ಇಟಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
೮೬ ನೇ ಸಾಲು:
ಮೊದಲು ದಕ್ಷಿಣದ ಕೆಲವೇ ನಗರಗಳಲ್ಲಿ ದಟ್ಟೈಸಿದ್ದ ಜನ ಈಗ ಉತ್ತರದ ಬಯಲುಗಳಲ್ಲಿ ಸ್ಥಾಪಿಸಲಾಗುತ್ತಿರುವ ಕೈಗಾರಿಕಾ ಕೇಂದ್ರಗಳಿಗೆ ಹೋಗುತ್ತಿದ್ದಾರೆ. ಉತ್ತರದ ಕೆಲವೇ ಕಡೆ ಹೆಚ್ಚಾಗಿದ್ದ ಜನಸಂಖ್ಯೆ ಈಗ ಎಲ್ಲ ಕಡೆಗೆ ಹರಡಿ ಒಂದು ರೀತಿಯ ಸಮತೋಲ ಏರ್ಪಟ್ಟಿದೆ. ರೋಮ್, ಮಿಲಾನ್, ನೇಪಲ್ಸ್, ಟ್ಯೂರಿನ್, ಜಿನೋವ, ಫ್ಯಾರೆನ್ಸ್, ವೆನಿಸ್ ಮುಂತಾದವು ಹೆಚ್ಚು ಜನಸಂಖ್ಯೆ ಇರುವ ಮುಖ್ಯ ನಗರಗಳು. (ವಿವರಗಳಿಗೆ ಆಯಾ ನಗರಗಳನ್ನು ಕುರಿತ ಶೀರ್ಷಿಕೆಗಳನ್ನು ನೋಡಿ).
==ಆಡಳಿತ ವ್ಯವಸ್ಥೆ==
1946ರ ಜೂನ್ 10ರಿಂದ ಇಟಲಿ ಗಣರಾಜ್ಯವಾಗಿದೆ. ದ್ವಿತೀಯ ಮಹಾ ಯುದ್ಧದಲ್ಲಿ ಪರಾಜಯಗೊಂಡ ಮೇಲೆ 1946ರ ಜೂನ್ 2ರಂದು ಇಟಲಿಯಲ್ಲಿ ನಡೆಸಿದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ 54.3% ಜನ ಗಣರಾಜ್ಯದ ಪರವಾಗಿಯೂ 45.7% ಜನ ಅರಸೊತ್ತಿಗೆ ಉಳಿಸಿಕೊಳ್ಳಬೇಕೆಂದೂ ಅಭಿಪ್ರಾಯಪಟ್ಟರು. ಸಂವಿಧಾನ ಸಭೆಗೆ ಪ್ರಥಮ ಬಾರಿಗೆ ಚುನಾವಣೆ ನಡೆಯಿತು (1946). 556 ಸದಸ್ಯರುಳ್ಳ ಸಭೆ ಸಿನಾಲರ ಎನ್ರಿಕೋ ಡಿ. ನೀಕೋಲಾನನ್ನು ಅಧ್ಯಕ್ಷನನ್ನಾಗಿ ಆರಿಸಿತು. ಹೊಸ ಸಂವಿಧಾನ ರೂಪಿಸಿ ಶಾಂತಿ ಒಡಂಬಡಿಕೆಯನ್ನು ಕ್ರಮಬದ್ದಗೊಳಿಸಿದ್ದು ಇದರ ಮುಖ್ಯ ಕೆಲಸ. 1947ರ ಡಿಸೆಂಬರ್ 27ರಂದು ನೂತನ ಸಂವಿಧಾನ ಅಂಗೀಕೃತವಾಯಿತು. 1948ರ ಜನವರಿ 1ರಿಂದ ಅದು ಜಾರಿಗೆ ಬಂತು. ಗ್ರೇಟ್ ಬ್ರಿಟನ್, ಫ್ರಾನ್ಸ್, ಅಮೆರಿಕ ಸಂಯುಕ್ತ ಸಂಸ್ಥಾನಗಳ ಅನುಭವವನ್ನೂ ಉದಾಹರಣೆಗಳನ್ನೂ ಇಟಲಿಯ ಸಂವಿಧಾನ ಪ್ರತಿಬಿಂಬಿಸುತ್ತದೆ. ಇಟಲಿ ಈ ಸಂವಿಧಾನಕ್ಕನುಗುಣವಾಗಿ ರೂಪಿತವಾದ ಪ್ರಜಾಸತ್ತಾತ್ಮಕ ಗಣರಾಜ್ಯ. ಪರಮಾಧಿಕಾರ ಜನತೆಗೆ ಸೇರಿದ್ದಾದರೂ ಅವರು ಸಂವಿಧಾನಕ್ಕೆ ಬದ್ಧರಾಗಿ ತಮ್ಮ ಹಕ್ಕು ಚಲಾಯಿಸುತ್ತಾರೆ. ಇಟಲಿಯಲ್ಲಿ ದ್ವಿಸದನ ಪದ್ಧತಿಯ ರಾಷ್ಟ್ರೀಯ ಪಾರ್ಲಿಮೆಂಟ್ ಇದೆ. ಮೊದಲನೆಯದು ಚೇಂಬರ್ ಆಪ್ ಡೆಪ್ಯುಟೀಸ್, ಎರಡನೆಯದು ಸೆನೆಟ್. ಚೇಂಬರಿಗೆ ಪ್ರತಿ ಐದು ವರ್ಷಗಳಿಗೊಮ್ಮೆ ಚುನಾವಣೆ ನಡೆಯುತ್ತದೆ. 21 ವರ್ಷಕ್ಕೆ ಕಡಿಮೆಯಿಲ್ಲದ ಸ್ತ್ರೀ-ಪುರುಷರೆಲ್ಲ ಮತದಾನಕ್ಕೆ ಅರ್ಹರು. ಚೇಂಬರ್ ಆಫ್ ಡೆಪ್ಯುಟೀಸ್‍ಗೆ ಸದಸ್ಯರಾಗುವವರ ಕನಿಷ್ಠ ವಯೋಮಿತಿ 25 ವರ್ಷ. 80,000 ಜನರಿಗೆ ಒಬ್ಬ ಪ್ರತಿನಿಧಿಯಿದ್ದಾನೆ (ಡೆಪ್ಯುಟಿ). ಸೆನೆಟ್ಟಿಗೆ ಆರು ವರ್ಷಗಳಿಗೊಮ್ಮೆ ಚುನಾವಣೆ ನಡೆಯುತ್ತದೆ. 2,00,000 ಜನರಿಗೆ ಒಬ್ಬ ಪ್ರತಿನಿಧಿಯಿರುತ್ತಾನೆ. ಅಧ್ಯಕ್ಷನ ಕನಿಷ್ಠ ವಯೋಮಿತಿ 55 ವರ್ಷ, ಎರಡೂ ಸದನಗಳ ಸದಸ್ಯರೂ ಪ್ರಾದೇಶಿಕ ಕೌನ್ಸಿಲ್‍ನ ಸದಸ್ಯರೂ ಸೇರಿ ಸಂಯುಕ್ತಾದಿವೇಶನದಲ್ಲಿ ಗಣರಾಜ್ಯದ ಅಧ್ಯಕ್ಷನನ್ನು ಆರಿಸುತ್ತಾರೆ. ಈ ರೀತಿ ಆಯ್ಕೆಗೊಂಡ ಅಧ್ಯಕ್ಷನ ಅಧಿಕಾರಾವಧಿ 7 ವರ್ಷ. ಆತನಿಗೆ ಪಾರ್ಲಿಮೆಂಟನ್ನು ವಿಸರ್ಜಿಸುವ ಅಧಿಕಾರವಿದೆ. ಆದರೆ ತನ್ನ ಅಧಿಕಾರಾವಧಿಯ ಕೊನೆಯ ಆರು ತಿಂಗಳಲ್ಲಿ ಆತ ಈ ಅಧಿಕಾರ ಚಲಾಯಿಸಲಾರ. ತನ್ನ ಅಧ್ಯಕ್ಷಾಧಿಕಾರದ ಕಾರಣದಿಂದ ಆತ ಸೆನೆಟ್ಟಿನ ಜೀವಾವಧಿ ಸದಸ್ಯ. ವಿಜ್ಞಾನ, ಸಾಹಿತ್ಯ ಹಾಗೂ ಸಮಾಜ ಸೇವೆಯಲ್ಲಿ ಗಣ್ಯರಾದ ನಾಗರಿಕರನ್ನು ಆತ ಸೆನೆಟ್ಟಿನ ಅಜೀವ ಸದಸ್ಯರನ್ನಾಗಿ ನಾಮಕರಣ ಮಾಡಬಹುದು. ಇಟಲಿಯ ಅಧ್ಯಕ್ಷ ರಾಷ್ಟ್ರೈಕದ ಪ್ರತೀಕ. ಆತನೇ ರಾಷ್ಟ್ರಸೇನೆಗಳ ಮಹಾ ದಂಡನಾಯಕ. ಅಪರಾಧಿಗಳಿಗೆ ವಿಧಿಸಿದ ಶಿಕ್ಷೆಯನ್ನು ಕಡಿಮೆ ಮಾಡುವುದು, ಅವರಿಗೆ [[ಕ್ಷಮಾದಾನ]] ಮಾಡುವುದು ಮೊದಲಾದುವು ಆತನ ಅಧಿಕಾರವ್ಯಾಪ್ತಿಗೊಳಪಡುತ್ತವೆ.
ಇಟಲಿಯ ಪ್ರಧಾನ ಮಂತ್ರಿಗೆ ಮಂತ್ರಿಮಂಡಲದ ಅಧ್ಯಕ್ಷನೆಂದು ಹೆಸರಿದೆ. ಆತನ ಸಲಹೆಯ ಮೇರೆಗೆ ಮಂತ್ರಿಮಂಡಲದ ಇತರ ಸದಸ್ಯರನ್ನು ನೇಮಿಸುವುದು ಅಧ್ಯಕ್ಷನ ಕರ್ತವ್ಯ. ಇಟಲಿಯ ಮಂಡಲ ಎರಡೂ ಶಾಸಕಾಂಗಗಳ ವಿಶ್ವಾಸ ಗಳಿಸಿರಬೇಕು. ಮಂತ್ರಿಮಂಡಲದ ಅಧ್ಯಕ್ಷ ಸಂವಿಧಾನಕ್ಕನುಗುಣವಾಗಿ ಸರ್ಕಾರದ ನೀತಿ ರೂಪಿಸುತ್ತಾನೆ. ಪ್ರತಿಯೊಬ್ಬ ಮಂತ್ರಿಗೂ ವೈಯಕ್ತಿಕ ಹೊಣೆಗಾರಿಕೆಯೊಂದಿಗೆ ಸಂಯುಕ್ತ ಹೊಣೆಗಾರಿಕೆಯೂ ಇರುತ್ತದೆ.
ಸಂವಿಧಾನದಲ್ಲಿ ಉಲ್ಲೇಖಿಸಿದಂತೆ ಜನತೆಯ ಹೆಸರಿನಲ್ಲಿ ನ್ಯಾಯ ನೀಡಲಾಗುವುದು. ನ್ಯಾಯಾಧೀಶ ಕಾಯಿದೆಯ ಪರಿಮಿತಿಗೆ ಒಳಗಾಗಿರುತ್ತಾನೆ. ನ್ಯಾಯಾಲಯ ಕಾರ್ಯಾಂಗದಿಂದ ಸ್ವತಂತ್ರವಾಗಿದೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ಸಂವಿಧಾನ ಸಂಬಂಧವಾದ ಬಿಕ್ಕಟ್ಟು ಉಂಟಾದಾಗ, ಅದನ್ನು 15 ಜನರ ಸಂವಿಧಾನ ನ್ಯಾಯಾಲಯ ಪರಿಹರಿಸುತ್ತದೆ. ಇದರಲ್ಲಿ ⅓ ಸದಸ್ಯರನ್ನು ಅಧ್ಯಕ್ಷ ನಾಮಕರಣ ಮಾಡಿರುತ್ತಾನೆ. ⅓ ಸದಸ್ಯರನ್ನು ಶಾಸಕಾಂಗದ ಎರಡು ಮನೆಗಳು ಆರಿಸುತ್ತವೆ. ಉಳಿದ ⅓ ಸದಸ್ಯರನ್ನು ಸರ್ವೋನ್ನತ ನ್ಯಾಯಾಂಗ ಸಮಿತಿ ಆರಿಸುತ್ತದೆ. ಈ ಸದಸ್ಯರ ಅಧಿಕಾರಾವಧಿ 12 ವರ್ಷ. ಅಧಿಕಾರಾವಧಿ ಮುಗಿದ ತಕ್ಷಣವೇ ಅವರನ್ನು ಪುನರ್ ನೇಮಕ ಮಾಡಲಾಗುವುದಿಲ್ಲ.
"https://kn.wikipedia.org/wiki/ಇಟಲಿ" ಇಂದ ಪಡೆಯಲ್ಪಟ್ಟಿದೆ