ಕಿಶೋರ್ ಕುಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೯ ನೇ ಸಾಲು:
 
ಆಭಾಸ್ ಗಾಂಗೂಲಿ ಇನ್ನೂ ಮಗುವಾಗಿದ್ದಾಗ, ಅಶೋಕ್ ಕುಮಾರ್ ಒಬ್ಬ ಜನಪ್ರಿಯ [[ಬಾಲಿವುಡ್]] ನಟರಾದರು. ನಂತರ, ಅನೂಪ್ ಕುಮಾರ್ ಕೂಡ ಅಶೋಕ್ ಕುಮಾರ್ ಸಹಾಯದಿಂದ ಚಲನಚಿತ್ರದಲ್ಲಿ ಪ್ರವೇಶಿಸಿದರು. ತನ್ನ ಸಹೋದರರೊಂದಿಗೆ ಸಮಯ ಕಳೆಯುತ್ತ, ಆಭಾಸ್ ಕುಮಾರ್ ಕೂಡ ಚಲನಚಿತ್ರ ಮತ್ತು ಸಂಗೀತದಲ್ಲಿ ಬಹಳ ಆಸಕ್ತಿ ವಹಿಸಲು ಆರಂಭಿಸಿದನು. ಅವನು ಗಾಯಕ-ನಟ [[ಕುಂದನ್ ಲಾಲ್ ಸೈಗಲ್|ಕುಂದನ್ ಲಾಲ್ ಸೈಗಲ್‌ರ]] ಅಭಿಮಾನಿಯಾದನು (ಸೈಗಲ್‌ರನ್ನು ತನ್ನ [[ಗುರು|ಗುರುವೆಂದು]] ಭಾವಿಸಿದ್ದನು).
 
==ಹಿಂದಿ ಚಲನಚಿತ್ರದಲ್ಲಿ ಆರಂಭದ ದಿನಗಳು==
[[ಅಶೋಕ್ ಕುಮಾರ್]] ಒಬ್ಬ ಬಾಲಿವುಡ್ ಮುಖ್ಯನಟನಾದ ಬಳಿಕ, ಗಾಂಗೂಲಿ ಕುಟುಂಬ [[ಮುಂಬೈ|ಮುಂಬೈಗೆ]] ನಿಯಮಿತವಾಗಿ ಭೇಟಿ ನೀಡತೊಡಗಿತು. ಆಭಾಸ್ ಕುಮಾರ್ ತನ್ನ ಹೆಸರನ್ನು ಕಿಶೋರ್ ಕುಮಾರ್ ಎಂದು ಬದಲಾಯಿಸಿಕೊಂಡನು ಮತ್ತು ಅವನ ಸಹೋದರ ಕೆಲಸ ಮಾಡುತ್ತಿದ್ದ [[ಬಾಂಬೆ ಟಾಕೀಸ್|ಬಾಂಬೆ ಟಾಕೀಸ್‌ನಲ್ಲಿ]] ವೃಂದಗಾಯಕನಾಗಿ ತನ್ನ ಚಲನಚಿತ್ರ ವೃತ್ತಿಯನ್ನು ಆರಂಭಿಸಿದನು. ನಟನಾಗಿ ಅವರ ಮೊದಲ ಚಿತ್ರ, ಅಶೋಕ್ ಕುಮಾರ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದ, ''ಶಿಕಾರಿ'' (೧೯೪೬). ಸಂಗೀತ ನಿರ್ದೇಶಕ ಖೇಮ್‌ಚಂದ್ ಪ್ರಕಾಶ್ ಇವರಿಗೆ ಚಿತ್ರ ''[[ಜಿದ್ದಿ (೧೯೪೮ರ ಚಿತ್ರ)|ಜಿದ್ದಿಯಲ್ಲಿ]]'' (೧೯೪೮) ''ಮರ್‌ನೇ ಕಿ ದುಆಯೇಂ ಕ್ಯೂ ಮಾಂಗು'' ಹಾಡು ಹಾಡಲು ಅವಕಾಶ ಕೊಟ್ಟರು. ಇದರ ನಂತರ, ಕಿಶೋರ್ ಕುಮಾರ್‌ರಿಗೆ ಹಲವು ಕೆಲಸಗಳು ದೊರೆತವು, ಆದರೆ ಅವರು ಚಲನಚಿತ್ರ ವೃತ್ತಿಯ ಬಗ್ಗೆ ಬಹಳ ಗಂಭೀರವಾಗಿರಲಿಲ್ಲ.<ref name="ಫಿಲ್ಮ್‌ಫೇರ್_ನವಂಬರ್೧_೧೯೮೭">[[ಫಿಲ್ಮ್‌ಫೇರ್]] (ನವಂಬರ್ ೧-೧೫, ೧೯೮೭)</ref> ೧೯೪೯ರಲ್ಲಿ, ಅವರು ಮುಂಬೈಯಲ್ಲಿ ನೆಲೆಸಲು ನಿರ್ಧರಿಸಿದರು.
"https://kn.wikipedia.org/wiki/ಕಿಶೋರ್_ಕುಮಾರ್" ಇಂದ ಪಡೆಯಲ್ಪಟ್ಟಿದೆ