ಎ.ಆರ್.ಕೃಷ್ಣಶಾಸ್ತ್ರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೨೫ ನೇ ಸಾಲು:
===ವೃತ್ತಿಜೀವನ : (ಜಿಲ್ಲಾ ಕಛೇರಿ ಗುಮಾಸ್ತರಿಂದ- ಕನ್ನಡ ಪ್ರಾಧ್ಯಾಪಕರವರೆಗೆ)===
ಗವರ್ನಮೆಂಟ್ ಕಾಲೇಜಿನಲ್ಲಿ ತಮ್ಮ ಬಿ.ಎ. ಪರೀಕ್ಷೆ ಪಾಸ್ ಮಾಡಿದರು. ಇಂಗ್ಲೀಷ್ ನಲ್ಲಿ ಕೇವಲ ಒಂದು ಅಂಕದಿಂದ ನಪಾಸ್ ಆಗಿದ್ದರು. ೧೯೧೩ ರಲ್ಲಿ ಅದೊಂದು ವಿಷಯಕ್ಕೆ ಪರೀಕ್ಷೆಗೆ ಕುಳಿತುಕೊಂಡು ತೇರ್ಗಡೆಯಾದರು. ಅದೇವರ್ಷದಲ್ಲಿ ಅವರಿಗೆ ಮೈಸೂರು ಜಿಲ್ಲಾ ಕಛೇರಿಯಲ್ಲಿ ಗುಮಾಸ್ತರ ಕೆಲಸ ಸಿಕ್ಕಿತು. ವೇತನ ತಿಂಗಳಿಗೆ ೩೫/-ರೂಪಾಯಿಗಳು. ಅಲ್ಲಿ ೬ ತಿಂಗಳು ಕೆಲಸಮಾಡಿ, ಬೆಂಗಳೂರಿನ ಸೆಂಟ್ರೆಲ್ ಕಾಲೇಜ್ ನ ಕನ್ನಡವಿಭಾಗದಲ್ಲಿ, ಅಸಿಸ್ಟೆಂಟ್ ಮಾಸ್ಟರ್ ಆಗಿ ಸೇರಿ ಕೆಲಸಮಾಡಿದರು. ಮುಂದಿನ ವರ್ಷ ಅವರ ಸ್ಥಾನದ ಹೆಸರು, "ಟ್ಯೂಟರ್" ಎಂದಾಯಿತು. ಸೆಂಟ್ರಲ್ ಕಾಲೇಜಿನಲ್ಲಿ ಎಲ್ಲಾಭಾಷೆಗಳ ಒಂದೊಂದು ಸಂಘವಿದ್ದ ಕಾಲ ಅದು. ದುರದೃಷ್ಟವಶಾತ್ ಕನ್ನಡ ಭಾಷೆಯ ಸಂಘವಿರಲಿಲ್ಲ.
===ಸೆಂಟ್ರೆಲ್ ಕಾಲೇಜಿನಲ್ಲಿ, ಪ್ರಬುದ್ಧಕರ್ನಾಟಕ ಪತ್ರಿಕೆಯ ಆರಂಭ :===
ಎ. ಆರ್. ಕೃಷ್ಣಶಾಸ್ತ್ರಿಗಳು '''ಕನ್ನಡಸಂಘ'''ವೆಂಬ ಸಂಸ್ಥೆಯನ್ನು ಪ್ರಾರಂಭಿಸಿದರು. ಮುಂದಿನ ವರ್ಷ '"ಪ್ರಬುದ್ಧ ಕರ್ನಾಟಕ"' ತ್ರೈಮಾಸಿಕ ಪತ್ರಿಕೆಪತ್ರಿಕೆಯನ್ನು ಆರಂಭಿಸಿದರು. ಆಗಿನಕಾಲದಲ್ಲಿ ಕನ್ನಡ ಓದುವವರು, ಅದರಲ್ಲಿ ಬರೆಯುವವರು ಇರಲೇಇಲ್ಲ ವೆನ್ನಬಹುದು. ಶಾಸ್ತ್ರಿಯವರಿಗೋ [[ಕನ್ನಡ ಸಂಘ]] ಮತ್ತು [[ಪ್ರಬುದ್ಧ ಕರ್ನಾಟಕ]]ಗಳು ಎರಡು ಕಣ್ಣಿನಷ್ಟು ಪ್ರಮುಖವಾದವುಗಳು. ಮನೆ ಮನೆಗಳಿಗೂ ಹೋಗಿ ಕನ್ನಡಲ್ಲಿ ಹೆಚ್ಚು ಹೆಚ್ಚು ಬರೆಯಲು ಯುವಜನರನ್ನು ಪ್ರೋತ್ಸಾಹಿಸಿದರು. ತಪ್ಪುಗಳನ್ನು ತಾವೇ ತಿದ್ದಿ ಪ್ರಕಟಪಡಿಸುತ್ತಿದ್ದರು.
ಅಲ್ಲಿ ಟ್ಯೂಟರ್ ಆಗಿದ್ದಾಗಲೇ ತಾವೇ ಸ್ವತಃ ಓದಿಕೊಂಡು ಎಮ್. ಎ. ಪರೀಕ್ಷೆ ಪಾಸುಮಾಡಿದರು. ೧೯೧೯ ರಲ್ಲಿ ಅವರಿಗೆ ಓರಿಯೆಂಟಲ್ ಲೈಬ್ರರಿಯಲ್ಲಿ ಸಂಶೋಧಕ ವಿಜ್ಞಾನಿಯ ಕೆಲಸ ಸಿಕ್ಕಿತು. ಅವರು ಅಲ್ಲಿನ ಲೆಕ್ಕ-ಪತ್ರ, ಪುಸ್ತಕಗಳ ಮಾರಾಟದ ವ್ಯವಸ್ಥೆಗಳನ್ನೂ ನೋಡಿಕೊಳ್ಳಬೇಕಾಗಿತ್ತು. ಆದ್ದರಿಂದ ಹೆಚ್ಚು ಸಂಶೋಧನೆಗಳನ್ನು ಮಾಡಲಾಗಲಿಲ್ಲ.