"ಹರ್ಯಂಕ ರಾಜವಂಶ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
(ಹೊಸ ಪುಟ: '''ಹರ್ಯಂಕ ರಾಜವಂಶ''' ಭಾರತದ ಒಂದು ಪ್ರಾಚೀನ ರಾಜ್ಯವಾದ ಮಗಧವನ್ನು ಆಳಿದ ಎರಡನ...)
 
'''ಹರ್ಯಂಕ ರಾಜವಂಶ''' ಭಾರತದ ಒಂದು ಪ್ರಾಚೀನ ರಾಜ್ಯವಾದ [[ಮಗಧ]]ವನ್ನು ಆಳಿದ ಎರಡನೇ ರಾಜವಂಶವಾಗಿತ್ತು. ಇದು ಬರ್ಹದ್ರಥಬಾರ್ಹದ್ರಥ ರಾಜವಂಶದ ನಂತರ ಅಧಿಕಾರಕ್ಕೆ ಬಂದಿತು. ಈ ರಾಜವಂಶದ ಆಳ್ವಿಕೆ ಪ್ರಾಯಶಃ ಕ್ರಿ.ಪೂ. ೬ನೇ ಶತಮಾನದ ಮಧ್ಯದಲ್ಲಿ ಆರಂಭವಾಯಿತು. ಆರಂಭದಲ್ಲಿ, ರಾಜಗೃಹ ಇದರ ರಾಜಧಾನಿಯಾಗಿತ್ತು. ನಂತರ, ಇದನ್ನು ಆಧುನಿಕ ಪಾಟ್ನಾದ ಹತ್ತಿರದ [[ಪಾಟಲಿಪುತ್ರ]]ಕ್ಕೆ ಸ್ಥಳಾಂತರಿಸಲಾಯಿತು.
 
ಈ ರಾಜವಂಶದ ಸಂಸ್ಥಾಪಕ ಸ್ವತಃ [[ಬಿಂಬಿಸಾರ]]ನೆ ಅಥವಾ ಅವನ ತಂದೆ ಭಟ್ಟೀಯ. ಬೌದ್ಧ ಪಠ್ಯ ಮಹಾವಂಶದ ಪ್ರಕಾರ, ಬಿಂಬಿಸಾರನ ತಂದೆ ಬಿಂಬಿಸಾರನಿಗೆ ಹದಿನೈದು ವರ್ಷ ವಯಸ್ಸಿಗೆ ರಾಜ್ಯಾಭಿಷೇಕ ಮಾಡಿದನು.<ref>{{Harvnb|Raychaudhuri|1972|pp=97}}</ref> ಇಬ್ಬರು ವಿದ್ವಾಂಸರ ಪ್ರಕಾರ, ಬಿಂಬಿಸಾರನ ತಂದೆಯ ಹೆಸರು ಭಟೀಯ ಅಥವಾ ಭಟ್ಟೀಯ ಎಂದಾಗಿತ್ತು, ಆದರೆ ಪುರಾಣಗಳು ಅವನನ್ನು ಹೇಮಜಿತ್, ಕ್ಷೇಮಜಿತ್, ಕ್ಷೇತ್ರೋಜ ಅಥವಾ ಕ್ಷೇತ್ರೌಜ ಎಂದು ಉಲ್ಲೇಖಿಸುತ್ತವೆ ಮತ್ತು ಟಿಬೇಟನ್ ಪಠ್ಯಗಳು ಅವನನ್ನು ಮಹಾಪದ್ಮನೆಂದು ಹೆಸರಿಸುತ್ತವೆ.<ref>{{Harvnb|Raychaudhuri|1972|p=105ff}}</ref> ಈ ರಾಜವಂಶದ ನಂತರ [[ಶಿಶುನಾಗ ರಾಜವಂಶ]] ಅಧಿಕಾರಕ್ಕೆ ಬಂದಿತು.
 
==ಬಿಂಬಿಸಾರ==
ಹರ್ಯಂಕ ರಾಜ ಬಿಂಬಿಸಾರನು ವೈವಾಹಿಕ ಸಂಬಂಧಗಳು ಮತ್ತು ದಾಳಿಗಳ ಮೂಲಕ ತನ್ನ ರಾಜ್ಯದ ಗಡಿಗಳನ್ನು ವಿಸ್ತರಿಸಲು ಜವಾಬ್ದಾರನಾಗಿದ್ದನು. ಈ ರೀತಿಯಲ್ಲಿ [[ಕೋಸಲ]] ನಾಡು ಮಗಧಕ್ಕೆ ಪತನಹೊಂದಿತು. ಜೈನ ಧರ್ಮಗ್ರಂಥಗಳಲ್ಲಿ ಇವನನ್ನು ರಾಹ ಶ್ರೇಣಿಕನೆಂದು ಉಲ್ಲೇಖಿಸಲಾಗಿದೆ. ಈ ಆರಂಭಿಕ ರಾಜವಂಶದಿಂದ ಆಳಲ್ಪಟ್ಟ ಪ್ರಾಂತ್ಯ ವ್ಯಾಸದಲ್ಲಿ ೩೦೦ ಲೀಗ್‍ಗಳೆಂದು, ಮತ್ತು ೮೦,೦೦೦ ಸಣ್ಣ ವಸಾಹತುಗಳನ್ನು ಒಳಗೊಂಡಿತ್ತೆಂದು ಅಂದಾಜುಗಳು ಹೇಳುತ್ತವೆ.
 
==ಅಜಾತಶತ್ರು==
ಕೆಲವು ಮೂಲಗಳಲ್ಲಿ, ಬಿಂಬಿಸಾರನನ್ನು ಅವನ ಮಗ [[ಅಜಾತಶತ್ರು]]ವು ಸೆರೆಯಲ್ಲಿಟ್ಟು ಕೊಂದನು. ಅಜಾತಶತ್ರುವಿನ ಆಳ್ವಿಕೆಯಲ್ಲಿ ಈ ರಾಜವಂಶವು ತನ್ನ ಅತಿದೊಡ್ಡ ವಿಸ್ತಾರವನ್ನು ಮುಟ್ಟಿತು. ಅಜಾತಶತ್ರುವು [[ಮಹಾವೀರ]] (ಕ್ರಿ.ಪೂ. 599–527) ಮತ್ತು [[ಗೌತಮ ಬುದ್ಧ]]ರಿಗೆ (ಕ್ರಿ.ಪೂ. 563–483) ಸಮಕಾಲೀನನಾಗಿದ್ದನು. ಅಜಾತಶತ್ರುವು [[ಲಿಚ್ಛವಿ]]ಯರಿಂದ ಆಳಲ್ಪಟ್ಟ [[ವಜ್ಜಿ]]ಯ ವಿರುದ್ಧ ಒಂದು ಯುದ್ಧದಲ್ಲಿ ಪಾಲ್ಗೊಂಡಿದ್ದನು ಮತ್ತು ವೈಶಾಲಿ ಗಣರಾಜ್ಯವನ್ನು ಗೆದ್ದುಕೊಂಡನು. ಅಜಾತಶತ್ರುವು ವಶಪಡಿಸಿಕೊಳ್ಳುವಿಕೆ ಮತ್ತು ವಿಸ್ತಾರದ ನೀತಿಗಳನ್ನು ಅನುಸರಿಸಿದನು. ಇವನು [[ಕೋಸಲ]]ದ ರಾಜನನ್ನು ಒಳಗೊಂಡಂತೆ ತನ್ನ ನೆರೆರಾಜ್ಯಗಳನ್ನು ಪರಾಭವಗೊಳಿಸಿದನು; ಇವನೊಂದಿಗೆ ಭಿನ್ನಾಭಿಪ್ರಾಯ ಹೊಂದಿದಾಗ ಇವನ ಸೋದರರು ಕಾಶಿಗೆ ಹೋದರು. ಕಾಶಿಯನ್ನು ಬಿಂಬಿಸಾರನಿಗೆ ವರದಕ್ಷಿಣೆಯಾಗಿ ಕೊಡಲಾಗಿತ್ತು. ಅಜಾತಶತ್ರುವು ಕಾಶಿಯನ್ನು ಆಕ್ರಮಿಸಿ ಚಿಕ್ಕದಾದ ರಾಜ್ಯಗಳನ್ನು ವಶಪಡಿಸಿಕೊಂಡನು. ಅಜಾತಶತ್ರುವಿನ ಕೆಳಗೆ ಮಗಧವು ಉತ್ತರ ಭಾರತದಲ್ಲಿಭಾರತದಲ್ಲಿನ ಅತ್ಯಂತ ಬಲಿಷ್ಠ ರಾಜ್ಯವಾಯಿತು.
 
==ಉದಾಯಿನ್==
ಅಂತಿಮವಾಗಿ, [[ಉದಾಯಿನ್|ಉದಯಭದ್ರನು]] ತನ್ನ ತಂದೆ ಅಜಾತಶತ್ರುವಿನ ಉತ್ತರಾಧಿಕಾರಿಯಾದನು ಎಂದು ಮಹಾವಂಶ ಹೇಳುತ್ತದೆ. ಇವನು ರಾಜಧಾನಿಯನ್ನು ಪಾಟಲಿಪುತ್ರಕ್ಕೆ ಸ್ಥಳಾಂತರಿಸಿದನು. ನಂತರದ ಮೌರ್ಯ ಸಾಮ್ರಾಜ್ಯದ ಅಡಿಯಲ್ಲಿ ಪಾಟಲಿಪುತ್ರ ವಿಶ್ವದ ಅತ್ಯಂತ ದೊಡ್ಡ ನಗರವಾಯಿತು. ಉದಯಭದ್ರನು ಹದಿನಾರು ವರ್ಷ ಆಳಿದನೆಂದು ನಂಬಲಾಗಿದೆ.
 
==ನಂತರದ ಅರಸರು==
ಈ ರಾಜ್ಯವು ಅತ್ಯಂತ ರಕ್ತಸಿಕ್ತ ಉತ್ತರಾಧಿಕಾರವನ್ನು ಹೊಂದಿತ್ತು. ಅನುರುದ್ಧನು ಉದಯಭದ್ರನನ್ನು ಕೊಲೆಮಾಡಿ ಅಂತಿಮವಾಗಿ ಉತ್ತರಾಧಿಕಾರಿಯಾದನು, ಮತ್ತು ಅವನ ಮಗ ಮುಂಡನು ಅದೇ ರೀತಿಯಲ್ಲಿ ತನ್ನ ತಂದೆಯ ನಂತರ ಉತ್ತರಾಧಿಕಾರಿಯಾದನು, ಅದೇ ರೀತಿ ಅವನ ಮಗ ನಾಗದಾಸಕನು.
 
ಭಾಗಶಃ ಈ ರಕ್ತಸಿಕ್ತ ವಂಶದ್ವೇಷದ ಕಾರಣದಿಂದ, ಒಂದು ನಾಗರಿಕ ದಂಗೆಯು ಶಿಶುನಾಗ ರಾಜವಂಶದ ಉದಯಕ್ಕೆ ಕಾರಣವಾಯಿತು ಎಂದು ನಂಬಲಾಗಿದೆ.
 
==ಉಲ್ಲೇಖಗಳು==
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/809357" ಇಂದ ಪಡೆಯಲ್ಪಟ್ಟಿದೆ