ಕೈರೋ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೫೨ ನೇ ಸಾಲು:
ಆಧುನಿಕ ಕೈರೋಗೂ ಅಲ್ ಮೊಕತ್ತಂ ಬೆಟ್ಟಗಳಿಗೂ ನಡುವೆ 11 ರಿಂದ 16ನೆಯ ಶತಮಾನಗಳ ನಡುವಣ ಕಾಲದಲ್ಲಿ ನಿರ್ಮಿತವಾದ ಅರಬ್ ನಗರದ ಬಹುಭಾಗವಿದೆ. ವಿಶ್ವದ ಬೇರಾವುದೇ ನಗರದಲ್ಲಿಲ್ಲದಷ್ಟು ಅಧಿಕ ಸಂಖ್ಯೆಯಲ್ಲಿ ಅರಬ್ ವಾಸ್ತು ಸಂಪತ್ತು ಇಲ್ಲಿ ಸಾಂದ್ರೀಕೃತವಾಗಿದೆ. ಪಟ್ಟಿಮಾಡಲಾದ ಐತಿಹಾಸಿಕ ಸ್ಮಾರಕಗಳ ಸಂಖ್ಯೆಯೇ ಸುಮಾರು 400. ಇಲ್ಲಿ ಮಹಮ್ಮದ್ ಆಲಿ ಕಟ್ಟಿಸಿದ ಆಟೊಮನ್ ಶೈಲಿಯ ಸುಂದರ ಮಸೀದಿ ಇದೆ. ಇದರಲ್ಲಿ ಈತನನ್ನು 1849ರಲ್ಲಿ ಸಮಾಧಿ ಮಾಡಲಾಯಿತು. ಇದು 12ನೆಯ ಶತಮಾನದಲ್ಲಿ ಸಾಲಾದೀನ್ ಕಟ್ಟಿಸಿದ ಕೋಟೆಯೊಳಗಡೆ ಇದೆ. ಇಲ್ಲಿಯೇ 1946ರಲ್ಲಿ ಬ್ರಿಟಿಷ್ ಸೈನ್ಯ ಈಜಿಪ್ಟ್ ಸೈನ್ಯಕ್ಕೆ ಅಧಿಕಾರವನ್ನು ವಹಿಸಿಕೊಟ್ಟದ್ದು. ಸಾಲಾದಿನ್ ಚೌಕವಿರುವುದು ಈ ಕೋಟೆಯಿಂದ ಕೆಳಕ್ಕೆ. ಇಸ್ಲಾಂ ವಾಸ್ತುಶಿಲ್ಪಕ್ಕೆ ಹೆಸರಾದ, 1361ರಲ್ಲಿ ಸುಲ್ತಾನ್ ಹಸನ್ ಕಟ್ಟಿಸಿದ, ಮಸೀದಿ ಈ ಚೌಕದಿಂದಾಚೆಗಿದೆ. 1912ರಲ್ಲಿ ಕಟ್ಟಿ ಮುಗಿಸಿದ ಅಲ್ ರಿಫಾಇಯ ಆಧುನಿಕ ಮಸೀದಿ ಇದೆ. ದೊರೆ ಫೌದ್ ಮತ್ತು ಆತನ ಕುಟುಂಬದವರ ಸಮಾಧಿ ಇರುವುದು ಇಲ್ಲೇ.
 
ಕಲೋಪಾಸಕರಿಗೆ, ಪಂಡಿತರಿಗೆ ಮತ್ತು ಪ್ರಾಕ್ತನ ಶಾಸ್ತ್ರಜ್ಞರಿಗೆ ಇಲ್ಲಿಯ ಕಟ್ಟಡಗಳು ಒಂದು ಆಕರ್ಷಣೆ. ಉತ್ತರ ಆಫ್ರಿಕದ ಫಾತಿಮೈಟ್ ಆಕ್ರಮಣಕಾರರು 970ರಲ್ಲಿ ಸ್ಥಾಪಿಸಿದ ವಿಶ್ವವಿದ್ಯಾಲಯ ಅಲ್ ಅಜ್ó ಹರ್ ಮಸೀದಿ ಇರುವುದು ಈ ಬಳಿಯಲ್ಲೇ. ಇಲ್ಲಿಗೇ [[ಚೀನ]], [[ಮೊರಾಕೊ|ಮೊರಾಕೋ]], [[ಇಂಡೋನೇಷ್ಯ]] ಮತ್ತು ಸೋಮಾಲಿ ಲ್ಯಾಂಡ್ ಮುಂತಾದ ದೇಶಗಳಿಂದ ಮುಸ್ಲಿಂ ನ್ಯಾಯಶಾಸ್ತ್ರ, ಕೊರಾನ್, ಅರಬೀ ಭಾಷೆ, ತತ್ತ್ವಶಾಸ್ತ್ರ ಮತ್ತು ಇತಿಹಾಸದ ಅಧ್ಯಯನಕ್ಕೆ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಅಹ್ಮದ್ ಇಬ್ನ್‍ಟುಲುನ್ 876-879ರಲ್ಲಿ ಕಟ್ಟಿಸಿದ ಪ್ರಸಿದ್ಧ ಮಸೀದಿ ಹಳೆಯ ನಗರದ ದಕ್ಷಿಣಕ್ಕಿದೆ. ಅಹ್ಮದ್ ಇಬ್ನ್‍ಟುಲುನ್ [[ಬಾಗ್ದಾದ್| ಬಾಗ್ದಾದಿನಿಂದ]] ಬಂದವನು. ಆದ್ದರಿಂದ ಈ ಮಸೀದಿಯಲ್ಲೂ ಬಾಗ್ದಾದಿನ ಸುಂದರ ಕೆತ್ತನೆಯನ್ನು ಕಾಣಬಹುದು.
 
ಮ್ಯಾಮೆಲೂಕರ ಗೋರಿಯ ಆಗ್ನೇಯಕ್ಕೆ ಇರುವ ಅಲ್ ಪುಸ್ತಾತ್ ಜನರಹಿತ ಭಾಗ. ಅರಬರು ಈ ಪ್ರದೇಶವನ್ನು ಗೆದ್ದಾಗ 641ರಲ್ಲಿ ಸ್ಥಾಪಿಸಲಾದ, ಅತ್ಯಂತ ಹಳೆಯ, ವಸತಿಯ ಪ್ರದೇಶವಿದು. ಅಲ್ ಪುಸ್ತಾತ್‍ಗೂ ನೈಲ್‍ನದಿಗೂ ನಡುವೆ ಹಳೆಯ ಕೈರೋ ಎಂದು ಕರೆಯುವ ಭಾಗವಿದೆ. ಇಲ್ಲಿ ಪುರಾತನ ಕಾಲದಿಂದಲೂ ಕಾಪ್ಟಿಕ್ ಕ್ರೈಸ್ತರು ವಾಸವಾಗಿದ್ದಾರೆ. ಇಲ್ಲಿ ಕಾಪ್ಟಿಕ್ ಶೈಲಿಯ ಹಳೆಯ ಚರ್ಚ್‍ಗಳೂ 1910ರಲ್ಲಿ ಸ್ಥಾಪಿಸಿದ ಕಾಪ್ಪಿಕ್ ಕಲಾ ವಸ್ತುಸಂಗ್ರಹಾಲಯವೂ ಇವೆ. ಇದರ ಹತ್ತಿರ ಬಿಜಾನ್‍ಟೈನ್ ರೋಮನರ ಹೆಬ್ಬಾಗಿಲಿದೆ. ಹಳೆಯ ಕೈರೋದಿಂದ ಆಧುನಿಕ ಕೈರೋಗೆ ಅನೇಕ ರಸ್ತೆಗಳುಂಟು. ಇವುಗಳಲ್ಲಿ ಷರಿಯ ಕಸ್ರ್ ಅಲ್ ಐನಿ ಎಂಬುದು ಮುಖ್ಯ. ಇದು ಕೈರೋ ವಿಶ್ವವಿದ್ಯಾಲಯ ವೈದ್ಯಕೀಯ ಶಾಲೆ ಮತ್ತು ಆ್ಯಂಟಿರಾಬಿಕ್ ಆಸ್ಪತ್ರೆಯನ್ನು ಹಾದು ಹೋಗುತ್ತದೆ. ನೈಲ್ ನದಿಗೂ ಈ ರಸ್ತೆಗೂ ನಡುವೆ ಕೆಲವು ದೂತಾವಾಸಗಳೂ ತೋಟದ ನಗರವೂ ಇವೆ. ಈ ರಸ್ತೆಯ ಇನ್ನೊಂದು ಬದಿಗೆ ಹಲವು ಸಚಿವಾಲಯಗಳೂ 1923ರಲ್ಲಿ ನಿರ್ಮಿತವಾದ ಪಾರ್ಲಿಮೆಂಟ್ ಭವನವೂ ಉಂಟು. ಇದರ ಹತ್ತಿರವೇ ಸಾದ್ ಜಾóಗ್‍ಲುಲ್ ಎಂಬ ಪ್ರಸಿದ್ಧ ರಾಷ್ಟ್ರಪ್ರೇಮಿಯ ಗೋರಿಯೂ ಭೂವಿಜ್ಞಾನ ವಸ್ತುಸಂಗ್ರಹಾಲಯವೂ ಅಮೆರಿಕನ್ ವಿಶ್ವವಿದ್ಯಾಲಯವೂ ಇವೆ. ಪೂರ್ವದಲ್ಲಿರುವ ಗುಮ್ಹೂರಿಯ ಚೌಕದಲ್ಲಿ ಅರಬ್ ಗಣರಾಜ್ಯಾಧ್ಯಕ್ಷರ ಅಧಿಕೃತನಿವಾಸವುಂಟು. ಇದು ಹಿಂದೆ ದೊರೆ ಫರೂಕನ ಅಬ್‍ದಿನ್ ಅರಮನೆಯಾಗಿತ್ತು. ದೊಡ್ಡ ಉದ್ಯಾನದ ನಡುವೆ ಇರುವ ಸುಂದರ ಕಟ್ಟಡವಿದು. ಅರಮನೆಗೆ ಹಿಂದೆ ಇರುವ ಆಹ್ಮೆದ್ ಮಹೆರ್ ಚೌಕದಲ್ಲಿ ಇಸ್ಲಾಮೀ ಕಲಾವಸ್ತು ಸಂಗ್ರಹಾಲಯವಿದೆ. ಖೆಡಿವ್ ಇಸ್ಮೇಲ್ 1869ರಲ್ಲಿ ಸ್ಥಾಪಿಸಿದ ಈಜಿಪ್ಷಿಯನ್ ಗ್ರಂಥಾಲಯ ಇರುವುದು ಇಲ್ಲೇ. ಈ ಗ್ರಂಥಾಲಯದಲ್ಲಿ ಪಶ್ಚಿಮ ಏಷ್ಯ ಪ್ರದೇಶದ ಅನೇಕ ಗ್ರಂಥಗಳೂ ನಾಣ್ಯಗಳೂ ಇವೆ.
"https://kn.wikipedia.org/wiki/ಕೈರೋ" ಇಂದ ಪಡೆಯಲ್ಪಟ್ಟಿದೆ