ಬೆನ್ನುಮೂಳೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಟೆಂಪ್ಲೇಟ್ ಸೇರ್ಪಡೆ
೧೬ ನೇ ಸಾಲು:
ರೋಗದ ಪರಿಣಾಮವಾಗಿ ಬೆನ್ನು ಕಂಬದ ನೇರ ಅಕ್ಷದಲ್ಲಿ ಅರೂಪತೆ ಉಂಟಾಗುವುದಿದೆ. ದೇಹ ಮುಂಬಾಗಿ ಗೂನುಬೆನ್ನು ಸ್ಥಿತಿ ಉಂಟಾಗಬಹುದು. ಇದಕ್ಕೆ ಕೈಫೋಸಿಸ್ ಎಂದು ಹೆಸರು. ಉದರದ ಸಹಜ ಬಾಗು ಹೆಚ್ಚಾಗುವುದು ಇದೆ. ಇದಕ್ಕೆ ಲಾರ್ಡೊಸಿಸ್ ಎಂದು ಹೆಸರು. ಕಶೇರುಸರ ಯಾವುದಾದರೂ ಪಕ್ಕಕ್ಕೆ ಡೊಂಕಾಗಿರಬಹುದು. ಇದಕ್ಕೆ ಸ್ಕೋಲಿಯೋಸಿಸ್ ಎಂದು ಹೆಸರು. ಈ ಸ್ಥಿತಿಗಳು ವ್ಯಕ್ತಿಯ ಚಲನವಲನಗಳಿಗೆ ತೊಂದರೆಯಾಗದಷ್ಟು ಅಲ್ಪವಾಗಿರಬಹುದು. ಇಲ್ಲವೇ ತುರ್ತುಶಸ್ತ್ರ ಚಿಕಿತ್ಸೆಯೇ ಅಗತ್ಯವಾಗುವಷ್ಟು ತೀವ್ರವಾಗಿರಬಹುದು. ರೋಗದ ಪರಿಣಾಮವಾಗಿ ಬೆನ್ನುಕಂಬದಲ್ಲಿ ಅರೂಪತೆ ಉಂಟಾಗದೆ ಅದರ ಚಲನಸಾಮಥ್ರ್ಯ ತೀರ ಕಂಠಿತವಾಗುವುದೂ ಉಂಟು. ಅಘಾತ ಪ್ರಸಂಗಗಳಲ್ಲಿ ಕಶೇರು ಮಣಿಯ ಅಂಚುಚಾಚುಗಳು ಛಿದ್ರವಾಗಬಹುದು. ಕಶೇರುಗಳನ್ನು ಬಂಧಿಸುವ ರಜ್ಜುಗಳೂ ಹರಿದು ಮೇಲಿನ ಕಶೇರು ಕೆಳಗಿನ ಕಶೇರುವಿನ ಮೇಲೆ ಮುಂದಕ್ಕೆ ಜಾರಬಹುದು. ಹೀಗಾದರೆ ಈ ಎರಡು ಕಶೇರುಗಳ ನಡುವೆ ಮಿದುಳು ಬಳ್ಳಿ ಸಿಕ್ಕಿ ಅಪ್ಪಚ್ಚಿ ಆಗುವುದು ಅಥವಾ ಛಿದ್ರವಾಗುವುದು ವ್ಯಕ್ತ. ಕಂಠಭಾಗದಲ್ಲಿ ಹೀಗಾದರೆ ಒಡನೆ ಮರಣ ಸಂಭವಿಸುತ್ತದೆ-ನೇಣು ಪ್ರಸಂಗದಲ್ಲಿಯಂತೆ. ವಕ್ಷ ಭಾಗದಲ್ಲಿ ಇಂಥ ಆಘಾತಗಳಿಂದ ಆ ಮಟ್ಟದ ಕೆಳಗಿನ ದೇಹಭಾಗಗಳ ಸ್ವಾಧೀನ ಹಾಗೂ ಸಂವೇದನೆಗಳ ನಾಶ, ಮೂತ್ರ ವಿಸರ್ಜನೆಯ ಹತೋಟಿ ತಪ್ಪುವುದು ಮುಂತಾದವು ಕಂಡುಬರುತ್ತದೆ.
 
 
{{wikisource|ಮೈಸೂರು ವಿಶ್ವವಿದ್ಯಾನಿಲಯವಿಶ್ವಕೋಶ/ಬೆನ್ನುಮೂಳೆ|ಬೆನ್ನುಮೂಳೆ}}
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
[[ವರ್ಗ:ವಿಜ್ಞಾನ ಸಾಹಿತ್ಯ]]
"https://kn.wikipedia.org/wiki/ಬೆನ್ನುಮೂಳೆ" ಇಂದ ಪಡೆಯಲ್ಪಟ್ಟಿದೆ