ಕೈರೋ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Caironight_004.jpg ಹೆಸರಿನ ಫೈಲು INeverCryರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾ...
೪೯ ನೇ ಸಾಲು:
 
[[File:Nile-Cairo.jpg|thumb|Cairo Skyline|300px]]
ನಾಗರಿಕ ವಿಮಾನ ನಿಲ್ದಾಣದಿಂದ ಈಶಾನ್ಯಕ್ಕೆ ಸಾಗುವ ರಸ್ತೆ ಕೈರೋದ ಆಧುನಿಕ ಉಪನಗರವಾದ ಹೆಲಿಯೊಪೊಲಿಸಿನ ಮೂಲಕ ಹಾದು, ಷರಿಯ ರ್ಯಾಮಿಸೀಸ್ ಮತ್ತು ಷರಿಯ ಅಲ್ ಗೇಷ್‍ಗಳಿಗೆ ಕವಲೊಡೆಯುತ್ತದೆ. ಷರಿಯ ರ್ಯಾಮಿಸೀಸ್‍ನ ಕೊನೆಯಲ್ಲಿ ರೈಲ್ವೆ ನಿಲ್ದಾಣದ ಎದುರಿಗೆ ಇರುವುದೇ ರಾಮಿಸೀಸ್ ಚೌಕ. ಇಲ್ಲಿ 2ನೆಯ ರ್ಯಾಮಿಸೀಸ್‍ನ ಬೃಹದಾಕಾರದ ಪುರಾತನ ಪ್ರತಿಮೆಯಿದೆ. [[ಮೆಂಫಿಸ್]] ಸ್ಥಳದಿಂದ ಇಲ್ಲಿಗೆ ಈ ಪ್ರತಿಮೆಯನ್ನು 1955ರಲ್ಲಿ ತರಲಾಯಿತು. ಇಲ್ಲಿಂದ ಹೊರಡುವ ಮುಖ್ಯ ರಸ್ತೆಗಳಲ್ಲೊಂದಾದ ಷರಿಯ ಅಲ್ ಗುಮ್ಹುರಿಯದಲ್ಲಿ ಸಾಗಿದರೆ ಒಪೆರ ಚೌಕ ಸಿಗುತ್ತದೆ. [[ಸೂಯೆಜ್ ಕಾಲುವೆ]]ಯ ಆರಂಭೋತ್ಸವದ ಅಂಗವಾಗಿ ಇಲ್ಲಿ 1869ರಲ್ಲಿ ಒಪೆರ ಭವನದ ಆರಂಭವಾಯಿತು. ಒಪೆರ ಚೌಕದ ನಡುವೆ ಮಹಮ್ಮದ್ ಆಲೀ ಪಾಷನ ಮಗ ಇಬ್ರಾಹಿಮನ ಸುಂದರ ಪ್ರತಿಮೆಯಿದೆ. ಅದಕ್ಕೆದುರಾಗಿ ಕಾಂಟಿನೆಂಟಲ್-ಸವಾಯ್ ಹೋಟೆಲು. ಹತ್ತಿರದಲ್ಲೇ ಅಲ್ ಎಜ್ಬೇóಕಿಯ ಸಾರ್ವಜನಿಕ ಉದ್ಯಾನ. ಇದರೊಳಗೆ ಹಾಯ್ದು ಹೋಗುವ ಉದ್ದನೆಯ ಬೀದಿಯೇ ಷರಿಯ ಜುಲೈ 26. ಮುಂದೆ ಇದು ನದಿಯನ್ನು ದಾಟಿ ಜೆಜಿಕೀರ ದ್ವೀಪಕ್ಕೆ ಸಾಗುತ್ತದೆ. ಷರಿಯ ಸುಲಿಮಾನ್ ಪಾಷ ರಸ್ತೆಯಲ್ಲಿ ದಕ್ಷಿಣಾಭಿಮುಖವಾಗಿ ಸಾಗಿದರೆ ಸುಲಿಮಾನ್ ಪಾಷ ಚೌಕ ಸಿಗುತ್ತದೆ. ಅಲ್ಲಿಂದ ಪೂರ್ವಕ್ಕೆ ಷರಿಯ ಕಸ್ರ್ ಅಲ್ ನಿಲ್. ಈಜಿಪ್ಟಿನ ರಾಷ್ಟ್ರೀಯ ಬ್ಯಾಂಕ್ (1898) ಅಲ್ಲಿದೆ. ಷರಿಯ ಸುಲಿಮಾನ್ ಪಾಷದ ಆಚೆಗೆ ಕೆಲವು ಮುಖ್ಯ ಪತ್ರಿಕಾ ಕಚೇರಿಗಳಿವೆ. ಸುಲಿಮಾನ್ ಪಾಷ ಚೌಕಕ್ಕೂ ನೈಲ್ ನದಿಗೂ ನಡುವೆ ಇರುವುದೇ ವಿಮೋಚನಾ (ತಹ್ರಿರ್) ಚೌಕ. ಹತ್ತು ರಸ್ತೆಗಳು ಕೂಡುವ ಸ್ಥಳವಿದು. ಇದರ ದಕ್ಷಿಣ ಪಾಶ್ರ್ವದಲ್ಲಿ ಸರ್ಕಾರಿ ಕಚೇರಿಗಳ ಆಧುನಿಕ ಕಟ್ಟಡಗಳುಂಟು. ಅಲ್ಲೇ ಎದುರಿಗೆ 1902ರಲ್ಲಿ ಕಟ್ಟಲಾದ ಈಜಿಪ್ಟ್ ವಸ್ತುಸಂಗ್ರಹಾಲಯವಿದೆ. 1928ರಲ್ಲಿ ನಿರ್ಮಿತವಾದ ಆಧುನಿಕ ಕಲಾ ವಸ್ತುಸಂಗ್ರಹಾಲಯ ಇರುವುದೂ ಹತ್ತಿರದಲ್ಲೇ.
ಆಧುನಿಕ ಕೈರೋಗೂ ಅಲ್ ಮೊಕತ್ತಂ ಬೆಟ್ಟಗಳಿಗೂ ನಡುವೆ 11 ರಿಂದ 16ನೆಯ ಶತಮಾನಗಳ ನಡುವಣ ಕಾಲದಲ್ಲಿ ನಿರ್ಮಿತವಾದ ಅರಬ್ ನಗರದ ಬಹುಭಾಗವಿದೆ. ವಿಶ್ವದ ಬೇರಾವುದೇ ನಗರದಲ್ಲಿಲ್ಲದಷ್ಟು ಅಧಿಕ ಸಂಖ್ಯೆಯಲ್ಲಿ ಅರಬ್ ವಾಸ್ತು ಸಂಪತ್ತು ಇಲ್ಲಿ ಸಾಂದ್ರೀಕೃತವಾಗಿದೆ. ಪಟ್ಟಿಮಾಡಲಾದ ಐತಿಹಾಸಿಕ ಸ್ಮಾರಕಗಳ ಸಂಖ್ಯೆಯೇ ಸುಮಾರು 400. ಇಲ್ಲಿ ಮಹಮ್ಮದ್ ಆಲಿ ಕಟ್ಟಿಸಿದ ಆಟೊಮನ್ ಶೈಲಿಯ ಸುಂದರ ಮಸೀದಿ ಇದೆ. ಇದರಲ್ಲಿ ಈತನನ್ನು 1849ರಲ್ಲಿ ಸಮಾಧಿ ಮಾಡಲಾಯಿತು. ಇದು 12ನೆಯ ಶತಮಾನದಲ್ಲಿ ಸಾಲಾದೀನ್ ಕಟ್ಟಿಸಿದ ಕೋಟೆಯೊಳಗಡೆ ಇದೆ. ಇಲ್ಲಿಯೇ 1946ರಲ್ಲಿ ಬ್ರಿಟಿಷ್ ಸೈನ್ಯ ಈಜಿಪ್ಟ್ ಸೈನ್ಯಕ್ಕೆ ಅಧಿಕಾರವನ್ನು ವಹಿಸಿಕೊಟ್ಟದ್ದು. ಸಾಲಾದಿನ್ ಚೌಕವಿರುವುದು ಈ ಕೋಟೆಯಿಂದ ಕೆಳಕ್ಕೆ. ಇಸ್ಲಾಂ ವಾಸ್ತುಶಿಲ್ಪಕ್ಕೆ ಹೆಸರಾದ, 1361ರಲ್ಲಿ ಸುಲ್ತಾನ್ ಹಸನ್ ಕಟ್ಟಿಸಿದ, ಮಸೀದಿ ಈ ಚೌಕದಿಂದಾಚೆಗಿದೆ. 1912ರಲ್ಲಿ ಕಟ್ಟಿ ಮುಗಿಸಿದ ಅಲ್ ರಿಫಾಇಯ ಆಧುನಿಕ ಮಸೀದಿ ಇದೆ. ದೊರೆ ಫೌದ್ ಮತ್ತು ಆತನ ಕುಟುಂಬದವರ ಸಮಾಧಿ ಇರುವುದು ಇಲ್ಲೇ.
 
"https://kn.wikipedia.org/wiki/ಕೈರೋ" ಇಂದ ಪಡೆಯಲ್ಪಟ್ಟಿದೆ