"ಜಾರ್ಜ್ ರಾಬರ್ಟ್ ಗಿಸ್ಸಿಂಗ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
(ಕೊಂಡಿ ಸೇರ್ಪಡೆ)
*ದಕ್ಷಿಣ ಫ್ರಾನ್ಸಿಗೆ ಹೋಗಿ ಅಲ್ಲಿ ನೆಲಸಿದ ಮೇಲೆ ಹೊಟ್ಟೆ ಬಟ್ಟೆಗಳ ತಾಪತ್ರಯವಿರಲಿಲ್ಲ. ತನ್ನ ಮನಸ್ಸನ್ನರಿತು ನಡೆದುಕೊಳ್ಳುವ ಸುಸಂಸ್ಕೃತ ಫ್ರೆಂಚ್ ಮಹಿಳೆಯೊಬ್ಬಳ ಸಖ್ಯದಲ್ಲಿ ದಿನಗಳು ಮಧುರವಾಗಿ ಕಳೆದವು. ಆ ದಿನಗಳಲ್ಲೇ ದಿ ಐಯೊನಿಯನ್ ಸೀಸ್ ಎಂಬ ಒಂದು ಸೊಗಸಾದ ಪ್ರವಾಸ ಕಥನವನ್ನು ಬರೆದ. 1904ರಲ್ಲಿ ವೆರಾನಿಲ್ಡಾ ಎಂಬ ರೋಮನ್ ಇತಿಹಾಸದ ವಸ್ತುವೊಂದನ್ನು ಕುರಿತ ಕಾದಂಬರಿಯನ್ನು ಬರೆಯಲು ಆರಂಭಿಸಿದ. ಆದರೆ ಅದು ಪುರ್ಣವಾಗಲಿಲ್ಲ.
*ದಕ್ಷಿಣ ಫ್ರಾನ್ಸಿನ ಸೇಂಟ್ ಜೀನ್ ಡಿ ಲುಜ಼್ ಎಂಬಲ್ಲಿ 1903ರ ಡಿಸೆಂಬರ್ 28 ರಂದು ಕೊನೆಯುಸಿರೆಳೆದ. ಈತನ ಕಾದಂಬರಿಗಳು ಸ್ವರೂಪದಲ್ಲಿ ವಿಕ್ಟೋರಿಯನ್ ಸಾಹಿತ್ಯ ಮಾದರಿಯಂತೆ ಇದ್ದರೂ ವಸ್ತುವಿನಲ್ಲಾಗಲಿ ಮನೋಧರ್ಮದಲ್ಲಾಗಲೀ ಹಾಗಿಲ್ಲ. ಸಾಮಾನ್ಯವಾಗಿ ಈತನ ಎಲ್ಲ ಕಾದಂಬರಿಗಳಲ್ಲೂ ವಿಷಾದದ ಛಾಯೆಯ ತುಂಬಿದೆ. ತುಂಬ ಬುದ್ಧಿವಂತನೂ ಪ್ರತಿಭಾಶಾಲಿಯೂ ಆಗಿದ್ದ ಈತ ತನ್ನ ಜೀವನದಲ್ಲಿ ಕೊಂಚ ಉತ್ತಮವಾದ ಸನ್ನಿವೇಶದಲ್ಲಿ ಇದ್ದಿದ್ದರೆ ಪ್ರಥಮ ದರ್ಜೆಯ ಕಾದಂಬರಿಕಾರನೇ ಆಗುತ್ತಿದ್ದನೇನೋ.
* ಜ಼ೋಲಾ ಮುಂತಾದ ಫ್ರೆಂಚ್ ನಿಸರ್ಗವಾದಿಗಳ ಪ್ರಭಾವ ಈತನ ಮೇಲೆ ತುಂಬ ಬಿದ್ದಿರುವುದು ಈತನ ಕತೆಗಳ ವಾಸ್ತವ ಚಿತ್ರಣಗಳಲ್ಲೆಲ್ಲ ಕಂಡುಬರುತ್ತದೆ. ಹೆನ್ರಿ ಜೇಮ್ಸ್. [[ಎಚ್‌. ಜಿ. ವೆಲ್ಸ್‌|ಎಚ್. ಜಿ. ವೆಲ್ಸ್]], ವರ್ಜೀನಿಯ ವುಲ್ಫ್ ಮೊದಲಾದ ಹೆಸರಾಂತ ಶ್ರೇಷ್ಠ ಕಾದಂಬರಿಕಾರರು ಈತ ಒಬ್ಬ ಉತ್ತಮ ಕಾದಂಬರಿಕಾರನೆಂದು ಪ್ರಶಂಸಿಸಿದ್ದಾರೆ.
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
೮,೮೮೦

edits

"https://kn.wikipedia.org/wiki/ವಿಶೇಷ:MobileDiff/814049" ಇಂದ ಪಡೆಯಲ್ಪಟ್ಟಿದೆ