ಆಸ್ಟ್ರೇಲಿಯನ್ ಓಪನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
ಚುNo edit summary
೩೩ ನೇ ಸಾಲು:
ಆಸ್ಟ್ರಲೇಷ್ಯನ್‌ ಚಾಂಪಿಯನ್‌ಶಿಪ್‌ನ ಮೊದಲ ಕೆಲ ಪಂದ್ಯಾವಳಿಗಳು ಇತರೆ ಆಸ್ಟ್ರಲೇಷ್ಯನ್‌ ಪಂದ್ಯಾವಳಿಗಳ ತೀವ್ರ ಪೈಪೋಟಿಯಿಂದ ಕಷ್ಟ ಎದುರಿಸಿತು. 1905ರ ಮುಂಚೆ, ಆಸ್ಟ್ರೇಲಿಯಾದ ಎಲ್ಲಾ ರಾಜ್ಯಗಳು ಮತ್ತು ನ್ಯೂಜಿಲೆಂಡ್‌ನಲ್ಲಿ‌ ತಮ್ಮದೇ ಚಾಂಪಿಯನ್‌ಶಿಪ್ ಪಂದ್ಯಾವಳಿಗಳು ಆಯೋಜಿತವಾಗುತ್ತಿದ್ದವು. ಇವುಗಳಲ್ಲಿ ಮೊಟ್ಟಮೊದಲನೆಯದು 1880ರಲ್ಲಿ ಮೆಲ್ಬೊರ್ನ್‌ ನಗರದಲ್ಲಿ ಆಯೋಜಿಸಲಾಗಿತ್ತು. ಈ ಪಂದ್ಯಾವಳಿಗೆ ಚಾಂಪಿಯನ್‌ಶಿಪ್ ಆಫ್‌ ದಿ ಕಾಲೊನಿ ಆಫ್‌ ವಿಕ್ಟೊರಿಯಾ ಎಂದು ಕರೆಯಲಾಯಿತು( ಇದನ್ನು ನಂತರ ಚಾಂಪಿಯನ್‌ಶಿಪ್‌ ಆಫ್‌ ವಿಕ್ಟೊರಿಯಾ ಎನ್ನಲಾಯಿತು). <ref name="tennis.com.au">{{cite web|url=http://www.tennis.com.au/pages/default.aspx?id=21&pageId=878 |title=History of Tennis - From humble beginnings|publisher=[[Tennis Australia]]|accessdate=2008-01-25}}</ref> . ಆ ವರ್ಷಗಳಲ್ಲಿ ಇಬ್ಬರು ಅತ್ಯುತ್ತಮ ಆಟಗಾರರಾದ, ಆಸ್ಟ್ರೇಲಿಯಾ ಮೂಲದ ನಾರ್ಮನ್‌ ಬ್ರೂಕ್ಸ್‌(ಪುರುಷರ ಸಿಂಗಲ್ಸ್ ಕಪ್‌ನಲ್ಲಿ ಅವರ ಹೆಸರು ಬರೆಯಲಾಗಿದೆ) ಮತ್ತು ನ್ಯೂಜಿಲೆಂಡ್‌ನ ಆಂತೊನಿ ವೈಲ್ಡಿಂಗ್‌ ಈ ಪಂದ್ಯಾವಳಿಯಲ್ಲಿ ಬಹುಮಟ್ಟಿಗೆ ಆಡಲಿಲ್ಲ. ಬ್ರೂಕ್ಸ್‌ ಒಮ್ಮೆ ಆಗಮಿಸಿ 1911ರಲ್ಲಿ ಪಂದ್ಯಾವಳಿ ವಿಜೇತರಾದರು. ವೈಲ್ಡಿಂಗ್ ಪ್ರವೇಶಿಸಿ ಎರಡು ಬಾರಿ 1906 ಮತ್ತು 1909ರಲ್ಲಿ ಸ್ಪರ್ಧೆಯಲ್ಲಿ ಗೆದ್ದರು. ವಿಕ್ಟೊರಿಯನ್‌ ಚಾಂಪಿಯನ್‌ಶಿಪ್ ಪಂದ್ಯಾವಳಿ (ಅಥವಾ ವಿಂಬಲ್ಡನ್‌ನಲ್ಲಿ)ಯಲ್ಲಿ ಅವರ ಭೇಟಿಗಳಿಂದ ಆಸ್ಟ್ರೇಲೇಷ್ಯಾದ ಅತ್ಯುತ್ತಮ ಆಟಗಾರರನ್ನು ನಿರ್ಣಯಿಸಲು ನೆರವಾಯಿತು. 1912ರಲ್ಲಿ ನ್ಯೂಜಿಲೆಂಡ್‌ನ ಹೇಸ್ಟಿಂಗ್ಸ್‌ನಲ್ಲಿ ಆಸ್ಟ್ರೇಲೇಷ್ಯನ್‌ ಚಾಂಪಿಯನ್‌ಶಿಪ್ ಪಂದ್ಯಾವಳಿ ನಡೆದಿದ್ದಾಗ, ಮೂರು ಬಾರಿ ವಿಂಬಲ್ಡನ್‌ ಚಾಂಪಿಯನ್‌ ಆಗಿದ್ದರೂ, ವೈಲ್ಡಿಂಗ್‌ ಸ್ವದೇಶಕ್ಕೆ ವಾಪಸಾಗಲಿಲ್ಲ. ಆ ಶಕೆಯ ಎಲ್ಲಾ ಆಟಗಾರರಿಗೂ ಇದು ಮರುಕಳಿಸುವ ಸಮಸ್ಯೆಯಾಗಿತ್ತು. ಬ್ರೂಕ್ಸ್ ಕೇವಲ ಮೂರು ಬಾರಿ ಯುರೋಪ್‌ಗೆ ಹೋಗಿದ್ದರು. ವಿಂಬಲ್ಡನ್‌ ಚಾಲೆಂಜ್‌ ಸುತ್ತನ್ನು ಒಮ್ಮೆ ತಲುಪಿದರಲ್ಲದೆ ಎರಡು ಬಾರಿ ವಿಂಬಲ್ಡನ್‌ ಜಯಗಳಿಸಿದರು. ಇದರಿಂದಾಗಿ, ಹಲವು ಆಟಗಾರರು ಆಸ್ಟ್ರೇಲೇಷ್ಯನ್‌ (ಆಸ್ಟ್ರೇಲಿಯನ್‌) ಹವ್ಯಾಸಿ ಅಥವಾ ಮುಕ್ತ ಚಾಂಪಿಯನ್‌ಶಿಪ್‌ಗಳಲ್ಲಿ ಆಡಿರಲಿಲ್ಲ: ರೆನ್ಷಾ, ಡೊಹರ್ಟಿಸ್ ವಿಲಿಯಮ್‌ ಲರ್ನೆಡ್‌, ಮೌರಿಸ್‌ ಮೆಕ್ಲಫ್ಲಿನ್‌, ಬೀಲ್ಸ್‌ ರೈಟ್‌, ಬಿಲ್‌ ಜಾನ್ಸ್ಟನ್‌, ಬಿಲ್‌ ಟಿಲ್ಡನ್‌, ರೆನೆ ಲಾಕಾಸ್ಟ್‌, ಹೆನ್ರಿ ಕೊಷೆಟ್‌, ಬಾಬ್ಬಿ ರಿಗ್ಸ್‌, ಜ್ಯಾಕ್‌ ಕ್ರಾಮರ್‌, ಟೆಡ್‌ ಷ್ರೋಡರ್‌, ಪ್ಯಾಂಚೊ ಗಾಂಜೇಲ್ಸ್‌, ಬಡ್ಜ್‌ ಪ್ಯಾಟಿ, ಮ್ಯಾನುಯಲ್‌ ಸ್ಯಾಂಟನಾ, ಜಾನ್‌ ಕೊಡ್ಸ್‌‌ ಮತ್ತಿತರರು. ಬ್ರೂಕ್ಸ್‌, ಎಲ್ಸ್‌ವರ್ತ್‌ ವೈನ್ಸ್‌‌, ಯರೊಸ್ಲಾವ್‌ ಡ್ರೊಬ್ನಿ, ಮ್ಯಾನುಯಲ್‌ ಆರಾಂಟಸ್, 35 ವರ್ಷದ ಇಲೀ ನ್ಯಾಸ್ಟಾಸ್‌ ಹಾಗೂ ಜಾನ್‌ ಬಾರ್ಗ್‌ ಒಮ್ಮೆ ಮಾತ್ರ ಆಗಮಿಸಿದ್ದರು.
1969ರಲ್ಲಿ ಮೊಟ್ಟಮೊದಲ ಆಸ್ಟ್ರೇಲಿಯನ್‌ ಓಪನ್‌ ಪಂದ್ಯಾವಳಿಯು ಬ್ರಿಸ್ಬೆನ್‌ನ ಮಿಲ್ಟನ್ ಕೋರ್ಟ್ಸ್‌ನಲ್ಲಿ ನಡೆಯಿತು. ಪಂದ್ಯವಾಳಿಯು ಎಲ್ಲ ಆಟಗಾರರಿಗೂ ಮುಕ್ತವಾಗಿತ್ತು. ಸಾಂಪ್ರದಾಯಿಕ ಸರಣಿಯಲ್ಲಿ ಆಡಲು ಅವಕಾಶವಿಲ್ಲದ ವೃತ್ತಿಪರ ಆಟಗಾರರೂ ಇದರಲ್ಲಿ ಸೇರಿದ್ದರು. <ref name="Ausstadiums">{{cite web|url=http://www.austadiums.com/stadiums/special/milton.php |title=Milton Tennis Centre|publisher=Australian Stadiums|accessdate=2008-01-25}}</ref> ಅದೇನೇ ಇರಲಿ, 1969 ಮತ್ತು 1971 ಪಂದ್ಯಾವಳಿಗಳ ಹೊರತುಪಡಿಸಿ, 1982ರವರೆಗೆ ಅನೇಕ ಮಂದಿ ಅತ್ಯುತ್ತಮ ಆಟಗಾರರು ಈ ಚಾಂಪಿಯನ್‌ಶಿಪ್‌‌ನಲ್ಲಿ ಆಡುವುದರಿಂದ ತಪ್ಪಿಸಿಕೊಂಡರು. ದೂರಪ್ರದೇಶ, ಅನನುಕೂಲದ ದಿನಾಂಕಗಳು (ಕ್ರಿಸ್ಮಸ್‌ ಮತ್ತು ಕ್ರೈಸ್ತವರ್ಷಾರಂಭ ದಿನದ ಆಸುಪಾಸು) ಹಾಗೂ ಬಹಳ ಕಡಿಮೆ ಮೊತ್ತದ ಬಹುಮಾನ ಇದಕ್ಕೆ ಕಾರಣವಾಗಿತ್ತು. 1970ರಲ್ಲಿ, ರಾಡ್‌ ಲೇವರ್‌, ಕೆನ್‌ ರೊಸ್ವಾಲ್‌, ಆಂಡ್ರೆಸ್‌ ಗಿಮೆನೊ, ಪ್ಯಾಂಚೊ ಗಾಂಝೆಲೆಜ್‌, ರಾಯ್‌ ಎಮರ್ಸನ್‌ ಮತ್ತು ಫ್ರೆಡ್‌ ಸ್ಡೊಲ್‌ಅವರನ್ನು ನೇಮಿಸಿಕೊಂಡಿದ್ದ ನ್ಯಾಷನಲ್‌ ಟೆನ್ನಿಸ್‌ ಲೀಗ್‌, ತಮ್ಮ ಆಟಗಾರರು ಪಂದ್ಯಾವಳಿಗೆ ಪ್ರವೇಶಿಸುವುದನ್ನು ತಪ್ಪಿಸಿತು. ಏಕೆಂದರೆ ಖಾತರಿಗಳು ಸಾಕಷ್ಟಿರಲಿಲ್ಲ. ಅಂತಿಮವಾಗಿ, ಆರ್ಥರ್‌ ಆಷ್‌ ಈ ಪಂದ್ಯಾವಳಿಯಲ್ಲಿ ವಿಜೇತರಾದರು. <ref>{{cite news|url=http://www.news.com.au/dailytelegraph/story/0,22049,23047855-5001023,00.html |title=Hewitt chases amazing slam win|publisher=[[news.com.au]]|work=[[The Daily Telegraph (Australia)|The Daily Telegraph]]|author=Nikki Tugwell |date=14 January 2008|accessdate=2008-01-25|archiveurl=https://archive.is/QTjb|archivedate=2012-05-29}}</ref>
1983ರಲ್ಲಿ, ಇವಾನ್‌ ಲೆಂಡ್ಲ್‌, [[ಜಾನ್‌ ಮೆಕೆನ್ರೊ]] ಮತ್ತು ಮ್ಯಾಟ್ಸ್‌ ವಿಲಾಂಡರ್‌ ಪಂದ್ಯಾವಳಿಗೆ ಪ್ರವೇಶಿಸಿದರು. ಸಿಂಗಲ್ಸ್‌ ಪ್ರಶಸ್ತಿ ಗೆದ್ದ ನಂತರ, <ref>{{cite web|url=http://www.wilandertribute.com/22.html |title=Australian Open 1983|author=Alan Trengove|publisher=wilandertribute.com |accessdate=2008-02-19}}</ref> ಕೂಯಾಂಗ್‌ನಲ್ಲಿ ಡೇವಿಸ್‌ ಕಪ್‌ ಪಂದ್ಯದಲ್ಲಿ ತಮ್ಮ ಎರಡೂ ಸಿಂಗಲ್ಸ್‌ ರಬ್ಬರ್‌ಗಳನ್ನು ಮ್ಯಾಟ್ಸ್‌ ವಿಲಾಂಡರ್‌ ಗೆದ್ದುಕೊಂಡರು. ಸ್ವೀಡನ್‌ ಆಸ್ಟ್ರೇಲಿಯಾ ವಿರುದ್ಧ ಡೇವಿಸ್‌ ಕಪ್ ಪಂದ್ಯ ಸೋತಿತು. <ref>{{cite web|url=http://www.daviscup.com/en/results/tie/details.aspx?tieId=10000700 |title=World Group 1983 Final|publisher=[[Davis Cup]]|accessdate=2008-02-19}}</ref> 1983ರ ಆಸ್ಟ್ರೇಲಿಯನ್‌ ಓಪನ್‌ ಪಂದ್ಯಾವಳಿಯ ನಂತರ, ಅಂತಾರಾಷ್ಟ್ರೀಯ ಟೆನ್ನಿಸ್‌ ಒಕ್ಕೂಟವು ಪಂದ್ಯಾವಳಿಯ ಸ್ಥಳವನ್ನು ಬದಲಾಯಿಸುವಂತೆ ಆಸ್ಟ್ರೇಲಿಯ ಲಾನ್‌ ಟೆನ್ನಿಸ್ ಸಂಘಕ್ಕೆ ಪ್ರಚೋದಿಸಿತು.‌ ಇಂತಹ ದೊಡ್ಡ ಪಂದ್ಯಾವಳಿಯ ಆತಿಥ್ಯ ವಹಿಸಲು ಕೂಯಾಂಗ್‌ ಅಸೂಕ್ತ ಎನ್ನುವುದು ಕಾರಣವಾಗಿತ್ತು. 1988ರಲ್ಲಿ ಮೊದಲ ಬಾರಿಗೆ ಫ್ಲಿಂಡರ್ಸ್‌ ಪಾರ್ಕ್‌ನಲ್ಲಿ (ಆನಂತರ ಮೆಲ್ಬೊರ್ನ್‌ ಪಾರ್ಕ್‌ ಎಂದು ಮರುಹೆಸರಿಸಲಾಯಿತು) ಪಂದ್ಯಾವಳಿಯನ್ನು ರಿಬೌಂಡ್‌ ಏಸ್‌ ಅಂಕಣದಲ್ಲಿ ಆಯೋಜಿಸಲಾಯಿತು. <ref>{{cite news|url=http://www.news.com.au/dailytelegraph/story/0,22049,21131668-5001023,00.html |title=Rebound Ace under review|publisher=[[news.com.au]]|work=[[The Daily Telegraph (Australia)|The Daily Telegraph]]|date=29 January 2007|accessdate=2008-02-19|archiveurl=https://archive.is/FyvR|archivedate=2012-05-29}}</ref>
[[File:Rod laver arena.jpg|thumb|200px|ಮೆಲ್ಬೊರ್ನ್‌ ನಗರದ ಮೆಲ್ಬೊರ್ನ್‌ ಪಾರ್ಕ್‌ನಲ್ಲಿರುವ ರಾಡ್‌ ಲೇವರ್‌ ಅಂಕಣ.ಆಟದ ಪ್ರಮುಖ ಸ್ಥಳ.]]
ಮೆಲ್ಬೊರ್ನ್‌ ಪಾರ್ಕ್‌ಗೆ ಸ್ಥಳಾಂತರಕ್ಕೆ ಮುಂಚೆ, ಆತಿಥ್ಯ ವಹಿಸುವ ಸ್ಥಳದ ಹವಾಗುಣ ಅಥವಾ ಅನಿವಾರ್ಯ ಘಟನೆಗಳ ಕಾರಣದಿಂದಾಗಿ, ಆಸ್ಟ್ರೇಲಿಯನ್‌ ಓಪನ್‌ ಪಂದ್ಯಾವಳಿಯ ದಿನಾಂಕಗಳು ಅದರಲ್ಲೂ ನಿರ್ದಿಷ್ಟವಾಗಿ ಅರಂಭಿಕ ವರ್ಷಗಳಲ್ಲಿ ಏರುಪೇರಾಯಿತು. ಉದಾಹರಣೆಗೆ, 1919ರ ಪಂದ್ಯಾವಳಿಯನ್ನು 1920ರ ಜನವರಿ ತಿಂಗಳಲ್ಲಿ ನಡೆಸಲಾಯಿತು (1920ರ ಪಂದ್ಯಾವಳಿಯನ್ನು ಅದೇ ವರ್ಷದ ಮಾರ್ಚ್‌ ತಿಂಗಳಲ್ಲಿ ನಡೆಸಲಾಗುತ್ತಿತ್ತು). 1923ರಲ್ಲಿ ಬ್ರಿಸ್ಬೆನ್‌ನಲ್ಲಿ ಪಂದ್ಯಾವಳಿಯನ್ನು, ತೀವ್ರ ಬಿಸಿಲು ಅಥವಾ ಆರ್ದ್ರತೆಯಿರದ, ಸೌಮ್ಯ ಹವಾಗುಣದ ಆಗಸ್ಟ್‌ ತಿಂಗಳಲ್ಲಿ ನಡೆಸಲಾಯಿತು. ಮೊದಲ ಬಾರಿಗೆ, 1977ರ ಪಂದ್ಯಾವಳಿಯನ್ನು 1976ರ ಡಿಸೆಂಬರ್ ಹಾಗೂ 1977ರ ಜನವರಿ ತಿಂಗಳುಗಳ ನಡುವೆ ಆಯೋಜಿಸಿದ ನಂತರ ಮುಂದಿನ ಪಂದ್ಯಾವಳಿಯನ್ನು ಕೆಲವು ದಿನಗಳವರೆಗೆ ಮುಂದಕ್ಕೆ ಹಾಕಲು ಆಯೋಜಕರು ಆಯ್ಕೆಮಾಡಿಕೊಂಡರು. ನಂತರ ಅದೇ ವರ್ಷ ಇನ್ನೊಂದು ಪಂದ್ಯಾವಳಿಯು ನಡೆದು, ಡಿಸೆಂಬರ್‌ 31ರಂದು ಅಂತ್ಯಗೊಂಡಿತು. ಆದರೂ ಅತ್ಯುತ್ತಮ ಆಟಗಾರರನ್ನು ಆಕರ್ಷಿಸಲು ಇದು ವಿಫಲವಾಯಿತು. 1982ರಿಂದ 1985ರ ತನಕ, ಪಂದ್ಯಾವಳಿಯನ್ನು ಡಿಸೆಂಬರ್‌ ತಿಂಗಳ ಮಧ್ಯದಲ್ಲಿ ನಡೆಸಲಾಯಿತು. ನಂತರ ಮುಂದಿನ ಪಂದ್ಯಾವಳಿಯನ್ನು (ಜನವರಿ 1987) ಜನವರಿಯ ಮಧ್ಯಾವಧಿಗೆ ಸ್ಥಳಾಂತರಿಸಲು ನಿರ್ಧರಿಸಲಾಯಿತು, ಅದರ ಅರ್ಥ 1986ರಲ್ಲಿ ಆಸ್ಟ್ರೇಲಿಯನ್‌ ಓಪನ್ ಪಂದ್ಯಾವಳಿ ನಡೆಯಲಿಲ್ಲ. 1987ರಿಂದಲೂ, ಆಸ್ಟ್ರೇಲಿಯನ್‌ ಓಪನ್‌ ನಡೆಯುವ ದಿನಾಂಕವು ಬದಲಾಗಿಲ್ಲ. ಆದರೂ, ಆಸ್ಟ್ರೇಲಿಯನ್‌ ಓಪನ್‌ ಪಂದ್ಯಾವಳಿಯು ಕ್ರಿಸ್ಮಸ್‌ ಮತ್ತು ಹೊಸವರ್ಷ ರಜೆಗಳು ಕಳೆದ ಕೂಡಲೆ ಆರಂಭಗೊಳ್ಳುವುದರಿಂದ ಆಟಗಾರರು ತಮ್ಮ ಉತ್ತಮ ಲಯ ಕಂಡುಕೊಳ್ಳಲು ಅಸಾಧ್ಯವಾಗುತ್ತದೆ, ಇದರಿಂದಾಗಿ ಪಂದ್ಯಾವಳಿಯನ್ನು ಫೆಬ್ರವರಿಗೆ ಸ್ಥಳಾಂತರಿಸಬೇಕು ಎಂದು [[ರೋಜರ್ ಫೆಡರರ್|ರೋಜರ್‌ ಫೆಡರರ್]]‌, ರಫೆಲ್ ನಡಾಲ್‌ ಸೇರಿದಂತೆ ಹಲವು ಶ್ರೇಷ್ಠ ಟೆನ್ನಿಸ್‌ ಆಟಗಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. <ref>{{cite news|url=http://www.news.com.au/heraldsun/story/0,21985,24922806-3162,00.html|title=Rafael Nadal keen to call time on early slam|publisher=[[Herald Sun]]|date=2009-01-17|accessdate=2009-09-18 | first=Leo | last=Schlink|archiveurl=https://archive.is/4S7c|archivedate=2012-05-29}}</ref>