ಹರಪನಹಳ್ಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೭೯ ನೇ ಸಾಲು:
ಈ ಗ್ರಾಮದ ಗುರುಬಸವನಗೌಡರ ಪುತ್ರರಾದ ಡಾ. ನಾಗಭೂ‌‌‌‌‌‌‌‌ಷಣಗೌಡ್ರು ಗುಲ್ಬರ್ಗಾದ ಆಕಾಶವಾಣಿ, ದೂರದರ್ಶನಗಳಲ್ಲಿ ಸಾವಿರಾರು ಕಾರ್ಯಕ್ರಮ ನೀಡಿದ್ದಾರೆ. ೯೩.೫ ಎಫ್.ಎಂ ನಲ್ಲಿ ಕಾರ್ಯಕ್ರಮ ಅಧಿಕಾರಿಗಳಾಗಿ ಹಲವಾರು ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ.
ಇವರ ಲೇಖನಗಳು ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಜನಪದ, ಜನತಾವಾಣಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ಅಂಕಣಕಾರರಾಗಿ "ಹಿಸ್ಟ್ರಿಮಿಸ್ಟ್ರಿ' ಎಂಬ ಅಂಕಣ ನೀಡಿದ್ದಾರೆ. ಗಂಗಾಧರರಾವ್ ದೇಶಪಾಂಡೆ (ರೂಪಕ), ಹೊಯ್ಸಳರು, "ಏಸೂರು ಕೊಟ್ಟರೂ ಈಸೂರು ಕೊಡೆವು' (ಮಕ್ಕಳ ನಾಟಕ), ಬರೆದಿದ್ದಾರೆ. ಹೈದರಾಬಾದ್ ಸಂಸ್ಥಾನ (ನಿಜಾಮ ಸಂಸ್ಥಾನ) ವಿಮೋಚನೆ ಕುರಿತು ಸಂಶೋಧನೆ ಮಾಡಿದ್ದಾರೆ. ಸ್ವಾತಂತ್ರ್ಯ ಸೇನಾನಿ ಶೋಯೆಬುಲ್ಲಾ ಖಾನ್, ಧೂಮಪಾನ, ಮದ್ಯಪಾನ ಇತ್ಯಾದಿ, ನಮ್ಮ ಪರಂಪರೆ ಉಳಿಸಿ ಬೆಳೆಸೋಣ, ತಥಾಗಥ, ಗ್ರ್ಯಾಂಡ್ ಓಲ್ದ್ ವುಮೆನ್ ಆಫ್ ಇಂಡಿಯಾ ಇವರ ಲೇಖನಗಳು.
ಇವರ ಪತ್ನಿಯಾದ ಡಾ. ಕಾವ್ಯಶ್ರೀ. ಜಿ ಅವರು ಸಾಹಿತಿಗಳಾಗಿದ್ದು "ರನ್ನ' "ಷಣ್ಮುಖ ಶಿವಯೋಗಿಗಳು' "ಅವಲೋಕನ' ಚಂದ್ರಕಾಂತ ಕುಸನೂರರ ಸಾಹಿತ್ಯ, ಪುಣ್ಯಸ್ತ್ರೀಯರು, ವಚನಕಾರ್ತಿಯರು ಮತ್ತು ವೈಚಾರಿಕ ಪ್ರಜ್ಞೆ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಹಡಪದ ಲಿಂಗಮ್ಮನ ವಚನಗಳನ್ನು ಕುರಿತು ಸಂಶೋಧನೆ ಮಾಡಿದ್ದಾರೆ, ಹೈದರಾಬಾದ್ ಕರ್ನಾಟಕದ ಕಾದಂಬರಿಗಳ ಮೇಲೆ ಪಿಹೆಚ್.ಡಿ ಪಡೆದಿದ್ದಾರೆ.ಇವರು ಆಕಾಶವಾಣಿಯ "ಬಿ" ಗ್ರೇಡ್ ಕಲಾವಿದರು. "ಹೊಸ ಓದು' "ಪುಸ್ತಕ ಪರಿಚಯ' ಮುಂತಾದ ಕಾರ್ಯಕ್ರಮಗಳನ್ನು ನೀಡಿದ್ದಾರೆ. 50 ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ.
ಅಂತರ್ ರಾ‍‌ಷ್ೞ್ರೀಯ ಸಮ್ಮೇಳನದಲ್ಲಿ-2013 ಜನೆವರಿ ೧೮ ರಿಂದ ೨೦ ರ ವರೆಗೆ ನ್ಯೆರುತ್ಯ-ಪೂರ್ವ ಏಶಿಯಾ ರಾ‍‌ಷ್ಟ್ರಗಳು ಮತ್ತು ಭಾರತಗಳ ಕಲೆ, ಸಂಸ್ಕೃತಿ,ವಾಸ್ತುಶಿಲ್ಪಗಳ ಸಂಬಂಧಗಳ ಕುರಿತು ಹರಿಯಾಣದ ಸೋನಿಪತ್ ನ ಭಗತ್ ಪೂಲ್ಸಿಂಗ್ ಮಹಿಳಾ ವಿಶ್ವವಿದ್ಯಾಲಯದಲ್ಲಿ ಜರುಗಿದ ೨ನೇ ಅಂತರ್ ರಾ‍‌ಷ್ೞ್ರೀಯ ಸಮ್ಮೇಳನದಲ್ಲಿ ಡಾ.ಕಾವ್ಯಶ್ರೀ.ಜಿ. ಅವರು ಭಾಗವಹಿಸಿ ಪತ್ರಿಕೆ ಮಂಡಿಸಿದ್ದಾರೆ.
ಡಾ.ಕಾವ್ಯಶ್ರೀ ಅವರು ದೆಹಲಿಯ ಭಾರತೀಯ ಅನುವಾದಕರ ಸಂಘ, ಕೇರಳದ ದ್ರಾವಿಡಿಯನ್ ಲಿಂಗ್ವಿಸ್ೞಿಕ್ ಸೊಸೈಟಿ, ಪುಣೆಯ ಲಿಂಗ್ವಿಸ್ೞಿಕ್ ಸೊಸೈಟಿ ಆಫ್ ಇಂಡಿಯಾ, ಕಂಪೇರಟಿವ್ ಲಿಟರೇಚರ್ ಅಸೋಸಿಯೇಶನ್ ಆಫ್ ಇಂಡಿಯಾದ ಸದಸ್ಯರಾಗಿದ್ದಾರೆ. ಇವರ ಕೃತಿ 'ವಚನಕಾರ್ತಿಯರು ಮತ್ತು ವೈಚಾರಿಕ ಪ್ರಜ್ಣೆ' ಕರ್ನಾಟಕ ಲೇಖಕಿಯರ ಸಂಘದ ಡಾ.ಕರಿಯಮ್ಮ ಜಯಣ್ಣ ದತ್ತಿ ಪ್ರಶಸ್ತಿಗೆ ಪಾತ್ರವಾಗಿದೆ. ಇವರಿಗೆ ಸಿರವಾರ ಚುಕ್ಕಿ ಪ್ರತಿಷ್ಟಾನದ ಚುಕ್ಕಿ ಸಾಹಿತ್ಯ ಪ್ರಶಸ್ತಿ ಲಭಿಸಿದೆ(2016).
"https://kn.wikipedia.org/wiki/ಹರಪನಹಳ್ಳಿ" ಇಂದ ಪಡೆಯಲ್ಪಟ್ಟಿದೆ