ಟೈಗ್ರಿಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಟೈಗ್ರಿಸ್ ಆಗ್ನೇಯ ತುರ್ಕಿಯಲ್ಲಿ ಹುಟ್ಟಿ ಇರಾಕಿನ ಮೂಲಕ ಪರ್ಷಿಯನ್ ಕೊಲ್ಲಿ...
ಟ್ಯಾಗ್: 2017 source edit
 
ಚುNo edit summary
ಟ್ಯಾಗ್: 2017 source edit
೧ ನೇ ಸಾಲು:
ಟೈಗ್ರಿಸ್
ಆಗ್ನೇಯ ತುರ್ಕಿಯಲ್ಲಿ ಹುಟ್ಟಿ [[ಇರಾಕ್|ಇರಾಕಿನ]] ಮೂಲಕ [[ಪರ್ಷಿಯನ್ ಕೊಲ್ಲಿಯತ್ತಕೊಲ್ಲಿ]]ಯತ್ತ ಹರಿಯುವ ಒಂದು ನದಿ. ಯಮಳ ನದಿಗಳಲ್ಲಿ ಒಂದು (ಇನ್ನೊಂದು ನದಿ ಯುಫ್ರೇಟೀ¸óï[[ಯೂಫ್ರೆಟೀಸ್|ಯುಫ್ರೇಟೀಸ್]]). ಉದ್ದ ಸುಮಾರು 1.150 ಮೈ. [[ಬೈಬಲ್|ಬೈಬಲಿನಲ್ಲಿ]] ಹಿದ್ದೆಕಿ ಅಥವಾ ಹಿದ್ದೆಕಲ್ ಎಂದೂ ಅರಬ್ಬೀ ಭಾಷೆಯಲ್ಲಿ ನಹ್ರ್ ದಿಜಲಾಹ್ ಅಥವಾ ಶತ್ ದಿಜ್ಲಾ ಎಂದೂ ತುರ್ಕಿ ಭಾಷೆಯಲ್ಲಿ ಐಕ್ಲೆ ನೆಹ್ರಿ ಎಂದೂ ಸುಮೇರಿಯನ್ ಭಾಷೆಯಲ್ಲಿ ಇದಿಗ್ನಾ ಎಂದೂ ಬ್ಯಾಬಿಲೋನಿಯದ ಮತ್ತು ಅಸ್ಸೀರಿಯದ ಭಾಷೆಗಳಲ್ಲಿ ಇದಿಗ್ಲಾತ್ ಎಚಿದೂ ಪ್ರಾಚೀನ ಪರ್ಷಿಯನ್ ಭಾಷೆಯಲ್ಲಿ ಟೈಗ್ರಾ ಎಂದೂ ವ್ಯವಹೃತವಾಗಿರುವ ಇದನ್ನು ಸೂಚಿಸಲು ಹಿರಾಡೂಟಸ್ (ಕ್ರಿ. ಪೂ. 5ನೆಯ ಶತಮಾನ) ಟೈಗ್ರೀಸ್ ಎಂಬ ಗ್ರೀಕ್ ರೂಪವನ್ನೂ ಬಳಸಿದ.
 
ಪೂರ್ವ ಆನಟೋಲಿಯದ ಪರ್ವತಪ್ರದೇಶದಲ್ಲಿ ಹಲವು ತೊರೆಗಳ ಕೂಡಿಕೆಯಿಂದ ಉದ್ಭವಿಸುವ ಟೈಗ್ರಿಸ್ ನದಿ ಊಟೆಗಳ ನೀರಿನಿಂದಲೂ ಹಿಮ ಕರಗಿದ ನೀರಿನಿಂದಲೂ ತುಂಬಿ ಸ್ಥೂಲವಾಗಿ ಆಗ್ನೇಯ ದಿಕ್ಕಿಗೆ ಹರಿಯುತ್ತದೆ. ಉಗಮಸ್ಥಾನದಿಂದ ಸುಮಾರು 280 ಮೈ. ದೂರ ಇದು ತುರ್ಕಿಯ ನದಿ. ಇರಾಕನ್ನು ಪ್ರವೇಶಿಸುವುದಕ್ಕೆ ಮುಂಚೆ 20 ಮೈ. ದೂರ. ಸಿರಿಯದ ಎಲ್ಲೆಯಾಗಿ ಪರಿಣಮಿಸಿದೆ. ಮೋಸೂಲ್ ಬಳಿಯಲ್ಲಿ ಜಬ್-ಅಲ್-ಕಬೀರ್ ನದಿಯೂ ತಿಕ್ರಿತ್ ಬಳಿಯಲ್ಲಿ ಜಬ್-ಅಲ್-ಅಸ್‍ಫಲ್ ನದಿಯೂ ಬಾಗ್ದಾದ್ ಬಳಿಯಲ್ಲಿ ದಿಯಾಲ್ ನದಿಯೂ ಅನಂತರ ಶತ್-ಅಲ್-ಅದ್ ಹೈಮ್ ನದಿಯೂ ಪೂರ್ವ ದಡದಲ್ಲಿ ಇದನ್ನು ಸೇರುತ್ತವೆ. ಉಗಮದ ಎಡೆಯಿಂದ ಸು. 1,180 ಮೈಲಿ ಹರಿದ ಮೇಲೆ ಯುಫ್ರೇಟೀಸನ್ನು ಕೂಡಿ ಷತ್-ಅಲ್ ಅರಬ್ ಎನಿಸಿಕೊಂಡು ಸು. 110 ಮೈಲಿ ದೂರ ಹರಿದು ಫ್ಯಾವು ರೇವು ಪಟ್ಟಣದ ಬಳಿ ಪರ್ಷಿಯನ್ ಖಾರಿಯನ್ನು ಸೇರುತ್ತದೆ.
೧೩ ನೇ ಸಾಲು:
 
ಆದರೂ ಅಸ್ಸಿರಿಯದ ಬಖೈರುಗಳಲ್ಲಾಗಲಿ, ಅನಂತರ ಗ್ರೀಕ್ ಮತ್ತು ರೋಮನ್ ಲೇಖಕರ ಬರಹಗಳಲ್ಲಾಗಲಿ ಈ ಕಣಿವೆಯ ಭೌಗೋಳಿಕ ಅಥವಾ ಭೂವೈಜ್ಞಾನಿಕ ವಿವರಗಳೇನೂ ಹೆಚ್ಚು ದೊರೆಯುವುದಿಲ್ಲ. ಮೋಸೂಲ್ ನಗರಕ್ಕೆ ಉತ್ತರದ ಟೈಗ್ರಿಸ್ ನದೀ ಭಾಗ 197-237ರಲ್ಲಿ ರೋಮನ್ ಮೆಸೊಪೊಟೋಮಿಯ ಮತ್ತು ಪಾರ್ತಿಯನ್ ಆಡೀಯಬೀನೀಗಳ ನಡುವಣ ಮೇರೆಯಾಗಿತ್ತು. ಕೋಟೆಯಿಂದ ಆವೃತವಾದ ಆಮಿದ ನಗರದ ಬಗ್ಗೆ ಉಲ್ಲೇಖಗಳು ಅನಂತರದ ರೋಮನ್ ಮತ್ತು ಇತರ ಮಧ್ಯಕಾಲೀನ ವೃತ್ತಾಂತಗಳಲ್ಲಿ ಇವೆ. ಅಬ್ಬಾಸಿದರ ಕಾಲದಲ್ಲಿ ಮೋಸುಲ್ ನಗರ ಒಂದು ಪ್ರಮುಖ ವಾಣಿಜ್ಯ ಕೇಂದ್ರವಾಗಿತ್ತು. ಹಾಗೂ 12,13ನೆಯ ಶತಮಾನಗಳಲ್ಲಿ ಸೆಲ್ಜೂಕ್ ಆಟಾಬೇಗ್ ವಂಶದ ರಾಜಧಾನಿಯೂ ಆಗಿತ್ತು. ಮಧ್ಯ ಯುಗದಲ್ಲಿ ಬಾಗ್ದಾದಿಗೆ ಸಂಪರ್ಕ ಕಲ್ಪಿಸಿದ್ದ ಮಧ್ಯಯುಗದ ರಸ್ತೆ ಟೈಗ್ರಿಸ್ ನದಿಯ ಪೂರ್ವ ದಂಡೆಯಲ್ಲಿ ಸಾಗಿತ್ತು. ಈ ಮಾರ್ಗದ ಪಕ್ಕದಲ್ಲಿದ್ದ ಜನವಸತಿಗಳನ್ನು ಅನೇಕ ಅರಬ್ ಭೂಗೋಳಶಾಸ್ತ್ರಜ್ಞರು ವರ್ಣಿಸಿದ್ದಾರೆ. 16ನೆಯ ಶತಮಾನದ ತರುವಾಯ ಆಗೊಮ್ಮೆ ಈಗೊಮ್ಮೆ ಐರೋಪ್ಯ ಪ್ರವಾಸಿಗರು ಟೈಗ್ರೀಸ್ ನದಿಯ ಮೇಲೆ ಸಂಚಾರ ಮಾಡುತ್ತಿದ್ದರು. 1581ರಲ್ಲಿ ಜೆ. ನ್ಯೂಬೆರಿ ಎಂಬವನು ಬಾಗ್ದಾದಿನಿಂದ ಬಾಸ್ರಕ್ಕೆ ದೋಣಿಯಲ್ಲಿ ಪ್ರಯಾಣ ಮಾಡಿದನೆಂದೂ ಶತ್-ಅಲ್-ಅಮ್ರಾಹ್ ಪ್ರಯಾಣಯೋಗ್ಯವಾದ ಕಾಲುವೆಯೆಂದು ಮೊಟ್ಟಮೊದಲಿಗೆ ಘೋಷಿಸಿದವನು ಇವನೇ ಎಂದೂ ಹೇಳಲಾಗಿದೆ. 1652 ರಲ್ಲಿ ಷಾóನ್ ಬ್ಯಾಪ್ಟಿಸ್ಟ್ ಟ್ಯಾವನ್ರ್ಯೇ ಎಂಬ ಫ್ರೆಂಚ್ ನಾವಿಕ ಮೋಸುಲ್‍ನಿಂದ ಬಾಗ್ದಾದಿನ ವರೆಗೆ ತೆಪ್ಪದಲ್ಲೂ ಬಾಗ್ದಾದಿನಿಂದ ಬಾಸ್ರದ ವರೆಗೆ ದೋಣಿಯಲ್ಲೂ ಪ್ರಯಾಣ ಮಾಡಿದ. ಟೈಗ್ರಿಸ್ ನದಿಯ ಪ್ರಥಮ ವೈಜ್ಞಾನಿಕ ಸರ್ವೇಕ್ಷಣ ನಡೆದಿದ್ದು 1836 ರಲ್ಲಿ, ಫ್ರಾನ್ಸಿಸ್ ರಾಡನ್ ಜಿಸ್ನೆಯ ನಾಯಕತ್ವದ ಯುಫ್ರೇಟೀಸ್ ಪರಿಶೋಧನಾ ಪ್ರವಾಸಿ ತಂಡದಿಂದ. 1846 ಮತ್ತು 1848 ರಲ್ಲಿ ಫೆಲಿಕ್ಸ್ ಜೋನ್ಸ್ ಈ ಕೆಲಸವನ್ನು ಮುಂದುವರೆಸಿದ. 1661 ರಲ್ಲಿ ಬಾಗ್ದಾದ್ ಮತ್ತು ಬಾಸ್ರಗಳ ನಡುವೆ ಉಗಿಹಡಗು ಸಂಚಾರವನ್ನು ಆರಂಭಿಸಲು ಸಾಧ್ಯವಾದ್ದು ಈ ಅಧ್ಯಯನಗಳ ಫಲ. 1914-18ರ ಒಂದನೆಯ ಮಹಾಯುದ್ಧದ ಅಂಗವಾಗಿ ಬ್ರಿಟನ್ನು ಇರಾಕಿನ ಮೇಲೆ ಆಕ್ರಮಣಕ್ಕೆ ಟೈಗ್ರಿಸ್ ನದಿಯೇ ಸಾಮಾಗ್ರಿ ಪೊರೈಕೆಯ ಮಾರ್ಗವಾಗಿತ್ತು.
(ಪಿ.ಜಿ.ಡಿ.)
 
[[ವರ್ಗ:{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]/ಟೈಗ್ರಿಸ್ }}
"https://kn.wikipedia.org/wiki/ಟೈಗ್ರಿಸ್" ಇಂದ ಪಡೆಯಲ್ಪಟ್ಟಿದೆ