ಫ್ರೆಂಚ್ ಸಾಹಿತ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಟ್ಯಾಗ್: 2017 source edit
೬೦ ನೇ ಸಾಲು:
ಆಧುನಿಕ ಫ್ರೆಂಚ್ ಭಾಷೆಯ ನಿರ್ಮಾಪಕನೆನಿಸಿರುವ ಬ್ಲೇಸ್ ಪಾಸ್ಕಲ್ (1623-62) ಈ ಕಾಲದ ಶ್ರೇಷ್ಠ ಗದ್ಯಶಿಲ್ಪಿ. ಪತ್ರಲೇಖನವೆ ಒಂದು ವಿಶೇಷ-ಸ್ವತಂತ್ರ ಸಾಹಿತ್ಯ ಪ್ರಕಾರವಾಗಿ ಬೆಳೆದದ್ದು ಈ ಶತಕದಲ್ಲೇ. ಹೇಳಿಕೊಳ್ಳುವಂಥ ಉತ್ತಮ ಕಾದಂಬರಿಗಳಾವೂ ಈ ಕಾಲದಲ್ಲಿ ಬರಲಿಲ್ಲ. ಜೀನ್ ಡಿ ಲಾಫಾಂಟೇನನ ಆರು ಸಂಪುಟಗಳ ಫೇಬಲ್ಸ್ (1668) ಹೆಸರಿಸಬಹುದಾದ ಒಳ್ಳೆಯ ಕೃತಿ. ನಿಕೊಲಾಸ್ ಬೋಯ್ಲೊ (1636-1711) ಕ್ಲ್ಯಾಸಿಸಿಜಮ್ಮಿನ ಬೆಂಬಲಿಗ. ಈತನ ಕಾವ್ಯಮೀಮಾಂಸೆ ಲಾ ಆರ್ಟ್ ಪೊಯೆಟಿಕ್ ಸುಮಾರು ಒಂದು ನೂರು ವರ್ಷ ಕಾಲ ಕಾವ್ಯ ವಿಮರ್ಶೆಯ ಅಧಿಕೃತವಾಣಿಯಾಗಿ ಮೆರೆಯಿತು. ಪ್ರಾಚೀನ ಕವಿಗಳ ಅನುಕರಣಿಯೇ ಸರಿ ಎಂಬ ಈತನ ಸಿದ್ಧಾಂತವನ್ನು ಮುಂದೆ ಆಧುನಿಕತೆಯ ಪ್ರತಿಪಾದಕ ಚಾಲ್ರ್ಸಪೆರ್ರಾಲ್ಟ್ ಖಂಡಿಸಿದ. ಈ ಇಬ್ಬರ ವಾದಗಳಲ್ಲೂ ನಿಷ್ಪಕ್ಷಪಾತವಾದ ನ್ಯಾಯನಿಷ್ಕರ್ಷೆ ಕಾಣುವುದಿಲ್ಲವಾದರೂ ಆಧುನಿಕರ ಕೈಯೆ ಮೇಲಾಗಿ ಕ್ರಮೇಣ ಪ್ರಾಚೀನರ ಪ್ರಭಾವ ತಗ್ಗಿತು.
==೧೮ ನೆಯ ಶತಮಾನ==
ರಾಜಾಶ್ರಯದ ಸಂಕೋಲೆಯನ್ನು ಕಡಿದೊಗೆದುದೇ 18ನೆಯ ಶತಕದ ಫ್ರೆಂಚ್ ಸಾಹಿತ್ಯದ ಬಹು ದೊಡ್ಡ ಸಾಧನೆ. ದೊರೆ 14ನೆಯ ಲೂಯಿಯ ಸಾವಿನೊಂದಿಗೆ ಬಹುಕಾಲದ ಒಂದು ಪರಂಪರೆಯ ಯುಗ ಮುಗಿಯಿತು. ಸಾಹಿತ್ಯದಲ್ಲಿ ಮಹತ್ತರವಾದ ಪ್ರಗತಿಯೇನೂ ಕಂಡುಬರದಿದ್ದರೂ ಸ್ವೋಪಜ್ಞ ಚೇತನ, ವೈಜ್ಞಾನಿಕ, ವೈಚಾರಿಕ ಸಂಶೋಧನೆ. ಗ್ರಂಥರಚನೆಗಳಲ್ಲಿ ಹರಿಯತೊಡಗಿದುವು. ಸಾಮಾಜಿಕ ಮತ್ತು ಐತಿಹಾಸಿಕ ಬದಲಾವಣೆಗಳಿಗೆ ದಾರಿಕಂಡಿತು. ಫ್ರಾಂಕೊ ವಾಲ್ಟೇರ್ (1624-1778) ಮತ್ತು [[ರೂಸೊ|ಜೀನ್ ಜಾಕ್ವೆಸ್ ರೂಸೊ]] (1712-78) ಇವರ ಕೃತಿಗಳು ಫ್ರಾನ್ಸಿನ ಅಂದಿನ ಸಾಮಾಜಿಕ ರಾಜಕೀಯ ದುಸ್ಥಿತಿಯನ್ನು ವಿಡಂಬಿಸಿ, ಜನತೆಯನ್ನು ಮಹಾಕ್ರಾಂತಿಗೆ ಪ್ರಚೋದಿಸಿದುವು, ಹೊಸ ಸಮಾಜದ ನಿರ್ಮಾಣದ ರೂಪ-ರೇಖೆಗಳನ್ನು ಸೂಚಿಸಿದುವು. ಲಿಸ್ಭೆಜ್, ಮಾರಿವ್ಯಾ ಮತ್ತು ಪ್ರೆವೋಸ್ಟ್ ಕಾದಂಬರಿ ಜಗತ್ತಿನಲ್ಲೂ ರೂಸೊ, ಲೆಬ್ರುನ್ ಪಿಂಡಾರೆ ಕಾವ್ಯಕ್ಷೇತ್ರದಲ್ಲೂ ಆ ಕಾಲಕ್ಕೆ ಹೆಸರಾದವರು. ಆಂದ್ರೆ ಚೆನಿಯರ್ (1762-94 ಭಾವಗೀತೆಗಳಲ್ಲಿ ಗ್ರೀಕ್ ಕ್ಲ್ಯಾಸಿಕಲ್ ಮಾದರಿಗಳ ಸೊಗಸನ್ನು ಹೊರಹೊಮ್ಮಿಸಿದ.
 
==೧೯ ನೆಯ ಶತಮಾನದಿಂದ ಈಚೆ==
"https://kn.wikipedia.org/wiki/ಫ್ರೆಂಚ್_ಸಾಹಿತ್ಯ" ಇಂದ ಪಡೆಯಲ್ಪಟ್ಟಿದೆ