ಟಿಪ್ಪು ಸುಲ್ತಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನಕ್ಕೆ ಮತ್ತಷ್ಟು ವಿಷಯವನ್ನು ಸೇರಿಸಲಾಗಿದೆ.
No edit summary
೨೧ ನೇ ಸಾಲು:
ಅನಕ್ಷರಸ್ಥನಾಗಿದ್ದ ಹೈದರಾಲಿ ಮಗ ಟಿಪ್ಪುವಿಗೆ ಸಣ್ಣಂದಿನಿಂದಲೇ ಸಕಲ ವಿದ್ಯೆಗಳನ್ನು ಕಲಿಸುವ ವ್ಯವಸ್ಥೆ ಮಾಡಿದ. ಉರ್ದು, ಪರ್ಷಿಯನ್, ಕನ್ನಡ, ಅರೇಬಿಕ್, ಕುರಾನ್, ಇಸ್ಲಾಮೀ ನ್ಯಾಯಶಾಸ್ತ್ರ, ಕುದುರೆ ಸವಾರಿ, ತೋಪು ಚಲಾಯಿಸುವುದು ಮುಂತಾದವುಗಳನ್ನೆಲ್ಲ ಕಲಿಸಲಾಯಿತು. ಹಲವು ಪರಿಣತಿಗಳಲ್ಲಿ ಜ್ಞಾನ ಸಂಪಾದಿಸಿದ ಟಿಪ್ಪು ಹೊಸ ಮೂಲೂದಿ ಇಸ್ಲಾಮಿ ಪಂಚಾಂಗ ದಿನಗಣನೆಯನ್ನು ಚಾಲ್ತಿಗೆ ತಂದ.
ಮೈಸೂರು ತನ್ನ ತಂದೆಯ ಕೈವಶವಾಗುತ್ತಿದ್ದದ್ದನ್ನು ಟಿಪ್ಪು ಹದಿವಯಸ್ಸಿನಲ್ಲಿ ಗಮನಿಸುತ್ತಿದ್ದ. ರಾಜಕಾರಣದ ಒಳಹೊರಗುಗಳ ಅರಿಯುತ್ತ ತಾನೂ ರೂಪುಗೊಂಡ. ಹದಿವಯಸ್ಸಿನಲ್ಲಿಯೇ ಮೊದಲ ಮೈಸೂರು ಯುದ್ಧ, ಆರ್ಕಾಟ್ ಮೇಲಿನ ದಾಳಿಯಲ್ಲಿ ಭಾಗವಹಿಸಿ ಹದಿನೇಳರ ಹೊತ್ತಿಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಂತಾಗಿದ್ದ. ಟಿಪ್ಪುವಿಗೆ ಯುದ್ಧವಿದ್ಯೆ ಹೇಳಿಕೊಟ್ಟವರು ಫ್ರೆಂಚ್ ಕಮ್ಯಾಂಡರುಗಳು. ೧೭೮೨ರಲ್ಲಿ ಎರಡನೆ ಮೈಸೂರು ಯುದ್ಧ ನಡೆಯುತ್ತಿರುವಾಗಲೇ ಕ್ಯಾನ್ಸರಿನಿಂದ ಹೈದರಾಲಿ ತೀರಿಕೊಂಡಾಗ ತಂದೆ ಅರ್ಧಕ್ಕೆ ಬಿಟ್ಟುಹೋದ ಯುದ್ಧ ಗೆದ್ದು ತನಗೆ ಅನುಕೂಲಕರವಾದ ಷರತ್ತು ವಿಧಿಸಿ ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡ. ಹೀಗೆ ೩೨ ವರ್ಷದ ಟಿಪ್ಪು ವಿಶಾಲ ರಾಜ್ಯದ ಅಧಿಪತಿಯಾದ. ಬೆಂಗಳೂರಿನ ಲಾಲ್‌ಬಾಗನ್ನು ಪೂರ್ಣಗೊಳಿಸಿದ. ರಸ್ತೆ, ಕೆರೆಕಟ್ಟೆ, ಅರಮನೆಗಳ ನಿರ್ಮಿಸಿದ. ಮೈಸೂರು ರೇಶಿಮೆ ಉದ್ದಿಮೆಯಾಗಿ ಬೆಳೆಯಲು ಅನುವಾಗುವಂತೆ ಹೊಸ ತೆರನ ಕಂದಾಯ ವ್ಯವಸ್ಥೆ ಜಾರಿಗೆ ತಂದ. ಫಾತುಲ್ ಮುಜಾಹಿದೀನ್ ಎಂಬ ಮಿಲಿಟರಿ ಕೈಪಿಡಿ ಬರೆದ. ಪಾನ ನಿಷೇಧ ಜಾರಿಗೊಳಿಸಿದ.
ಹೈದರಾಲಿ ರಾಕೆಟ್ಟುಗಳನ್ನು ಅಭಿವೃದ್ಧಿಪಡಿಸಿ ಅದರ ಒಂದು ಪಡೆಯನ್ನೇ ಇಟ್ಟಿದ್ದರೆ, ಟಿಪ್ಪು ಕಬ್ಬಿಣದ ಹೊರಕವಚ ಹೊಂದಿದ ‘ಮೈಸೂರು ರಾಕೆಟ್ಟುಗಳನ್ನು ಅಭಿವೃದ್ಧಿಪಡಿಸಿದ. ಮುಂದೆ ಚೂಪಾದ ಬ್ಲೇಡು ಕಟ್ಟಿ, ಕಬ್ಬಿಣದ ಕೇಸುಗಳೊಳಗೆ ಮದ್ದಿನಪುಡಿ ತುಂಬಿದ್ದರಿಂದ ಅವುಗಳ ದೂರಗಾಮಿತ್ವ ಎರಡು ಕಿ.ಮೀ.ನಷ್ಟು ಹೆಚ್ಚಾಯಿತು. ಮೊದಲು ಈ ರಾಕೆಟ್ಟುಗಳನ್ನು ಎದುರುಗೊಂಡಾಗ ಬ್ರಿಟಿಷರ ತಂತ್ರಜ್ಞಾನ ಅದಕಿಂತ ಹಿಂದಿತ್ತು. ಎಂದೇ ಮೊದಲ ಯುದ್ಧಗಳನ್ನು ಟಿಪ್ಪು ಗೆಲ್ಲಲು ಸಾಧ್ಯವಾಯಿತು. ರಾಜ್ಯದ ಗಡಿಗಳನ್ನು ದಕ್ಷಿಣ, ಪಶ್ಚಿಮದತ್ತ ವಿಸ್ತರಿಸಲು ಸುಲಭವಾಯಿತು.ಆದರೆ ಒಂದು ಕಡೆ ರಾಜ್ಯದ ಗಡಿ ವಿಸ್ತಾರಗೊಳ್ಳತೊಡಗಿದ್ದರೆ ಮತ್ತೊಂದು ಕಡೆ ಸಂಕುಚಿತಗೊಳ್ಳತೊಡಗಿತ್ತು. ೧೭೮೬ರ ಹೊತ್ತಿಗೆ ಮರಾಠರಿಗೆ ಮತ್ತು ನಿಜಾಮನ ಸೇನೆಗೆ ಉತ್ತರ ಕರ್ನಾಟಕದ ಬಹುಭಾಗ ಬಿಟ್ಟುಕೊಡಬೇಕಾಯಿತು. ಮರಾಠ ಪೇಶ್ವೆ ಮಾಧವ ರಾಯನ ದಳಪತಿ ನಾನಾ ಫಡ್ನವೀಸನ ಸೇನೆ ಬದಾಮಿ, ಕಿತ್ತೂರು, ಗಜೇಂದ್ರಗಡದವರೆಗೆ ತುಂಗಭದ್ರಾನದಿ ತನಕದ ಪ್ರದೇಶವನ್ನು ಮೈಸೂರಿನಿಂದ ಮರುವಶ ಪಡಿಸಿಕೊಂಡಿತು. ಅದೋನಿಯು ಹೈದರಾಬಾದ್ ನಿಜಾಮನ ಪಾಲಾಯಿತು. ಮರಾಠರೊಡನೆ ಒಪ್ಪಂದವಾಗಿ ಟಿಪ್ಪುವು ಯುದ್ಧಖರ್ಚು ೪೮ ಲಕ್ಷ ರೂಪಾಯಿ, ವಾರ್ಷಿಕ ಕಪ್ಪ ೧೨ ಲಕ್ಷ ರೂಪಾಯಿ ಕೊಡಬೇಕಾಯಿತು. ಈ ಸೋಲಿನ ಸಿಟ್ಟಿನಿಂದ ಕುದಿಯುತ್ತಿದ್ದ ಟಿಪ್ಪು ಗಮನವನ್ನು ಮಲಬಾರಿನೆಡೆ ಹರಿಸಿದ. ಅತ್ತ ಮಲಬಾರಿಗೆ ದೊಡ್ಡ ಸೇನೆ ಒಯ್ದಾಗ ಇತ್ತ ಬ್ರಿಟಿಷರು ಮಿತ್ರಸೇನೆಯೊಡಗೂಡಿ ಮೂರನೇ ಮೈಸೂರು ಯುದ್ಧ ಕೆದರಿದರು. ಆ ಯುದ್ಧದಲ್ಲಿ ಸೋಲು ಖಚಿತವೆನಿಸತೊಡಗಿದಾಗ ಸೈನ್ಯಕ್ಕೆ ಅನ್ನನೀರು ಪೂರೈಕೆ ಸಿಗದಂತೆ ಮಾಡಿ ಒಪ್ಪಂದಕ್ಕೆ ಬರುವಂತೆ ಮಾಡಿದ. ಮಿತ್ರಸೇನೆಯೊಂದಿಗೆ ಒಪ್ಪಂದವೇನೋ ಆಯಿತು. ಆದರೆ ತನ್ನ ಅರ್ಧ ಪ್ರಾಂತ್ಯ ಬಿಟ್ಟುಕೊಟ್ಟು ೩ ಕೋಟಿ ೩೦ ಲಕ್ಷ ರೂಪಾಯಿ ಯುದ್ಧ ಖರ್ಚನ್ನು ಕೊಡಬೇಕಾಯಿತು. ಅಷ್ಟು ಹಣ ಸಂದಾಯವಾಗುವವರೆಗೆ ತನ್ನಿಬ್ಬರು ಮಕ್ಕಳನ್ನು ಲಾರ್ಡ್ ಕಾರ್ನ್‌ವಾಲೀಸನ ಬಳಿ ಮದರಾಸಿನಲ್ಲಿ ಒತ್ತೆಯಿರಿಸಿ ಎರಡು ಕಂತಿನಲ್ಲಿ ಪೂರ್ತಿ ಹಣ ಕೊಟ್ಟು ಮಕ್ಕಳನ್ನು ಬಿಡಿಸಿ ತರಬೇಕಾಯಿತು. ಯಾವ ಎರಡನೆ ಮೈಸೂರು ಯುದ್ಧದ ಗೆಲುವು ಟಿಪ್ಪುವನ್ನು ರಾಜನನ್ನಾಗಿಸಿತೊ ಅದೇ ಯುದ್ಧವು ಅವನ ಅತಿಗಳ ಕುರಿತೂ ಹೇಳುತ್ತದೆ. ಬ್ರಿಟಿಷರನ್ನೇನೋ ಸೋಲಿಸಲಾಯಿತು, ಆದರೆ ತಂಜಾವೂರನ್ನು ಟಿಪ್ಪುವಿನ ಪಡೆಗಳು ಬುಡಮಟ್ಟ ನಾಶಮಾಡಿದವು. ತಂಜಾವೂರು ಚೇತರಿಸಿಕೊಳ್ಳಲು ಒಂದು ಶತಮಾನ ಹಿಡಿಯಿತು. ದನಕರು, ಬೆಳೆ ನಾಶವಷ್ಟೆ ಅಲ್ಲ, ೧೨,೦೦೦ ಮಕ್ಕಳನ್ನು ಟಿಪ್ಪು ಅಪಹರಿಸಿದ ಎಂಬ ದಾಖಲಾತಿಯೂ ಇದೆ.
ವಸಾಹತುಶಾಹಿ ಬ್ರಿಟಿಷರ ವಿರುದ್ಧ ಹೋರಾಡಿದ ಅಪ್ರತಿಮ ಹೋರಾಟಗಾರ ಟಿಪ್ಪು. ಆದರೆ ಅವ ಹೋರಾಡಿದ್ದು, ಖ್ಯಾತ ಮೈಸೂರು ರಾಕೆಟ್ಟುಗಳನ್ನು ಬಳಸಿದ್ದು ಕೇವಲ ಬ್ರಿಟಿಷರ ವಿರುದ್ಧ ಮಾತ್ರವಲ್ಲ; ಆಚೀಚಿನ ರಾಜರುಗಳಾದ ಮರಾಠರು, ತಂಜಾವೂರು-ಮಲಬಾರ್-ಶಿರಾ-ಬಿದನೂರು-ಕೊಡಗು-ತಿರುವಾಂಕೂರು ಆಳ್ವಿಕರು, ಅರ್ಕಾಟಿನ ನವಾಬ, ಹೈದರಾಬಾದಿನ ನಿಜಾಮ ಇವರ ವಿರುದ್ಧ. ಕೊನೆಯತನಕ ಟಿಪ್ಪುವಿನ ಕಡುವೈರಿಗಳು ಮರಾಠರು ಮತ್ತು ಹೈದರಾಬಾದಿನ ನಿಜಾಮ.
ಗತವೈಭವದ ಕನವರಿಕೆಯಲ್ಲಿ ಕೊನೆಯುಸಿರೆಳೆಯುತ್ತಿದ್ದ ಮುಘಲ್ ಸಾಮ್ರಾಜ್ಯದ ದೊರೆ ಶಾ ಅಲಂಗೆ ಟಿಪ್ಪು ತಾನೇತಾನಾಗಿ ಅಧೀನತೆಯನ್ನು ಪ್ರದರ್ಶಿಸುತ್ತಿದ್ದ. ಶಾ ಅಲಂನನ್ನು ಹಿಜ್ರಾ ಒಬ್ಬ ಕುರುಡನನ್ನಾಗಿಸಿ ಪದಚ್ಯುತಗೊಳಿಸಿದ ನಂತರ ಟಿಪ್ಪು ಮರಾಠರನ್ನು ಸೋಲಿಸಲು ಆಫ್ಘನಿಸ್ತಾನದ ದುರಾನಿ ರಾಜರನ್ನು ಸಂಪರ್ಕಿಸಿದ. ಬ್ರಿಟಿಷರ ವಿರುದ್ಧ ಆಕ್ರಮಣಕ್ಕೆ ತುರ್ತು ಸಹಾಯ ಮಾಡುವಂತೆ ಟರ್ಕಿಯ ಒಟ್ಟೊಮನ್ ರಾಜರ ಸಹಾಯ ಕೇಳಿದ. ಆದರೆ ಇವರಿಗೆಲ್ಲ ರಷ್ಯಾದ ವಿರುದ್ಧ ಹೋರಾಡಲು ಬ್ರಿಟಿಷರ ಸಹಾಯ ಬೇಕಿದ್ದರಿಂದ ಟಿಪ್ಪುವಿಗೆ ಸಹಾಯ ಮಾಡಲಾರದೆ ಹೋದರು. ಕೊನೆಗೆ ಬ್ರಿಟಿಷರ ವಿರುದ್ಧ ಫ್ರೆಂಚ್ ಯುದ್ಧವೀರ ನೆಪೋಲಿಯನ್ ಬೋನಪಾರ್ಟೆಯ ಸಹಾಯಕ್ಕಾಗಿ ಪ್ರಯತ್ನಿಸಲಾಯಿತು.
 
== ಸಾಧನೆ ==
"https://kn.wikipedia.org/wiki/ಟಿಪ್ಪು_ಸುಲ್ತಾನ್" ಇಂದ ಪಡೆಯಲ್ಪಟ್ಟಿದೆ