ಬೆನ್ನುಮೂಳೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೧ ನೇ ಸಾಲು:
{{under construction}}
 
[[File:718 Vertebra Posterolateral.png|thumb| ಹಿಂಭಾಗದ ಕಶೇರುಕ]]
[[:en:Vertebral column|ಬೆನ್ನುಮೂಳೆ]] : ದೇಹದ ಕಂಠಮುಂಡಗಳ ಬೆನ್ನಿನ ನಡುಮಧ್ಯೆ ಕಾಣಿಸುವ ಮೂಳೆಗಳ ಸರ (ಸ್ಪೈನ್) ಪರ್ಯಾಯ ನಾಮಗಳು ಕಶೇರುಸರ, ಬೆನ್ನೆಲಬು, ಬೆನ್ನುಕಂಬ ಇತ್ಯಾದಿ (ವರ್ಟಿಬ್ರಲ್‍ಚೆಯ್ನ್ ವರ್ಟಿಬ್ರಲ್‍ಕಾಲಮ್, ಬ್ಯಾಕ್ ಬೋನ್) ಇದರ ರಚನೆ ಕಶೇರುಗಳೆಂಬ ಬಿಡಿ ಎಲುಬುಗಳ ಸರ ರೂಪಕ ಜೋಡಣೆಯಿಂದ ಆಗಿರುವುದಾದರೂ ಜೋಡಣೆ ಮೃದ್ವಸ್ಥಿ ಹಾಗೂ ರಜ್ಜುಗಳಿಂದ ಬಿಗಿಯಾಗಿದ್ದು ವ್ಯಕ್ತಿ ನೆಟ್ಟಗೆ ನಿಂತಾಗ ಸ್ಥಿರವಾದ ಕಂಬದಂತೆಯೇ ಇರುವುದರಿಂದ ಈ ಸರವನ್ನು ಬೆನ್ನುಮೂಳೆ ಅಥವಾ ಬೆನ್ನುಕಂಬ ಎಂದು ಹೇಳುವುದುಂಟು. ಬೆನ್ನುಮೂಳೆ ಮಾನವನ ರುಂಡಮುಂಡಗಳಿಗೆ ಆಧಾರ ಸ್ತಂಭ. ಅವುಗಳ ಭಾರ ಕಾಲುಗಳ ಮೇಲೆ ನೇರವಾಗಿ ಬೀಳುವಂತೆ ಮಾಡಿದೆ. ವ್ಯಕ್ತಿಯ ನೆಟ್ಟನಿಲವು ನಡಿಗೆಗಳ ಸಮತೋಲನ ಅತ್ಯಲ್ಪ ಸ್ನಾಯುಕ್ರಿಯೆಯಿಂದ ಸಾಧ್ಯವಾಗುತ್ತದೆ. ಆದರೂ ಒಂದು ಕಶೇರು ಅದರ ಒತ್ತಿನ ಕಶೇರುಗಳೊಡನೆ ಸ್ವಲ್ಪ ಮಟ್ಟಿಗೆ ಚಲಿಸಲು ಸಾಧ್ಯವಿರುವುದರಿಂದ ಮುಂಡವನ್ನು ಅಕ್ಕ ಪಕ್ಕಕ್ಕೆ ಹಾಗೂ ಹಿಂದುಮುಂದಕ್ಕೆ ಬಾಗಿಸುವುದು, ಎಡಬಲಗಳಿಗೆ ಸ್ವಲ್ಪ ಮಟ್ಟಿಗೆ ತಿರುಗಿಸುವುದು ಇತ್ಯಾದಿ ಚಲನೆಗಳು ಸಾಧ್ಯವಾಗಿವೆ. ಇಂಥ ಚಲನೆ ಕಂಠ ಮತ್ತು ಸೊಂಟ ಪ್ರದೇಶಗಳಲ್ಲಿ ಗರಿಷ್ಠ. ಒಟ್ಟಿನಲ್ಲಿ ಬೆನ್ನು ಮೂಳೆ ಒಂದು ಗಡುಸಾದ ಆದರೂ ಉಪಯುಕ್ತವಾಗಿರುವಷ್ಟರ ಮಟ್ಟಿಗೆ ನಮ್ರತೆ ಉಳ್ಳ ರಚನೆ. ಮಿದುಳು ಬಳ್ಳಿಗೆ ಸುರಕ್ಷ ಕವಚವಾಗಿ ವರ್ತಿಸುವುದು ಬೆನ್ನು ಮೂಳೆಯ ಇನ್ನೊಂದು ಕ್ರಿಯೆ. ಇದರ ಉದ್ದಕ್ಕೂ ಎಲುಬುಚಾಚುಗಳಿಂದಲೇ ರಚಿತವಾದ ಒಂದು ನಾಳ ಏರ್ಪಟ್ಟಿದ್ದು ಇದರೊಳಗೆ ಮಿದುಳಬಳ್ಳಿ ಸಾಗುವುದರಿಂದ ಈ ರಕ್ಷಣೆ ಒದಗುತ್ತದೆ. ಬೆನ್ನೆಲುಬಿನ ಅಗ್ರದಲ್ಲಿ ರುಂಡವಿದ್ದು ಇವೆರಡರ ನಡುವೆ ಸಮಚಲನ ಸಾಮಥ್ರ್ಯಯುತ ಕೀಲು ಏರ್ಪಟ್ಟಿದೆ. ಹೀಗಾಗಿ ತಲೆಯನ್ನು ದೇಹದ ಮೇಲೆ ಹಿಂದಕ್ಕೂ ಮುಂದಕ್ಕೂ ಅಕ್ಕಪಕ್ಕಗಳಿಗೂ ಬಾಗಿಸಬಹುದು. ಅಲ್ಲದೆ ಅದನ್ನು ಎಡಬಲಭಾಗಗಳಿಗೆ ಹೊರಳಿಸಿ ತಕ್ಕಮಟ್ಟಿಗೆ ಹಿನ್ನೋಟ ಪಡೆಯುವುದು ಕೂಡ ಸಾಧ್ಯವಾಗಿದೆ. ವೃಕ್ಷದ ಅಗ್ರಭಾಗ ಹಾಗೂ ಸೊಂಟ ಪ್ರದೇಶದಲ್ಲಿ ಬೆನ್ನುಲಿಬಿಗೆ ಕೈ ಕಾಲುಗಳ ಮತ್ತು ಇತರ ಎಲುಬುಗಳು ಸೇರಿ ಕೀಲುಗಳು ಏರ್ಪಟ್ಟಿವೆಯಾಗಿ ಬೆನ್ನುಮೂಳೆಯ ಆಧಾರದ ಮೇಲೆ ಕೈ ಕಾಲು ಆಡಿಸುವುದು ಸಾಧ್ಯವಾಗಿದೆ.
"https://kn.wikipedia.org/wiki/ಬೆನ್ನುಮೂಳೆ" ಇಂದ ಪಡೆಯಲ್ಪಟ್ಟಿದೆ