೇಶಕ್ಕೆ ಅನ್ವಯವಾಗಿದೆ. ವಾಯುವ್ಯ ದಿಕ್ಕಿನಲ್ಲಿರುವ ಶಿಲಾ ಪ್ರಸ್ಥರಗಳಲ್ಲಿ ಅನೇಕ ಸಣ್ಣಪುಟ್ಟ ಮಡಿಕೆಗಳಿದ್ದು ಇವು ಬಹುಮಟ್ಟಿಗೆ ಪೂರ್ವ-ಪಶ್ಚಿಮ ಜಾಡಿನಲ್ಲಿ ಬೆಟ್ಟದ ಸಾಲುಗಳಂತೆ ತೋರಿಬರುತ್ತವೆ. ಈ ಸಾಲುಗಳಲ್ಲಿ ಮುಖ್ಯವಾದುದು ಮೊಸುಲ್ ಬಳಿ ಇರುವ ಜಿಬಲ್ ಸಿಂಜಾರ್.
 
== ಸಂವಿಧಾನ ಮತ್ತು ಆಡಳಿತ ==
ಇರಾಕ್ ಬಹುಕಾಲ ಆಟೋಮನ್ ಸಾಮ್ರಾಜ್ಯದ ಆಶ್ರಿತ ರಾಜ್ಯವಾಗಿತ್ತು. ತುರ್ಕಿಯ ಆಡಳಿತ ಇದರ ಜನಜೀವನದ ಮೇಲೆ ಪ್ರಭಾವ ಬೀರಿದ್ದು ಕಂಡುಬರುತ್ತದೆ. ಪ್ರಥಮ ಮಹಾಯುದ್ಧ ಮತ್ತು ಬ್ರಿಟಿಷ್ ಸೈನ್ಯಾಡಳಿತದ ಅನಂತರ 1921ರಲ್ಲಿ ಇಲ್ಲಿ ಘಟನಾತ್ಮಕ ಅರಸೊತ್ತಿಗೆ ಸ್ಥಾಪಿತವಾಯಿತು. ಹಷೆಮೈಟ್ ದೊರೆ ಫೈಸಲ್ ಮೊದಲನೆಯಮ. 1924ರಲ್ಲಿ ಈ ದೇಶದ ಸಂವಿಧಾನ ಪರಿಷ್ಕøತವಾಯಿತು. ಇರಾಕಿನ ಸಾರ್ವಭೌಮತ್ವಕ್ಕೆ ಧಕ್ಕೆ ಬರದಂತೆ ಗ್ರೇಟ್ ಬ್ರಿಟನ್ ಸಲಹೆ ನೀಡುವ ಬಗ್ಗೆ 1930ರಲ್ಲಿ ಒಂದು ಒಪ್ಪಂದವಾಯಿತು. 1932ರಲ್ಲಿ ರಾಷ್ಟ್ರಕೂಟಕ್ಕೆ (ಲೀಗ್ ಆಫ್ ನೇಷನ್ಸ್) ಇರಾಕ್ ಪ್ರವೇಶ ಪಡೆಯಿತು. ಅದೇ ವರ್ಷ ಅದು ಸ್ವತಂತ್ರ ಸಾರ್ವಭೌಮ ರಾಷ್ಟ್ರವಾಯಿತು. 1933ರಲ್ಲಿ ಫೈಸಲ್ ಕಾಲವಾದ. ಆಗ ಅಲ್ಲಿ ಸಿಂಹಾಸನಕ್ಕಾಗಿ ಜಗಳವಾಯಿತು. ಕಿರಿಯ ಮಗ ಅಬ್ದುಲ್ಲ ತನ್ನ ಸೋದರಳಿಯನ ರಾಜ ಪ್ರತಿನಿಧಿಯಾಗಿ ಆಡಳಿತ ನಿರ್ವಹಿಸಿದ. ಮುಂದೆ ಆ ಸೋದರಳಿಯನೇ ಫೈಸಲ್ II ಎಂಬ ಅಭಿದಾನದಿಂದ ರಾಜ್ಯವಾಳಿದ. ಈ ಅವಧಿಯಲ್ಲಿ ರಾಜಕೀಯ ಜೀವನದಲ್ಲಿ ಸೈನ್ಯದ ಪ್ರಭಾವ ಹೆಚ್ಚತೊಡಗಿತು. ಅಲ್ಲಿ ಹೆಸರಿಗೆ ಮಾತ್ರ ಪ್ರಜಾಪ್ರಭುತ್ವವಿತ್ತು. ನಿಜವಾದ ಅಧಿಕಾರ ಕೆಲವೇ ಜನ ಧಾರ್ಮಿಕ ಮುಖಂಡರ ಮತ್ತು ಅಧಿಕಾರಿಗಳ ಕೈಯಲ್ಲಿತ್ತು. 1948ರಲ್ಲಿ ಬ್ರಿಟನ್ನಿನೊಂದಿಗೆ ಪರಸ್ಪರ ಸಹಾಯದ ಒಪ್ಪಂದವಾಯಿತು. ಆದರೆ ಇದಕ್ಕೆ ಜನರಿಂದ ವಿರೋಧ ವ್ಯಕ್ತವಾದದ್ದರಿಂದ ಈ ಒಪ್ಪಂದವನ್ನು ಕೈಬಿಡಲಾಯಿತು. 1958ರಲ್ಲಿ ಸೈನಿಕ ಕ್ಷಪ್ರಕ್ರಾಂತಿಗೆ ಎಡೆಮಾಡಿಕೊಟ್ಟಿತು. ಅರಸೊತ್ತಿಗೆ ಕೊನೆಗೊಂಡಿತು. ಜನರಲ್ ಅಬ್ದುಲ್ ರಹೀಂ ರಾಸೀಮನ ಬೆಂಬಲವಿರುವ ಸೈನ್ಯದ ತುಕಡಿಗೆ ಅಧಿಕಾರ ಬಂತು. 1963ರಲ್ಲಿ ಈತನನ್ನು ಕರ್ನಲ್ ಅರಿಫ್ ಪದಚ್ಯುತಗೊಳಿಸಿದ. 1958ರಲ್ಲಿ ಇರಾಕ್ ಸ್ವತಂತ್ರ ಸಾರ್ವಭೌಮ ಇಸ್ಲಾಮೀ ಗಣರಾಜ್ಯವೆಂದು ಘೋಷಿಸಲಾಯಿತು. ಅಲ್ಲಿ ಈಗ ಸೆನೆಟ್ ಮತ್ತು ಚೇಂಬರ್ ಆಫ್ ಡೆಪ್ಯುಟೀಸ್ ಎಂಬ ಎರಡು ವಿಧಾನಸಭೆಗಳಿವೆ. ಆಡಳಿತ ದೃಷ್ಟಿಯಿಂದ ದೇಶವನ್ನು 14 ಪ್ರಾಂತ್ಯಗಳಾಗಿ (ಲಿವ್ರ) ವಿಭಾಗ ಮಾಡಲಾಗಿದೆ. ಪ್ರತಿಯೊಂದು ಲಿವ್ರದ ಆಡಳಿತವನ್ನು ಮುತಾಸರಿಫ್ ಅಥವಾ ರಾಜ್ಯಪಾಲ ನೋಡಿಕೊಳ್ಳುತ್ತಾನೆ. ಆಡಳಿತದ ಅನುಕೂಲಕ್ಕಾಗಿ ಇವನ್ನು ಮತ್ತೆ ವಿಭಾಗಿಸಲಾಗಿದೆ.
 
== ಇತಿಹಾಸ ==
ಇದನ್ನು ನೋಡಿ [[ಇರಾಕಿನ ಇತಿಹಾಸ]].
 
== ಸೈನ್ಯ ==
"https://kn.wikipedia.org/wiki/ಇರಾಕ್" ಇಂದ ಪಡೆಯಲ್ಪಟ್ಟಿದೆ