ಟಿಪ್ಪು ಸುಲ್ತಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
 
==ಇತಿವೃತ್ತ==
* ಇಮ್ಮಡಿ ಕೃಷ್ಣರಾಜ ಒಡೆಯರ್ ಮರಣದ ನಂತರ, ಹೈದೆರ್ಹೈದರ್ ಅಲಿ, ಮೈಸೂರು ಸೇನೆಯ ಮಹಾದಂಡನಾಯಕ, ಪ್ರಾಂತದ ಅಧಿಕಾರವನ್ನು ವಹಿಸಿಕೊಂಡ, ಹೈದರ್ ಅಲಿಯ ಮರಣದ ನಂತರ ಆಳ್ವಿಕೆ ಅವನ ಪುತ್ರ ಟೀಪು ಸುಲ್ತಾನನನಿಗೆ ಸಿಕ್ಕಿತು. ಮೈಸೂರಿನ ಹುಲಿ ಎಂದೇ ಪ್ರಖ್ಯಾತವಾದ ಟೀಪು ಸುಲ್ತಾನ್, ದಕ್ಷಿಣ ಭಾರತದಲ್ಲಿ ಯುರೋಪಿಯನ್ ವಿಸ್ತರಣೆ ತಡೆಗಟ್ಟಲು, ನಾಲ್ಕು ಯುದ್ದಗಳನ್ನು ಮಾಡಿದ ಆಂಗ್ಲೋ-ಮೈಸೂರು ಯುದ್ದಗಳು, ಕೊನೆಯದರಲ್ಲಿ ಅವನು ಮರಣವನ್ನಪ್ಪಿದ. ಹಾಗು
* ಮೈಸೂರು ರಾಜ್ಯ ಬ್ರಿಟಿಷ್ ರಾಜ್ಯ ಏಕೀಕರಣವಾಯಿತು.<ref>http://kannadakannadigga.blogspot.in/p/blog-page.html</ref>ಟೀಪು ಸೇನಾ ತಂತ್ರಗಳನ್ನು ತನ್ನ ತಂದೆ, ಹೈದರಾಲಿಯೊಂದಿಗೆ ಇದ್ದ ಫ್ರೆಂಚ್ ಅಧಿಕಾರಿಗಳಿಂದ ಪಡೆದನು. ೧೭೬೭ ರ ಕರ್ನಾಟಕ ಯುದ್ಧದಲ್ಲಿ ಒಂದು ಅಶ್ವದಳದ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದನು. ಸೇನಾನಾಯಕನಾಗಿ ಟೀಪು ಪ್ರಸಿದ್ದಿ ಪಡೆದದ್ದು ೧೭೭೫-೭೯ ರ ಆಂಗ್ಲೋ-ಮರಾಠಾ ಯುದ್ಧದಲ್ಲಿ.
* ೧೫ನೆಯ ವಯಸ್ಸಿನಲ್ಲಿ ತನ್ನ ತಂದೆ ಹೈದರಾಲಿಯ ಜೊತೆ ಪ್ರಥಮ ಮೈಸೂರು ಯುದ್ಧದಲ್ಲಿ ಭಾಗವಹಿಸಿ, ಒಂದು ದೊಡ್ಡ ಸೇನಾ ತುಕಡಿಯ ನಾಯಕನಾಗಿ ೧೭೮೨ರ ಫೆಬ್ರವರಿಯಲ್ಲಿ ಆಂಗ್ಲ ಸೇನಾನಾಯಕ ಬ್ರಾತ್‍ವೈಟ್‍ನನ್ನು ಸೋಲಿಸಿದನು. <ref>https://sujankumarshetty.wordpress.com/2009/08/page/7/</ref>
 
==ಬಾಲ್ಯ==
ಟಿಪ್ಪು ಸುಲ್ತಾನ್ ಹುಟ್ಟಿದ್ದು (೨೦ ನವಂಬರ್ ೧೭೫೦), ಇಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ (ಬೆಂಗಳೂರು ನಗರದಿಂದ ಸುಮಾರು ೩೩ ಕಿ.ಮೀ. ದೂರ)ತಂದೆ ಹೈದರ್ ತಾಯಿ ಫಾತಿಮಾ. ಟಿಪ್ಪುವಿನ ಅಜ್ಜ ಆರ್ಕಾಟ್ ನವಾಬನ ಸೇನೆಯಲ್ಲಿ ರಾಕೆಟ್ ಪಡೆಯ ಮುಖ್ಯಸ್ಥನಾಗಿದ್ದ. ಕಡಪಾ ಕೋಟೆಯ ಕಾವಲಿನ ಮುಖ್ಯಸ್ಥನ ಮಗಳು ಟಿಪ್ಪುವಿನ ಅಮ್ಮ. ಇಂಥ ವಾತಾವರಣದಲ್ಲಿ ಬೆಳೆದ ಟಿಪ್ಪುವಿಗೆ ಆಡಳಿತ, ಯುದ್ಧ, ವ್ಯೂಹ, ತಂತ್ರಗಾರಿಕೆ ಎಲ್ಲವೂ ಬಹು ಸಹಜವಾಗಿ ನೀರು ಕುಡಿದಂತೆ ಸಿದ್ಧಿಸಿತ್ತು.
 
==ವ್ಯಕ್ತಿತ್ವ==
ಟಿಪ್ಪು ತನ್ನನ್ನು '''ನಾಗರಿಕ ಟೀಪು ಸುಲ್ತಾನ್''' ಎಂದು ಕರೆದುಕೊಳ್ಳುತ್ತಿದ್ದ. ಆ ಕಾಲದ ಇತರ ಯಾವುದೇ ಸಾಮ್ರಾಜ್ಯಶಾಹಿ ಅಥವಾ ಸ್ವಾತಂತ್ರ್ಯಪೂರ್ಣ ವಿಚಾರಗಳನ್ನು ಒಪ್ಪದ ರಾಜರ ಅಭಿಪ್ರಾಯಗಳಿಗೆ ಇದು ಸಂಪೂರ್ಣ ವಿರುದ್ಧವಾದದ್ದು. ಅನೇಕ ಹಿಂದೂ ದೇವಾಲಯಗಳಿಗೆ ದಾನ ದತ್ತಿಗಳನ್ನು ಕೊಟ್ಟಿದ್ದನು.
 
==ಟಿಪ್ಪು ಚರಿತ್ರೆಕಾಲದಚರಿತ್ರೆ ಕಾಲದ ನಾಣ್ಯಗಳು==
* ಆ ನಾಣ್ಯಗಳಿಗೆ ಎರಡು ಭಿನ್ನ ಮುಖಗಳಿರುತ್ತವೆ. ಎರಡು ಮುಖಗಳನ್ನು ಆ ಕಾಲದ ಅಗತ್ಯವು ರೂಪುಗೊಳಿಸಿರುತ್ತದೆ. ಚರಿತ್ರೆ ಕಾಲದ ನೀತಿಕೋಶವೇ ಬೇರೆ. ನ್ಯಾಯ, ನೀತಿ ಎಂಬ ಪದಗಳ ಅರ್ಥವೇ ಬೇರೆ. ಅವನ್ನು ಇವತ್ತು ಎಳೆತರುವುದು, ಹೋಲಿಸುವುದು ಸಾಧುವಲ್ಲ. ಕೊನೆಗೂ ಚರಿತ್ರೆಯೆಂದರೆ ಏನೆಂದು ನಿರ್ಣಯವಾಗಬೇಕಾದ್ದು ಆಕರಗಳಿಂದ ಮಾತ್ರವಲ್ಲ, ನ್ಯಾಯಸೂಕ್ಷ್ಮದ ಮನಸುಗಳಲ್ಲೇ ಎಂದು ನೆನಪಿಸಿಕೊಳ್ಳುತ್ತ ಟಿಪ್ಪು ಸುಲ್ತಾನನ ಎರಡು ಭಿನ್ನ ವ್ಯಕ್ತಿತ್ವಗಳನ್ನು ಪೂರ್ವಗ್ರಹಗಳನಿಟ್ಟುಕೊಳ್ಳದಪೂರ್ವಗ್ರಹ ಗಳನಿಟ್ಟುಕೊಳ್ಳದ ಚರಿತ್ರೆಯ ಆಕರಗಳಿಂದ ಇಲ್ಲಿಡಲಾಗಿದೆ.
==ರಾಕೆಟ್ ಬಳಕೆ==
* ಹೈದರಾಲಿ ರಾಕೆಟ್ಟುಗಳನ್ನು ಅಭಿವೃದ್ಧಿಪಡಿಸಿ ಅದರ ಒಂದು ಪಡೆಯನ್ನೇ ಇಟ್ಟಿದ್ದರೆ, ಟಿಪ್ಪು ಕಬ್ಬಿಣದ ಹೊರಕವಚ ಹೊಂದಿದ ‘ಮೈಸೂರು ರಾಕೆಟ್ಟುಗಳನ್ನು ಅಭಿವೃದ್ಧಿಪಡಿಸಿದ. ಮುಂದೆ ಚೂಪಾದ ಬ್ಲೇಡು ಕಟ್ಟಿ, ಕಬ್ಬಿಣದ ಕೇಸುಗಳೊಳಗೆ ಮದ್ದಿನಪುಡಿ ತುಂಬಿದ್ದರಿಂದ ಅವುಗಳ ದೂರಗಾಮಿತ್ವ ಎರಡು ಕಿ.ಮೀ.ನಷ್ಟು ಹೆಚ್ಚಾಯಿತು. ಮೊದಲು ಈ ರಾಕೆಟ್ಟುಗಳನ್ನು ಎದುರುಗೊಂಡಾಗ ಬ್ರಿಟಿಷರ ತಂತ್ರಜ್ಞಾನ ಅದಕಿಂತ ಹಿಂದಿತ್ತು. ಎಂದೇ ಮೊದಲ ಯುದ್ಧಗಳನ್ನು ಟಿಪ್ಪು ಗೆಲ್ಲಲು ಸಾಧ್ಯವಾಯಿತು.
 
== ಯುದ್ಧ-ಆಡಳಿತ==
* ಟಿಪ್ಪು ಮೈಸೂರಿನ ಆಳರಸರಲ್ಲಿ ಒಬ್ಬ. ಕ್ರಿ. ಶ. ೧೭೫೦, ನವೆಂಬರ್ ೨೦ರಂದು ಬೆಂಗಳೂರು ಬಳಿಯ ದೇವನಹಳ್ಳಿಯಲ್ಲಿ ಹುಟ್ಟಿದ. ಕೇವಲ ೪೯ ವರ್ಷ ಬದುಕಿದ ಅವನ ಶೌರ್ಯ, ಬಲಿದಾನ, ಸ್ವಾಭಿಮಾನ ಕುರಿತು ಕತೆಗಳೇ ಇವೆ. ಯುದ್ಧದ ನಾನಾ ಕಲೆಗಳಲ್ಲಿ ನಿಷ್ಣಾತರಾದ ಕುಟುಂಬದಿಂದ ಬಂದವ ಟಿಪ್ಪು. ಅಸಮರ್ಥ ಹಾಗೂ ಅದಕ್ಷ ಮೈಸೂರರಸನನ್ನು ಸಿಂಹಾಸನದಿಂದ ಕೆಳಗಿಳಿಸಿ, ತಾನು ಪ್ರವಾದಿ ಮಹಮದರ ಕುರೇಶಿ ಪಂಗಡದವನೆಂದು ಸಾರಿ ರಾಜನಾದ ಹೈದರಾಲಿಯ ಮಗ. ಟಿಪ್ಪುವಿನ ಅಜ್ಜ ಆರ್ಕಾಟ್ ನವಾಬನ ಸೇನೆಯಲ್ಲಿ ರಾಕೆಟ್ ಪಡೆಯ ಮುಖ್ಯಸ್ಥನಾಗಿದ್ದ. ಕಡಪಾ ಕೋಟೆಯ ಕಾವಲಿನ ಮುಖ್ಯಸ್ಥನ ಮಗಳು ಟಿಪ್ಪುವಿನ ಅಮ್ಮ. ಇಂಥ ವಾತಾವರಣದಲ್ಲಿ ಬೆಳೆದ ಟಿಪ್ಪುವಿಗೆ ಆಡಳಿತ, ಯುದ್ಧ, ವ್ಯೂಹ, ತಂತ್ರಗಾರಿಕೆ ಎಲ್ಲವೂ ಬಹು ಸಹಜವಾಗಿ ನೀರು ಕುಡಿದಂತೆ ಸಿದ್ಧಿಸಿತ್ತು.
* ಅನಕ್ಷರಸ್ಥನಾಗಿದ್ದ ಹೈದರಾಲಿ ಮಗ ಟಿಪ್ಪುವಿಗೆ ಸಣ್ಣಂದಿನಿಂದಲೇ ಸಕಲ ವಿದ್ಯೆಗಳನ್ನು ಕಲಿಸುವ ವ್ಯವಸ್ಥೆ ಮಾಡಿದ. ಉರ್ದು, ಪರ್ಷಿಯನ್, ಕನ್ನಡ, ಅರೇಬಿಕ್, ಕುರಾನ್, ಇಸ್ಲಾಮೀ ನ್ಯಾಯಶಾಸ್ತ್ರ, ಕುದುರೆ ಸವಾರಿ, ತೋಪು ಚಲಾಯಿಸುವುದು ಮುಂತಾದವುಗಳನ್ನೆಲ್ಲ ಕಲಿಸಲಾಯಿತು. ಹಲವು ಪರಿಣತಿಗಳಲ್ಲಿ ಜ್ಞಾನ ಸಂಪಾದಿಸಿದ ಟಿಪ್ಪು ಹೊಸ ಮೂಲೂದಿ ಇಸ್ಲಾಮಿ ಪಂಚಾಂಗ ದಿನಗಣನೆಯನ್ನು ಚಾಲ್ತಿಗೆ ತಂದ.
* ಮೈಸೂರು ತನ್ನ ತಂದೆಯ ಕೈವಶವಾಗುತ್ತಿದ್ದದ್ದನ್ನು ಟಿಪ್ಪು ಹದಿವಯಸ್ಸಿನಲ್ಲಿ ಗಮನಿಸುತ್ತಿದ್ದ. ರಾಜಕಾರಣದ ಒಳಹೊರಗುಗಳ ಅರಿಯುತ್ತ ತಾನೂ ರೂಪುಗೊಂಡ. ಹದಿವಯಸ್ಸಿನಲ್ಲಿಯೇ ಮೊದಲ ಮೈಸೂರು ಯುದ್ಧ, ಆರ್ಕಾಟ್ ಮೇಲಿನ ದಾಳಿಯಲ್ಲಿ ಭಾಗವಹಿಸಿ ಹದಿನೇಳರ ಹೊತ್ತಿಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಂತಾಗಿದ್ದ. ಟಿಪ್ಪುವಿಗೆ ಯುದ್ಧವಿದ್ಯೆ ಹೇಳಿಕೊಟ್ಟವರು ಫ್ರೆಂಚ್ ಕಮ್ಯಾಂಡರುಗಳು.
* ೧೭೮೨ರಲ್ಲಿ ಎರಡನೆ ಮೈಸೂರು ಯುದ್ಧ ನಡೆಯುತ್ತಿರುವಾಗಲೇ ಕ್ಯಾನ್ಸರಿನಿಂದ ಹೈದರಾಲಿ ತೀರಿಕೊಂಡಾಗ ತಂದೆ ಅರ್ಧಕ್ಕೆ ಬಿಟ್ಟುಹೋದ ಯುದ್ಧ ಗೆದ್ದು ತನಗೆ ಅನುಕೂಲಕರವಾದ ಷರತ್ತು ವಿಧಿಸಿ ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡ. ಹೀಗೆ ೩೨ ವರ್ಷದ ಟಿಪ್ಪು ವಿಶಾಲ ರಾಜ್ಯದ ಅಧಿಪತಿಯಾದ. ಬೆಂಗಳೂರಿನ ಲಾಲ್‌ಬಾಗನ್ನು ಪೂರ್ಣಗೊಳಿಸಿದ.
* ರಸ್ತೆ, ಕೆರೆಕಟ್ಟೆ, ಅರಮನೆಗಳ ನಿರ್ಮಿಸಿದ. ಮೈಸೂರು ರೇಶಿಮೆ ಉದ್ದಿಮೆಯಾಗಿ ಬೆಳೆಯಲು ಅನುವಾಗುವಂತೆ ಹೊಸ ತೆರನ ಕಂದಾಯ ವ್ಯವಸ್ಥೆ ಜಾರಿಗೆ ತಂದ. ಫಾತುಲ್ ಮುಜಾಹಿದೀನ್ ಎಂಬ ಮಿಲಿಟರಿ ಕೈಪಿಡಿ ಬರೆದ. ಪಾನ ನಿಷೇಧ ಜಾರಿಗೊಳಿಸಿದ. ರಾಜ್ಯದ ಗಡಿಗಳನ್ನು ದಕ್ಷಿಣ, ಪಶ್ಚಿಮದತ್ತ ವಿಸ್ತರಿಸಲು ಸುಲಭವಾಯಿತು.ಆದರೆ ಒಂದು ಕಡೆ ರಾಜ್ಯದ ಗಡಿ ವಿಸ್ತಾರಗೊಳ್ಳತೊಡಗಿದ್ದರೆ ಮತ್ತೊಂದು ಕಡೆ ಸಂಕುಚಿತಗೊಳ್ಳತೊಡಗಿತ್ತು.
ಹೈದರಾಲಿ ರಾಕೆಟ್ಟುಗಳನ್ನು ಅಭಿವೃದ್ಧಿಪಡಿಸಿ ಅದರ ಒಂದು ಪಡೆಯನ್ನೇ ಇಟ್ಟಿದ್ದರೆ, ಟಿಪ್ಪು ಕಬ್ಬಿಣದ ಹೊರಕವಚ ಹೊಂದಿದ ‘ಮೈಸೂರು ರಾಕೆಟ್ಟುಗಳನ್ನು ಅಭಿವೃದ್ಧಿಪಡಿಸಿದ. ಮುಂದೆ ಚೂಪಾದ ಬ್ಲೇಡು ಕಟ್ಟಿ, ಕಬ್ಬಿಣದ ಕೇಸುಗಳೊಳಗೆ ಮದ್ದಿನಪುಡಿ ತುಂಬಿದ್ದರಿಂದ ಅವುಗಳ ದೂರಗಾಮಿತ್ವ ಎರಡು ಕಿ.ಮೀ.ನಷ್ಟು ಹೆಚ್ಚಾಯಿತು. ಮೊದಲು ಈ ರಾಕೆಟ್ಟುಗಳನ್ನು ಎದುರುಗೊಂಡಾಗ ಬ್ರಿಟಿಷರ ತಂತ್ರಜ್ಞಾನ ಅದಕಿಂತ ಹಿಂದಿತ್ತು. ಎಂದೇ ಮೊದಲ ಯುದ್ಧಗಳನ್ನು ಟಿಪ್ಪು ಗೆಲ್ಲಲು ಸಾಧ್ಯವಾಯಿತು. ರಾಜ್ಯದ ಗಡಿಗಳನ್ನು ದಕ್ಷಿಣ, ಪಶ್ಚಿಮದತ್ತ ವಿಸ್ತರಿಸಲು ಸುಲಭವಾಯಿತು.ಆದರೆ ಒಂದು ಕಡೆ ರಾಜ್ಯದ ಗಡಿ ವಿಸ್ತಾರಗೊಳ್ಳತೊಡಗಿದ್ದರೆ ಮತ್ತೊಂದು ಕಡೆ ಸಂಕುಚಿತಗೊಳ್ಳತೊಡಗಿತ್ತು.* ೧೭೮೬ರ ಹೊತ್ತಿಗೆ ಮರಾಠರಿಗೆ ಮತ್ತು ನಿಜಾಮನ ಸೇನೆಗೆ ಉತ್ತರ ಕರ್ನಾಟಕದ ಬಹುಭಾಗ ಬಿಟ್ಟುಕೊಡಬೇಕಾಯಿತು. ಮರಾಠ ಪೇಶ್ವೆ ಮಾಧವ ರಾಯನ ದಳಪತಿ ನಾನಾ ಫಡ್ನವೀಸನ ಸೇನೆ ಬದಾಮಿಬಾದಾಮಿ, ಕಿತ್ತೂರು, ಗಜೇಂದ್ರಗಡದವರೆಗೆ ತುಂಗಭದ್ರಾನದಿ ತನಕದ ಪ್ರದೇಶವನ್ನು ಮೈಸೂರಿನಿಂದ ಮರುವಶ ಪಡಿಸಿಕೊಂಡಿತು. ಅದೋನಿಯು ಹೈದರಾಬಾದ್ ನಿಜಾಮನ ಪಾಲಾಯಿತು.
* ಮರಾಠರೊಡನೆ ಒಪ್ಪಂದವಾಗಿ ಟಿಪ್ಪುವು ಯುದ್ಧಖರ್ಚು ೪೮ ಲಕ್ಷ ರೂಪಾಯಿ, ವಾರ್ಷಿಕ ಕಪ್ಪ ೧೨ ಲಕ್ಷ ರೂಪಾಯಿ ಕೊಡಬೇಕಾಯಿತು. ಈ ಸೋಲಿನ ಸಿಟ್ಟಿನಿಂದ ಕುದಿಯುತ್ತಿದ್ದ ಟಿಪ್ಪು ಗಮನವನ್ನು ಮಲಬಾರಿನೆಡೆ ಹರಿಸಿದ. ಅತ್ತ ಮಲಬಾರಿಗೆ ದೊಡ್ಡ ಸೇನೆ ಒಯ್ದಾಗ ಇತ್ತ ಬ್ರಿಟಿಷರು ಮಿತ್ರಸೇನೆಯೊಡಗೂಡಿ ಮೂರನೇ ಮೈಸೂರು ಯುದ್ಧ ಕೆದರಿದರು. ಆ ಯುದ್ಧದಲ್ಲಿ ಸೋಲು ಖಚಿತವೆನಿಸತೊಡಗಿದಾಗ ಸೈನ್ಯಕ್ಕೆ ಅನ್ನನೀರು ಪೂರೈಕೆ ಸಿಗದಂತೆ ಮಾಡಿ ಒಪ್ಪಂದಕ್ಕೆ ಬರುವಂತೆ ಮಾಡಿದ.
* ಮಿತ್ರಸೇನೆಯೊಂದಿಗೆ ಒಪ್ಪಂದವೇನೋ ಆಯಿತು. ಆದರೆ ತನ್ನ ಅರ್ಧ ಪ್ರಾಂತ್ಯ ಬಿಟ್ಟುಕೊಟ್ಟು ೩ ಕೋಟಿ ೩೦ ಲಕ್ಷ ರೂಪಾಯಿ ಯುದ್ಧ ಖರ್ಚನ್ನು ಕೊಡಬೇಕಾಯಿತು. ಅಷ್ಟು ಹಣ ಸಂದಾಯವಾಗುವವರೆಗೆ ತನ್ನಿಬ್ಬರು ಮಕ್ಕಳನ್ನು ಲಾರ್ಡ್ ಕಾರ್ನ್‌ವಾಲೀಸನ ಬಳಿ ಮದರಾಸಿನಲ್ಲಿ ಒತ್ತೆಯಿರಿಸಿ ಎರಡು ಕಂತಿನಲ್ಲಿ ಪೂರ್ತಿ ಹಣ ಕೊಟ್ಟು ಮಕ್ಕಳನ್ನು ಬಿಡಿಸಿ ತರಬೇಕಾಯಿತು.
* ಯಾವ ಎರಡನೆ ಮೈಸೂರು ಯುದ್ಧದ ಗೆಲುವು ಟಿಪ್ಪುವನ್ನು ರಾಜನನ್ನಾಗಿಸಿತೊ ಅದೇ ಯುದ್ಧವು ಅವನ ಅತಿಗಳ ಕುರಿತೂ ಹೇಳುತ್ತದೆ. ಬ್ರಿಟಿಷರನ್ನೇನೋ ಸೋಲಿಸಲಾಯಿತು, ಆದರೆ ತಂಜಾವೂರನ್ನು ಟಿಪ್ಪುವಿನ ಪಡೆಗಳು ಬುಡಮಟ್ಟ ನಾಶಮಾಡಿದವು. ತಂಜಾವೂರು ಚೇತರಿಸಿಕೊಳ್ಳಲು ಒಂದು ಶತಮಾನ ಹಿಡಿಯಿತು. ದನಕರು, ಬೆಳೆ ನಾಶವಷ್ಟೆ ಅಲ್ಲ, ೧೨,೦೦೦ ಮಕ್ಕಳನ್ನು ಟಿಪ್ಪು ಅಪಹರಿಸಿದ ಎಂಬ ದಾಖಲಾತಿಯೂ ಇದೆ.
* ವಸಾಹತುಶಾಹಿ ಬ್ರಿಟಿಷರ ವಿರುದ್ಧ ಹೋರಾಡಿದ ಅಪ್ರತಿಮ ಹೋರಾಟಗಾರ ಟಿಪ್ಪು. ಆದರೆ ಅವ ಹೋರಾಡಿದ್ದು, ಖ್ಯಾತ ಮೈಸೂರು ರಾಕೆಟ್ಟುಗಳನ್ನು ಬಳಸಿದ್ದು ಕೇವಲ ಬ್ರಿಟಿಷರ ವಿರುದ್ಧ ಮಾತ್ರವಲ್ಲ; ಆಚೀಚಿನ ರಾಜರುಗಳಾದ ಮರಾಠರು, ತಂಜಾವೂರು-ಮಲಬಾರ್-ಶಿರಾ-ಬಿದನೂರು-ಕೊಡಗು-ತಿರುವಾಂಕೂರು ಆಳ್ವಿಕರು, ಅರ್ಕಾಟಿನ ನವಾಬ, ಹೈದರಾಬಾದಿನ ನಿಜಾಮ ಇವರ ವಿರುದ್ಧ.
* ಕೊನೆಯತನಕ ಟಿಪ್ಪುವಿನ ಕಡುವೈರಿಗಳು ಮರಾಠರು ಮತ್ತು ಹೈದರಾಬಾದಿನ ನಿಜಾಮ.
ಗತವೈಭವದ ಕನವರಿಕೆಯಲ್ಲಿ ಕೊನೆಯುಸಿರೆಳೆಯುತ್ತಿದ್ದ ಮುಘಲ್ ಸಾಮ್ರಾಜ್ಯದ ದೊರೆ ಶಾ ಅಲಂಗೆ ಟಿಪ್ಪು ತಾನೇತಾನಾಗಿ ಅಧೀನತೆಯನ್ನು ಪ್ರದರ್ಶಿಸುತ್ತಿದ್ದ. ಶಾ ಅಲಂನನ್ನು ಹಿಜ್ರಾ ಒಬ್ಬ ಕುರುಡನನ್ನಾಗಿಸಿ ಪದಚ್ಯುತಗೊಳಿಸಿದ ನಂತರ ಟಿಪ್ಪು ಮರಾಠರನ್ನು ಸೋಲಿಸಲು ಆಫ್ಘನಿಸ್ತಾನದ ದುರಾನಿ ರಾಜರನ್ನು ಸಂಪರ್ಕಿಸಿದ.
* ಬ್ರಿಟಿಷರ ವಿರುದ್ಧ ಆಕ್ರಮಣಕ್ಕೆ ತುರ್ತು ಸಹಾಯ ಮಾಡುವಂತೆ ಟರ್ಕಿಯ ಒಟ್ಟೊಮನ್ ರಾಜರ ಸಹಾಯ ಕೇಳಿದ. ಆದರೆ ಇವರಿಗೆಲ್ಲ ರಷ್ಯಾದ ವಿರುದ್ಧ ಹೋರಾಡಲು ಬ್ರಿಟಿಷರ ಸಹಾಯ ಬೇಕಿದ್ದರಿಂದ ಟಿಪ್ಪುವಿಗೆ ಸಹಾಯ ಮಾಡಲಾರದೆ ಹೋದರು. ಕೊನೆಗೆ ಬ್ರಿಟಿಷರ ವಿರುದ್ಧ ಫ್ರೆಂಚ್ ಯುದ್ಧವೀರ ನೆಪೋಲಿಯನ್ ಬೋನಪಾರ್ಟೆಯ ಸಹಾಯಕ್ಕಾಗಿ ಪ್ರಯತ್ನಿಸಲಾಯಿತು.
 
== ಸಾಧನೆ ==
Line ೧೩೧ ⟶ ೧೪೪:
[[File:Surrender of Tipu Sultan.jpg|thumb|General [[Charles Cornwallis, 1st Marquess Cornwallis|Lord Cornwallis]], receiving two of Tipu Sultan's sons as hostages in the year 1793.]]
[[File:Louis-François Baron Lejeune 001.jpg|thumb|left|upright=1.4|In his attempts to junction with Tipu Sultan, [[Napoleon]] annexed [[Ottoman Egypt]] in the year 1798.]]
* ಗಿರೀಶ್ ಕಾರ್ನಾಡ್ ಅವರು ಟಿಪ್ಪು ದಿನಾಚರಣೆ ಸಂದರ್ಭದಲ್ಲಿ ಮಾತನಾಡುತ್ತಾ "ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಬಹುದಿತ್ತು" ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಯಿತು. ಬಡತನ, ನಿರುದ್ಯೋಗ, ಅನಕ್ಷರತೆ ಮುಂತಾದ ಸಕಲೆಂಟು ಸಾಮಾಜಿಕ, ಆರ್ಥಿಕ ಸಮಸ್ಯೆಗಳ ಜೊತೆಗೆ ಅಭದ್ರತೆ, ತಳಮಳ ಎದುರಿಸುತ್ತಿರುವ ಮುಸ್ಲಿಂ ಸಮುದಾಯಕ್ಕೆ ಸರ್ಕಾರ ಮಾಡಬೇಕಾದ್ದು ಬೇಕಾದಷ್ಟಿತ್ತು.
* ಮುಸ್ಲಿಂ ಸಮುದಾಯದ ಸಮಗ್ರ ಅಧ್ಯಯನ ನಡೆಸಿ ಸಾಚಾರ್ ಸಮಿತಿ ನೀಡಿದ ವರದಿಯನ್ನು ದಕ್ಷವಾಗಿ ಅನುಷ್ಠಾನಗೊಳಿಸಿದ್ದರೂ ಆ ಸಮುದಾಯದ ಸ್ಥಿತಿ ಉತ್ತಮಗೊಳ್ಳಬಹುದಿತ್ತು. ಆದರೆ ಜಾತಿಗೊಂದು ಜಯಂತಿ ನಿಗದಿಪಡಿಸಿ ಆ ಸಮುದಾಯವನ್ನೇ ಉದ್ಧಾರ ಮಾಡಿದೆವೆಂದು ಬೀಗುವ ಆಳುವವರಿಂದ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸುವಂತಿರಲಿಲ್ಲ. ಇದುವರೆಗೆ ಕೆಲ ಸಂಘಸಂಸ್ಥೆಗಳು ಆಚರಿಸಿಕೊಂಡು ಬರುತ್ತಿದ್ದ ಟಿಪ್ಪು ಜಯಂತಿಯನ್ನು ಈ ಸಲದಿಂದ ಸರ್ಕಾರವೇ ಆಚರಿಸಲು ತೀರ್ಮಾನಿಸಿತು.
* ಮತ್ತಿನ್ನಾವ ಜಯಂತಿ, ಪುಣ್ಯತಿಥಿಗಳಲ್ಲೂ ಹೀಗಾಗಿರಲಿಲ್ಲ, ಟಿಪ್ಪು ಜಯಂತಿಯ ಆಸುಪಾಸು ಸಂಪೂರ್ಣ ವಿರುದ್ಧ ಕ್ರಿಯೆ, ಪ್ರತಿಕ್ರಿಯೆಗಳನ್ನು ಈ ನಾಡು ಕಂಡಿತು. ಮೈಸೂರು ಆಳಿದ ಅರಸನ ಆರಾಧನೆ, ನಿಂದನೆ ಎರಡೂ ನಡೆದವು. ಒಂದು ವರ್ಗವು ಟಿಪ್ಪುವನ್ನು ಅನನ್ಯ ದೇಶಪ್ರೇಮಿ, ಸೆಕ್ಯುಲರ್ ರಾಜ, ಜಮೀನ್ದಾರಿ ಪದ್ಧತಿ ಕೊನೆಗೊಳಿಸಲೆತ್ನಿಸಿದ ಕ್ರಾಂತಿಕಾರಿ ಸುಲ್ತಾನ, ಶ್ರಿಂಗೇರಿ-ನಂಜನಗೂಡು-ಮೇಲುಕೋಟೆ ಮುಂತಾದ ದೇವಾಲಯಗಳಿಗೆ ದತ್ತಿಕಾಣಿಕೆ ನೀಡಿದ ಸಹಿಷ್ಣುವೆಂದು ಬಿಂಬಿಸಿದರೆ; ಮತ್ತೊಂದು ವರ್ಗವು ಅವನು ಸೋತ ಪ್ರದೇಶಗಳಲ್ಲಿ ಮಾಡಿದ ಲೂಟಿ ಮತ್ತು ನಾಶವನ್ನು ನೆನಪಿಸಿಕೊಂಡು ಕಾಫಿರರನ್ನು ಸೋಲಿಸಿ ಹಿಂಸಿಸಿ ಇಸ್ಲಾಂ ಸಾಮ್ರಾಜ್ಯ ಕಟ್ಟಹೊರಟ ಮತಾಂಧ ಎಂದು ಜರೆಯಿತು.
* ಮತ್ತೊಂದು ವರ್ಗವು ಅವನು ಸೋತ ಪ್ರದೇಶಗಳಲ್ಲಿ ಮಾಡಿದ ಲೂಟಿ ಮತ್ತು ನಾಶವನ್ನು ನೆನಪಿಸಿಕೊಂಡು ಕಾಫಿರರನ್ನು ಸೋಲಿಸಿ ಹಿಂಸಿಸಿ ಇಸ್ಲಾಂ ಸಾಮ್ರಾಜ್ಯ ಕಟ್ಟಹೊರಟ ಮತಾಂಧ ಎಂದು ಜರೆಯಿತು. ಭಿನ್ನ ಅಭಿಪ್ರಾಯಗಳು ಪ್ರಜಾಪ್ರಭುತ್ವದಲ್ಲಿ ಇರುವಂಥವೇ ಎಂದಿಟ್ಟುಕೊಂಡು ವಿರುದ್ಧ ಪ್ರತಿಕ್ರಿಯೆಗಳನ್ನು ಅತ್ತ ಸರಿಸುವಂತಿಲ್ಲ. ಧಾರ್ಮಿಕ ಅಸಹನೆ ಉತ್ತುಂಗ ಮುಟ್ಟಿರುವ ೨೦೧೫ರಲ್ಲಿ ಕನ್ನಡಿಗ ಮುಸ್ಲಿಮರಿಗೆ ಟಿಪ್ಪು ಸುಲ್ತಾನ್ ಮಾದರಿ ನಾಯಕನ ಗುಣಗಳ ಹೊಂದಿದ್ದನೆ?
* ವಸಾಹತುಶಾಹಿ ಕಾಲದ ರಾಜನಿಗೆ ಪ್ರಜಾಪ್ರಭುತ್ವ ಭಾರತಕ್ಕೆ ಮಾದರಿಯಾಗುವ ಸೆಕ್ಯುಲರ್ ಲಕ್ಷಣಗಳಿದ್ದವೆಲಕ್ಷಣ ಗಳಿದ್ದವೆ? ಮುಸ್ಲಿಂ ಸಮುದಾಯದ ಬದುಕು ಸುಧಾರಿಸುವುದು ಆಳುವವರ ಇಂಥ ನಡೆಗಳಿಂದಲೇ? ಎಂದು ವಸ್ತುನಿಷ್ಠವಾಗಿ ನೋಡಬೇಕಾದ ಅವಶ್ಯಕತೆಯಿದೆ. ಏಕೆಂದರೆ ಕಾಲದ ನಡಿಗೆಯ ಯಾವುದೇ ಒಂದು ಬಿಂದುವಿನಲ್ಲಿ ಇಟ್ಟ ಹೆಜ್ಜೆ ಮತ್ತು ಆಯ್ಕೆ ತಪ್ಪಾದರೆ ಅದರ ಜವಾಬ್ದಾರಿಗಳನ್ನು ಆ ಕಾಲದ ಎಲ್ಲರೂ ಸಮವಾಗಿ ಹೊತ್ತುಕೊಳ್ಳಬೇಕಾಗುತ್ತದೆ.
==ಚಿತ್ರಗಳು==
[[File:The storming of Seringapatam - John Vendramini, 1802 - BL P779.jpg|thumb|Tipu Sultan's forces during the [[Siege of Seringapatam (1799)|Siege of Srirangapatna]].]]
"https://kn.wikipedia.org/wiki/ಟಿಪ್ಪು_ಸುಲ್ತಾನ್" ಇಂದ ಪಡೆಯಲ್ಪಟ್ಟಿದೆ