ನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೬ ನೇ ಸಾಲು:
ನದಿಗಳ ಪ್ರವಾಹದಿಂದ ಉಂಟಾಗುವ ಕಷ್ಟನಷ್ಟಗಳು ಅಪಾರ. ಭಾರತದಲ್ಲಿ ಪ್ರತಿವರ್ಷ ಸುಮಾರು 1,400 ಕೋಟಿ ರೂಪಾಯಿ ನಷ್ಟವಾಗುವುದೆಂದು ಅಂದಾಜು. ಅದರಲ್ಲೂ ಉತ್ತರ ಭಾರತದ ಗಂಗಾ, ಬ್ರಹ್ಮಪುತ್ರ ಹಾಗೂ ಇವುಗಳ ಉಪನದಿಗಳಿಂದಾಗುವ ಪ್ರವಾಹಗಳು ಅಪಾರ ಆಸ್ತಿ, ಬೆಳೆಗಳನ್ನು ಆಹುತಿ ತೆಗೆದುಕೊಳ್ಳುತ್ತವೆ. ಇವು ಹರಿಯುವ ಪ್ರದೇಶ ಮೆಕ್ಕಲು ಮಣ್ಣಿನಿಂದ ಕೂಡಿದ್ದು ಗಟ್ಟಿಯಾಗಿರದೆ ತ್ವರಿತವಾಗಿ ನದಿಯ ನೀರಿನ ಕೊರೆತಕ್ಕೆ ಒಳಗಾಗುವುದೇ ಇದರ ಕಾರಣ. ದಡದ ಉದ್ದಕ್ಕೂ ಅಸಂಖ್ಯಾತ ಬಿರುಕು ಕೊರಕಲುಗಳು ಉಂಟಾಗಿ ನೀರು ಅಕ್ಕಪಕ್ಕದ ಪ್ರದೇಶಗಳಿಗೆ ನುಗ್ಗುತ್ತದೆ. ದೆಹಲಿ, ಪಾಟ್ನ, ದಿಬ್ರೂಘರ್ ಈ ನಗರಗಳಂತೂ ಪ್ರತಿ ವರ್ಷವೂ ನೆರೆಯ ಹಾವಳಿಯಿಂದ ಅಪಾರ ಹಾನಿಗೆ ಒಳಗಾಗುತ್ತವೆ. ಇದನ್ನು ತಡೆಗಟ್ಟಲು ಹಲವಾರು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಮೊದಲನೆಯದಾಗಿ ಅಣೆಕಟ್ಟುಗಳನ್ನು ಯುಕ್ತ ಸ್ಥಳಗಳಲ್ಲಿ ನಿರ್ಮಿಸಿ ಹೆಚ್ಚಿನ ನೀರನ್ನು ವ್ಯವಸಾಯಕ್ಕೆ ಉಪಯುಕ್ತವಾಗಿ ಬಳಸಿಕೊಂಡು ಪ್ರವಾಹದ ಹಾವಳಿಯನ್ನು ತಡೆಗಟ್ಟಬಹುದು. ನದಿಯ ಇಕ್ಕೆಲೆಗಳಲ್ಲೂ ಭಾರಿದಂಡೆಗಳನ್ನು ಕಟ್ಟಿ ಪ್ರವಾಹ ಕಾಲದಲ್ಲಿ ಅಕ್ಕಪಕ್ಕದ ಪ್ರದೇಶಗಳಿಗೆ ನೀರು ನುಗ್ಗುವುದನ್ನು ತಡೆಯಬಹುದು. ನದಿಯ ಪಾತ್ರದಲ್ಲೇ ಯೋಗ್ಯ ಬದಲಾವಣೆಗಳನ್ನು ಮಾಡುವುದರ ಮೂಲಕವೂ ನೆರೆಯ ಹಾವಳಿಯನ್ನು ನಿಯಂತ್ರಿಸಲು ಸಾಧ್ಯ. ಸುಪ್ರಸಿದ್ಧ ಎಂಜಿನಿಯರ್ ಕೆ.ಎಲ್.ರಾವ್ ಕೆಲವು ವರ್ಷಗಳ ಹಿಂದೆ ಸೂಚಿಸಿದ ಗಂಗಾ-ಕಾವೇರಿ ನದಿಗಳ ವ್ಯೂಹರಚನೆಯೂ ಈ ದಿಶೆಯಲ್ಲೊಂದು ದಿಟ್ಟಮಾರ್ಗ.
==ನಾಗರಿಕತೆಗಳು==
ನದಿಗಳು ಒಂದು ಪ್ರದೇಶದ ನಾಗರಿಕತೆಯ ಬೆಳವಣಿಗೆಯಲ್ಲಿ ಹಾಸುಹೊಕ್ಕಾಗಿದ್ದು ಪ್ರಮುಖ ಪಾತ್ರವನ್ನು ವಹಿಸಿವೆ ಎಂದರೆ ಅತಿಶಯೋಕ್ತಿ ಎನಿಸದು. ಅದರಲ್ಲೂ ಮೆಕ್ಕಲು ಪ್ರದೇಶಗಳಲ್ಲಿ ಹರಿಯುವ ನದಿಗಳ ಇಕ್ಕೆಲಗಳಲ್ಲಿ ಹಲವಾರು ಸುಸಂಸ್ಕøತ ಸಮಾಜಗಳು ಮೈದಳೆದಿರುವುದನ್ನು ಕಾಣಬಹುದು. ಅರಿಹ ನದಿಯ ಪ್ರದೇಶದಲ್ಲಿ 10,000 ವರ್ಷಗಳ ಹಿಂದೆಯೇ ಸುಸಂಸ್ಕøತ ಜನಾಂಗವೊಂದು ನೆಲಸಿದ್ದುದರ ದಾಖಲೆಗಳು ದೊರೆತಿವೆ. ಮಧ್ಯ ಪ್ರಾಚ್ಯದ [[ಟೈಗ್ರಿಸ್]]-[[ಯೂಫ್ರೆಟೀಸ್|ಯೂಫ್ರೆಟಿಸ್]] ಮತ್ತು ಈಜಿಪ್ಟಿನ ನೈಲ್‍ನದಿಯ ಕಣಿವೆಗಳಲ್ಲಿ 6,000 ವರ್ಷಗಳ ಹಿಂದೆಯೇ ನಾಗರಿಕ ಜನಾಂಗವಿದ್ದುದು ತಿಳಿದು ಬಂದಿದೆ. ಸಿಂಧೂಕಣಿವೆಯ ಮೊಹೆಂಜೊದಾರೊ ಪ್ರದೇಶದ ನಾಗರಿಕತೆ 4,500 ವರ್ಷಗಳಷ್ಟೂ ಗಂಗಾ ಬಯಲು ಸೀಮೆಯ ಆರ್ಯನಾಗರಿಕತೆ 3,000 ವರ್ಷಗಳಷ್ಟೂ ಪ್ರಾಚೀನವಾದುದು. ಹೀಗೆ ನಮ್ಮ ಪುರಾತನರು ನದಿಗಳಿಂದ ಉಪಕೃತರಾಗಿ ಅವುಗಳಲ್ಲಿ ಪೂಜ್ಯಭಾವನೆ ತಳೆದುದರಲ್ಲಿ ಆಶ್ಚರ್ಯವೇನಿಲ್ಲ. ಇಂದಿಗೂ ನಮ್ಮ ಮುತ್ತೈದೆಯರು ಗಂಗಾ ಪೂಜೆಯನ್ನು ಮಾಡುತ್ತಾರೆ. ಕೆಲವು ಪುಣ್ಯನದಿಗಳಲ್ಲಿ ಮಿಂದು ಬಂದರೆ ಸರ್ವಪಾಪಗಳೂ ಪರಿಹಾರವಾಗುತ್ತವೆ ಎನ್ನುವ ಭಾವನೆ ಅನೇಕರಲ್ಲಿ ಬೇರೂರಿದೆ. ನದಿಯ ನೀರು ಬರಿಯ ನೀರಲ್ಲ, ಅದು ತೀರ್ಥ. ಈ ಎಲ್ಲ ಮನೋಧರ್ಮದ ಹಿನ್ನೆಲೆ ನದಿಗಳು ನಮಗೆ ಎಸಗಿರುವ ಅಪಾರ ಉಪಕಾರ. ಆದ್ದರಿಂದಲೇ ನಮಗೆ ಗಂಗಾನದಿ ಪವಿತ್ರ ಗಂಗಾಮಾತೆ.
 
ಭಾರತದ ಪ್ರಾಚೀನ ಗ್ರಂಥಗಳಾದ [[ವೇದ]], [[ಪುರಾಣ]], ಶಾಸ್ತ್ರ ಮತ್ತ ಸಂಹಿತೆಗಳಲ್ಲಿ ಇಂದಿನ ಅನೇಕ ನದಿಗಳ ಉಲ್ಲೇಖವಿದೆ. ಋಗ್ವೇದದಲ್ಲಿ ಅತಿಪ್ರಾಚೀನವಾದ [[ಆರ್ಯಾವರ್ತ]] ಪವಿತ್ರವಾದ ಸಪ್ತನದಿಗಳ ನೀರಿನಿಂದ ಪುನೀತಗೊಂಡಿದೆ ಎಂದು ನಮೂದಿಸಲಾಗಿದೆ. ಇಂದಿನ ಪಂಜಾಬಿನ ಐದು ನದಿಗಳ ಜತೆ, ಸಿಂಧೂ ಮತ್ತು ಸರಸ್ವತಿಯೂ ಸೇರಿದ ಸಪ್ತನದಿಗಳನ್ನು ಉಲ್ಲೇಖಿಸಲಾಗಿದೆ. ಆರ್ಯಾವರ್ತ ದಕ್ಷಿಣದತ್ತ ವಿಸ್ತಾರಗೊಂಡಂತೆ ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧೂ ಮತ್ತು ಕಾವೇರಿ ಇವು ಸಪ್ತನದಿಗಳೆಂದು ಹೇಳಲಾಯಿತು. ಗ್ರೀಸ್‍ದೇಶದ ಪ್ರಸಿದ್ಧ ಖಗೋಳವಿಜ್ಞಾನಿ ಹಾಗೂ ಭೂಗೋಳಶಾಸ್ತ್ರ ಪರಿಣತ ಟಾಲೆಮಿಯ ಲೇಖನಗಳಲ್ಲಿ ಸಹ ಈ ನದಿಗಳನ್ನು ನಮೂದಿಸಲಾಗಿದೆ. ಮಹಾಭಾರತದ ತೀರ್ಥಯಾತ್ರೆ ಮತ್ತು ದಿಗ್ವಿಜಯ ಪರ್ವಗಳಲ್ಲೂ ರಾಮಾಯಣದ ಕಿಷ್ಕಿಂಧಾಕಾಂಡ, ಭುವನಕೋಶ, ಪುರಾಣಗಳ ಜಂಬೂದ್ವೀಪವರ್ಣನೆ ಮತ್ತು ಕೂರ್ಮವಿಭಾಗಗಳು, ವರಾಹಮಿಹಿರನ ಬೃಹತ್ ಸಂಹಿತಾ ಈ ಎಲ್ಲ ಉದ್ಗ್ರಂಥಗಳಲ್ಲೂ ಅನೇಕ ನದಿಗಳ ವರ್ಣನೆಯಿದೆ. ಭಾಗವತ ಪುರಾಣದಲ್ಲಿ ಎಲ್ಲ ನದಿಗಳು ಪರ್ವತಗಳ ಶಿಖರಗಳಲ್ಲಿ ಜನ್ಮತಳೆಯುತ್ತವೆಂದು ನಮೂದಿಸಲಾಗಿದೆ. ಇವುಗಳಲ್ಲಿ ಹಿಮವತ್ಪರ್ವತವೇ ಅಗ್ರಮಾನ್ಯ. ಇದು ವರ್ಷಪರ್ವತ.
"https://kn.wikipedia.org/wiki/ನದಿ" ಇಂದ ಪಡೆಯಲ್ಪಟ್ಟಿದೆ