ಟೈಗ್ರಿಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಟ್ಯಾಗ್: 2017 source edit
ಚುNo edit summary
೧ ನೇ ಸಾಲು:
ಟೈಗ್ರಿಸ್
ಆಗ್ನೇಯ ತುರ್ಕಿಯಲ್ಲಿ ಹುಟ್ಟಿ [[ಇರಾಕ್|ಇರಾಕಿನ]] ಮೂಲಕ [[ಪರ್ಷಿಯನ್ ಕೊಲ್ಲಿ]]ಯತ್ತ ಹರಿಯುವ ಒಂದು ನದಿ. ಯಮಳ ನದಿಗಳಲ್ಲಿ ಒಂದು (ಇನ್ನೊಂದು ನದಿ [[ಯೂಫ್ರೆಟೀಸ್|ಯುಫ್ರೇಟೀಸ್]]). ಉದ್ದ ಸುಮಾರು 1.150 ಮೈ. [[ಬೈಬಲ್|ಬೈಬಲಿನಲ್ಲಿ]] ಹಿದ್ದೆಕಿ ಅಥವಾ ಹಿದ್ದೆಕಲ್ ಎಂದೂ ಅರಬ್ಬೀ ಭಾಷೆಯಲ್ಲಿ ನಹ್ರ್ ದಿಜಲಾಹ್ ಅಥವಾ ಶತ್ ದಿಜ್ಲಾ ಎಂದೂ ತುರ್ಕಿ ಭಾಷೆಯಲ್ಲಿ ಐಕ್ಲೆ ನೆಹ್ರಿ ಎಂದೂ ಸುಮೇರಿಯನ್ ಭಾಷೆಯಲ್ಲಿ ಇದಿಗ್ನಾ ಎಂದೂ ಬ್ಯಾಬಿಲೋನಿಯದ ಮತ್ತು ಅಸ್ಸೀರಿಯದ ಭಾಷೆಗಳಲ್ಲಿ ಇದಿಗ್ಲಾತ್ ಎಚಿದೂ ಪ್ರಾಚೀನ ಪರ್ಷಿಯನ್ ಭಾಷೆಯಲ್ಲಿ ಟೈಗ್ರಾ ಎಂದೂ ವ್ಯವಹೃತವಾಗಿರುವ ಇದನ್ನು ಸೂಚಿಸಲು ಹಿರಾಡೂಟಸ್ (ಕ್ರಿ. ಪೂ. 5ನೆಯ ಶತಮಾನ) ಟೈಗ್ರೀಸ್ ಎಂಬ ಗ್ರೀಕ್ ರೂಪವನ್ನೂ ಬಳಸಿದ.
 
<nowiki>==ಹುಟ್ಟು ಹರಿವು==</nowiki>
 
ಪೂರ್ವ ಆನಟೋಲಿಯದ ಪರ್ವತಪ್ರದೇಶದಲ್ಲಿ ಹಲವು ತೊರೆಗಳ ಕೂಡಿಕೆಯಿಂದ ಉದ್ಭವಿಸುವ ಟೈಗ್ರಿಸ್ ನದಿ ಊಟೆಗಳ ನೀರಿನಿಂದಲೂ ಹಿಮ ಕರಗಿದ ನೀರಿನಿಂದಲೂ ತುಂಬಿ ಸ್ಥೂಲವಾಗಿ ಆಗ್ನೇಯ ದಿಕ್ಕಿಗೆ ಹರಿಯುತ್ತದೆ. ಉಗಮಸ್ಥಾನದಿಂದ ಸುಮಾರು 280 ಮೈ. ದೂರ ಇದು ತುರ್ಕಿಯ ನದಿ. ಇರಾಕನ್ನು ಪ್ರವೇಶಿಸುವುದಕ್ಕೆ ಮುಂಚೆ 20 ಮೈ. ದೂರ. ಸಿರಿಯದ ಎಲ್ಲೆಯಾಗಿ ಪರಿಣಮಿಸಿದೆ. ಮೋಸೂಲ್ ಬಳಿಯಲ್ಲಿ ಜಬ್-ಅಲ್-ಕಬೀರ್ ನದಿಯೂ ತಿಕ್ರಿತ್ ಬಳಿಯಲ್ಲಿ ಜಬ್-ಅಲ್-ಅಸ್‍ಫಲ್ ನದಿಯೂ ಬಾಗ್ದಾದ್ ಬಳಿಯಲ್ಲಿ ದಿಯಾಲ್ ನದಿಯೂ ಅನಂತರ ಶತ್-ಅಲ್-ಅದ್ ಹೈಮ್ ನದಿಯೂ ಪೂರ್ವ ದಡದಲ್ಲಿ ಇದನ್ನು ಸೇರುತ್ತವೆ. ಉಗಮದ ಎಡೆಯಿಂದ ಸು. 1,180 ಮೈಲಿ ಹರಿದ ಮೇಲೆ ಯುಫ್ರೇಟೀಸನ್ನು ಕೂಡಿ ಷತ್-ಅಲ್ ಅರಬ್ ಎನಿಸಿಕೊಂಡು ಸು. 110 ಮೈಲಿ ದೂರ ಹರಿದು ಫ್ಯಾವು ರೇವು ಪಟ್ಟಣದ ಬಳಿ ಪರ್ಷಿಯನ್ ಖಾರಿಯನ್ನು ಸೇರುತ್ತದೆ.
 
== ಸಂಚಾರಸಾರಿಗೆ ==
ಅನೇಕ ಶತಮಾನಗಳಿಂದ ಟೈಗ್ರೀಸ್ ನದಿಯ ಮೇಲೆ ಸಂಚಾರ ನಡೆದಿದ್ದೆ ಹೆಚ್ಚು ಆಳಕ್ಕೆ ಇಳಿಯದ ಉಗಿದೋಣಿಗಳು ಮುಖದ ಬಳಿಯಿಂದ ಬಾಗ್ದಾದಿನವರೆಗೂ ಸಂಚರಿಸುತ್ತವೆ. ಆದರೆ ರಸ್ತೆ ಸಾರಿಗೆಯ ಪ್ರಗತಿಯಿಂದ ನದೀ ಸಾರಿಗೆ ಈಚಿಗೆ ಕಡಿಮೆಯಾಗಿದೆ. ನದಿಯ ಪಾತ್ರ ಅಲ್ಲಲ್ಲಿ ಕಿರಿದಾಗುವುದರಿಂದಲೂ ಅದರಲ್ಲಿ ಅನೇಕ ತಿರುವುಗಳಿರುವುದರಿಂದಲೂ ಅದರೊಳಗಿನ ಮರಳುದಿಬ್ಬಗಳು ಸ್ಥಳಾಂತಗೊಳ್ಳುತ್ತಿರುವುದರಿಂದ ಅಲ್ಲಲ್ಲಿ ನದೀಪಾತ್ರ ತೆಟ್ಟೆಯಾಗಿ ಪರಿಣಮಿಸುವುದರಿಂದಲೂ ಇದರ ಮೇಲೆ ಯಾನ ಮಾಡುವುದು ಅನೇಕ ಅಡಚಣೆಗಳಿಂದ ಕೂಡಿರುತ್ತದೆ.
 
"https://kn.wikipedia.org/wiki/ಟೈಗ್ರಿಸ್" ಇಂದ ಪಡೆಯಲ್ಪಟ್ಟಿದೆ