ಆಫ್ರಿಕಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
ಚುNo edit summary
೪೪೧ ನೇ ಸಾಲು:
*ಕಾಮರ್ಿಕ ಪಡೆಯನ್ನು ನಿಮರ್ಿಸಲು ಎರಡು ವಿಧಾನಗಳನ್ನು ಬಳಸಲಾಗುತ್ತಿತ್ತು. ಮೊದಲನೆಯದು, ಹೆಚ್ಚೆಚ್ಚು ತೆರಿಗೆಯನ್ನು ವಿಧಿಸಿ ಅದನ್ನು ಹಣದ ರೂಪದಲ್ಲೇ ಪಾವತಿಸುವಂತೆ ಮಾಡಿದ್ದು. ಈ ತೆರಿಗೆ ಪಾವತಿಸಲು ಹಣಕ್ಕಾಗಿ ಆಫ್ರಿಕನ್ನರು ಯೂರೋಪ್ ಅಥವಾ ಅಮೇರಿಕಾದ ಕಂಪನಿಗಳಲ್ಲಿ ಕೆಲಸಕ್ಕಾಗಿ ನಗರಗಳಿಗೆ ವಲಸೆ ಹೋಗುತ್ತಿದ್ದರು. ಬಹುತೇಕ ವಸಾಹತುಗಳಲ್ಲಿ ಆಫ್ರಿಕನ್ನರ ಭೂಮಿ ಮೇಲಿನ ಒಡೆತನ ಶೇಕಡಾ 10ಕ್ಕೆ ಮಾತ್ರ ಸೀಮಿತವಾಗಿತ್ತು. ಉಳಿದ ಭೂಮಿಯನ್ನು ರಪ್ತು-ಆಧಾರಿತ ಬೆಳೆ ಬೆಳೆಯಲು ಅಗತ್ಯಕ್ಕಿಂತ ಅಗಾಧವಾದ ಭೂಮಿಯನ್ನು ಖಾಸಗಿ ಕಂಪನಿಗಳಿಗೆ ಮತ್ತು ವಸಾಹತುಶಾಹಿಗಳಿಗೆ ನೀಡಿದ್ದರಿಂದ ಸ್ವಾವಲಂಬಿಯಾಗಿದ್ದ ಆಫ್ರಿಕಾ ಆಹಾರಕ್ಕಾಗಿ ಆಮದು ಮಾಡಿಕೊಳ್ಳಬೇಕಾಯಿತು. ಎರಡನೆಯದು, ಬಲಾತ್ಕಾರದಿಂದ ಕಾಮರ್ಿಕರನ್ನು ನೇಮಿಸಿಕೊಳ್ಳುವುದು ಅಥವಾ ಆಧುನಿಕ ಗುಲಾಮಗಿರಿ. ಹಳ್ಳಿಗಳಿಂದ ಅಪಹರಿಸಿದ ಜನರನ್ನು ಗುತ್ತಿಗೆದಾರರ ನೆರವಿನಿಂದ ಬಲವಂತವಾಗಿ ಕಾಮರ್ಿಕರನ್ನಾಗಿ ದುಡಿಸಿಕೊಳ್ಳಲಾಗುತ್ತಿತ್ತು. ಆರೋಗ್ಯ ಸಂರಕ್ಷಣೆ, ನೈರ್ಮಲ್ಯ ವ್ಯವಸ್ಥೆ, ಕುಡಿಯುವ ನೀರು, ಮುಂತಾದ ಅತ್ಯವಶ್ಯ ಸೌಲಭ್ಯಗಳಿಲ್ಲದೆ ಹಂದಿಗೂಡಿನಂಥಹ ವಸತಿಗಳಲ್ಲಿ ವಾಸವಾಗಿದ್ದುಕೊಂಡು ದೀಘರ್ಾವಧಿ ಸಮಯ ಕೆಲಸ ಮಾಡುತ್ತಾ ಕುಟುಂಬದ ಸಂಪರ್ಕವಿಲ್ಲದೆ ಕಾಮರ್ಿಕರ ಜೀವನ ಹೀನಾಯ ಸ್ಥಿತಿಯಲ್ಲಿತ್ತು.
*ಇಂಥಹ ಕ್ರೂರ ಸ್ಥಿತಿಗಳಿಂದಾಗಿ ಉತ್ತಮ ವೇತನ, ಉತ್ತಮ ದುಡಿಯುವ ವಾತಾವರಣಕ್ಕಾಗಿ ಮತ್ತು ಗುಲಾಮಗಿರಿಯನ್ನು ಕೊನೆಗಾಣಿಸಲು ಕಾಮರ್ಿಕ ಸಂಘಟನೆಗಳು 1920ರ ದಶಕದಲ್ಲಿ ತುನೀಷಿಯಾ, ಜಾಂಬಿಯಾ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಬೆಳೆದುಬಂದವು. ಆರಂಭದ ಕಾಮರ್ಿಕ ಸಂಘಟನೆಗಳು ಕಾನೂನುಬಾಹಿರವಾಗಿದ್ದು ಮುಷ್ಕರಗಳನ್ನು ನಡೆಸುವವರಿಗೆ ಆಮಿಷವನ್ನೊಡ್ಡಲಾಗುತ್ತಿತ್ತು, ಇದಕ್ಕೆ ಬಗ್ಗದಿದ್ದರೆ ದಂಡನೆಗೊಳಪಡಿಸಲಾಗುತ್ತಿತ್ತು. ಮುಷ್ಕರಗಳಲ್ಲಿ ಡಜನ್ಗಟ್ಟಲೆ ಕಾಮರ್ಿಕರನ್ನು ಕೊಂದು ನೂರಾರು ಮಂದಿಯನ್ನು ಬಂಧಿಸಿ ಅವರನ್ನು ಮತ್ತೆ ಆಧುನಿಕ ಗುಲಾಮಗಿರಿಗೆ ದೂಡಲಾಗುತ್ತಿತ್ತು.
*ಸಾಮ್ರಾಜ್ಯಶಾಹಿ ಮತ್ತು ಖಾಸಗಿ ಕಂಪನಿಗಳ ದುರಾಸೆ ಮತ್ತು ಶೋಷಣೆ ಹೆಚ್ಚಾದಂತೆ, ದುಡಿಯುವ ಜನತೆಯ ಐಕ್ಯತೆ ಗಟ್ಟಿಗೊಂಡಿತು. ಸಾಮ್ರಾಜ್ಯಶಾಹಿ ಗುಲಾಮತನದ ವಿರುದ್ದದ ಹೋರಾಟದಲ್ಲಿ ಮೊದಲಿಗೆ ದೇಶೀಯ ಬಂಡವಾಳಶಾಹಿ ಮತ್ತು ಬುದ್ದಿಜೀವಿಗಳ ನೇತೃತ್ವದಲ್ಲಿ ರಾಷ್ಟ್ರೀಯ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳನ್ನು ಸ್ಥಾಪಿಸಲಾಯಿತು. 1920ರಲ್ಲಿ ಅಲ್ಜೀರಿಯಾ, ತುನೀಷಿಯಾ ಮತ್ತು ಮೊರಾಕೋಗಳಲ್ಲಿ[[ಮೊರಾಕೊ|ಮೊರಾಕೋ]]ಗಳಲ್ಲಿ ಕಮ್ಯುನಿಸ್ಟ್ ಪಕ್ಷಗಳನ್ನು ಸ್ಥಾಪಿಸಲಾಯಿತು. ಎಲ್ಲೆಡೆ ವ್ಯಾಪಿಸುತ್ತಿದ್ದ ಸಾಮ್ರಾಜ್ಯಶಾಹಿ-ವಿರೋಧಿ ಚಳುವಳಿಗಳಲ್ಲಿ ಉತ್ತರ ಆಫ್ರಿಕಾದ ರಾಷ್ಟ್ರಗಳಾದ ಈಜಿಪ್ಟ್, ಸೂಡಾನ್, ಮೊರಾಕೋ ಮುಂಚೂಣಿಯಲ್ಲಿದ್ದವು. ಪೂರ್ವ ಆಫ್ರಿಕನ್ ಒಕ್ಕೂಟವನ್ನು ಕೀನ್ಯಾದಲ್ಲಿ ಸ್ಥಾಪಿಸಲಾಯಿತು. ದಕ್ಷಿಣ ಆಫ್ರಿಕಾ ಒಕ್ಕೂಟದಲ್ಲಿ ಅಂಗೋಲಾ, ಕಾಂಗೋ, ಇಟಾಲಿಯನ್ ಸೋಮಾಲಿಲ್ಯಾಂಡ್ ಮತ್ತು ಚಡ್, ಇನ್ನಿತರ ಪ್ರದೇಶಗಳಲ್ಲಿ ರೈತಾಪಿಯ ಗಲಭೆಗಳಿಂದ ಮತ್ತು ದೊಡ್ಡ ನಗರಗಳಲ್ಲಿ ನಡೆದ ಮುಷ್ಕರ ಮತ್ತು ಪ್ರದರ್ಶನಗಳಿಂದ ಬಂಡಾಯವು ತೀವ್ರ ಸ್ವರೂಪವನ್ನು ಪಡಕೊಂಡು ಆಳುವ ವರ್ಗಗಳಿಂದ ಕೆಲವು ವಿನಾಯಿತಿಗಳನ್ನು ಪಡೆಯಲು ಸಾಧ್ಯವಾಗಿತ್ತು. ಇಟಲಿಯು ಇಥಿಯೋಪಿಯಾದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಹಲವು ಆಫ್ರಿಕನ್ ರಾಷ್ಟ್ರಗಳಲ್ಲಿ ಪ್ರತಿಭಟನೆಗಳು ಜರುಗಿದವು.
*ದ್ವಿತೀಯ ಮಹಾಯುದ್ದ ಸಮಯದಲ್ಲಿ ಆಫ್ರಿಕಾದ ಎಲ್ಲ ರಾಷ್ಟ್ರಗಳ ಮೇಲೂ ಯುದ್ದವನ್ನು ಹೇರಲಾಯಿತು. 1930ರ ದಶಕದಲ್ಲಿ ಆಫ್ರಿಕಾವು ಫ್ಯಾಸಿಸ್ಟ್ ಆಕ್ರಮಣವನ್ನು ಎದುರಿಸಬೇಕಾಯಿತು. ಈಜಿಪ್ಟ್, ಲಿಬ್ಯಾ, ತುನೀಷಿಯಾ, ಇಥಿಯೋಪಿಯಾ, ಸೋಮಾಲಿಲ್ಯಾಂಡ್, ಸೂಡಾನ್ ಮತ್ತು ಕೀನ್ಯಾ ಭೂಪ್ರದೇಶಗಳಲ್ಲಿ ಯುದ್ದ ಚಟುವಟಿಕೆಗಳು ಜರುಗಿದವು. ಲಕ್ಷೊಪಲಕ್ಷ ಸಂಖ್ಯೆಯ ಆಫ್ರಿಕಾ ಸೈನಿಕರು ಬ್ರಿಟನ್ ಮತ್ತು ಜಪಾನ್ ಸೇನೆಯ ಭಾಗವಾಗಿ ಯುದ್ದಗಳಲ್ಲಿ ಕಾದಾಡಿದರು. ಆಫ್ರಿಕಾದಲ್ಲಿನ ಇಟಾಲಿಯನ್ ಮತ್ತು ಜರ್ಮನ್ ಫ್ಯಾಸಿಸಂ ವಿರುದ್ದ ನಡೆದ ಹೋರಾಟಗಳಲ್ಲಿ ಆಫ್ರಿಕಾದ ವಸಾಹತುಗಳು ಗಣನೀಯ ಮಿಲಿಟರಿ ಕೊಡುಗೆ ನೀಡಿವೆ.
*ಅಮೇರಿಕಾ ಮತ್ತು ಯೂರೋಪ್ ವಸಾಹತುಶಾಹಿ ರಾಷ್ಟ್ರಗಳಿಗೆ ಎರಡನೇ ಮಹಾಯುದ್ದವು ನಾಜಿವಾದದ ವಿರುದ್ದವಿದ್ದರೆ, ಆಫ್ರಿಕಾದ ಸೈನಿಕರಿಗೆ ವರ್ಣಭೇಧ ನೀತಿ ಮತ್ತು ವಸಾಹತುಶಾಹಿಯ ವಿರುದ್ದದ ಯುದ್ದವಾಗಿತ್ತು. ಭಾರತದಲ್ಲಿ ಬ್ರಿಟಿಷರಿಗಾಗಿ ಸೇವೆ ಸಲ್ಲಿಸುತ್ತಿದ್ದ ನೈಜೀರಿಯಾದ ಸೈನಿಕನೊಬ್ಬ 1945ರಲ್ಲಿ ತಾನು ಮನೆಗೆ ಬರೆದ ಪತ್ರದಲ್ಲಿ ಈ ರೀತಿ ದಾಖಲಿಸಿದ್ದಾನೆ: ವಿದೇಶದಲ್ಲಿರುವ ನಾವೆಲ್ಲ ಸೈನಿಕರು ಹೊಸ ವಿಚಾರದೊಂದಿಗೆ ವಾಪಸು ಬರುತ್ತಿದ್ದೇವೆ. ನಾವೆಲ್ಲರೂ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿವೆಂದು ನಮಗೆ ತಿಳಿಸಲಾಗಿದೆ. ನಮಗೆ ಸ್ವಾತಂತ್ರ್ಯ ಬೇಕಷ್ಟೆ. ಬಿಳಿಯ ಸೈನಿಕರೊಂದಿಗೆ ಸರಿಸಮಾನರಾಗಿ ಆಫ್ರಿಕಾದ ಸೈನಿಕರು ಹೋರಾಡಿದರು. ದೂರ ಪ್ರದೇಶಗಳಲ್ಲಿ ಯುದ್ದಗಳನ್ನು ಗೆದ್ದರು. ಹಲವರು ಓದಲು, ಬರೆಯಲು ಕಲಿತರು, ತಾಂತ್ರಿಕ ಪರಿಣತಿ ಪಡೆದರು. ಇದರಿಂದ ಬಿಳಿಯರು ಮಾತ್ರವೇ ಶ್ರೇಷ್ಟರೆಂಬುದು ಅಸಂಬದ್ಧವೆನಿಸಿತವರಿಗೆ. ಹೀಗಾಗಿ ಸ್ವಾತಂತ್ರ್ಯದ ವಿಚಾರಗಳನ್ನು ಅವರು ಅತ್ಯುತ್ಸಾಹದಿಂದ ಸ್ವಾಗತಿಸಿದರು.
"https://kn.wikipedia.org/wiki/ಆಫ್ರಿಕಾ" ಇಂದ ಪಡೆಯಲ್ಪಟ್ಟಿದೆ