ಟೈಗ್ರಿಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೨ ನೇ ಸಾಲು:
ಟೈಗ್ರಿಸ್ ಮತ್ತು ಯುಫ್ರೇಟೀಸ್ ನದಿಗಳ ನಡುವಣ ಸ್ವಾಭಿವಿಕ ಕಣಿವೆಯಲ್ಲಿ ನಿರ್ಮಿಸಲಾಗಿರುವ ವಾದಿ ಅದ್ ತಾರ್ತರ್ ಯೋಜನೆ 1956 ರಲ್ಲಿ ಪೂರ್ಣಗೊಂಡಿತು. ಇದರಿಂದ ಪ್ರವಾಹನಿಯಂತ್ರಣ ಸಾಧ್ಯವಾಗಿದೆ. ಪ್ರತಿವರ್ಷ ಏಪ್ರಿಲ್-ಮೇ ತಿಂಗಳುಗಳಲ್ಲಿ ನದಿಯ ಪ್ರವಾಹದಿಂದ ಮೈದಾನದ ಹಲವು ಭಾಗಗಳು ಮುಳುಗಿಹೋಗುತ್ತಿದ್ದುವು. 14 ನೆಯ ಶತಮಾನದಲ್ಲಿ ನೀರಾವರಿ ವ್ಯವಸ್ಥೆ ಮುರಿದುಬಿದ್ದಂದಿನಿಂದ ನೆರೆಯ ಹಾವಳಿಯಿಂದ ಬಾಗ್ದಾದ್ ನಗರಕ್ಕೆ ಸಂಭವಿಸುತ್ತಿದ್ದ ಅಪಾಯವನ್ನು ಬೆಳೆಯ ನಾಶವನ್ನೂ ಇದರಿಂದ ತಪ್ಪಿಸಿದಂತಾಗಿದೆ.
 
== ಇತಿಹಾಸ ==
ಟೈಗ್ರಿಸ್-ಯುಫ್ರೇಟೀಸ್ó ಕಣಿವೆಯಲ್ಲಿ ಎಲ್ಲೋ ಒಂದು ಕಡೆ ಈಡನ್ ತೋಟ ಇದ್ದಿರಬೇಕೆಂದು ಬೈಬಲ್ ಕಾರರು ಭಾವಿಸಿದ್ದರಿಂದು ಪುರಾತತ್ವಜ್ಞರು ನಂಬಿದ್ದಾರೆ. ನೋವಿನ ಹಡಗಿನ ಕಥೆಯ ಘಟನೆ. ಈ ಕಣಿವೆಯ ಈಶಾನ್ಯ ಪ್ರಸ್ಥಭೂಮಿಯಲ್ಲಿ ನಡೆದಿರಬಹುದೆಂದೂ ಊಹಿಸಲಾಗಿದೆ. ಟೈಗ್ರಿಸ್-ಯುಫ್ರೇಟೀಸ್ ಕಣಿವೆಯ ದಕ್ಷಿಣಭಾಗದಲ್ಲಿ, ವಿಶ್ವದ ಅತ್ಯಂತ ಪ್ರಾಚೀನ ನಾಗರಿಕತೆಗಳು ವಿಕಸಿಸಿದುವು. ನೀರಾವರಿ ಕಾರ್ಯಗಳಿಗೆ ಟೈಗ್ರಿಸ್ ನದಿಯನ್ನು ಬಳಸಿಕೊಳ್ಳುವುದಕ್ಕಾಗಿ ಕ್ರಿ. ಪೂ. 2400 ಹೊತ್ತಿಗೇ ಸುಮೇರಿಯನರು ಒಂದು ಕಾಲುವೆಯನ್ನು ನಿರ್ಮಿಸಿದ್ದರೆಂದು ಹೇಳಲಾಗಿದೆ. ಆದಿಮ ಮಾನವ ಜನಾಂಗದ ವಸತಿಗೆ ಈ ವಲಯ ಬಹುಶಃ ಅನುಕೂಲವಾಗಿಲ್ಲದಿದ್ದುದು ಹಾಗೂ ಪೂರ್ವ ದಿಕ್ಕಿನ ಕಡೆಯಿಂದ ಸುಲಭವಾಗಿ ಇದು ಆಕ್ರಮಣಕ್ಕೆ ಪಕ್ಕಾಗುತ್ತಿದ್ದುದು ಈ ನದಿಯ ದಂಡೆಗಳಲ್ಲಿ ಪ್ರಾಚೀನ ನಗರಗಳ ಅವಶೇಷಗಳು ಕಂಡುಬಂದಿಲ್ಲದೆ ಇರುವುದಕ್ಕೆ ಕಾರಣವಾಗಿದ್ದಿರಬೇಕೆಂದು ಇತಿಹಾಸಕಾರರು ಭಾವಿಸಿದ್ದಾರೆ. ನದಿಯ ಪಾತ್ರದಲ್ಲಿ ಅಂಥ ಗಮನಾರ್ಹ ಬದಲಾವಣೆಗಳೇನೂ ಆದಂತೆ ಕಂಡುಬಂದಿಲ್ಲ, 6 ಮತ್ತು 7 ಶತಮಾನಗಳಲ್ಲಿ ಒಮ್ಮೆ ಇದು ತನ್ನ ಪಾತ್ರವನ್ನು ಬದಲಿಸತೆಂದು, ಶತ್-ಅಲ್-ಅಮರಾಹ್ ಮೂಲಕ ಹರಿಯುವುದನ್ನು ಬಿಟ್ಟು ಶತ್-ಅಲ್-ಘರ್ರಾಫ್ ಮೂಲಕ ಹರಿಯತೊಡಗಿತೆಂದು, ತಿಳಿದು ಬಂದಿದೆ. ಹೊಸ ಪಾತ್ರದ ಬದಿಯಲ್ಲಿ 703ರಲ್ಲಿ ವಾಸಿತ್ ನಗರವನ್ನು ಸ್ಥಾಪಿಸಲಾಯಿತು. ನದಿ ತನ್ನ ಹಿಂದಿನ ಪಾತ್ರದಲ್ಲಿ ಮರಳಿ ಹರಿಯುವ ವರೆಗೆ, ಸು. 15ನೆಯ ಶತಮಾನದ ವರೆಗೆ, ಇದು ಪ್ರಮುಖ ನಗರವಾಗಿತ್ತು. ನಡುವಣ ಮೈದಾನ ಪ್ರದೇಶದಲ್ಲಿ ಸು. 900ರ ವರೆಗೆ ನೀರಾವರಿ ವ್ಯವಸಾಯ ಸಾಂದ್ರವಾಗಿ ನಡೆಯುತ್ತಿತ್ತು. ಪಶ್ಚಿಮಕ್ಕಿರುವ ಯುಫ್ರೇಟೀಸ್ó ನದಿಯ ಬಹುತೇಕ ಕಾಲುವೆಗಳು ಟೈಗ್ರಿಸಿಗೇ ಬಂದು ಸೇರುತ್ತದೆ. ಹೆಲಿನಿಸ್ಟಿಕ್ ಅವಧಿಗಿಂತಲೂ ಪ್ರಾಚೀನ ಕಾಲದವೆಂದು ಹೇಳಲಾಗಿರುವ ಅನೇಕ ಕಾಲುವೆಗಳೂ ನಿವೇಶನಗಳೂ ಹೂಳಿನ ಅಡಿಯಲ್ಲಿ ಮುಚ್ಚಿಹೋಗಿವೆ. 250ರ ಹೊತ್ತಿಗೆ, ಎಂದರೆ ಸಸೇನಿಯನ್ ಅವಧಿಯಲ್ಲಿ, ಪೂರ್ವದಿಕ್ಕಿನ ಮೈದಾನಕ್ಕೆ ನೀರಾವರಿ ಸೌಲಭ್ಯ ಒದಗಿಸುವ ನಹ್ರ್ ನಹ್ರವಾನ್ ಎಂಬ ಬೃಹತ್ ಕಾಲುವೆ ನಿರ್ಮಾಣವಾಗಿತ್ತೆಂದು ಹೇಳಲಾಗಿದೆ. ಅಕೆಮಿನಿಡ್ ಸಾಮ್ರಾಜ್ಯದ ಪತನಾ ನಂತರ (ಕಿ.ಪೂ.330) ಈ ಸಂಪದ್ಭರಿತ ವಲಯ ಕ್ರಮೇಣ ಸಿಲ್ಯೂಸಿಡ್, ಪಾರ್ತಿಯನ್ ಮತ್ತು ಸಸೇನಿಯನ್ ವಂಶಗಳು ಮಸೊಪೊಟೇಮಿಯ, ಸೆಲ್ಯೂಷಿಯ ಮತ್ತು ಟೆಸಿಫಾನ್‍ಗಳ ರಾಜಕೀಯ ಹಾಗೂ ವಾಣಿಜ್ಯ ಚಟುವಟಿಕೆಗಳ ನೆಲೆಯಾಗಿತ್ತು. ಈ ನದಿಯ ಪಾತ್ರಕ್ಕೆ ಹೊಂದಿದಂತೆ ತಿಕ್ರಿತ್‍ಗೆ ಉತ್ತರದಲ್ಲಿರುವ ಪ್ರದೇಶ ಕ್ರಿ.ಪೂ. 2ನೆಯ ಸಹಸ್ರಮಾನದ ಆದಿಕಾಲದಿಂದ ಕ್ರಿ.ಪೂ.612ರ ವರೆಗೆ ಅಸ್ಸೀರಿಯ ಸಾಮ್ರಾಜ್ಯವಾಗಿತ್ತು. ಅದರ ರಾಜಧಾನಿಗಳಾಗಿದ್ದ ಆಶರ್, ನಿಮ್ರೂಡ್ ಮತ್ತು ನಿನವ ಇವು ಟೈಗ್ರಿಸ್ ನದಿಯ ದಡದಲ್ಲಿದ್ದವು.
 
"https://kn.wikipedia.org/wiki/ಟೈಗ್ರಿಸ್" ಇಂದ ಪಡೆಯಲ್ಪಟ್ಟಿದೆ