ಮರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨ ನೇ ಸಾಲು:
 
'''ಮರಣ'''ಎಂದರೆ ಜೀವಿಯ ಅಂತ್ಯವಾಗುವುದು. ಇನ್ನೊಂದು ಅರ್ಥದಲ್ಲಿ ಈ ಜಗತ್ತಿನಿಂದ ಇಲ್ಲವಾಗುವುದು.[[ಜನನ]]ದಂತೆ ಮರಣವೂ [[ನಿಸರ್ಗ]] ಪ್ರೇರಿತ.ಮರಣವೆಂದರೆ [[ದೇಹ]]ದಿಂದ [[ಆತ್ಮ]] ಸ್ವತಂತ್ರವಾಗುವುದು ಎಂಬ ಭಾವನೆ ಜಗತ್ತಿನ ಎಲ್ಲ [[ದೇಶ]]ಗಳಲ್ಲಿಯೂ ಇದೆ.ಎಲ್ಲಾ [[ಧರ್ಮ]]ಗಳಲ್ಲಿಯೂ ಮರಣ ಸಂಬಂದ ಕಲ್ಪನೆಗಳಲ್ಲಿ ಸಾದೃಶ್ಯವಿದೆ.[[ಮನುಷ್ಯ]] ಸಹಜವಾದ [[ಭೀತಿ]],ನಿರೀಕ್ಷೆ,ಆಶೋತ್ತರಗಳನ್ನು ಮರಣದ ಕಲ್ಪನೆ ಪ್ರತಿಬಿಂಬಿಸುತ್ತದೆ.
 
 
ಸಾವು, ಜೀವಿಯೊಂದರಲ್ಲಿ ಇರುವ ಎಲ್ಲಾ ಜೈವಿಕ ಕಾರ್ಯಗಳು ಮುಕ್ತಾಯ ಆಗುತ್ತವೆ. ಸಾಮಾನ್ಯವಾಗಿ ಸಾವಿನ ಬಗ್ಗೆ ಸೆಳೆಯುವ ವಿಷಯಗಳು ಜೀವ ವಯಸ್ಸಾದಗ (ವೃದ್ಧಾಪ್ಯ). ಭಕ್ಷಣೆ, ಅಪೌಷ್ಟಿಕತೆ, ರೋಗ, ಆತ್ಮಹತ್ಯೆ, ನರಹತ್ಯೆ, ಹಸಿವು, ನಿರ್ಜಲೀಕರಣ, ಮತ್ತು ಅಪಘಾತಗಳು ಅಥವಾ ಆಘಾತ ಟರ್ಮಿನಲ್ ಗಾಯ ಪರಿಣಾಮವಾಗಿ ಸಾವು ಬರಬಹುದು.
ಸಾವು ಸಾಮಾನ್ಯವಾಗಿ ಮತ್ತು ನಿರ್ದಿಷ್ಟವಾಗಿ ಮಾನವರಿಗೆ, ಒಂದು ಕೆಟ್ಟ ಅಥವಾ ಅಹಿತಕರ ಸಂದರ್ಭವಾಗಿ ಪರಿಗಣಿಸಲಾಗುತ್ತದೆ.
 
==ಇತಿವೃತ್ತ==
* ಮನುಷ್ಯ ಎಷ್ಟೆಲ್ಲ ಬೆಳೆದರೂ, ಏನೆಲ್ಲ ಸಾಧಿಸಿದರೂ, ವೈಜ್ಞಾನಿಕವಾಗಿ - ವೈಚಾರಿಕವಾಗಿ ಪ್ರಕೃತಿಗೇ ಎದುರಾಗಿ ಏನೇನೆಲ್ಲ ವಿಕ್ರಮಗಳನ್ನು ತನ್ನದಾಗಿಸಿಕೊಂಡರೂ, ಇನ್ನೂ ಬೇಧಿಸಲಾಗದ ಒಂದು ವಿಸ್ಮಯವೆಂದರೆ ಸಾವು. ಸಾವನ್ನು ಬೇಧಿಸೋದಿರಲಿ ಅದಕ್ಕೊಂದು ಪರಿಪೂರ್ಣವಾದ ವ್ಯಾಖ್ಯಾನವನ್ನೂ ನಮ್ಮಿಂದ ಕೊಡಲಾಗಿಲ್ಲ ಈವರೆಗೂ. “ಸಾವು ಹೇಗೆ ಅಂದರೆ, ಯಾರೋ ಬಂದು ನಿಮ್ಮ ಮನೆಗೆ ಬೀಗ ಹಾಕಿ ಬೀಗದ ಕೈಯನ್ನು ತೆಗೆದುಕೊಂಡು ಹೋದ ಹಾಗೆ.
* ನಿಮ್ಮಿಂದ ಇನ್ನು ಯಾವತ್ತೂ ವಾಪಸ್‌ ಮನೆಗೆ ಬರುವುದಕ್ಕೆ ಆಗುವುದಿಲ್ಲ. ನಿಮ್ಮ ಜೊತೆ ನೆನಪುಗಳು ಬಿಟ್ಟರೆ ಬೇರೇನೂ ಇರುವುದಿಲ್ಲ. ಒಪ್ಪಿಕೊಳ್ಳಲೇಬೇಕಾದ ಸತ್ಯ ಇದು" ಹುಟ್ಟು ನಿಶ್ಚಿತ: ಸಾವು ಖಚಿತ. ಸಾವು ತುಂಬ ನೋವನ್ನು ತರುವಂತಹುದು. ಸಾವೆಂಬ ಅತಿಥಿ ಸಣ್ಣದೊಂದು ಮುನ್ಸೂಚನೆಯನ್ನೂ ಕೊಡದೆ ಬರುತ್ತದೆ. ಅದು ಕಾಲಾತೀತ, ಪಕ್ಷಾತೀತ ಮತ್ತು ಜಾತ್ಯಾತೀತ.
 
==ಸಾವಿನ ವಿಧಗಳು==
* "ತೃಣಮಪಿ ನ ಚಲತಿ"- ಎಂದರೆ ದೇವನ ಅನುಜ್ಞೆ ಇಲ್ಲದೆ ಏನೊಂದು ಚಲಿಸುವುದಿಲ್ಲ. ಅಂದರೆ ದೇವರಿಗೂ, ಸಾವಿಗೂ ಏನೊ ನಂಟಿರಬೇಕೆಂಬ ಗುಮಾನಿ ಎದುರಾಗುತ್ತದೆ. ಸಾವೆಂಬುದು ಸೈಕಲ್, ಸ್ಕೂಟರ್, ಕಾರು, ಬಸ್, ರೈಲು, ವಿಮಾನ ಅಪಘಾತದ ರೂಪದಲ್ಲಿ ಬರಬಹುದು. ಜ್ವರದ ನೆಪದಲ್ಲಿ ಬರಬಹುದು. ಹೃದಯಾಘಾತದ ಕಾರಣ ಹೇಳಬಹುದು.
* ಅಷ್ಟೇ ಅಲ್ಲ, ಸಾವೆಂಬುದು ವೈದ್ಯರ ರೂಪದಲ್ಲೇ ಬಂದು, ಹಲೋ ಹೇಳಿ ಉಸಿರು ನಿಲ್ಲಿಸಬಹುದು! ಮುಪ್ಪಿನ ಸಾವು, ಅಕಾಲ ಮರಣ<ref>http://kannadigaworld.com/kannada/india-kn/179424.html</ref>, ಆತ್ಮಹತ್ಯೆ, ಕೊಲೆ, ಹೃದಯಾಪಘಾತ, ಕಾಯಿಲೆಯಿಂದಾಗುವ ಮರಣಗಳು, ಅಪಘಾತಗಳಿಂದಾಗುವ ಮರಣಗಳು<ref>http://www.kannadaprabha.com/topic/%e0%b2%b8%e0%b2%be%e0%b2%b5%e0%b3%81</ref>, ದಿಢೀರ್ ಸಾವು ಇತ್ಯಾದಿ.
 
==ಸಾವಿನ ನಂತರ==
* ಮರಣವು ದೇಹಕ್ಕೆ ಮಾತ್ರ; ಪ್ರಾಣವು ಹಾರುತ್ತದೆ; ಮನವು ಜಾರುತ್ತದೆ. ದೇಹವು ಕಳಚಿದರೆ, ದೇಹಿಯು ಹೊಸದೇಹವನ್ನು ಧಾರಣ ಮಾಡುತ್ತಾನೆ. ಮರಣಕ್ಕೆ ದೇಹ ಬಿಡುವುದದು ಅನ್ನುತ್ತಾರೆ. ಅದು ನಿರ್ಯಾಣ ಮಹೋತ್ಸವವೆನಿಸುತ್ತದೆ. ಅಂತ್ಯವಿಧಿಯು ಸ್ಮಶಾನ ಯಾತ್ರೆಯೆನಿಸುತ್ತದೆ. ಬದುಕಿರುವ ವ್ಯಕ್ತಿಗಿರುವ ಬೆಲೆ ಸತ್ತ ಮೇಲೆ ಇರುವುದಿಲ್ಲ.ಸಾವು ಒಂದು ಜೀವಿಯ ನಿರ್ಗಮನಕ್ಕೆ ಕಾರಣವಾದ ಎಲ್ಲಾ ಜೈವಿಕ ಕಾರ್ಯಗಳನ್ನು ಸ್ಥಗಿತಗೊಳಿಸುವುದು.
* ಸಾವಿನ ಮರುಕ್ಷಣವೇ ಸತ್ತ ವ್ಯಕ್ತಿಯ ದೇಹ ಕೊಳೆಯಲು ಆರಂಭಿಸಿ, ದುರ್ವಾಸನೆ ಬೀರುತ್ತದೆ. ಹಾಗಾಗಿ ಬೇಗನೆ ಶವವನ್ನೂ ಹೂಳುವ (ಮಣಿನಿಂದ ಬಂದ ಕಾಯ ಮಣ್ಣಿಗೆ), ಸುಡುವ (ಪಂಚಭೂತಗಳಲ್ಲಿ ಲೀನ) ಪದ್ದತಿ ಬೆಳೆದು ಬಂದಿದೆ. ಸಾವಿನ ನಂತರ ಸಂಸ್ಮರಣಾ ಸಮಾರಂಭಗಳಲ್ಲಿ ವಿವಿಧ ಶೋಕಾಚರಣೆಯ ಅಥವಾ ಅಂತ್ಯಕ್ರಿಯೆ ಅಭ್ಯಾಸಗಳು ಸೇರಿವೆ.
* ವಿಶ್ವದ ಸಂಸ್ಕೃತಿಗಳಲ್ಲಿ ಶವದ ಸಂಸ್ಕಾರ ವಿಧಾನಗಳು ವಿವಿಧ ಬಗೆಯವಾದರೂ, ಸಾಮಾನ್ಯವಾಗಿ ಶವದ ಅಂತ್ಯಕ್ರಿಯೆಯನ್ನು ಸತ್ತ ವ್ಯಕ್ತಿಯ ಹತ್ತಿರದ ಬಂಧುಗಳು ನಡೆಸುವುದು ವಾಡಿಕೆ. ಬೇರೆ ಬೇರೆ ಜನಾಂಗಳಲ್ಲಿ ಶವ ಸಂಸ್ಕಾರದ ಆಚರಣೆ ಬಹಳ ಭಿನ್ನವಾಗಿರುತ್ತದೆ. ಬುಡಕಟ್ಟು ಜನರು ಶವವನ್ನು ಹೂಳದೆ, ಸುಡದೆ, ಕಾಡಿಗೆ ತೆಗೆದುಕೊಂಡು ಹೋಗಿ ಇಟ್ಟು ಬರುತ್ತಾರೆ. ಆ ಶವ ಕಾಡು ಪ್ರಾಣಿಗಳಿಗಾದರೂ ಆಹಾರವಾಗಲಿ ಎಂಬ ಆಶಯದಿಂದ.
 
==ದೇಹದಾನ==
* ಸಾವಿನ ನಂತರ ದೇಹದಾನ ಮಾಡುವ ಕ್ರಿಯೆಯೂ ವೈಜ್ಞಾನಿಕವಾಗಿ ಸಾಧ್ಯವಿದೆ. ಸತ್ತನಂತರ ನಮ್ಮ ದೇಹವನ್ನು ಮಣ್ಣು ಮಾಡುವ, ಸುಡುವ ಬದಲು ನಿರ್ಧಿಷ್ಟ ಅವಧಿಯಲ್ಲಿ ದಾನ ಮಾಡಿದ ದೇಹದಿಂದ ಇತರ ನೊಂದವರಿಗೆ ಉಪಯೋಗವಾಗುವ ಅಂಗಗಳನ್ನು ತೆಗೆದು, ನಂತರ ದೇಹವನ್ನು ಸಂರಕ್ಷಿಸಿಡಲಾಗುವುದು. ಆ ಮೃತದೇಹವನ್ನು ವೈದ್ಯಕೀಯ ವಿಜ್ಞಾನ ವಿದ್ಯಾರ್ಥಿಗಳ ಅಧ್ಯಯನ ಮತ್ತು ಸಂಶೋಧನೆಗಳಿಗೆ ಬಳಸಲಾಗುವುದು.
* ದೇಹದಾನದಿಂದ ಆಗುವ ಮೂಲ ಕಾರ್ಯಗಳೆಂದರೆ ಮಾನವಕೋಟಿಗೆ ಮೃತದೇಹದ ಮೇಲೆ ಆಗುವ ಸಂಶೋಧನೆ ಫಲ ಮುಖ್ಯವಾದುದು. ಅದಕ್ಕಾಗಿಯೇ ದೇಹದಾನ ಪ್ರಮುಖವಾದುದು. ದೇಹದಾನದ ಪ್ರಕ್ರಿಯೆ ಅತ್ಯಂತ ಸರಳ ಹಾಗೂ ಸುಲಭವಾದುದು. ದೇಹದಾನ ಪಡೆಯುವ ಸಂಸ್ಥೆಯಲ್ಲಿ ನಿರ್ಧಿಷ್ಟ ಅರ್ಜಿಗಳಿದ್ದಲ್ಲಿ ಅದನ್ನು ಸಂಪೂರ್ಣವಾಗಿ ತುಂಬಿ ಮೊದಲೇ ಸಂಸ್ಥೆಗೆ ನೀಡಿ ನೊಂದಾಯಿಸಿದರೆ ಸಾಕು. ದೇಹದಾನ ಅರ್ಜಿಯೇ ದೇಹದಾನ ಸಮ್ಮತಿಯ ಉಯಿಲು.
* ಉಯಿಲಿನಲ್ಲಿ ದೇಹದಾನ ಮಾಡುವ ವ್ಯಕ್ತಿಯ ಎಲ್ಲ ವಿವರಗಳು, ದೇಹದಾನದಿಂದ ಹಾಗೂ ನಂತರದ ಪ್ರಕ್ರಿಯೆಗಳಿಗೆ ಒಪ್ಪಿಗೆ ನಿಬಂಧನೆ ಹಾಗೂ ವಾರಸುದಾರರ ಒಪ್ಪಿಗೆ ಇರುತ್ತದೆ. ಇದನ್ನು ಸಲ್ಲಿಸಿದ ನಂತರ ಸಂಸ್ಥೆಯು ತನ್ನ ಅನುಮೋದನೆ ಸೂಚಕವಾಗಿ ದೇಹದಾನ ಪ್ರಮಾಣ ಪತ್ರ ನೀಡುತ್ತದೆ. ಅದರಲ್ಲಿ ದೇಹದಾನ ಮಾಡಿದ ವ್ಯಕ್ತಿಯ ಪೂರ್ಣ ವಿವರ, ಮರಣಾನಂತರ ಬಂಧುಗಳು ಮಾಡಬೇಕಾದ ಕ್ರಿಯೆಗಳ ವಿವರಗಳು ಪ್ರಮಾಣ ಪತ್ರದಲ್ಲಿರುತ್ತದೆ.
* ಮರಣ ಹೊಂದಿದ ಕೂಡಲೇ ದೇಹದಾನ ಪಡೆಯುವ ಸಂಸ್ಥೆಗೆ ತಕ್ಷಣ ದೂರವಾಣಿ ಮೂಲಕ ತಿಳಿಸಬೇಕು. ಮೃತಪಟ್ಟ ಆರು ಗಂಟೆಯೊಳಗೆ ದೇಹವನ್ನು ಸಂಸ್ಥೆಗೆ ತಲುಪಿಸಿದರೆ ದೇಹದಾನಿಯ ನೇತ್ರಗಳನ್ನು ತೆಗೆದು ಅಂಧರ ಬಾಳಿನ ನೇತ್ರಜ್ಯೋತಿಯನ್ನಾಗಿ ಮಾಡಲಾಗುವುದು. ಮೃತದೇಹವನ್ನು ಸಂಬಂಧಿಸಿದ ಸಂಸ್ಥೆಯೇ ಸುದ್ದಿ ತಲುಪಿದ ಕೂಡಲೇ ತರಿಸಿಕೊಳ್ಳುವ ವ್ಯವಸ್ಥೆ ಮಾಡುವುದು.
* ಅಲ್ಲದೆ ದೇಹದಾನ ಉಯಿಲು ಸಂಸ್ಥೆಯಲ್ಲಿ ಅಂಗೀಕಾರವಾದೊಡನೆಯೇ ದೇಹದಾನಿಗೆ ಲ್ಯಾಮಿನೇಟ್ ಮಾಡಿದ ಹಾಗೂ ಸಂಪೂರ್ಣ ವಿವರಗಳುಳ್ಳ ಗುರುತು ಚೀಟಿಯನ್ನು ಸಂಸ್ಥೆ ತಲುಪಿಸುವುದು. ಆ ಗುರುತು ಚೀಟಿಯನ್ನು ದೇಹದಾನ ಮಾಡಿದ ವ್ಯಕ್ತಿಯು ಯಾವಾಗಲೂ ತನ್ನ ಬಳಿ ಇಟ್ಟುಕೊಂಡಿರುವುದು ಅವಶ್ಯಕ. ಆಗ ಆತನಿಗೆ ಯಾವುದೇ ಆಕಸ್ಮಿಕ ಉಂಟಾದಾಗ ಅವರ ಅಂತಿಮ ಇಚ್ಚೆಯನ್ನು ನೆರವೇರಿಸಲು ಅನುಕೂಲವಾಗುವುದು.
* ಈಗಾಗಲೇ ಸಾವಿರಾರು ಸಾರ್ವಜನಿಕರು ದೇಹದಾನಕ್ಕೆ ಮುಂದಾಗಿ ನೋಂದಣಿ ಮಾಡಿಸಿದ್ದಾರೆ. ಪ್ರಮುಖರಲ್ಲಿ ಕರ್ನಾಟಕದ ಉಚ್ಚನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಶ್ರೀ ಡಿ. ಎಂ. ಚಂದ್ರಶೇಖರಯ್ಯ, ಶ್ರೀ ಶಿಕಾರಿಪುರ ಹರಿಹರೇಶ್ವರ ಅವರುಗಳ ಮರಣಾನಂತರ ದೇಹವನ್ನು ವೈದ್ಯಕೀಯ ಸಂಶೋಧನೆಗೆ ಈಗಾಗಲೇ ನೀಡಿದ್ದಾರೆ. ಈ ದಿಶೆಯಲ್ಲಿ ಪ್ರಸಿದ್ದ ಸಿನಿಮಾ ನಟ ಲೋಕೇಶ್ ಅವರ ಸಾವಿನ ನಂತರ ಅವರ ದೇಹದಾನ ಮಾಡಲಾಯಿತು. ಸತ್ತಮೇಲೆ ಮಣ್ಣಾಗುವ, ಹಿಡಿ ಬೂದಿಯಾಗುವ ದೇಹವನ್ನು ವೈಜ್ಞಾನಿಕ ಸಂಶೋಧನೆಗೆ ನೀಡಿದ, ನೀಡುತ್ತಿರುವ, ನೀಡುವ ಎಲ್ಲರೂ ಪ್ರಮುಖರೇ, ಗಣ್ಯರೇ ಎಂಬುದರಲ್ಲಿ ಎರಡು ಮಾತಿಲ್ಲ.
 
==ಶರಣರ ವಚನಗಳಲ್ಲಿ ಸಾವಿನ ಪರಿಕಲ್ಪನೆ==
ಶರಣರು ಮರಣವೇ ಮಾನವಮಿ ಎಂದರು. ಹಾಗಾಗಿ ಅವರ ವಚನಗಳಲ್ಲಿ ಮರಣ ವಿಶೇಷವಾಗಿ ಬಿತ್ತರಗೊಂಡಿದೆ. ಅವರ ದೃಷ್ಟಿಯಲ್ಲಿ- “ಮರಣವೆಂದರೆ ಸರ್ವನಾಶವಲ್ಲ; ಒಂದರಿಂದ ಇನ್ನೊಂದರ ಮಾರ್ಪಾಡು. ಮರಣವು ನವಜನ್ಮದ ತಾಯಿ; ನವಜೀವನದ ಬಸಿರು; ಮುಂದುವರಿಯುವ ಜೀವನಕ್ಕೆ ಹೊಸ ಏರ್ಪಾಡು; ಮರಣದಿಂದ ಹಳೆಯ ಭೂಮಿಕೆಯ ಸೀಮೆದಾಟಿ, ಹೊಸಸೀಮೆಯಲ್ಲಿ ಕಾಲಿರಿಸಿಸುವ ಬದಲಾವಣೆ".
<poem>
ಅಯ್ಯಾ, ಚಂದ್ರನಿಂದಾದ ಕಲೆ ಚಂವ್ರನ ಬೆರಸಿ ಚಂದ್ರನಾದಂತೆ.
ಸೂರ್ಯನಿಂದಾದ ಕಿರಣ ಸೂರ್ಯನ ಬೆರಸಿ ಸೂರ್ಯನಾದಂತೆ.
ಅಗ್ನಿಯಿಂದಾದ ಕಾಂತಿ ಅಗ್ನಿಯ ಬೆರಸಿ ಅಗ್ನಿಯಾದಂತೆ
ದೀಪದಿಂದಾದ ಬೆಳಕು ದೀಪವ ಬೆರಸಿ ದೀಪವಾದಂತೆ
ಸಮುದ್ರದಿಂದಾದ ನದಿ ಸಮುದ್ರವ ಬೆರಸಿ ಸಮುದ್ರವೇ ಆದಂತೆ
ಪರಶಿನ ನಿರವಯ ಶೂನ್ಯಮೂರ್ತಿ ಸಂಗನಬಸವಣ್ಣನ
ಚಿದ್ರೂಪ ರುಚಿತೃಪ್ತಿಯೊಳಗೆ ಶುದ್ಧ-ಸಿದ್ಧ -ಪ್ತಸಿದ್ಧನಾಗಿ ಜನಿಸಿ
ಮತ್ತೆಂದಿನಂತೆ ಗುಹೇಶ್ವರಲಿಂಗಪ್ರಭು ಎಂಬ
ಉಭಯನಾಮವಳಿದು, ಸತ್ತು .ಚಿತ್ತಾನಂದ
ನಿತ್ಯಪರಿಪೂರ್ಣ ಅವಿರಳ ಪರಶಿವ
ಶೂನ್ಯಮೂರ್ತಿ ಸಂಗನಬಸನಣ್ಣನ ಜಿದ್ರೂಪು
ರುಚಿತೃಪ್ತಿ ಪಾದೋದಕ-ಪ್ರಸಾದವಪ್ಪುದು ತಪ್ಪದು
ನೋಡಾ ಚೆನ್ನಬಸವಣ್ಣ.
</poem>
 
 
<poem>
ಎಮ್ಮವರಿಗೆ ಸಾವಿಲ್ಲ, ಎಮ್ಮವರಿಗೆ ಸಾವನರಿಯರು.
ಸಾವೆಂಬುದು ಸಾವಲ್ಲ.
ಅಂಗದಲ್ಲಿ ಉದಯವಾದ ನಿಜೈಕ್ಯರಿಗೆ ಆ ಲಿಂಗದಲ್ಲಿಯಲ್ಲದೆ
ಬೇರೆ ಮತ್ತೊಂದೆಡೆ ಇಲ್ಲ.
ಕೂಡಲಸಂಗಮವೇವರ ಶರಣ ಸೊಡ್ಣಲಬಾಚರಸನು
ನಿಜಲಿಂಗದ ಒಡಲೊಳಗೆ ಬಗೆದು ಹೊಕ್ಕಡೆ
ಉಪಮಿಸಬಲ್ಲವರ ಕಾಣೆನು.
</poem>
 
 
<poem>
ಎಂದಿಗೂ ಸಾವು ತಪ್ಪದೆಂದರಿದು, ಮತ್ತೆ
ವ್ರತಭಂಗಿತನಾಗಿ,
ಅಂದಿಗೆ ಸಾಯಲೇತಕ್ಕೆ ?
ನಿಂದೆಗೆಡೆಯಾಗದ ಮುನ್ನವೇ ಅಂಗವ ಹಾರೆ
ಚಿತ್ತ ನಿಜಲಿಂಗವನೆಯ್ದಿ, ಮನಕ್ಕೆ
ಮನೋಹರ ಶಂಬೇಶ್ವರ ಲಿಂಗವ ಕೂಡಿ.
</poem>
 
 
<poem>
ಆಯುಷ್ಯ ತೀರಿದಲ್ಲದೆ ಮರಣವಿಲ್ಲ.
ಭಾಗ್ಯತೀರಿದಲ್ಲದೆ ದಾರಿದ್ರ್ಯವಿಲ್ಲ.
ಅಂಜಲೇತಕೋ ಲೋಕವಿಗರ್ಭಣೆಗೆ?
ಅಳಕಲೇತಕೋ ಕೂಡಲಸಂಗಮದೇವಾ
ನಿಮಗಾಳಾಗಿ.
</poem>
 
 
<poem>
ನಾಳೆ ಬಪ್ಪುದು ನಮಗಿಂದೇ ಬರಲಿ.
ಇಂದು ಬಪ್ಪುದು ನಮಗೀಗಲೇ ಬರಲಿ.
ಇದಕಾರಂಜುವರು, ಇದರಾರಳಕುವರು?
ಜಾತಸ್ಯಮರಣಂ ಧೃವಂ ಎಂಬುದಾಗಿ.
ನಮ್ಮ ಕೂಡಲಸಂಗಮದೇವ ಬರೆದ ಬರಹ
ತಸ್ಬಿಸುವರೆ ಹರಿಬ್ರಹ್ಮಾದಿಗಳವಲ್ಲ.
</poem>
 
==ಸಾವಿನ ಕವನ==
<poem>
ಕರೆಯದೇ ಬರುವ ಅತಿಥಿ,
ಅಂದರೆ ಸಾವು…
ಕಳೆದುಕೊಂಡರೆ ನಮ್ಮವರನ್ನು,
ಅಗಾಧ ನೋವು…!!
 
ಹುಟ್ಟಿದ ಪ್ರತಿಯೊಂದು ಜೀವ,
ಸಾಯಬೇಕು ನಿಜ…
ಆದರೂ ಸಾವಿನ ಭಯ,
ಪ್ರತಿಯೊಬ್ಬರಲ್ಲೂ ಸಹಜ…!!
 
ಬದುಕಿರುವಾಗ ಸಾವಿನ ಚಿಂತೆ,
ಸತ್ತಮೇಲೆ ಬರಿಯ ಚಿತೆ…
ಜೀವನದುದ್ದಕ್ಕೂ ಕಾಡುವ ಕೊರತೆ,
ಮರಣಾನಂತರ ಮೌನದ ಕವಿತೆ…!!
 
ಸಾವಿಲ್ಲದ ಮನೆಯಿಂದ ಸಾಸಿವೆ ತಾ,
ಎಂದನು ಬುದ್ಧ…
ಈ ಉಕ್ತಿಗೆ ಆ ಜವರಾಯನು,
ಎಂದಿಗೂ ಬದ್ಧ…!!
</poem>
 
[[ವರ್ಗ:ಜೀವಶಾಸ್ತ್ರ]]
"https://kn.wikipedia.org/wiki/ಮರಣ" ಇಂದ ಪಡೆಯಲ್ಪಟ್ಟಿದೆ