ಮಿಝೋರಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ವಿಕೀಕರಣ
೨೬ ನೇ ಸಾಲು:
'''ಮಿಝೋರಂ''' [[ಈಶಾನ್ಯ]] [[ಭಾರತ|ಭಾರತದ]] ರಾಜ್ಯಗಳಲ್ಲೊಂದು. ೨೦೦೧ದ ಜನಗಣತಿಯ ಪ್ರಕಾರ ಇಲ್ಲಿನ ಜನಸಂಖ್ಯೆ ೮,೮೮,೫೭೩ ಇತ್ತು. ೯೦.೨೭ ಪ್ರತಿಶತ [[ಸಾಕ್ಷರತೆ|ಸಾಕ್ಷರತೆಯನ್ನು]] ಹೊಂದಿರುವ ಮಿಝೋರಂ ಸಾಕ್ಷರತೆ ಪ್ರಮಾಣದಲ್ಲಿ [[ಕೇರಳ|ಕೇರಳದ]] ನಂತರ ಎರಡನೇ ಸ್ಥಾನದಲ್ಲಿದೆ.
 
ಮೀಜೊರಮ್ ಭಾರತದ ಒಂದು ರಾಜ್ಯ. ಈಶಾನ್ಯ ಭಾಗದಲ್ಲಿರುವ ಈ ರಾಜ್ಯವನ್ನು ಉತ್ತರದಲ್ಲಿ ಭಾರತದ ಅಸ್ಸಾಮ ಮತ್ತು ಮಣಿಪುರ ರಾಜ್ಯಗಳು, ಪೂರ್ವ ದಕ್ಷಿಣಗಳಲ್ಲಿ ಬರ್ಮ, ಪಶ್ಚಿಮದಲ್ಲಿ ಬಾಂಗ್ಲಾದೇಶ ಮತ್ತು ಭಾರತದ ತ್ರಿಪುರಾ ರಾಜ್ಯ ಸುತ್ತುವರೆದಿವೆ. ಮೀಜೊರಮ್‍ನ ವಿಸ್ತೀರ್ಣ 21,081 ಚ.ಕಿಮೀ. ಜನಸಂಖ್ಯೆ 4,93,757,(1981). ರಾಜಧಾನಿ ಐಜಾವ್ಲಾ[[ಐಝ್ವಾಲ್]].
 
== ಭೌತಲಕ್ಷಣ ==
ಭೌತಲಕ್ಷಣ: ಮೀಜೊರಮ್ ಬೆಟ್ಟಗಳ ಪ್ರದೇಶ. ಮೀಜೊ ಭಾಷೆಯಲ್ಲಿ ಮೀಜೊರಮ್ ಎಂದರೆ ಬೆಟ್ಟಗಳ (ಜೋ) ಜನ (ಮೀ) ಇರುವ ಪ್ರದೇಶ ಎಂದು ಅರ್ಥ. ಇಲ್ಲಿಯ ಬೆಟ್ಟಗಳ ದಕ್ಷಿಣೋತ್ತರವಾಗಿ ಹಬ್ಬಿವೆ. ಇವುಗಳ ಸರಾಸರಿ ಎತ್ತರ ಸಮುದ್ರ ಮಟ್ಟದಿಂದ 900 ಮೀ. ಅತ್ಯುನ್ನತ ಬ್ಲ್ಯೂಶಿಖರ 2.165 ಮೀ ಎತ್ತರವಾಗಿದೆ.
 
ಮೀಜೊರಮ್‍ನ ಉತ್ತರಭಾಗದಲ್ಲಿ ಹರಿಯುವ ಮುಖ್ಯ ನದಿಗಳು ಧಾಲೇಶ್ವರಿ (ತ್ಲಾವೆಂಗ್) ಸೊನಾಯ್ ಮತ್ತು ತುಯಿವಾವ್ಲ್ ಇವು ಬಾರಾಕ್ ನದಿಯನ್ನು ಸೇರುತ್ತವೆ. ದಕ್ಷಿಣದಲ್ಲಿ ಕೋಲದೀನದಿ ಮತ್ತು ಅದರ ಉಪನದಿಗಳು ಹರಿಯುತ್ತವೆ. ಪಶ್ಚಿಮದ ಮುಖ್ಯ ನದಿ ಕರ್ಣಪುಲಿ. ಇದು ಬಾಂಗ್ಲಾದೇಶದಲ್ಲಿ ಮುಂದುವರಿಯುತ್ತದೆ.
 
== ವಾಯುಗುಣ ==
ವಾಯುಗುಣ: ಮೀಜೊರಮ್‍ನ ಕಣಿವೆಗಳು ಮಳೆಗಾಲದಲ್ಲಿ ನೀರಿನಿಂದ ಕೂಡಿದ್ದು ವಾಸಕ್ಕೆ ಯೋಗ್ಯವೆನಿಸವು ಮತ್ತು ಅನಾರೋಗ್ಯಕರವೆನಿಸಿವೆ. ಇಲ್ಲಿಯ ಎತ್ತರ ಪ್ರದೇಶ ಹಿತಕರವಾದ ವಾಯುಗುಣದಿಂದ ಕೂಡಿದೆ. ಮೀಜೊರಮ್‍ನ ವಾರ್ಷಿಕ ಸರಾಸರಿ ಮಳೆ 254 ಸೆಂಮೀ. ಉತ್ತರದಲ್ಲಿ ಐಜಾವ್ಲ್‍ನಲ್ಲಿ ಬೀಳುವ ಮಳೆ 208 ಸೆಂಮೀ, ದಕ್ಷಿಣದ ಲುಂಗ್ಲೇನಲ್ಲಿ 350 ಸೆಂಮೀ ಮಳೆಯಾಗುತ್ತದೆ.
 
== ಆರ್ಥಿಕತೆ ==
ಆರ್ಥಿಕತೆ: ಕೃಷಿ ಇಲ್ಲಿಯ ಮುಖ್ಯ ಅರ್ಥಿಕ ಜೀವಾಳ. ಕಾಡು ಕಡಿದು ಸುಟ್ಟು ಬರಿದಾದ ನೆಲದಲ್ಲಿ ಬೆಳೆ ತೆಗೆಯುವ ಅತ್ಯಂತ ಹಿಂದುಳಿದ `ಜೂಮ್ ಬೇಸಾಯ ಪದ್ದತಿ ಸಾಮಾನ್ಯ. ವೈಜ್ಞಾನಿಕವಾದ ಆಧುನಿಕ ಕೃಷಿ ಪದ್ದತಿಗಳನ್ನು ಜಾರಿಗೆ ತರಲು ಸರ್ಕಾರ ಯತ್ನಿಸುತ್ತಿದೆ, ಬತ್ತ ಪ್ರಮುಖ ಆಹಾರಧಾನ್ಯ. ಮುಸುಕಿನ ಜೋಳ ಶುಂಠಿ ಬೆಳೆಯುತ್ತಾರೆ. ಬೆಟ್ಟಗಳ ಇಳಿಜಾರುಗಳಲ್ಲಿ ಮೆಟ್ಟಲು ಮೆಟ್ಟಲಾಗಿ ನೆಲವನ್ನು ಕಡಿದು ಈ ಬೆಳೆಗಳನ್ನು ಬೆಳೆಯಲಾಗುತ್ತದೆ. ರಬ್ಬರ್, ಕಾಫಿ, ಚಹಾ ಮುಂತಾದ ತೋಟದ ಬೆಳೆಗಳನ್ನು ಬೆಳೆಯಲು ಪ್ರಯತ್ನಗಳು ನಡೆದಿದೆ.
 
ಮೀಜೊರಮ್‍ನಲ್ಲಿ ದೊಡ್ಡ ಕೈಗಾರಿಕೆಗಳು ಇಲ್ಲ. ಕೈಮಗ್ಗ ಮತ್ತು ಕರಕುಶಲ ಕೈಗಾರಿಕೆಗಳಿವೆ. ರೇಷ್ಮೆ ಉದ್ಯಮವೂ ಹಳೆಯದು. ಶುಂಠಿರಸ ತೆಗೆಯುವುದು. ಎಣ್ಣೆ ಉತ್ಪಾದನೆ, ಫಲಸಾರ ಮುದ್ರಣ ಮರಕೊಯ್ಯುವುದು. ಇಟ್ಟಿಗೆ, ಸಾಬೂನು ತಯಾರಿಕೆ ಮುಂತಾದ ಸಣ್ಣ ಕೈಗಾರಿಕೆಗಳಿವೆ.
 
== ಆಡಳಿತ ==
ಆಡಳಿತ: ಮೀಜೊರಮ್ ರಾಜ್ಯದ ಜಿಲ್ಲೆಗಳು ಐಜಾವ್ಲಾ ಲುಂಗ್ಲೈ ಮತ್ತು ಛಿಮ್ಟುಟಿಪುಯಿ. ಐಜಾವ್ಲಾ ರಾಜಧಾನಿ. ರಾಜ್ಯದಲ್ಲಿ ಒಟ್ಟು ಎಂಟು ಪಟ್ಟಣಗಳಿವೆ. ಐಜಾವ್ಲಾ ಜಿಲ್ಲೆಯ ವಿಸ್ತೀರ್ಣ 12,589 ಚ.ಕಿಮೀ. ಜನಸಂಖ್ಯೆ 3,40,826 (1981). ಮುಖ್ಯ ಪಟ್ಟಣ ಐಜಾವ್ಲಾ[[ಐಝ್ವಾಲ್]].. ಲುಂಗ್ಲೈ ಜಿಲ್ಲೆ 4,536 ಚಕಿಮೀ ವಿಸ್ತಾರವಾಗಿದೆ. ಇದರ ಜನಸಂಖ್ಯೆ 86,511 (1981). ಜಿಲ್ಲೆಯ ಆಡಳಿತ ಕೇಂದ್ರ ಲುಂಗ್ಲೈ. ಛಿಮ್ಟುಟಿಪುಯಿ ಜಿಲ್ಲೆಯ ವಿಸ್ತೀರ್ಣ 3,957 ಚಕಿಮೀ ಜನಸಂಖ್ಯೆ 66,420 (1981). ಆಡಳಿತ ಕೇಂದ್ರ ಛಿಮ್ಟುಟಿಪುಯಿ. ಮೀಜೊರಮ್‍ನ ಭಾಷೆಗಳು ಮೀಜೊ ಮತ್ತು ಇಂಗ್ಲಿಷ್. ಇಲ್ಲಿ ಶೇಕಡಾ 60ರಷ್ಟು ಮಂದಿ ಅಕ್ಷರಸ್ಥರು.
 
== ಇತಿಹಾಸ ==
ಇತಿಹಾಸ: ಮೀಜೊ ಜನಗಳು ಮಂಗೋಲಿಯನ್ ಬುಡಕಟ್ಟಿಗೆ ಸೇರಿದವರು. ಇಲ್ಲಿಗೆ ಬರುವ ಮೊದಲು ಇವರು ಬರ್ಮದ ಷಾನ್ ರಾಜ್ಯದ ಪ್ರದೇಶದಲ್ಲಿ ನೆಲಸಿದ್ದರು. ಬರ್ಮವನ್ನು ಬಿಟ್ಟು ಇವರು ಪಶ್ಚಿಮಾಭಿಮುಖವಾಗಿ ಸಾಗಿ ಲುಷಾಯಿ ಬೆಟ್ಟಗಾಡು ಪ್ರದೇಶವನ್ನು ಆಕ್ರಮಿಸಿಕೊಂಡರು. ಬ್ರಿಟಿಷ್ ಅಡಳಿತ ಇದ್ದಕಾಲದಲ್ಲಿ ಮೀಜೊ ಜನರು ಬ್ರಿಟಿಷ್ ಅಕ್ರಮಿತ ಪ್ರದೇಶಗಳ ಮೇಲೆ ಪದೇ ಪದೇ ಧಾಳಿ ಮಾಡುತ್ತಿದ್ದರು. ಬ್ರಿಟಿಷ್ ಸೇನಾ ನೆಲೆಗಳ ಮೇಲೂ ಏರಿಬರುತ್ತಿದ್ದರು. ಬ್ರಿಟಷ್ ಸೇನೆ ಮೀಜೋಗಳ ಮೇಲೆ ಯುದ್ದ ಮಾಡಿ ಅವರ ನೆಲವನ್ನು ವಶಪಡಿಸಿಕೊಂಡು 1891ರಲ್ಲಿ ಅದನ್ನು ಬ್ರಿಟಿಷ್ ಭಾರತಕ್ಕೆ ಸೇರಿಸಿತು.
 
1898ರಲ್ಲಿ ಇಡೀ ಮೀಜೋ ಪ್ರದೇಶವನ್ನು ಒಂದು ಜಿಲ್ಲೆಯಾಗಿ ರೂಪಿಸಿ ಮೀಜೊ ಬೆಟ್ಟ ಜಿಲ್ಲೆ ಎಂದು ಕರೆಯಲಾಯಿತು. ಹಾಗೂ ಅಸ್ಸಾಮ್ ಪ್ರಾಂತ್ಯಕ್ಕೆ ಇದನ್ನು ಸೇರಿಸಲಾಯಿತು. ಹೀಗೆ ಮೀಜೊಗಳು ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟಿದ್ದರೂ ಅವರ ಗ್ರಾಮಾಡಳಿತದಲ್ಲಿ ಬ್ರಿಟಿಷರು ಪ್ರವೇಶಿಸಲಿಲ್ಲ. ಮೀಜೋ ಗುಂಪುಗಳ ನಾಯಕರು ಹಿಂದಿನಿಂದ ಬಂದ ಪದ್ಧತಿಯಲ್ಲೇ ದಿನ ದಿನದ ಆಡಳಿತ ನಡೆಸುತ್ತಿದ್ದರು.
Line ೪೮ ⟶ ೫೩:
ಭಾರತ ಸರ್ಕಾರದ ಅಡಿಯಲ್ಲಿ ತಮ್ಮ ಪುರೋಭಿವೃದ್ಧಿ ಆಗುತ್ತಿಲ್ಲವೆಂಬ ಭಾವನೆಯಿಂದ ಅನೇಕ ಮೀಜೊಗಳು ಸ್ವಾತಂತ್ರ್ಯಕ್ಕಾಗಿ ಸಶಸ್ತ್ರ ಹೋರಾಟ ನಡೆಸತೊಡಗಿದ್ದರು. ಇವರಿಗೆ ಅನ್ಯ ದೇಶಗಳ ಬೆಂಬಲ ಪ್ರೋತ್ಸಾಹಗಳು ದೊರಕುತ್ತಿದ್ದುವು. ದಂಗೆಕೋರರನ್ನಡಗಿಸಲು ಸರ್ಕಾರ ಸೈನಿಕ ಕಾರ್ಯಾಚರಣೆ ನಡೆಸಬೇಕಾಯಿತು. ಸರ್ಕಾರ ಇದನ್ನು ಗಲಭೆಗೊಳಗಾದ ಪ್ರದೇಶವೆಂದು ಸಾರಿತು. ಮೀಜೊರಮ್‍ನಲ್ಲಿ ಶಾಂತಿ ಸ್ಥಾಪಿಸಲು ನಡಸಿದ ಯತ್ನಗಳು ಯಶಸ್ವಿಯಾಗಲಿಲ್ಲ. 1972ರಲ್ಲಿ ಇದಕ್ಕೆ ಮೀಜೊರಮ್ ಎಂದು ಹೆಸರು ನೀಡಿ ಕೇಂದ್ರ ಶಾಸಿತ ಪ್ರದೇಶವಾಗಿ ಮಾಡಿ ಅಸ್ಸಾಮಿನಿಂದ ಪ್ರತ್ಯೇಕಗೊಳಿಸಿದರು, ಅದರಿಂದಲೂ ದಂಗೆಕೋರರಿಗೆ ತೃಪ್ತಿಯಾಗಲಿಲ್ಲ.
 
1986ರ ಜೂನ್ 30ರಂದು ಭಾರತ ಸರ್ಕಾರಕ್ಕೂ [[ಮೀಜೊ ರಾಷ್ಟ್ರೀಯ ರಂಗಕ್ಕೂರಂಗ]]ಕ್ಕೂ ಶಾಂತಿ ಒಡಂಬಡಿಕೆಯಾಯಿತು. ಎರಡು ದಶಕಗಳಿಗೂ ಹೆಚ್ಚು ಕಾಲದ ಹೋರಾಟ ಕೊನೆಗೊಂಡಿತು. ಮೀಜೊ ಈಗ ಭಾರತದ ಒಂದು ರಾಜ್ಯವಾಗಿದೆ.
 
ಮೀಜೊಗಳಲ್ಲಿ ಲುಷಾಯಿ, ಪಾವಿ, ಸೈಥೆ, ರಾಲ್ಟೆ. ಪಾಂಗ್ ಹ್ಮಾರ್. ಕುಕಿ. ಮರಾ ಲಾಖೆರ್ ಮುಂತಾದ ಅನೇಕ ಬುಡಕಟ್ಟುಗಳಿವೆ. 19ನೆಯ ಶತಮಾನದಲ್ಲಿ ಕ್ರೈಸ್ತ ಮಿಷನರಿಗಳ ಪ್ರಭಾವಕ್ಕೆ ಒಳಪಟ್ಟು ಅನೇಕರು ಕ್ರೈಸ್ತರಾಗಿ ಮತಾಂತರಗೊಂಡಿದ್ದಾರೆ. ಮೀಜೊ ಭಾಷೆಗೆ ಅದರದೇ ಲಿಪಿ ಇರಲಿಲ್ಲ. ಪಾದ್ರಿಗಳು ರೋಮನ್ ಲಿಪಿಯನ್ನು ಬಳಕೆಗೆ ತಂದರಲ್ಲದೆ ಅಲ್ಲಿಯ ಜನಕ್ಕೆ ಇಂಗ್ಲಿಷ್ ಬೋಧಿಸತೊಡಗಿದರು. ಇದರ ಫಲವಾಗಿ ಅಲ್ಲಿ ಅಕ್ಷರಸ್ಥರ ಪ್ರಮಾಣ ಹೆಚ್ಚಿತು. ಇಂದು ಅಲ್ಲಿ ಕ್ರೈಸ್ತರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಅವರು ಇಂಗ್ಲಿಷ್ ಮೀಜೊ ಎರಡೂ ಭಾಷೆಗಳನ್ನಾಡುತ್ತಾರೆ. ಗಡಿ ಪ್ರದೇಶದಲ್ಲಿರುವ ಚಕ್ಮಾ ಮುಂತಾದ ಬುಡಕಟ್ಟುಗಳ ಜನರು ಬೌದ್ಧರು. ಅವರ ಭಾಷೆ ಬಂಗಾಲಿ. (ಎಚ್.ಎಸ್.ಕೆ.)
 
==೨೦೧೩ರ ವಿಧಾನ ಸಭಾ ಚುನಾವಣಾ ಫಲಿತಾಂಶ==
Line ೬೭ ⟶ ೭೨:
:[[ಭಾರತದ ಸಾರ್ವತ್ರಿಕ ಚುನಾವಣೆ, ೨೦೦೯]]
:[[೨೦೧೩ ರ ಭಾರತದ ಸಾರ್ವತ್ರಿಕ ಚುನಾವಣಾ ಫಲಿತಾಂಶ]]
:
<br clear="all">
:{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೀಜೊರಮ್}}
{{ಚುಟುಕು}}
{{ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು}}
[[Category:ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು]]
"https://kn.wikipedia.org/wiki/ಮಿಝೋರಂ" ಇಂದ ಪಡೆಯಲ್ಪಟ್ಟಿದೆ